• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನಾ-ನೀನಾ: ಕೊರೊನಾವೈರಸ್ ಹಿಂದೆ ಇರುವುದೇ ಚೀನಾ!?

|

ನವದೆಹಲಿ, ಮೇ 11: ಅದು ಜಗತ್ತಿನ ಬಲಿಷ್ಠ ರಾಷ್ಟ್ರಗಳ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯುತ್ತಿದ್ದ ಕಾಲ. ಮದ್ದು-ಗುಂಡು, ರಾಸಾಯನಿಕ ಹಾಗೂ ಅಣು ಶಸ್ತ್ರಾಸ್ತ್ರಗಳನ್ನು ಹಿಡಿದು ಹೋರಾಡುತ್ತಿದ್ದ ಯುದ್ಧದ ಚಿತ್ರಣವೇ ಬದಲಾಗಿದೆ ಹೋಗಿದೆ. ಇಡೀ ಪ್ರಪಂಚವನ್ನು ವ್ಯಾಪಿಸಿರುವ ಕೋಟ್ಯಂತರ ಜೀವಗಳನ್ನು ಬಲೆ ತೆಗೆದುಕೊಂಡಿರುವ ಜೈವಿಕ ಅಸ್ತ್ರದ ಹಿಂದೆ ಚೀನಾದ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಜಗತ್ತಿನಾದ್ಯಂತ ಕಳೆದ 24 ಗಂಟೆಗಳಲ್ಲೇ 6,10,462 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಈವರೆಗೂ 15,96,75,180 ಜನರಲ್ಲಿ ಇದೇ ಕೊವಿಡ್-19 ಸೋಂಕು ಪತ್ತೆಯಾಗಿದೆ. ಕಳೆದ ಒಂದೇ ದಿನದಲ್ಲಿ 10,585 ಮಂದಿ ಕೊರೊನಾವೈರಸ್ ಎಂಬ ಸಾಂಕ್ರಾಮಿಕ ಪಿಡುಗಿನಿಂದ ಪ್ರಾಣಬಿಟ್ಟಿದ್ದು, ಇದುವರೆಗೂ 33,19,648 ಜನರು ಜೀವ ಚೆಲ್ಲಿದ್ದಾರೆ.

3ನೇ ಮಹಾಯುದ್ಧಕ್ಕೆತಯಾರಿ..? ಶಾಂತಿ ಒಪ್ಪಂದಕ್ಕೆ ಒಪ್ಪಲಿಲ್ವಾ ರಷ್ಯಾ..?3ನೇ ಮಹಾಯುದ್ಧಕ್ಕೆತಯಾರಿ..? ಶಾಂತಿ ಒಪ್ಪಂದಕ್ಕೆ ಒಪ್ಪಲಿಲ್ವಾ ರಷ್ಯಾ..?

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಭಾರತ, ಬ್ರೆಜಿಲ್, ಫ್ರಾನ್ಸ್ ಟರ್ಕಿ, ರಷ್ಯಾ, ಇಂಗ್ಲೆಂಡ್, ಇಟಲಿ, ಸ್ಪೇನ್ ಮತ್ತು ಜರ್ಮನಿ ಅಂತಹ ದೈತ್ಯ ಹಾಗೂ ಬಲಿಷ್ಠ ರಾಷ್ಟ್ರಗಳೇ ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿ ಹೋಗಿವೆ. ಇಂಥ ಸಂದರ್ಭದಲ್ಲಿ ಕೊರೊನಾವೈರಸ್ ಎನ್ನುವುದು ವಿಶ್ವದ ಮೂರನೇ ಮಹಾಯುದ್ಧಕ್ಕಾಗಿ ಚೀನಾ ಸಿದ್ಧಪಡಿಸಿದ ಜೈವಿಕ ಅಸ್ತ್ರ ಎಂದು ಚೀನಾದ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರಾದ ಡಾ. ಲೆ-ಮಂಗ್-ಯನ್ ಆರೋಪಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಯುಎಸ್ ರಾಜ್ಯ ಇಲಾಖೆಯು ಹಲವು ದಾಖಲೆಗಳನ್ನು ಸಂಗ್ರಹಿಸಿದೆ. ಈ ದಾಖಲೆಗಳ ಆಧಾರದ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ಚೀನಾನೀಡಿರುವ ಸ್ಪಷ್ಟನೆ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಜಗತ್ತು ಗೆಲ್ಲಲು ಚೀನಾದಿಂದ ದೀರ್ಘಾವಧಿ ಯೋಜನೆ

ಜಗತ್ತು ಗೆಲ್ಲಲು ಚೀನಾದಿಂದ ದೀರ್ಘಾವಧಿ ಯೋಜನೆ

ಕೊರೊನಾವೈರಸ್ ಎಂಬ ಜೈವಿಕ ಅಸ್ತ್ರ ಸೃಷ್ಟಿಸುವುದರ ಹಿಂದೆ ಇಡೀ ಜಗತ್ತನ್ನೇ ಗೆಲ್ಲುವ ಯೋಜನೆಯನ್ನು ಚೀನಾ ಹಾಕಿಕೊಂಡಿದೆ ಎಂದು ಚೀನಾದ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರಾದ ಡಾ. ಲೆ-ಮಂಗ್-ಯನ್ ದೂರಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಚೀನಾದಿಂದ ಜೈವಿಕ ಅಸ್ತ್ರ ಪ್ರಯೋಗಿಸಿದ ಬಗ್ಗೆ ವರದಿಯನ್ನು ಪ್ರಕಟಿಸಲಾಗಿತ್ತು. ಕೊರೊನಾವೈರಸ್ ಸೋಂಕು ಚೀನಾದ ಪ್ರಯೋಗಾಲಯದಿಂದ ಬಂದಿದೆ ಎಂದು ತಿಳಿಯುತ್ತಿದ್ದಂತೆ ಇಡೀ ಜಗತ್ತಿನ ದಾರಿ ತಪ್ಪಿಸುವ ಹಾಗೂ ತಪ್ಪು ಮಾಹಿತಿಯನ್ನು ಹರಡುವ ಕೆಲಸವನ್ನು ಮಾಡಲಾಯಿತು ಎಂದು ಆರೋಪಿಸಿದ್ದಾರೆ.

ವೈರಸ್ ಬಿಡುಗಡೆಗೊಳಿಸಿದ ಪಿಎಲ್ಎ ಪ್ರಯೋಗಾಲಯ

ವೈರಸ್ ಬಿಡುಗಡೆಗೊಳಿಸಿದ ಪಿಎಲ್ಎ ಪ್ರಯೋಗಾಲಯ

ಕಳೆದ ಜನವರಿ ತಿಂಗಳಿನಿಂದಲೂ ಯುಟ್ಯೂಬ್ ನಲ್ಲಿ ಅನಾಮಧೇನ ಖಾತೆಗಳ ಮೂಲಕ ಕೊರೊನಾವೈರಸ್ ಮತ್ತು ಅದರ ಮೂಲಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಸುದೀರ್ಘ ತನಿಖೆ ನಂತರ ಕೊರೊನಾವೈರಸ್ ಎನ್ನುವುದು ಮನುಷ್ಯರನ್ನೇ ಗುರಿಯಾಗಿಸಿಕೊಂಡು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಪ್ರಯೋಗಾಲಯದಿಂದ ಬಿಡುಗಡೆಗೊಳಿಸಿರುವ ವೈರಸ್ ಆಗಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಚೀನಾ ತಕ್ಷಣವೇ ಪ್ರತಿಕ್ರಿಯೆ ನೀಡಿದೆ ಎಂದು ಹೇಳಿದ್ದಾರೆ.

3ನೇ ಮಹಾಯುದ್ಧದ ಆತಂಕ ಸ್ಫೋಟ..! ಕಪ್ಪು ಸಮುದ್ರಕ್ಕೆ ನುಗ್ಗುತ್ತಾ ಬ್ರಿಟಿಷ್ ನೌಕೆ..?3ನೇ ಮಹಾಯುದ್ಧದ ಆತಂಕ ಸ್ಫೋಟ..! ಕಪ್ಪು ಸಮುದ್ರಕ್ಕೆ ನುಗ್ಗುತ್ತಾ ಬ್ರಿಟಿಷ್ ನೌಕೆ..?

2015ರಲ್ಲೇ ಕೊರೊನಾವೈರಸ್ ಸಂಶೋಧಿಸಿದ ಚೀನಾ

2015ರಲ್ಲೇ ಕೊರೊನಾವೈರಸ್ ಸಂಶೋಧಿಸಿದ ಚೀನಾ

ಜಗತ್ತಿನ ವೈದ್ಯಕೀಯ ವ್ಯವಸ್ಥೆಯನ್ನು ನಾಶಪಡಿಸುವ ಹಾಗೂ ಅನಿಯಂತ್ರಿಸ ಜೈವಿಕ ಅಸ್ತ್ರವಾಗಿರುವ ಕೊರೊನಾವೈರಸ್ ಬಗ್ಗೆ 2015ರಲ್ಲೇ ಚೀನಾ ಸಂಶೋಧನೆಯನ್ನು ನಡೆಸಿತ್ತು. ಕಳೆದ 6 ವರ್ಷಗಳ ಹಿಂದೆ ಕಂಡು ಹಿಡಿದ ರೋಗಾಣುವಿನಿಂದ ಸಾವಿನ ಪ್ರಮಾಣ ಕಡಿಮೆಯಾಗಿದ್ದರೂ, ಶತ್ರುಗಳನ್ನು ನಾಶಪಡಿಸುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೇ ಶತ್ರುರಾಷ್ಟ್ರದ ವೈದ್ಯಕೀಯ ವ್ಯವಸ್ಥೆಗೆ ದೊಡ್ಡ ಸವಾಲು ಆಗಲಿದೆ ಎಂದು ಚೀನಾ ಅರಿತುಕೊಂಡಿತ್ತು. ಅದರಂತೆ 2019ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ರೋಗಾಣುವನ್ನು ಬಿಡುಗಡೆಗೊಳಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಯುಎಸ್ ಸಂಗ್ರಹಿತ ದಾಖಲೆಗಳಲ್ಲಿ ಉಲ್ಲೇಖವಾದ ಅಂಶವೇನು?

ಯುಎಸ್ ಸಂಗ್ರಹಿತ ದಾಖಲೆಗಳಲ್ಲಿ ಉಲ್ಲೇಖವಾದ ಅಂಶವೇನು?

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಪ್ರಯೋಗಾಲಯದ ಸಾಂಕ್ರಾಮಿಕ ರೋಗಶಾಸ್ತ್ರರು ನೀಡಿರುವ ಮಾಹಿತಿಯನ್ನು ಯುನೈಟೆಡ್ ಸ್ಟೇಟ್ಸ್ ಸಂಗ್ರಹಿಸಿದೆ. ಈ ದಾಖಲೆಗಳ ಪ್ರಕಾರ, ಕೊರೊನಾವೈರಸ್ ಎನ್ನುವುದು ಮೂರನೇ ಮಹಾಯುದ್ಧಕ್ಕಾಗಿ ಚೀನಾ ಸಿದ್ಧಪಡಿಸಿರುವ ಜೈವಿಕ ಅಸ್ತ್ರ ಎಂದು ಉಲ್ಲೇಖಿಸಲಾಗಿದೆ. ಯುಕೆ ಮೂಲದ ‘ದಿ ಆಸ್ಟ್ರೇಲಿಯನ್' ಅನ್ನು ಉಲ್ಲೇಖಿಸಿ, ಚೀನಾದ ವಿಜ್ಞಾನಿಗಳು SARS ಕೊರೊನಾವೈರಸ್ ಬಗ್ಗೆ ವಿವರಿಸಲಾಗಿದೆ. ಅದರಲ್ಲಿ COVID ಎನ್ನುವುದು ಕೇವಲ ಒಂದು ಉದಾಹರಣೆಯಾಗಿದೆ. ಆದರೆ ಇದೊಂದು "ಆನುವಂಶಿಕ ಶಸ್ತ್ರಾಸ್ತ್ರಗಳ ಹೊಸ ಯುಗ"ವನ್ನೇ ಸೃಷ್ಟಿಸುತ್ತದೆ" ಎಂದು ಉಲ್ಲೇಖಿಸಲಾಗಿದೆ.

ಕೊರೊನಾವೈರಸ್ ಎನ್ನುವುದು ಕೇವಲ ಒಂದು ರೋಗಾಣುವಲ್ಲ

ಕೊರೊನಾವೈರಸ್ ಎನ್ನುವುದು ಕೇವಲ ಒಂದು ರೋಗಾಣುವಲ್ಲ

ಇಂದು ಜಗತ್ತಿನ ಜನರನ್ನು ಆತಂಕಕ್ಕೆ ದೂಡಿರುವ ಕೊರೊನಾವೈರಸ್ ಎನ್ನುವುದು ಕೇವಲ ಒಂದು ರೋಗಾಣುವಲ್ಲ. ಇದು ರೋಗಾಣುಗಳಿಂದ ಕೂಡಿರುವ ಒಂದು ದೊಡ್ಡ ಕುಟುಂಬವಾಗಿದೆ. ಈ ಕೊರೊನಾವೈರಸ್ ಸೋಂಕು ತಗುಲಿದವರಲ್ಲಿ ಸಾಮಾನ್ಯವಾಗಿ ನೆಗಡಿ, ಜ್ವರ, ಉಸಿರಾಟ ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಗೋಚರಿಸುತ್ತವೆ.

ಯುಎಸ್ ಆರೋಪಕ್ಕೆ ಚೀನಾ ನೀಡಿದ ಪ್ರತಿಕ್ರಿಯೆ?

ಯುಎಸ್ ಆರೋಪಕ್ಕೆ ಚೀನಾ ನೀಡಿದ ಪ್ರತಿಕ್ರಿಯೆ?

ಚೀನಾ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೆಲವರು ತಮ್ಮ ರಾಷ್ಟ್ರದ ಆಂತರಿಕ ದಾಖಲೆಗಳನ್ನು ಕದಿಯುತ್ತಿದ್ದಾರೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ದೂಷಿಸಿದ್ದಾರೆ. ಅಲ್ಲದೇ ಕೆಲವರು ಮಾಡುತ್ತಿರುವ ದುರುದ್ದೇಶಪೂರಿತ ಆರೋಪ ಹಾಗೂ ವ್ಯಾಖ್ಯಾನಗಳು ಸುಳ್ಳು ಎನ್ನುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಚೀನಾದಲ್ಲಿ ಮೊದಲು ಪತ್ತೆಯಾದ ಕೊರೊನಾವೈರಸ್

ಚೀನಾದಲ್ಲಿ ಮೊದಲು ಪತ್ತೆಯಾದ ಕೊರೊನಾವೈರಸ್

ಕಳೆದ 2019ರ ಡಿಸೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಚೀನಾದ ಕೇಂದ್ರಭಾಗದಲ್ಲಿ ಇರುವ ವುಹಾನ್ ನಗರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣವೊಂದು ಪತ್ತೆಯಾಗಿತ್ತು. ಅಂದು ಪತ್ತೆಯಾದ ಕೊರೊನಾವೈರಸ್ ಸೋಂಕು ಇಂದು ಇಡೀ ಜಗತ್ತಿಗೆ ವ್ಯಾಪಿಸಿದೆ. ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರೇ ಉಲ್ಲೇಖಿಸಿರುವಂತೆ ಕೊವಿಡ್-19 ಎನ್ನುವುದು ರೋಗಾಣುಗಳ ಒಂದು ಗುಂಪಾಗಿದ್ದು, ನಿಗದಿತ ಸಮಯದ ಬಳಿಕ ಅದೇ ಕೊರೊನಾವೈರಸ್ ರೂಪಾಂತರಗೊಳ್ಳುತ್ತಿದೆ. ವಿವಿಧ ದೇಶಗಳಲ್ಲಿ ಕೊರೊನಾವೈರಸ್ ಮೊದಲ ಅಲೆ ಮತ್ತು ಎರಡು ಹಾಗೂ ಮೂರನೇ ಅಲೆಯಾಗಿ ಹರಡುತ್ತಿರುವ ಉದಾಹರಣೆಗಳು ಕಣ್ಣು ಮುಂದಿವೆ.

ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್-19 3ನೇ ಅಲೆಯ ಭೀತಿ

ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್-19 3ನೇ ಅಲೆಯ ಭೀತಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿರುವ ಭಾರತದಲ್ಲಿ ಎರಡನೇ ಅಲೆಯು ಅಟ್ಟಹಾಸ ಮೆರೆಯುತ್ತಿದೆ. ಅಕ್ಟೋಬರ್ ನಂತರದಲ್ಲಿ ಕೊವಿಡ್-19 ಸೋಂಕಿನ ಮೂರನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ದಾಖಲಿಸಿದ ಜಗತ್ತಿನ ಎರಡನೇ ರಾಷ್ಟ್ರವಾಗಿ ಭಾರತವು ಗುರುತಿಸಿಕೊಂಡಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮೊದಲ ಸ್ಥಾನದಲ್ಲಿದೆ.

English summary
China on Monday Termed As “Outright Lies” The Media Reports That Its Military Scientists Investigated Weaponising Coronavirus 2015 Before The COVID-19 Pandemic Outbreak And Said It Is An Attempt By The US To Smear The Country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X