ಕೋಳಿ ಮೊದಲಾ? ಮೊಟ್ಟೆ ಮೊದಲಾ? ಕೊನೆಗೂ ಸಿಕ್ಕೆಬಿಡ್ತು ಉತ್ತರ
ಕೋಳಿ ಮೊದಲಾ? ಮೊಟ್ಟೆ ಮೊದಲಾ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಶತಮಾನಗಳಿಂದಲೂ ಈ ಪ್ರಶ್ನೆಗೆ ವಿಜ್ಞಾನಿಗಳು ಉತ್ತರ ಹುಡುಕುತ್ತಲೇ ಇದ್ದರು. ಕೋಳಿ ಮೊದಲು ಅಂತಾದರೆ ಅದು ಹೇಗೆ ಬಂತು? ಮೊಟ್ಟೆ ಮೊದಲಾದರೆ ಕೋಳಿ ಇಲ್ಲದೆ ಮೊಟ್ಟೆ ಹೇಗೆ ಬಂತು ಅನ್ನೋದು ಪ್ರಕೃತಿಯ ವೈಶಿಷ್ಟ್ಯದ ನಿಗೂಢತೆಯನ್ನು ಮತ್ತಷ್ಟು ಗಾಢವಾಗಿಸುತ್ತವೆ. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೌದು... ಇದೇ ನವೆಂಬರ್ 2024ರಲ್ಲಿ ಜಿನೀವಾ ವಿಶ್ವವಿದ್ಯಾಲಯ ಇದಕ್ಕೆ ಉತ್ತರವನ್ನು ಕಂಡು ಹಿಡಿದಿದೆ. ಇದರ ಪ್ರಕಾರ ಕೋಳಿ ಮೊದಲು ಬಂದಿಲ್ಲ. ಮೊಟ್ಟೆ ಮೊದಲು ಬಂದಿದೆ. ಅದು ಹೇಗೆ ಅನ್ನೋದನ್ನು ವಿಶ್ವವಿದ್ಯಾಲಯ ವಿವರಿಸಿದೆ. ಸಂಶೋಶನೆಯ ಪ್ರಕಾರ ಕೋಳಿ ಮತ್ತು ಮೊಟ್ಟೆ ಈ ಎರಡರಲ್ಲಿ ಮೊದಲು ಬಂದದ್ದು ಮೊಟ್ಟೆ.

ಅದು ಹೇಗೆ ಸಾಧ್ಯ? ಮೊಟ್ಟೆ ಇಲ್ಲದೆ ಕೋಳಿ ಬರೋದಿಲ್ಲ. ಕೋಳಿ ಇಲ್ಲದೆ ಮೊಟ್ಟೆ ಬರೋದಿಲ್ಲ. ಹೀಗಿರುವಾಗ ಸಂಶೋಧನೆಯಲ್ಲಿ ಮೊಟ್ಟೆ ಮೊದಲು ಎಂದು ಹೇಗೆ ಹೇಳಲಾಗುತ್ತದೆ ಅಂತ ನೀವು ಯೋಚನೆ ಮಾಡುತ್ತಿರಬಹುದು. ನಿಮಗೊಂದು ವಿಷಯ ಗೊತ್ತಿರಬಹುದು. ಮಂಗನಿಂದ ಮಾನವ. ಮಂಗನನ್ನು ನಾವು ಮಾನವ ಎನ್ನಲು ಆಗುವುದಿಲ್ಲ. ಹಾಗೇ ಮಾನವನ್ನು ಮಂಗ ಎನ್ನಲು ಕೂಡ ಆಗುವುದಿಲ್ಲ. ಎರಡರ ಮಧ್ಯ ಅಜಗಜಾಂತರ ವ್ಯತ್ಯಾಸ ಇದೆ.
ಹೀಗೆ ಕೋಳಿಯನ್ನು ಕೋಲುವ ಹಕ್ಕಿಯೊಂದು ಮೊಟ್ಟೆಯನ್ನು ಇಟ್ಟಿತ್ತಂತೆ. ಕೋಳಿಯನ್ನು ಹೋಲುವಂತಹ ಹಕ್ಕಿಯೊಂದು ಮೊಟ್ಟೆಯನ್ನು ಇಟ್ಟು ಅದರಿಂದ ಜೆನೆಟಿಕ್ ಮ್ಯೂಟೇಶನ್ ಆಗಿ ಅದರಿಂದ ಕೋಳಿ ಬಂತು ಅಂತ ಜಿನೀವಾ ವಿಶ್ವವಿದ್ಯಾಲಯವೊಂದು ಕಂಡು ಹಿಡಿದಿದೆ. ಹೀಗಾಗಿ ವಿಜ್ಞಾನಿಗಳ ಪ್ರಕಾರ ಕೋಳಿ ಮತ್ತು ಮೊಟ್ಟೆ ಈ ಎರಡರಲ್ಲಿ ಮೊದಲು ಬಂದದ್ದು ಮೊಟ್ಟೆ. ಆದರೂ ಕೆಲ ಸಂಶೋಧನೆಗಳು ಕೋಳಿ ಮೊದಲು ಎಂದು ಹೇಳುತ್ತವೆ.
ಹೀಗಾಗಿ ವಿಜ್ಞಾನಿಗಳು ಕೋಳಿ ಮೊದಲಾ? ಮೊಟ್ಟೆ ಮೊದಲಾ? ಎನ್ನುವ ಪ್ರಶ್ನೆಗೆ ವಿಭಿನ್ನ ಉತ್ತರವನ್ನು ಕಂಡು ಹಿಡಿಯುತ್ತಿದ್ದಾರೆ. ಈವರೆಗೂ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿಲ್ಲ. ಹೀಗಾಗಿ ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. 2024ರಲ್ಲಿ ನೇಚರ್ ಎಕಾಲಜಿ ಮತ್ತು ಎವಲ್ಯೂಷನ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ ಈ ಪ್ರಶ್ನೆಗೆ ಉತ್ತರ ಕೋಳಿಯೇ ಮೊದಲು ಎನ್ನಲಾಗಿದೆ. ಹಾವುಗಳು ಮತ್ತು ಹಲ್ಲಿಗಳ ಮೇಲಿನ ಸಂಶೋಧನೆಯನ್ನು ಆಧರಿಸಿ ಕೋಳಿಯೇ ಮೊದಲು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇನ್ನೂ ಮೊಟ್ಟೆ ಹಾಗೂ ಕೋಳಿಯಲ್ಲಿ ಕೋಳಿಯೇ ಮೊದಲು ಎಂದು ಅಮೆರಿಕದ ಶೆಫೆಲ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 2017ರಲ್ಲಿ ಕಂಡು ಹಿಡಿದಿದ್ದಾರೆ. ಮೊಟ್ಟೆ ರೂಪುಗೊಳ್ಳಲು ಅವಶ್ಯವಾದ ಚಿಪ್ಪು ತಯಾರಿಕೆಗೆ ಒಒಕ್ಲೆಡಿನ್ (ovocledidin-17, or OC-17)ಪ್ರೊಟೀನ್ ಅವಶ್ಯಕ. ಇದು ಕೋಳಿಯ ಗರ್ಭದಲ್ಲಿ ಉತ್ಪತ್ತಿಯಾಗಿ ಹೊರ ಕವಚ ಉತ್ಪತ್ತಿಗೆ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ, ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಕೋಳಿ ಎನ್ನುತ್ತಾರೆ ವಿಜ್ಞಾನಿಗಳು.












Click it and Unblock the Notifications