ಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿ

ನವದೆಹಲಿ, ನವೆಂಬರ್ 12: ದೇಶೀ ನಿರ್ಮಿತ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯು ಡೆಲ್ಟಾ ರೂಪಾಂತರಿ ವಿರುದ್ಧವೂ ಪರಿಣಾಮಕಾರಿ ಎಂದು ಅಧ್ಯಯನ ಹೇಳಿದೆ. ಡೆಲ್ಟಾ ವಿರುದ್ಧ ಶೇ.65.2ರಷ್ಟು ನಿರೋಧಕ ಶಕ್ತಿ ಹೊಂದಿದೆ ಎಂದು ಮೂರನೇ ಹಂತದ ಪ್ರಯೋಗದಲ್ಲಿ ದೃಢ ಪಟ್ಟಿದೆ.

ಈ ಬಗ್ಗೆ ಲ್ಯಾನ್ಸೆಂಟ್ ಮೆಡಿಕಲ್ ಜರನಲ್ ವರದಿ ಮಾಡಿದೆ. ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆ ರೂಪಿಸಿರುವ ಕೋವ್ಯಾಕ್ಸಿನ್ ಸೋಂಕಿನ ವಿರುದ್ಧ ಸರಾಸರಿ ಶೇ. 77.8ರಷ್ಟು ನಿರೋಧಕ ಶಕ್ತಿಯನ್ನು ಹೆಚ್ಚಿಸಲಿವೆ ಎಂದು ಸಾಬೀತಾಗಿದೆ. ಕೋವ್ಯಾಕ್ಸಿನ್‍ಗೆ ಇತ್ತೀಚೆಗಷ್ಟೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ನೀಡಿತ್ತು.

ಲಸಿಕಾ ಸಾಮರ್ಥ್ಯ130 ಖಚಿತ ಪ್ರಕರಣಗಳಲ್ಲಿ ದೃಢ ಪಟ್ಟಿದೆ. ಲಸಿಕೆ ಸಾರ್ಸ್ ಕೋವ್-2 ಸೋಂಕಿನ ವಿರುದ್ಧ ಶೇ.77.8ರಷ್ಟು, ಜೊತೆಗೆ ಅದರ ರೂಪಾಂತರಿಯಾದ ಡೆಲ್ಟಾ ವಿರುದ್ಧ ಶೇ.65.2ರಷ್ಟು, ಕೋವಿಡ್ ಲಕ್ಷಣಗಳ ವಿರುದ್ಧ ಶೇ.63.6ರಷ್ಟು ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ.

ಐಸಿಎಂಆರ್ ಮತ್ತು ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೊವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರತದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆ ಆಗಿದೆ.

2ರಿಂದ 18 ವರ್ಷದ ಮಕ್ಕಳಿಗೆ ಸ್ವದೇಶಿ ಕೋವಿಡ್ ಲಸಿಕೆಯಾದ ಕೋವ್ಯಾಕ್ಸಿನ್ ನೀಡುವ ಬಗ್ಗೆ ಒಂದು ವಾರದ ಹಿಂದೆ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಡಿಸಿಜಿಐಗೆ ಸಲ್ಲಿಸಲಾಗಿತ್ತು.

ಈ ವರದಿ 1, 2 ಮತ್ತು 3ನೇ ಹಂತದ ಕ್ಲಿನಿಕಲ್ ಪರೀಕ್ಷೆಯ ವಿವರ, ಫಲಿತಾಂಶವನ್ನು ಒಳಗೊಂಡಿತ್ತು. ಸೆ. 21ರಂದು ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ 3ನೇ ಹಂತದ ಪ್ರಯೋಗ ಪೂರ್ಣಗೊಂಡಿತ್ತು. ಒಟ್ಟು 1,000 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿತ್ತು.

ಈ ತಿಂಗಳ ಅಂತ್ಯ ಅಥವಾ ನವೆಂಬರ್ ಮೊದಲ ವಾರದಲ್ಲಿ ಕೊರೊನಾ 3ನೇ ಅಲೆ ಕಾಣಿಸಿಕೊಳ್ಳಲಿದೆ. ಈ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇದೀಗ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಕ್ಕಿರುವುದು ಸಮಾಧಾನಕರ ಸಂಗತಿಯಾಗಿದೆ.

ಇದರ ಜೊತೆಗೆ ಭಾರತ ಮೂಲದ ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಜೈಕೊವ್-ಡಿ ಲಸಿಕೆಯ (ZyCov-D Vaccine) ತುರ್ತು ಬಳಕೆಗೆ ಈಗಾಗಲೇ ಅನುಮತಿ ಸಿಕ್ಕಿದೆ. ಮೂರು ಡೋಸ್​ಗಳನ್ನು ಹೊಂದಿರುವ ಈ ಲಸಿಕೆಯನ್ನು ಅಕ್ಟೋಬರ್ ಬಳಿಕ 12ರಿಂದ 17 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವುದು. ಮುಖ್ಯವಾಗಿ ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು ಎನ್ನಲಾಗಿದೆ. 12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಈ ಜೈಕೋವ್-ಡಿ ಲಸಿಕೆ ಬಹಳ ಪರಿಣಾಮಕಾರಿಯಾಗಲಿದೆ.

 ಕೋವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ

ಕೋವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ

ಲಸಿಕಾ ಸಾಮರ್ಥ್ಯ130 ಖಚಿತ ಪ್ರಕರಣಗಳಲ್ಲಿ ದೃಢ ಪಟ್ಟಿದೆ. ಲಸಿಕೆ ಸಾರ್ಸ್ ಕೋವ್-2 ಸೋಂಕಿನ ವಿರುದ್ಧ ಶೇ.77.8ರಷ್ಟು, ಜೊತೆಗೆ ಅದರ ರೂಪಾಂತರಿಯಾದ ಡೆಲ್ಟಾ ವಿರುದ್ಧ ಶೇ.65.2ರಷ್ಟು, ಕೋವಿಡ್ ಲಕ್ಷಣಗಳ ವಿರುದ್ಧ ಶೇ.63.6ರಷ್ಟು ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ.

ಐಸಿಎಂಆರ್ ಮತ್ತು ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೊವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರತದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆ ಆಗಿದೆ.
 ಕೋವ್ಯಾಕ್ಸಿನ್ ಲಸಿಕೆ ನೀಡಲು ಒಪ್ಪಿಗೆ

ಕೋವ್ಯಾಕ್ಸಿನ್ ಲಸಿಕೆ ನೀಡಲು ಒಪ್ಪಿಗೆ

ಭಾರತದ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗಿದೆ. 2-18 ವರ್ಷದ ಮಕ್ಕಳಿಗೆ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್​ ಲಸಿಕೆ ನೀಡಲು ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಅನುಮತಿ ಸಿಕ್ಕಿದೆ.
ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಗ್ರೀನ್​ಸಿಗ್ನಲ್​ ಸಿಕ್ಕಿದ್ದು, ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.

ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಯ ಪರೀಕ್ಷೆ ನಡೆದಿದ್ದು, ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಭಾರತ್ ಬಯೋಟೆಕ್ ಕಂಪನಿ ಡಿಸಿಜಿಐಗೆ ಸಲ್ಲಿಸಿತ್ತು.

 ರೂಪಾಂತರಿ ಮುಖ್ಯ ಲಕ್ಷಣಗಳೇನು?

ರೂಪಾಂತರಿ ಮುಖ್ಯ ಲಕ್ಷಣಗಳೇನು?

ಡೆಲ್ಟಾ ರೂಪಾಂತರಿ ಕೊರೊನಾ ಲಕ್ಷಣಗಳಲ್ಲಿ ವ್ಯತ್ಯಾಸವೇನು?: ಮೂಗು ತುರಿಕೆ ಅಥವಾ ಮೂಗಿನಲ್ಲಿ ಕಿರಿಕಿರಿ ಉಂಟಾಗುವುದು ಡೆಲ್ಟಾ ಪ್ರಬೇಧದ ಕೊರೊನಾದ ಮುಖ್ಯ ಲಕ್ಷಣ ಆಗಿರಬಹುದು. ಈ ಮೊದಲು ಸಾಮಾನ್ಯ ಎನಿಸಿಕೊಂಡಿದ್ದ ವಾಸನೆ ಇಲ್ಲವಾಗುವ ಲಕ್ಷಣ, ಡೆಲ್ಟಾ ರೂಪಾಂತರಿ ಕೊರೊನಾದಲ್ಲಿ ಕಾಣಿಸುವುದು ವಿರಳ.

-ತಲೆನೋವು
-ಗಂಟಲು ನೋವು
-ಮೂಗು ಉರಿ, ಮೂಗಿನಲ್ಲಿ ಕಿರಿಕಿರಿ
-ಜ್ವರ
-ಕೆಮ್ಮು ಮತ್ತು ಕಫ

 ರೋಗ ಲಕ್ಷಣದಲ್ಲಿ ಬದಲಾವಣೆ

ರೋಗ ಲಕ್ಷಣದಲ್ಲಿ ಬದಲಾವಣೆ

ರೋಗಲಕ್ಷಣಗಳ ಈ ಬದಲಾವಣೆಯ ಹಿಂದೆ ಹಲವು ಸಾಧ್ಯತೆಗಳನ್ನು ಅಂದಾಜಿಸಲಾಗಿದೆ. ವೈರಸ್​ನ ರೂಪಾಂತರ, ಬೆಳವಣಿಗೆ, ಮನುಷ್ಯರ ರೋಗನಿರೋಧಕ ಶಕ್ತಿ ಇತ್ಯಾದಿಗಳು ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಭಾರತದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಬಹಳ ಸಂಕಷ್ಟ ಸೃಷ್ಟಿಮಾಡಿದ್ದ ಕೊರೊನಾ ಎರಡನೇ ಅಲೆ ಹಾಗೂ ಡೆಲ್ಟಾ ರೂಪಾಂತರಿ ವೈರಸ್, ದೇಶದ 174 ಜಿಲ್ಲೆಗಳಲ್ಲಿ ಕಂಡುಬಂದಿತ್ತು. ಆ ಬಳಿಕ, ಇದೀಗ ಡೆಲ್ಟಾದ ರೂಪಾಂತರಿ ಡೆಲ್ಟಾ ಪ್ಲಸ್ ವೈರಾಣು ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+