ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕ್ರಿಯೆ ಮತ್ತು ಲಾಕ್‌ಡೌನ್: ಪ್ರಸಿದ್ದ ಕಾಂಡೋಮ್ ಕಂಪೆನಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮೇ 4: ಕೊರೊನಾ ಹಾವಳಿಯಿಂದ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕೊರೊನಾ ತಡೆಗಟ್ಟಲು ಲಾಕ್‌ಡೌನ್ ಒಂದೇ ಅಸ್ತ್ರವಾಗಿರುವುದರಿಂದ ಜನ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ.

Recommended Video

ಜನ ಕೊರೊನಾ ಬಂದರೂ ಸತ್ತರೂ ಪರ್ವಾಗಿಲ್ಲ ಸರ್ಕಾರಕ್ಕೆ ದುಡ್ಡು ಬೇಕು ಅಷ್ಟೇ! | Oneindia Kannada

ಲಾಕ್‌ಡೌನ್ ಜಾರಿಯಾದ ನಂತರ ಜನರು ಸಾಮಾನ್ಯ ದಿನಗಳಿಗಿಂತ ಜೀವನ ನಡೆಸಲು ಆಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ. ಲಾಕ್‌ಡೌನ್ ನಿಂದಾಗಿ ಜನ ಕಡಿಮೆ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎಂಬ ಸಂಗತಿ ಹೊರ ಬಿದ್ದಿದೆ. ಇದನ್ನು ನಾವು ಹೇಳುತ್ತಿಲ್ಲ. ಕಾಂಡೋಮ್ ತಯಾರಿಕೆಯಲ್ಲಿ ಖ್ಯಾತಿ ಗಳಿಸಿರುವ ಡುರೆಕ್ಸ ನ Reckitt Benckiser ಸಂಸ್ಥೆ ಬಹಿರಂಗಪಡಿಸಿದೆ.

ಬಾಲಕಿಯರ ಮೇಲೆ ಅತ್ಯಾಚಾರ ಕುರಿತ ವಿದ್ಯಾರ್ಥಿಗಳ ಚಾಟಿಂಗ್ ಹಿಸ್ಟರಿ ಬಯಲು ಬಾಲಕಿಯರ ಮೇಲೆ ಅತ್ಯಾಚಾರ ಕುರಿತ ವಿದ್ಯಾರ್ಥಿಗಳ ಚಾಟಿಂಗ್ ಹಿಸ್ಟರಿ ಬಯಲು

ಲಾಕ್‌ಡೌನ್ ಜಾರಿಯಾದ ಮೇಲೆ ಜನರಿಗೆ ಲೈಂಗಿಕ ಚಟುವಟಿಕೆ ನಡೆಸಲು ಅನುಕೂಲಕರ ವಾತಾವರಣ ಸಿಕ್ಕದೇ ಇರುವುದೇ ಲೈಂಗಿಕ ಚಟುವಟಿಕೆ ಕಡಿಮೆಯಾಗಲು ಕಾರಣ ಎಂದು ಡುರೆಕ್ಸ ನ Reckitt Benckiser ಸಂಸ್ಥೆ ಬಹಿರಂಗಪಡಿಸಿದೆ.

ಸೀಮಿತ ಅವಕಾಶಗಳನ್ನು ನೀಡಿದ್ದರಿಂದ

ಸೀಮಿತ ಅವಕಾಶಗಳನ್ನು ನೀಡಿದ್ದರಿಂದ

ಲಾಕ್‌ಡೌನ್‌ ಲೈಂಗಿಕ ಚಟುವಟಿಕೆಗಳಿಗೆ ಸೀಮಿತ ಅವಕಾಶಗಳನ್ನು ನೀಡಿದ್ದರಿಂದ ಮಾರ್ಚ್‌ ನಿಂದ ಇಲ್ಲಿಯವರೆಗೆ ಭಾರತ, ಯುರೋಪ್ ಸೇರಿದಂತೆ ಹೆಚ್ಚಿನ ಮಾರುಕಟ್ಟೆಗಳಲ್ಲಿ ಕಾಂಡೋಮ್ ಮಾರಾಟ ಕುಸಿಯಿತು ಎಂದು ಡುರೆಕ್ಸ ನ ಎಂಡಿ ಲಕ್ಷ್ಮಣ ನರಸಿಂಹನ್ ಹೇಳಿದ್ದಾರೆ. ಲಾಕ್‌ಡೌನ್‌ನಿಂದ ಲೈಂಗಿಕ ಕ್ರಿಯೆ ನಡೆಸಬಹುದಾದ ಜೋಡಿಗಳು ಸಾಮಾನ್ಯಕ್ಕಿಂತ ಕಡಿಮೆ ಆತ್ಮೀಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಶೇ 50 ರಿಂದ 65 ರಷ್ಟು ಕುಸಿದಿದೆ

ಶೇ 50 ರಿಂದ 65 ರಷ್ಟು ಕುಸಿದಿದೆ

ಸಾಮಾನ್ಯ ದಿನಗಳಿಗಿಂತ ಕಾಂಡೋಮ್ ಮಾರಾಡ ಶೇ 50 ರಿಂದ 65 ರಷ್ಟು ಕುಸಿದಿದೆ. ಇದಕ್ಕೆ ಪ್ರಮುಖ ಕಾರಣವೇ ಲಾಕ್‌ಡೌನ್. ಜೋಡಿಗಳಿಗೆ ಲೈಂಗಿಕ ಕ್ರಿಯೆ ನಡೆಸಲು ಹೋಟೆಲ್, ವಸತಿ ಗೃಹಗಳು, ರೆಸಾರ್ಟ್‌ಗಳು ಸಿಕ್ಕದೇ ಇರುವುದು ಪ್ರಮುಖ ಕಾರಣ. ಲಾಕ್‌ಡೌನ್ ನಿಂದ ಎಲ್ಲವೂ ಬಂದ್ ಆಗಿರುವುದರಿಂದ ಇದು ಸಹಜವೇ ಆಗಿದೆ ಎಂದು ಲಕ್ಷ್ಮಣ ನರಸಿಂಹನ್ Tribune News ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರೊನಾ ಆತ್ಮೀಯತೆಯ ನಂಟನ್ನು ಕಸಿದುಕೊಂಡಿದೆ

ಕೊರೊನಾ ಆತ್ಮೀಯತೆಯ ನಂಟನ್ನು ಕಸಿದುಕೊಂಡಿದೆ

ಯುರೋಪ್‌ನಲ್ಲಿ ಲಾಕ್‌ಡೌನ್ ತೆರವುಗೊಳಿಸಿದ ನಂತರವೂ ಕಾಂಡೋಮ್ ಮಾರಾಟದಲ್ಲಿ ಏರುಗತಿ ಕಾಣಿಸಲಿಕ್ಕಿಲ್ಲ ಎಂಬ ಆತಂಕವನ್ನು ಡುರೆಕ್ಸ್ ಹೊರಹಾಕಿದ್ದಾರೆ. ಕೊರೊನಾ ಯುರೋಪ್ ದೇಶಗಳಲ್ಲಿ ಆತ್ಮೀಯತೆಯ ನಂಟನ್ನು ಕಸಿದುಕೊಂಡಿದೆ. ಇದರಿಂದ ಮುಂದೆ ಜನ ಆತ್ಮೀಯತೆ ನಂಟು ಕಳೆದುಕೊಳ್ಳಬಹುದು ಎಂಬುದಾಗಿ ಲಕ್ಷ್ಮಣ ನರಸಿಂಹನ್ ಹೇಳಿದ್ದಾರೆ.

ಬೆಲೆ ಕಟ್ಟಲಾಗದ ಸಂತೋಷವನ್ನೂ ಸಹ ಕಳೆದುಕೊಂಡಿದ್ದಾರೆ

ಬೆಲೆ ಕಟ್ಟಲಾಗದ ಸಂತೋಷವನ್ನೂ ಸಹ ಕಳೆದುಕೊಂಡಿದ್ದಾರೆ

ಕೊರೊನಾ ವೈರಸ್‌ ಗೆ ಸೂಕ್ತ ಔಷಧಿ ಕಂಡು ಹಿಡಿಯದ ಹೊರತು ಎಲ್ಲ ಕ್ಷೇತ್ರಗಳಿಗೂ ಅದರ ಬಿಸಿ ತಟ್ಟಲಿದೆ. ಲಾಕ್‌ಡೌನ್ ನಿಂದಾಗಿ ಜನ ಕೇವಲ ಲೈಂಗಿಕ ಕ್ರಿಯೆ ನಡೆಸುವುದನ್ನಷ್ಟೇ ಕಳೆದುಕೊಂಡಿಲ್ಲ. ಅವರ ಬೆಲೆ ಕಟ್ಟಲಾಗದ ಸಂತೋಷವನ್ನೂ ಸಹ ಕಳೆದುಕೊಂಡಿದ್ದಾರೆ. ಇದರಿಂದ ಕಲಿಯಬೇಕಾದ ಪಾಠವೂ ಸಾಕಷ್ಟಿದೆ ಎಂದು ಲಕ್ಷ್ಮಣ ನರಸಿಂಹನ್ Tribune news ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

English summary
People Are Having Minimum Physical Relations In lockdown Says Report. Durex Condom MD Laxman Narasimhan Said To Tribune interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X