Basavaraj Bommai Profile: ಪಾದಯಾತ್ರೆಯ ಛಲಗಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಿರುಪರಿಚಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಯಸ್ಸು, ಜೀವನ ಚರಿತ್ರೆ, ಕುಟುಂಬ, ರಾಜಕೀಯ ವೃತ್ತಿ, ಶಿಕ್ಷಣ, ಆಸ್ತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇತ್ತೀಚಿನ ಸುದ್ದಿಗಳ ವಿವರ ಇಲ್ಲಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಬಸವರಾಜ್ ಬೊಮ್ಮಾಯಿ ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿಯಾದ ಬಸವರಾಜ್ ಸೋಮಪ್ಪ ಬೊಮ್ಮಾಯಿ ಒಬ್ಬ ಸರಳ ಸಜ್ಜನಿಕೆಯ ರಾಜಕಾರಣಿ. ಹುಟ್ಟಿನಿಂದಲೇ ಅವರು ರಾಜಕೀಯ ವಾತಾವರಣದಲ್ಲಿ ಬೆಳೆದವರು.

ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಹುದ್ದೆಗೆ ಲಿಂಗಾಯಿತ ಸಮುದಾಯದ ಪ್ರಬಲ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಸೋಮಪ್ಪ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.

ಇದಕ್ಕೂ ಮುನ್ನ ಬೊಮ್ಮಾಯಿ ಅವರು ಬಿಎಸ್‌ ಯಡಿಯೂರಪ್ಪರವರ ಸಂಪುಟದಲ್ಲಿ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದರು. ಮಾತ್ರವಲ್ಲದೆ ಅವರು ಬಿಎಸ್‌ವೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕುರಿತು ಕಿರು ಪರಿಚಯ ಇಲ್ಲಿದೆ.

ಬಸವರಾಜ ಬೊಮ್ಮಾಯಿ ಅವರು ಮೂಲತ: ಜನತಾ ಪರಿವಾರದ ಹಿನ್ನೆಲೆ ಹೊಂದಿದವರು. ಜನತಾ ದಳದೊಂದಿಗೆ ರಾಜಕೀಯ ಜೀವನ ಪ್ರಾರಂಭಿಸಿದ ಅವರು 2008ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಕರ್ನಾಟಕದ ಮಾಜಿ ಗೃಹ ವ್ಯವಹಾರ, ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸಕಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ಜಲಸಂಪನ್ಮೂಲ ಮತ್ತು ಸಹಕಾರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ ಬಾಲ್ಯ ಮತ್ತು ಶಿಕ್ಷಣ:

ಬಸವರಾಜ್ ಬೊಮ್ಮಾಯಿ ಬಾಲ್ಯ ಮತ್ತು ಶಿಕ್ಷಣ:

ಬಸವರಾಜ್ ಬೊಮ್ಮಾಯಿ 1960ರ ಜನವರಿ 18ರಂದು ಧಾರಾವಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರರಾದ ಇವರು ರಾಜಕೀಯ ಹಿನ್ನೆಲೆ ಹೊಂದಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಪತ್ನಿ ಹೆಸರು ಚೆನ್ನಮ್ಮ ಹಾಗೂ ಇಬ್ಬರು ಮಕ್ಕಳಿದ್ದಾರೆ. ಜನತಾದಳದೊಂದಿಗೆ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದ ಬಸವರಾಜ್ ಬೊಮ್ಮಾಯಿ ಕರ್ನಾಟಕ ವಿಧಾನಸೌಧಕ್ಕೆ ಎರಡು ಬಾರಿ ಧಾರವಾಡ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ಬಸವರಾಜ್ ಬೊಮ್ಮಾಯಿ ರಾಜಕೀಯ ಜೀವನ:

ಬಸವರಾಜ್ ಬೊಮ್ಮಾಯಿ ರಾಜಕೀಯ ಜೀವನ:

2008ರಲ್ಲಿ ಅವರು ಪಕ್ಷವನ್ನು ಬದಲಾಯಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದ ಅವರನ್ನು ಜಲಸಂಪನ್ಮೂಲ ಸಚಿವರಾಗಿ ನೇಮಕಗೊಳಿಸಲಾಯಿತು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದಲೂ ಅವರು ಸಹಕಾರ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮತ್ತು ಗೃಹ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ ರಾಜಕೀಯ ಕಾಲಾನುಕ್ರಮ:

ಬಸವರಾಜ್ ಬೊಮ್ಮಾಯಿ ರಾಜಕೀಯ ಕಾಲಾನುಕ್ರಮ:

* 1998 - ಬಸವರಾಜ್ ಬೊಮ್ಮಾಯಿ ಧಾರವಾಡ ಕ್ಷೇತ್ರದ ಜನತಾದಳದ ಶಾಸಕರಾಗಿ ಆಯ್ಕೆಯಾಗಿದ್ದರು

* 2004 - ಅವರು ಮತ್ತೊಮ್ಮೆ ಧಾರವಾಡ ಕ್ಷೇತ್ರದ ಜನತಾದಳದ ಶಾಸಕರಾಗಿ ಗೆಲುವು ಸಾಧಿಸಿದರು.

* 2008 - ಜನತಾ ದಳವನ್ನು ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು, ಅಂದು ಅವರನ್ನು ಜಲಸಂಪನ್ಮೂಲ ಸಚಿವರಾಗಿ ನೇಮಿಸಲಾಯಿತು.

* 2018 - ಕರ್ನಾಟಕ ವಿಧಾನಸಭೆಗೆ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು.

* 2019 - ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅವರನ್ನು ಸಹಕಾರ ಸಚಿವರನ್ನಾಗಿ ನೇಮಿಸಲಾಯಿತು. ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಅಲ್ಲದೇ ಕರ್ನಾಟಕ ಸರ್ಕಾರದಲ್ಲಿ ಗೃಹ ವ್ಯವಹಾರಗಳ ಸಚಿವರಾಗಿಯೂ ಸೇವೆ ಸಲ್ಲಿಸಿದರು.

232ಕಿಮೀ ಪಾದಯಾತ್ರೆ ಮಾಡಿದ್ದ ಛಲಗಾರ

232ಕಿಮೀ ಪಾದಯಾತ್ರೆ ಮಾಡಿದ್ದ ಛಲಗಾರ

ಬಸವರಾಜ್ ಬೊಮ್ಮಾಯಿ 1993ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಯುವ ಜನತಾದಳದ ಬೃಹತ್ ಸಮಾವೇಶದ ರೂವಾರಿಯಾಗಿದ್ದರು. ನಂತರ 1995 ರಲ್ಲಿ ರಾಜ್ಯ ಜನತಾದಳದ ಪ್ರಧಾನ ಕಾರ್ಯದರ್‍ಯಶಿಯಾಗಿ ಕಾರ್ಯನಿರ್ವಹಿಸಿದರು. ಬಳಿಕ 1996 ರಿಂದ 1997 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌,ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಪಟೇಲರ ಗರಡಿಯಲ್ಲಿ ಪಳಗಿದವರು.

2007ರ ಜುಲೈನಲ್ಲಿ ಧಾರವಾಡದಿಮದ ನರಗುಂದದವರೆಗೆ 232 ಕಿಮೀ ದೂರವನ್ನು 21 ದಿನಗಳ ಕಾಲ ರೈತರೊಂದಿಗೆ ಹೆಜ್ಜೆ ಹಾಕಿ ರೈತ ಹೋರಾಟಕ್ಕೆ ಬಲ ತುಂಬಿದವರು ಬಸವರಾಜ ಬೊಮ್ಮಾಯಿ. ಸದ್ಯ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ.

ಸಾಧನೆ, ವೈಫಲ್ಯ ಹಾಗೂ ಸವಾಲುಗಳೇನು?

ಸಾಧನೆ, ವೈಫಲ್ಯ ಹಾಗೂ ಸವಾಲುಗಳೇನು?

ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆ

1.ಕೃಷಿ: ಕೃಷಿಕರಿಗೆ 5 ಲಕ್ಷದವರೆಗೂ ಬಡ್ಡಿರಹಿತ ಅಲ್ಪಾವಧಿ ಸಾಲ

2.ಶಿಕ್ಷಣ: ಸರಕಾರಿ ಕಾಲೇಜುಗಳಲ್ಲಿ ಸಂಪೂರ್ಣ ಶುಲ್ಕ ವಿನಾಯ್ತಿ

3. ಸ್ಥಳೀಯಾಡಳಿತಕ್ಕೆ ಬಲ:ಪ್ರತಿ ಗ್ರಾಮ ಪಂಚಾಯ್ತಿಗೆ 60 ಲಕ್ಷದವರೆಗೆ ಅನುದಾನ

4. ವಸತಿ: ನಮ್ಮ ನೆಲೆ ಯೋಜನೆಯಡಿ 5 ಲಕ್ಷ ಹೊಸ ಮನೆ ನಿರ್ಮಾಣ

5. ಆರೋಗ್ಯ: 100 ಸಮುದಾಯ ಕೇಂದ್ರದ ಸುಧಾರಣೆಗೆ 781 ಕೋಟಿ ರೂ.

6.ಪಶುಸಂಗೋಪನೆ: 290 ಸಂಚಾರಿ ಪಶು ಚಿಕಿತ್ಸಾಲಯಗಳ ಆರಂಭ

7.ಮಹಿಳಾ ಸಬಲೀಕರಣ: ಕೃಷಿ ಕಾರ್ಮಿಕ ಮಹಿಳೆಯರಿಗೆ ತಿಂಗಳಿಗೆ 500 ರೂ. ಸಹಾಯಧನ

8. ನೀರಾವರಿ: ನೀರಾವರಿಗೆಂದು 39,031 ಕೋಟಿ ರೂ. ಅನುದಾನ ಘೋಷಣೆ

9. ಕೈಗಾರಿಕೆ: ರಾಜ್ಯದ 9 ಕಡೆಗಳಲ್ಲಿ ಹೊಸ ಕೈಗಾರಿಕಾ ವಲಯ ಸ್ಥಾಪನೆ

10. ದೇವಸ್ಥಾನ ಅಭಿವೃದ್ಧಿ: ಹಲವು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ


ಬಸವರಾಜ ಬೊಮ್ಮಾಯಿ ಸರ್ಕಾರದ ವೈಫಲ್ಯಗಳು

*ಸರ್ಕಾರದ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರಆರೋಪ. ಬಿಟ್ಕಾಯಿನ್, 40 ಪರ್ಸೆಂಟ್ ಕಮಿಷನ್ ಆರೋಪ ಹಾಗೂ ಗುತ್ತಿಗೆದಾರರಿಂದ ಪ್ರಧಾನಿಗೆ ಪತ್ರ.

*ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ, ಅಸಿಸ್ಟೆಂಟ್ ಪ್ರೊಫೆಸರ್ ಗಳ ನೇಮಕಾತಿ ಅಕ್ರಮ. ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳ ಬಂಧನ.

*ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ ಆಡಳಿತಕ್ಕೆ ಮುಟ್ಟದ ಚುರುಕು. ಅಧಿಕಾರಿಗಳ ವಲಯದಲ್ಲಿ ವಿಳಂಬ ಧೋರಣೆ ಆರೋಪ.

*ಇಲಾಖಾವಾರು ಸಾವಿರಾರು ಕಡತಗಳು ವಿಲೇವಾರಿಯಾಗದೇ ಬಾಕಿ.

*ನೆರೆ ಪರಿಹಾರದಲ್ಲೂ ಎಡವಿದ ಸರ್ಕಾರ: ಅತಿವೃಷ್ಟಿಗೆ ಸಾವಿರಾರು ಕೋಟಿ ಮೌಲ್ಯದ ಬೆಳೆ, ಮನೆ, ಮೂಲಸೌಕರ್ಯ ಹಾನಿ. ಪರಿಹಾರ ವಿತರಣೆ, ಪುನರ್ವಸತಿ ಕಾರ್ಯಗಳು ಪರಿಣಾಮಕಾರಿಯಾಗದೆ ಇರುವ ಆರೋಪ.

*ಬೆಂಗಳೂರಿನ ರಸ್ತೆ ಗುಂಡಿ, ದುರಸ್ತಿ, ಚರಂಡಿ, ಫುಟ್‌ಪಾತ್ ಕಾಮಗಾರಿಗಳು ವಿಳಂಬ. 10,000 ಕ್ಕೂ ಅಧಿಕ ಗುಂಡಿಗಳಿಂದ ವಾಹನ ಸವಾರರ ಪರದಾಟ. ಹೈಕೋರ್ಟ್ ಚಾಟಿ ಬೀಸಿದರೂ ಎಚ್ಚೆತ್ತುಕೊಳ್ಳದ ಸರ್ಕಾರ.

*ಹಿಜಾಬ್, ಹಲಾಲ್‌, ಆಝಾನ್ ವಿವಾದವನ್ನು ಸರ್ಕಾರ ನಿಭಾಯಿಸುವಲ್ಲಿ ವಿಫಲ.

*ಪಠ್ಯ ಪರಿಷ್ಕರಣೆ ವಿವಾದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಸರ್ಕಾರ. ವಿವಿಧ ಸಮಾಜದ ಮಠಾಧೀಶರು, ಮಾಜಿ ಪಿಎಂ ದೇವೇಗೌಡರಂಥವರಿಂದಲೂ ಸರ್ಕಾರದ ಧೋರಣೆಗೆ ಅಸಮಾಧಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+