Viral Video: ರಜನಿಕಾಂತ್ ಸ್ಟೈಲ್‌ನಲ್ಲಿ ಪ್ರಯಾಣಿಕನ ಜೀವವನ್ನು ಒಂದೇ ಕೈಯಲ್ಲಿ ಉಳಿಸಿದ ಕಂಡಕ್ಟರ್
ಈಗೇನಿದ್ದರೂ ವೈರಲ್ ಪ್ರಪಂಚ. ಈ ವೈರಲ್ ಪ್ರಪಂಚದಲ್ಲಿ ಆಗುವ ಸುದ್ದಿಗಳನ್ನು ನೋಡಿದರೆ, ಹೀಗೂ ಆಗುತ್ತದಾ ಎಂದು ಅನಿಸುತ್ತದೆ. ಇನ್ನು ಕೆಲವೊಮ್ಮೆ ಅಬ್ಬಾ ಎಂತಹ ಧೈರ್ಯ ಅನಿಸುತ್ತದೆ. ಈ ದೃಶ್ಯಗಳು ಮನುಷ್ಯನ ಜೀವನಕ್ಕೆ ಕನ್ನಡಿ ಇದ್ದಂತೆ ಎಂದರೆ ತಪ್ಪಾಗಲಾರದು. ಆದರೆ ಇವುಗಳನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಇವೆಲ್ಲಾ ಡಿಪೆಂಡ್ ಆಗಿರುತ್ತವೆ.
ಕೆಲವರು ತಾವು ಸಾಮಾಜಿಕ ತಾಣದಲ್ಲಿ ಮಿಂಚಬೇಕು ಎಂದೇ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಅದರ ಲೈಕ್ ಹಾಗೂ ಕಮೆಂಟ್ ಕಂಡೆ ಖುಷಿ ಪಡುತ್ತಾರೆ. ಇನ್ನು ಕೆಲವರು ತಾವು ರಸ್ತೆಯಲ್ಲಿ ಹೋಗುವಾಗ, ಪ್ರಯಾಣಿಸುವಾಗ ನಡೆಯುವ ಫನ್ನಿ ಸನ್ನಿವೇಶಗಳನ್ನು ರಿ ಕ್ರಿಯೇಟ್ ಮಾಡಿ ವಿಡಿಯೋ ಮಾಡ್ತಾರೆ. ಇನ್ನು ಹಲವು ಜನ ಲೈವ್ ವಿಡಿಯೋವನ್ನೇ ಅಪ್ ಲೋಡ್ ಮಾಡಿ ಸಖತ್ ಟ್ರೆಂಡ್ ಸೃಷ್ಟಿಸುತ್ತಾರೆ.

ಹಲವರು ತಮ್ಮ ನೆಚ್ಚಿನ ಹಿರೋ ರೀತಿ ಸ್ಟಂಟ್ ಮಾಡಿ ವೈರಲ್ ಆಗುತ್ತಾರೆ. ಇನ್ನು ಕೆಲವರು ತಮ್ಮ ಸಮಯ ಪ್ರಜ್ಞೆಯಿಂದ ವೈರಲ್ ಆಗುತ್ತಾರೆ. ಕೇರಳದ ಈ ಕಂಡಕ್ಟರ್ ತನ್ನ ಸಮಯ ಪ್ರಜ್ಞೆಯಿಂದ ಸಖತ್ ವೈರಲ್ ಆಗ್ತಾ ಇದ್ದಾನೆ. ಈ ದೃಶ್ಯವನ್ನು ನೋಡಿದ ಅಭಿಮಾನಿಗಳು ಸೂಪರ್ ಸ್ಟಾರ್ ರಜನಿಕಾಂತ್‌ರನ್ನು ನೆನಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ ರಜನಿಕಾಂತ್ ಅವರು ಸಹ ತಮ್ಮ ಆರಂಭಿಕ ದಿನಗಳಲ್ಲಿ ಕಂಡಕ್ಟರ್ ಕೆಲಸವನ್ನೇ ಮಾಡಿದ್ದರು. ಈ ಕೆಲಸವನ್ನು ಮಾಡುವಾಗ ವಿಭಿನ್ನ ಮ್ಯಾನರಿಸಂ ಹಾಗೂ ಸ್ಟೈಲ್‌ನಿಂದಲೇ ಎಲ್ಲರ ಗಮನ ಸೆಳೆದಿದ್ದರು. ಆದರೆ ಈಗ ವೈರಲ್ ಆಗುತ್ತಿರುವ ಕೇರಳದ ಕಂಡಕ್ಟರ್ ಸ್ಟೈಲ್ ನೋಡಿದರೆ, ಸೂಪರ್ ಪವರ್ ಮ್ಯಾನ್ ಅನಿಸುತ್ತದೆ. ಏನ್ರಿ ಇತ ಟೈಮಿಂಗು.

ಆಗಿದ್ದೇನು?
ಪ್ರಯಾಣಿಕ ಕಂಡಕ್ಟರ್ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದಾನೋ ಅಥವಾ ಟಿಕೆಟ್ ಪಡೆಯುತ್ತಿದ್ದಾನೆ. ಬಸ್ ವೇಗವಾಗಿ ಹೊರಟಿದೆ. ಇವರಿಬ್ಬರು ಹಾಗು ಇನ್ನೊಬ್ಬ ಇವರ ಜೊತೆ ಬಸ್ ಡೋರ್ ಸ್ಟೆಪ್ಸ್ ಹತ್ತಿರ ನಿಂತಿದ್ದಾರೆ. ಕಂಡಕ್ಟರ್ ಟಿಕೆಟ್ ಕೊಡಲು ಮುಂದಾಗಿದ್ದಾನೆ. ಬ್ಲ್ಯೂ ಕಲರ್ ಶರ್ಟ್ ವ್ಯಕ್ತಿ ಅದನ್ನು ಪಡೆದಿದ್ದಾನೆ. ಅಷ್ಟೇ ಆ ಮೇಲೆ ಕಂಡಕ್ಟರ್‌ನಲ್ಲಿ ಸೂಪರ್ ಪವರ್ ಆನ್ ಆಗಿ ಬಿಟ್ಟಿದೆ.
Kerala: Bus conductor casually saves a man using some magical instinct. pic.twitter.com/nqJJ4xI4yA
— Pagan 🚩 (@paganhindu) June 7, 2024
ಟಿಕೆಟ್ ಪಡೆದ ವ್ಯಕ್ತಿಯ ಬ್ಯಾಲೆನ್ಸ್ ತಪ್ಪಿ ಆತ ಇನ್ನೆನು ಸ್ಟೆಪ್ಸ್ ಕಡೆ ವಾಲಿ ಡೋರ್‌ಗೆ ಡಿಕ್ಕಿ ಹೊಡೆಯುವನೇ ಇದ್ದ ಆಗಲೇ ನೋಡಿ, ಈ ಸೂಪರ್ ಮ್ಯಾನ್ ಕಂಡಕ್ಟರ್ ತನ್ನ ಬಲಗೈಯಲ್ಲಿ ವ್ಯಕ್ತಿಯ ಜೀವವನ್ನು ಸೇವ ಮಾಡಿದ್ದಾನೆ. ಈ ವಿಡಿಯೋ ಸಖತ್ ಟ್ರೆಂಡ್ ಆಗ್ತಾ ಇದೆ.
ಈ ವಿಡಿಯೋಗಳನ್ನು ನೋಡಿದ ಅಭಿಮಾನಿಗಳು ಕಂಡಕ್ಟರ್ ಅವರ ಟೈಮಿಂಗ್ ನೋಡಿ ಫುಲ್ ಮಾರ್ಕ್ಸ್ ನೀಡಿದ್ದಾರೆ. ಆ ಪ್ರಯಾಣಿಕ ಮಾತ್ರ ಯಮನ ಕೈಯಿಂದ ತಪ್ಪಿಸಿಕೊಂಡು ಬಂದಂತ ಫೀಲ್ ಆಗಿದೆ. ಈ ವಿಡಿಯೋ ನೋಡಿದ ಫ್ಯಾನ್ಸ್ ಕಂಡಕ್ಟರ್ ಸ್ಟೈಲ್ ಕಂಡು ಬೆಚ್ಚಿ ಬಿದ್ದಿದ್ದಾರೆ.
ಜೂನ್ 7ಕ್ಕೆ ಬೆಳಗ್ಗೆ ಈ ವಿಡಿಯೋ ಅಪ್‌ಲೋಡ್ ಆಗಿದ್ದು, 1.24 ಲಕ್ಷ ಜನ ಇದ್ದನ್ನು ನೋಡಿದ್ದಾರೆ. 2700 ಜನ ಲೈಕ್ ಮಾಡಿದ್ದು, 645 ಜನ ರಿಪೋಸ್ಟ್ ಮಾಡಿದ್ದಾರೆ.












Click it and Unblock the Notifications