ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಿಕಲ್ ಕ್ಯಾನ್ಸರ್‌ಗೆ ಭಾರತದ ಮೊದಲ ಲಸಿಕೆ, ಏನಿದರ ವಿಶೇಷ?

|
Google Oneindia Kannada News

ನವದೆಹಲಿ, ಸೆ. 1: ಕೋವಿಡ್ ಲಸಿಕೆಯನ್ನು ದೇಶೀಯವಾಗಿ ತಯಾರಿಸಿ ಸೈ ಎನಿಸಿದ್ದ ಭಾರತ ಈಗ ಮಾರಕ ಸರ್ವಿಕಲ್ ಕ್ಯಾನ್ಸರ್ ರೋಗಕ್ಕೆ ಲಸಿಕೆ ತಯಾರಿಸಿದೆ. ಕ್ವಾಡ್ರಿವೇಲೆಂಟ್ ಹ್ಯೂಮನ್ ಪಾಪಿಲೋಮ ವೈರಸ್ ವ್ಯಾಕ್ಸಿನ್ (qHPV - Quadrivalent Human Papillomavirus vaccine) ಎಂದು ಕರೆಯಾಗುವ ಈ ಲಸಿಕೆಯನ್ನು ಇಂದು ಗುರುವಾರ ಬಿಡುಗಡೆ ಮಾಡಲಾಗುತ್ತಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಗುರುವಾರ ದೆಹಲಿಯಲ್ಲಿ ಈ ಲಸಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಬಹಳ ವರ್ಷಗಳಿಂದಲೂ ಈ ಲಸಿಕೆಗಾಗಿ ಭಾರತೀಯ ವೈದ್ಯಕೀಯ ಸಮುದಾಯ ಎದುರುನೋಡುತ್ತಿತ್ತು.

70,000 ರೋಗಿಗಳಿಗೆ ಚಿಕಿತ್ಸೆ: ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಶಕದ ಸಂಭ್ರಮ70,000 ರೋಗಿಗಳಿಗೆ ಚಿಕಿತ್ಸೆ: ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಶಕದ ಸಂಭ್ರಮ

ಸರ್ವಿಕಲ್ ಅಥವಾ ಗರ್ಭಕಂಠದ ಕ್ಯಾನ್ಸರ್ ರೋಗಕ್ಕೆ ಭಾರತದಲ್ಲಿ ತಯಾರಾದ ಮೊದಲ ಲಸಿಕೆ ಇದು. ಈ ಲಸಿಕೆ ತಯಾರಿಸಲು ಸೀರಂ ಸಂಸ್ಥೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಡಿಸಿಜಿಐ ಜುಲೈ 12ರಂದು ಅನುಮತಿ ನೀಡಿತ್ತು.

ಲಸಿಕೀರಣದ ಸಲಹಾ ಸಂಸ್ಥೆ ಎನಿಸಿದ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್‌ನ ಮುಖ್ಯಸ್ಥ ಡಾ. ಎನ್ ಕೆ ಅರೋರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸರ್ವಿಕಲ್ ಕ್ಯಾನ್ಸರ್ ವಿರುದ್ಧ ದೇಶೀಯವಾಗಿ ನಿರ್ಮಿತವಾದ ಲಸಿಕೆ ಬಿಡುಗಡೆಗೆ ಹರ್ಷ ವ್ಯಕ್ತಪಡಿಸಿದ್ಧಾರೆ. ಅಷ್ಟಕ್ಕೂ ಸರ್ವಿಕಲ್ ಕ್ಯಾನ್ಸರ್ ಎಷ್ಟು ಮಾರಕ, ಭಾರತದಲ್ಲಿ ತಯಾರಾದ ಈ ಲಸಿಕೆಯ ವಿಶೇಷತೆ ಏನು ಎಂಬಿತ್ಯಾದಿ ವಿವರ ಇಲ್ಲಿದೆ.

ಏನಿದು ಸರ್ವಿಕಲ್ ಕ್ಯಾನ್ಸರ್?

ಏನಿದು ಸರ್ವಿಕಲ್ ಕ್ಯಾನ್ಸರ್?

ಮಹಿಳೆಯರ ಸರ್ವಿಕ್ಸ್ ಪ್ರದೇಶ ಅಥವಾ ಗರ್ಭಕೋಶದ ಕಂಠ ಭಾಗದಲ್ಲಿ ಈ ಕ್ಯಾನ್ಸರ್ ಶುರುವಾಗುತ್ತದೆ. ಕೆಲ ವಿಧದ ಹ್ಯುಮವ್ ಪಪಿಲೊಮಾವೈರಸ್ (ಎಚ್‌ಪಿವಿ) ಸೋಂಕು ಈ ಕ್ಯಾನ್ಸರ್‌ಗೆ ಕಾರಣ ಎಂದು ಹೇಳಲಾಗುತ್ತದೆ.

ಬಹುತೇಕ ಎಲ್ಲಾ ಮಹಿಳೆಯರಿಗೂ ಸರ್ವಿಕಲ್ ಕ್ಯಾನ್ಸರ್ ತಗುಲುವ ಅಪಾಯ ಇರುತ್ತದೆ. 30 ವರ್ಷ ವಯಸ್ಸಿನ ಗಡಿ ದಾಟಿದ ಮಹಿಳೆಯರಿಗೆ ಹೆಚ್ಚು ಅಪಾಯ ಎಂದು ತಜ್ಞರು ಹೇಳುತ್ತಾರೆ. ಆದರೆ, ಈ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಸುಲಭವಾಗಿ ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಸ್ತನ ಕ್ಯಾನ್ಸರ್ ಅಪಾಯ ಶೇ 20%ರಷ್ಟು ಹೆಚ್ಚಿಸುವ ಆಹಾರಗಳುಸ್ತನ ಕ್ಯಾನ್ಸರ್ ಅಪಾಯ ಶೇ 20%ರಷ್ಟು ಹೆಚ್ಚಿಸುವ ಆಹಾರಗಳು

ಭಾರತದಲ್ಲಿ ಹೆಚ್ಚು

ಭಾರತದಲ್ಲಿ ಹೆಚ್ಚು

15 ರಿಂದ 44 ವರ್ಷ ವಯೋಮಾನದ ಭಾರತೀಯ ಮಹಿಳೆಯರಿಗೆ ಕಾಡುವ ಕ್ಯಾನ್ಸರ್ ರೋಗಗಳ ಪೈಕಿ ಸರ್ವಿಕಲ್ ಕ್ಯಾನ್ಸರ್ ಎರಡನೇ ಸ್ಥಾನ ಪಡೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಿಂದ (2019ರಿಂದ) ಭಾರತದಲ್ಲಿ ಗರ್ಭಕಂಠ ಕ್ಯಾನ್ಸರ್ ರೋಗಕ್ಕೆ 41 ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಲಿಯಾಗಿದ್ದಾರೆ. ಅಷ್ಟರಮಟ್ಟಿಗೆ ಇದು ಅಪಾಯಕಾರಿ ಎನಿಸುತ್ತದೆ.

ಭಾರತೀಯ ಲಸಿಕೆ

ಭಾರತೀಯ ಲಸಿಕೆ

ಸರ್ವಿಕಲ್ ಕ್ಯಾನ್ಸರ್ ವಿರುದ್ಧ ಮೂರ್ನಾಲ್ಕು ವಿಧದ ಲಸಿಕೆಗಳಿವೆ. ಸದ್ಯಕ್ಕೆ ಅಮೆರಿಕದಲ್ಲಿ ಗರ್ಡಾಸಿಲ್-9 ಎಂಬ ಲಸಿಕೆಯನ್ನು ಬಳಸಲಾಗುತ್ತಿದೆ. ಇದೂ ಕೂಡ ಎಚ್‌ಪಿವಿ ಮಾದರಿಯ ಲಸಿಕೆಯಾಗಿದೆ. ಭಾರತದಲ್ಲಿ ಮೂರು ವಿದೇಶೀ ಸಂಸ್ಥೆಗಳ ಲಸಿಕೆಗಳು ಲಭ್ಯ ಇವೆ. ಇವುಗಳ ಬೆಲೆ ಒಂದು ಡೋಸ್‌ಗೆ ಸುಮಾರು 4 ಸಾವಿರ ರೂ ಇದೆ.

ಭಾರತದಲ್ಲಿ ಸರ್ವಿಕಲ್ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚೇ ಇರುವುದರಿಂದ ಈ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಭಾರತದಲ್ಲೇ ಲಸಿಕೆ ತಯಾರಿಸಲಾಗಿದೆ. ಸೀರಂ ಸಂಸ್ಥೆ (ಎಸ್‌ಐಐ) ಮತ್ತು ಬಯೋಟೆಕ್ನಾಲಜಿ ಇಲಾಖೆ (ಡಿಬಿಟಿ) ಜಂಟಿಯಾಗಿ ಸೆರ್ವಾವಾಕ್ (CERVAVAC) ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ. ಇದು ಕ್ಯುಎಚ್‌ಪಿವಿ ಮಾದರಿಯ ಲಸಿಕೆ. ಇದು ಎಲ್ಲಾ ರೀತಿಯ ಎಚ್‌ಪಿವಿ ವಿಧದ ವೈರಸ್‌ಗಳ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಪ್ರಯೋಗಗಳಿಂದ ಋಜುವಾತಾಗಿದೆ.

"ಈ ಲಸಿಕೆ ಸರ್ವಿಕಲ್ ಕ್ಯಾನ್ಸರ್ ಬರದಂತೆ ತಡೆಯಲು ಪರಿಣಾಮಕಾರಿ ಆಗಿದೆ. ಸರ್ವಿಕಲ್ ಕ್ಯಾನ್ಸರ್‌ಗಳ ಪೈಕಿ ಕ್ಯುಎಚ್‌ಪಿವಿ ವೈರಸ್‌ನಿಂದ ಆಗುವ ಪ್ರಕರಣಗಳ ಸಂಖ್ಯೆ ಶೇ. 90ರಷ್ಟಿದೆ. ಈ ಲಸಿಕೆ ಎಲ್ಲಾ ಎಚ್‌ಪಿವಿ ವಿರುದ್ಧವೂ ಪರಿಣಾಮಕಾರಿ ಆಗಿದೆ. ನಮ್ಮ ಹೆಣ್ಮಕ್ಕಳಿಗೆ ಇದನ್ನು ಕೊಟ್ಟರೆ ಅವರ ಜೀವನ ಸುರಕ್ಷಿತವಾಗುತ್ತದೆ. ಸರ್ವಿಕಲ್ ಕ್ಯಾನ್ಸರ್ ಬರದಂತೆ ರಕ್ಷಣೆ ಒದಗಿಸುತ್ತದೆ" ಎಂದು ಡಾ. ಎನ್ ಕೆ ಅರೋರಾ ಹೇಳುತ್ತಾರೆ.

ಎಷ್ಟು ಬೆಲೆ?

ಎಷ್ಟು ಬೆಲೆ?

ಭಾರತದಲ್ಲಿ ಸದ್ಯಕ್ಕೆ ಲಭ್ಯ ಇರುವ ವಿದೇಶೀ ನಿರ್ಮಿತ ಲಸಿಕೆಗಳ ಒಂದು ಡೋಸ್ ಸುಮಾರು 4 ಸಾವಿರ ರೂ ಇದೆ. ಆದರೆ, ಸೀರಂ ಸಂಸ್ಥೆ ತಯಾರಿಸಿರುವ ಲಸಿಕೆಯ ಬೆಲೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಎಷ್ಟು ಎಂಬ ವಿವರ ಒಂದೆರಡು ದಿನದಲ್ಲಿ ಸಿಗಬಹುದು.

ಡಿಸೆಂಬರ್‌ನಷ್ಟರಲ್ಲಿ ಕ್ಯುಎಚ್‌ಪಿವಿ ಲಸಿಕೆಗಳ ಒಂದು ಕೋಟಿ ಡೋಸ್‌ಗಳನ್ನು ಸರಬರಾಜು ಮಾಡುವುದಾಗಿ ಸೀರಂ ಸಂಸ್ಥೆ ಹೇಳಿದೆ. ಲಸಿಕೀಕರಣ ಯೋಜನೆಯಂತೆ ಆರಂಭಿಕ ಹಂತದಲ್ಲಿ 9ರಿಂದ 14 ವರ್ಷ ವಯೋಮಾನದ ಬಾಲಕಿಯರಿಗೆ ಮೊದಲು ಲಸಿಕೆ ಹಾಕಲಾಗುತ್ತದೆ. ಇದಕ್ಕೆ 6 ತಿಂಗಳವರೆಗೆ ಸಮಯ ನಿಗದಿ ಮಾಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Indian govt has launched the first indigenously developed qHPA vaccine against Cervical cancer. Know the specialty and features of this vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X