ಕೊರೊನಾ ಲಸಿಕೆ ಪಡೆದ ನಂತರ ಮುಟ್ಟಿನಲ್ಲಿ ಏರುಪೇರು? ವೈದ್ಯರ ವಿವರಣೆ
ಕೊರೊನಾ
ಲಸಿಕೆ ಪಡೆದ ನಂತರ ತಲೆ ನೋವು, ಮೈಕೈ ನೋವು, ಜ್ವರ, ಸುಸ್ತಿನಂಥ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಲಸಿಕೆ ಪಡೆದುಕೊಂಡ ಕೆಲವು ಮಹಿಳೆಯರಲ್ಲಿ ಋತುಚಕ್ರದಲ್ಲಿ ಸಮಸ್ಯೆ ಕಂಡುಬರುತ್ತಿದೆ. id="toptextpromo"> id='are-slot-1' class='oiad oi-axt oiadv'>ಲಸಿಕೆ
ಪಡೆದುಕೊಂಡ ನಂತರ ಮುಟ್ಟಿನಲ್ಲಿ ಏರುಪೇರಾಗಿರುವ ಅನುಭವವಾಗಿದೆ. ಲಸಿಕೆಗೂ ಋತುಚಕ್ರದಲ್ಲಿನ ಏರುಪೇರಿಗೂ ಇರುವ ಸಂಬಂಧದ ಕುರಿತು ಯಾವುದೇ ಅಧ್ಯಯನಗಳು ನಡೆದಿಲ್ಲ. ಆದರೆ ಕೊರೊನಾ ಲಸಿಕೆ ಪಡೆದುಕೊಂಡ ನಂತರ ಋತುಚಕ್ರದಲ್ಲಿ ಸಮಸ್ಯೆಯಾಗಿರುವ ಹಲವು ಪ್ರಕರಣಗಳು ಕಂಡುಬರುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದು ಕೊರೊನಾ ಲಸಿಕೆಯ ಪರಿಣಾಮವೇ? ಅಥವಾ ಇನ್ನಿತರ ಸಮಸ್ಯೆಯೇ? ಈ ಕುರಿತ ವಿವರಣೆ ಮುಂದಿದೆ... id='are-slot-2' class='oiad oi-axt oiadv'>
ಅತಿ ತಡವಾಗಿ ಅಥವಾ ಬೇಗನೆ ಮುಟ್ಟಾಗುವ ಸಮಸ್ಯೆ
ಕೊರೊನಾ ಲಸಿಕೆ ಪಡೆದುಕೊಂಡ ನಂತರ ಕೆಲವು ಮಹಿಳೆಯರಲ್ಲಿ ಋತುಚಕ್ರದಲ್ಲಿ ಸಮಸ್ಯೆ ಕಂಡುಬಂದಿದೆ. ಅತಿ ತಡವಾಗಿ ಅಥವಾ ಅತಿ ಬೇಗನೇ ಮುಟ್ಟಾಗುವುದು, ಮುಟ್ಟಿನ ಸಂದರ್ಭ ಅತಿಯಾದ ರಕ್ತಸ್ರಾವವಾಗುವುದು ಕಂಡುಬರುತ್ತಿದೆ. ಕೆಲವರಲ್ಲಿ ಲಸಿಕೆ ಪಡೆದ ನಂತರ ಅತಿಯಾದ ಮುಟ್ಟಿನ ನೋವು ಕಾಣಿಸಿಕೊಳ್ಳುತ್ತಿರುವುದಾಗಿ ವರದಿಯಾಗಿದೆ.

ಹಲವು ಮಹಿಳೆಯರಲ್ಲಿ ಈ ಸಮಸ್ಯೆ
"ಮೊದಲು ಬೆಂಗಳೂರಿನ ಜಯನಗರದ ನಿವಾಸಿಯೊಬ್ಬರು ನನ್ನ ಬಳಿ ಬಂದರು. ಅವರು ಮೇ ತಿಂಗಳಿನಲ್ಲಿ ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದುಕೊಂಡಿದ್ದರು. ಆನಂತರ ಅವರ ಋತುಚಕ್ರದಲ್ಲಿ ಸಮಸ್ಯೆಯಾಗಿದ್ದು, ಅತಿಯಾದ ನೋವು ಕಾಣಿಸಿಕೊಂಡಿರುವುದಾಗಿ ತಿಳಿಸಿದರು. ಇದಾದ ನಂತರ ಇದೇ ಸಮಸ್ಯೆಯನ್ನಿಟ್ಟುಕೊಂಡು ಹಲವು ಮಹಿಳೆಯರು ಬಂದರು" ಎಂದು "ಇಂಡಿಯನ್ ಎಕ್ಸ್ ಪ್ರೆಸ್"ಗೆ ಪ್ರಕ್ರಿಯಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ದಿವ್ಯಾ ಎಲ್. ಮಾಹಿತಿ ಹಂಚಿಕೊಂಡಿದ್ದಾರೆ.

ಕೊರೊನಾ ಲಸಿಕೆಗೂ ಋತುಚಕ್ರದ ಬದಲಾವಣೆಗೂ ಏನು ಸಂಬಂಧ
ಕೊರೊನಾ ಲಸಿಕೆಗೂ ಋತುಚಕ್ರದಲ್ಲಿನ ಬದಲಾವಣೆಗೂ ಏನಾದರೂ ಸಂಬಂಧವಿದೆಯೇ ಎಂಬ ಕುರಿತು ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ. ಈ ಕುರಿತು ಅಧ್ಯಯನಗಳು ನಡೆದಿಲ್ಲ. ಆದರೆ ಲಸಿಕೆ ಪಡೆದುಕೊಂಡ ನಂತರ ಋತುಚಕ್ರದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಬರುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.
"ಕೊರೊನಾ ಲಸಿಕೆ ಮುಟ್ಟಿನ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಸಂಶೋಧನೆ, ಅಧ್ಯಯನ ನಡೆಯಬೇಕಿದೆ. ಲಸಿಕೆ ಪಡೆದ ನಂತರ ರೋಗನಿರೋಧಕ ಶಕ್ತಿ ಅಧಿಕವಾಗುವುದರಿಂದ ಗರ್ಭಕೋಶದ ಒಳಪದರ ತೆರೆದುಕೊಂಡು ಹೆಚ್ಚಿನ ರಕ್ತಸ್ರಾವ ಅಥವಾ ಬೇಗನೆ ಮುಟ್ಟಾಗುವಂತೆ ಮಾಡಬಹುದು. ಕೆಲವೊಮ್ಮೆ ವಿಳಂಬವೂ ಆಗಬಹುದು" ಎಂದು ಹೇಳಿದ್ದಾರೆ.

"ಲಸಿಕೆ ಪಡೆದುಕೊಳ್ಳುವುದನ್ನು ತಪ್ಪಿಸಬೇಡಿ"
ಈ ಸಮಸ್ಯೆ ಕುರಿತು ಎಲ್ಲೂ ಪ್ರಸ್ತಾಪವಾಗಿಲ್ಲ ಹಾಗೂ ಜನರಿಗೂ ಇದು ಅರಿವಿಗೆ ಬಂದಿಲ್ಲ. ಆದರೆ ಜೀವನಶೈಲಿ ಸಂಬಂಧಿ ಅಂಶಗಳಿಂದಲೂ ಈ ಸಮಸ್ಯೆ ಆಗಬಹುದು. ಒತ್ತಡ, ನಿದ್ರಾಹೀನತೆ, ದೇಹದ ಉಷ್ಣತೆ ಋತುಚಕ್ರದ ಮೇಲೆ ಪರಿಣಾಮ ಬೀರಿರಬಹುದು. ಕೊರೊನಾ ಸೋಂಕಿನ ಸಂದರ್ಭ ಮಹಿಳೆಯರಲ್ಲಿ ಆತಂಕ, ಒತ್ತಡ ಹೆಚ್ಚಾಗಿರುವುದು ಋತುಚಕ್ರದಲ್ಲಿನ ಬದಲಾವಣೆಗೆ ಒಂದು ಕಾರಣವಾಗಿರಬಹುದು. ಲಸಿಕೆ ಪಡೆದುಕೊಳ್ಳುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭವಿರುವುದರಿಂದ ಈ ತಾತ್ಕಾಲಿಕ ಅಡ್ಡ ಪರಿಣಾಮದ ಭಯದಲ್ಲಿ ಲಸಿಕೆಯಿಂದ ದೂರ ಉಳಿಯಬೇಡಿ ಎಂದು ಸಲಹೆ ನೀಡುತ್ತಾರೆ ವೈದ್ಯರು.












Click it and Unblock the Notifications