• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ: ಇವಿಗಳಿಗಾಗಿ 4 ಮೀಸಲಾದ ಲೇನ್‌ಗಳು

|
Google Oneindia Kannada News

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಬೆಂಗಳೂರು -ಚೆನ್ನೈ expressway ಸೇರಿದಂತೆ ಹೊಸ ಆರ್ಥಿಕ ಕಾರಿಡಾರ್, ಎಕ್ಸ್ ಪ್ರೆಸ್ ವೇಗಳ ಟೈಮ್ ಲೈನ್ ಘೋಷಿಸಿದೆ. ಯಾವ ಯಾವ ನಗರಗಳಲ್ಲಿ ಯಾವ ಯಾವ ಹೆದ್ದಾರಿ ಯಾವಾಗ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬಾ ಮಾಹಿತಿ ಇದೀಗ ಲಭ್ಯವಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಕೂಡಾ ಈ ಪಟ್ಟಿಯಲ್ಲಿದ್ದು, ಎಲೆಕ್ಟ್ರಿಕ್ ವಾಹನಗಳಿಗಾಗಿ ನಾಲ್ಕು ಪ್ರತ್ಯೇಕ ಲೇನ್ ನಿಗದಿಯಾಗಿರುವುದು ವಿಶೇಷ.

2023ರಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಂಚಾರಕ್ಕೆ ಮುಕ್ತವಾಗಲಿದೆ. ಆಧುನಿಕ ಜಗತ್ತಿನಲ್ಲಿ ನಗರೀಕರಣ ಹೆಚ್ಚಾದ ಹಾಗೆ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ, ವಾಹನಗಳಿಂದಾಗುತ್ತಿರುವ ಮಾಲಿನ್ಯ ಹೆಚ್ಚುತ್ತಿದೆ ಎಂದು ಕೇಂದ್ರ ಪರಿಸರ ಹಾಗೂ ವಿಜ್ಞಾನ ಸಂಸ್ಥೆ (ಸಿಎಸ್ ಇ) ವರದಿ ಮಾಡಿದೆ. 1951ರಿಂದ 2015ರ ಅವಧಿಯಲ್ಲಿ 0.3 ಮಿಲಿಯನ್ ನಿಂದ 700 ಪಟ್ಟು ಅಧಿಕ ನೋಂದಾಯಿತ ವಾಹನಗಳನ್ನು ಕಾಣಬಹುದಾಗಿದೆ.

ಬೆಂಗಳೂರು -ಚೆನ್ನೈ expressway ಸೇರಿ ಹೊಸ ಹೆದ್ದಾರಿ ಪಟ್ಟಿಬೆಂಗಳೂರು -ಚೆನ್ನೈ expressway ಸೇರಿ ಹೊಸ ಹೆದ್ದಾರಿ ಪಟ್ಟಿ

ಹೀಗಾಗಿ, ಕೇಂದ್ರ ಸರ್ಕಾರ ಕೂಡಾ ಇ- ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ಸುಮಾರು 1,300 ಕಿಲೋ ಮೀಟರ್ ಉದ್ದದ ಮಾರ್ಗ ಹೊಂದಿದ್ದು, ಈ ಮಾರ್ಗದಲ್ಲಿ ಟ್ರಕ್ ಹಾಗೂ ಬಸ್ ಗಳು 120 ಕಿಲೋಮೀಟರ್ ಪ್ರತಿ ಗಂಟೆ ವೇಗದಲ್ಲಿ ಸಂಚರಿಸಬಹುದಾಗಿದೆ.

ಎಕ್ಸ್‌ಪ್ರೆಸ್‌ವೇ ಯೋಜನೆ

ಎಕ್ಸ್‌ಪ್ರೆಸ್‌ವೇ ಯೋಜನೆ

ಬಹುತೇಕ ಮಾರ್ಚ್ 2023ರಿಂದ ಆರಂಭಗೊಂಡು ಮಾರ್ಚ್ 2025ರ ವೇಳೆಗೆ ಸುಮಾರು 23ಕ್ಕೂ ಅಧಿಕ ಎಕ್ಸ್ ಪ್ರೆಸ್ ವೇಗಳನ್ನು ಭಾರತ ಹೊಂದಲಿದೆ ಎಂದು ಎನ್ಎಚ್ಎಐ ಹೇಳಿದೆ.

ಸರಿ ಸುಮಾರು 7800 ಕಿ.ಮೀಗಳ ಕಾಮಗಾರಿ ಇದಾಗಿದ್ದು, ಎಲ್ಲವೂ ಮಾರ್ಚ್ 2025ರೊಳಗೆ ಪೂರ್ಣಗೊಳ್ಳಲಿದೆ. ಕೊರೊನಾವೈರಸ್ ದೆಸೆಯಿಂದ ಕಾಮಗಾರಿ ವಿಳಂಬಗೊಂಡಿದ್ದು, ಈಗ ಮತ್ತೆ ವೇಗ ಪಡೆದುಕೊಂಡಿದೆ. ಸುಮಾರು 3.3 ಲಕ್ಷ ಕೋಟಿ ರುಗಳ ಯೋಜನೆ ಇದಾಗಿದೆ.

ಮಾರ್ಚ್ 2023ರ ಗಡುವು ಹೊಂದಿರುವ ಹೊಸ ಹೆದ್ದಾರಿಗಳು:
ದೆಹಲಿ-ಮುಂಬೈ (1,350 ಕಿ.ಮೀ)
ಅಹಮದಾಬಾದ್-ಧೋಲೆರಾ (110 ಕಿ.ಮೀ)
ಅಂಬಾಲ-ಕೊಟ್ಪುಟ್ಲಿ (310 ಕಿ.ಮೀ)
ಅಮೃತ್ ಸರ್-ಜಾಮ್ನಗರ್ (762 ಕಿ.ಮೀ)

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ವಿಶೇಷಗಳು

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ವಿಶೇಷಗಳು

* ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಲಾಜಿಸ್ಟಿಕ್ಸ್ ಮೇಲಿನ ಖರ್ಚು ವೆಚ್ಚ ಶೇ 70ರಷ್ಟು ತಗ್ಗಲಿದೆ. ಸರಕು ಸಾಗಣೆ ವೆಚ್ಚ ಕಡಿಮೆಯಾಗಲಿದೆ.
* ಸುಮಾರು 1,350 ಕಿ. ಮೀ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ವೆಚ್ಚ 1 ಲಕ್ಷ ಕೋಟಿ ರುಗೂ ಅಧಿಕ.
* ಈ ಹೊಸ ಎಕ್ಸ್ ಪ್ರೆಸ್ ವೇ ನಿರ್ಮಾಣದಿಂದ ದೆಹಲಿ ಹಾಗೂ ಮುಂಬೈ ನಡುವಿನ ಅಂತರ 150 ಕಿ.ಮೀನಷ್ಟು ತಗ್ಗಲಿದೆ.
* ವಾಣಿಜ್ಯ ಉದ್ದೇಶಿತ ವಾಹನಗಳಾದ ಟ್ರಕ್ಸ್ ಹಾಗೂ ಬಸ್‌ಗಳು ಈ ಹೆದ್ದಾರಿಯಲ್ಲಿ 120 ಕಿ. ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸಬಹುದು.

ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ?ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ?

32 ಕೋಟಿ ಲೀಟರ್‌ನಷ್ಟು ಇಂಧನ ಉಳಿತಾಯ

32 ಕೋಟಿ ಲೀಟರ್‌ನಷ್ಟು ಇಂಧನ ಉಳಿತಾಯ

* ಲಭ್ಯ ಮಾಹಿತಿ ಪ್ರಕಾರ, ದೆಹಲಿ-ಮುಂಬೈ ಇ ಹೆದ್ದಾರಿ ಮೂಲಕ ವಾರ್ಷಿಕವಾಗಿ ಸುಮಾರು 850 ಮಿಲಿಯನ್ ಕೆ.ಜಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಬಹುದು ಜೊತೆಗೆ 32 ಕೋಟಿ ಲೀಟರ್‌ನಷ್ಟು ಇಂಧನ ಕೂಡಾ ಉಳಿತಾಯವಾಗಲಿದೆ.
* ಹೆದ್ದಾರಿಯ ಎರಡು ಬದಿಯಲ್ಲಿ 1.5 ಮೀಟರ್‌ನಷ್ಟು ಎತ್ತರದ ಗೋಡೆ ನಿರ್ಮಿಸಲಾಗುತ್ತದೆ. ಹೆದ್ದಾರಿಯ ಬದಲಿಗೆ ಸ್ಲಿಪ್ ಲೇನ್‌ಗಳಲ್ಲಿ ಟೋಲ್ ಪ್ಲಾಜಾ ಇರಲಿದೆ.
* ಪ್ರತಿ 2.5 ಕಿ.ಮೀಗಳಲ್ಲಿ ಪ್ರಾಣಿಗಳಿಗಾಗಿ ಓವರ್ ಪಾಸ್ ಇರಲಿದೆ.
* ಇದಲ್ಲದೆ ಜನರ ಅನುಕೂಲಕ್ಕೆ ತಕ್ಕಂತೆ ಅನೇಕ ಅಂಡರ್ ಪಾಸ್ ಗಳಿರಲಿವೆ.
* ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿನ ನಾಲು ಇ ವೇಗಳ ನಿರ್ಮಾಣಕ್ಕೆ ಬೇಕಾದ ಹೆಚ್ಚುವರಿ ವೆಚ್ಚವನ್ನು ಸರಿ ದೂಗಿಸಲು ಖಾಸಗಿ ಸಂಸ್ಥೆಗಳಿಂದ ಯಥೇಚ್ಛ ಹೂಡಿಕೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.

ಪ್ರಯಾಣದ ಅವಧಿ 12 ರಿಂದ 13 ಗಂಟೆಗಳ ಕಾಲ ಕಡಿತ

ಪ್ರಯಾಣದ ಅವಧಿ 12 ರಿಂದ 13 ಗಂಟೆಗಳ ಕಾಲ ಕಡಿತ

* ಸುಮಾರು 1.03ಕ್ಕೂ ಅಧಿಕ ಲಕ್ಷ ಕೋಟಿ ರು ಹೂಡಿಕೆ ಮಾಡುವ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಸಿಗಲಿದೆ.
* ಎಕ್ಸ್‌ಪ್ರೆಸ್‌ವೇಯಲ್ಲಿ ರೆಸ್ಟೋರೆಂಟ್, ಫುಡ್ ಕೋರ್ಟ್, ಮಳಿಗೆ, ಇಂಧನ ಪೂರೈಕೆ ಕೇಂದ್ರ, ಇವಿ ಚಾರ್ಜಿಂಗ್ ಕೇಂದ್ರ ಹಾಗೂ ಶೌಚಾಲಯಗಳಿರಲಿವೆ.
* ಎಕ್ಸ್‌ಪ್ರೆಸ್‌ವೇಯಲ್ಲಿನ ವಿದ್ಯುದ್ದೀಪಗಳು ಸಂಪೂರ್ಣ ಸೌರಶಕ್ತಿ ಚಾಲಿತ ದೀಪಗಳಾಗಿದ್ದು, ಪರಿಸರ ಹಾಗೂ ಇಂಧನ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
* ಒಟ್ಟಾರೆ ದೆಹಲಿ -ಮುಂಬೈ ಎಕ್ಸ್ ಪ್ರೆಸ್ ವೇ ಮೂಲಕ ಈ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ 12 ರಿಂದ 13 ಗಂಟೆಗಳ ಕಾಲ ತಗ್ಗಲಿದೆ.

English summary
The Delhi-Mumbai Expressway, which is slated to be completed by 2023, will have four lanes for electric vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X