2025ರ ವೇಳೆಗೆ 13,567 BSNL ಮೊಬೈಲ್ ಟವರ್ ಮಾರಾಟ; ವಿಷಯ ಏನು?
ಬಿಎಸ್‌ಎನ್‌ಎಲ್‌ನ ಕುರಿತಾಗಿ ಅನೇಕ ಸುದ್ದಿಗಳು ಸದ್ದು ಮಾಡಿದ್ದವು ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಖಚಿತವಾಗುತ್ತಿದ್ದು, ಕೇಂದ್ರ ಸರ್ಕಾರ 2025ರ ವೇಳೆಗೆ ಬಿಎಸ್‌ಎನ್‌ಎಲ್‌ನ ಒಟ್ಟು 13,567 ಮೊಬೈಲ್ ಬಿಎಸ್‌ಎನ್‌ಎಲ್‌ನ ಟವರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ ಅಂದರೆ ಟವರ್‌ಗಳು ಖಾಸಗಿ ಪಾಲಾಗಲಿದ್ದು, ಈ ಮೂಲಕ ₹4,000 ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರೊಂದಿಗೆ ಸರ್ಕಾರವು ಎಂಟಿಎನ್‌ಎಲ್ (MTNL)ನ 1350 ಮೊಬೈಲ್ ಟವರ್‌ಗಳನ್ನು ಮಾರಾಟ ಮಾಡಲು ಹೊರಟಿದೆ. ಒಟ್ಟಾರೆಯಾಗಿ, 14,917 ಟವರ್‌ಗಳು ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸಲಿದೆ.
ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ 2022ರ ಅಕ್ಟೋಬರ್ 12ರಂದು ದೇಶದಲ್ಲಿ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಆಗಸ್ಟ್ 25ರಂದು ಒಂದು ದಿನ ಮುಂಚಿತವಾಗಿ ಘೋಷಿಸಿದರು. ಒಂದೆಡೆ ದೇಶದ ಖಾಸಗಿ ಟೆಲಿಕಾಂ ಆಪರೇಟರ್‌ಗಳು 5G ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ ದೇಶದ ಸರ್ಕಾರಿ ಟೆಲಿಕಾಂ ಆಪರೇಟರ್ ಬಿಎಸ್‌ಎನ್‌ಎಲ್‌ನ ಗ್ರಾಹಕರಿಗೆ ಇನ್ನೂ 4G ಸೇವೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ.
ಅಷ್ಟೇ ಅಲ್ಲ, ದೇಶದ ಪ್ರಮುಖ ನಗರಗಳಲ್ಲಿಯೂ ಗ್ರಾಹಕರಿಗೆ ನೆಟ್‌ವರ್ಕ್ ಒದಗಿಸಲು ಬಿಎಸ್‌ಎನ್‌ಎಲ್‌ಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ, ಕೇಂದ್ರ ಸರ್ಕಾರವು 2025ರ ವೇಳೆಗೆ ಬಿಎಸ್‌ಎನ್‌ಎಲ್‌ನನ 13,567 ಮೊಬೈಲ್ ಟವರ್‌ಗಳನ್ನು ಮಾರಾಟ ಮಾಡಲು ಹೊರಟಿದೆ ಎಂಬ ಸುದ್ದಿ ಬರುತ್ತಿದೆ, ಅದರ ಮೂಲಕ ಸರ್ಕಾರ 4,000 ಕೋಟಿ ರೂ. ಸಂಗ್ರಹ ಮಾಡುತ್ತಿದೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಿಎಸ್‌ಎನ್‌ಎಲ್ ಮತ್ತು ಎಂಟಿಎಲ್‌ಎಲ್‌ನ (MTNL) ಟವರ್‌ಗಳ ಮಾರಾಟಕ್ಕಾಗಿ ಕೆಪಿಎಂಜಿ(KPMG)ನ್ನು ಸರ್ಕಾರವು ಹಣಕಾಸು ಸಲಹೆಗಾರರನ್ನಾಗಿ ನೇಮಿಸಿದೆ. ಇದರ ನಂತರ, ಈಗ ಸರ್ಕಾರವು ಬಿಎಸ್‌ಎನ್‌ಎಲ್‌ನ ಟವರ್‌ಗಳನ್ನು ಹಂತ ಹಂತವಾಗಿ ಮಾರಾಟ ಮಾಡಲಿದೆ.

ಬಿಎಸ್‌ಎನ್‌ಎಲ್ ದೇಶಾದ್ಯಂತ 68 ಸಾವಿರ ಟವರ್‌ಗಳು
ಮಾಧ್ಯಮ ವರದಿಗಳ ಪ್ರಕಾರ, ಬಿಎಸ್‌ಎನ್‌ಎಲ್ ದೆಹಲಿ, ಮುಂಬೈ ಹೊರತುಪಡಿಸಿ ದೇಶದ ಮೂಲೆ ಮೂಲೆಗಳಲ್ಲಿ ಒಟ್ಟು 68 ಸಾವಿರ ಮೊಬೈಲ್ ಟವರ್‌ಗಳನ್ನು ಹೊಂದಿದ್ದು, ಈ ಪೈಕಿ 70% ಟವರ್‌ಗಳು ಫೈಬರ್ ಕೇಬಲ್ ಮೂಲಕ ಸಂಪರ್ಕ ಹೊಂದಿವೆ. ಫೈಬರ್ ಕೇಬಲ್ ಮೂಲಕ ಸಂಪರ್ಕಗೊಂಡಿರುವ ಈ ಟವರ್‌ಗಳು 4G ಮತ್ತು 5G ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗಿವೆ, ಆದರೆ BSNL ಇನ್ನೂ ನಷ್ಟದಲ್ಲಿದೆ. ಈ ಕೊರತೆಯನ್ನು ಕಡಿಮೆ ಮಾಡಲು ಸರ್ಕಾರವು ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಬಿಎಸ್‌ಎನ್‌ಎಲ್‌ನೊಂದಿಗೆ ವಿಲೀನಗೊಳಿಸುತ್ತಿದೆ. ಆದರೆ, ಬಿಎಸ್‌ಎನ್‌ಎಲ್ ನಷ್ಟದಿಂದ ಚೇತರಿಸಿಕೊಳ್ಳುವುದು ಯಾವಾಗ ಮತ್ತು ದೇಶದಲ್ಲಿ 4ಜಿ ಸೇವೆಯನ್ನು ಯಾವಾಗ ನೀಡಲು ಸಾಧ್ಯವಾಗುತ್ತದೆ ಎಂಬುದನ್ನು ಈಗ ನೋಡಬೇಕಾಗಿದೆ.+

BSNL ಪುನಶ್ಚೇತನಕ್ಕೆ 1.64 ಲಕ್ಷ ಕೋಟಿ ರೂಪಾಯಿ
ಕಳೆದ ತಿಂಗಳು ಜುಲೈ 27 ರಂದು ಸರ್ಕಾರವು BSNL ಪುನರುಜ್ಜೀವನಕ್ಕಾಗಿ 1.64 ಲಕ್ಷ ಕೋಟಿ ರೂ. ಇದನ್ನು ವಿವರಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಈ ಪುನರುಜ್ಜೀವನ ಪ್ಯಾಕೇಜ್‌ನೊಂದಿಗೆ ಬಿಎಸ್‌ಎನ್‌ಎಲ್‌ನ 4ಜಿ ಸೇವೆಯ ವಿಸ್ತರಣೆಗೆ ಸಹಾಯ ಮಾಡಲು ಸ್ಪೆಕ್ಟ್ರಮ್‌ನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಬಿಎಸ್‌ಎನ್‌ಎಲ್ ಸಂಸ್ಥೆಯು ಸಂಪೂರ್ಣ ಮುಚ್ಚಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಲ್ಲದೆ 5ಜಿ ಸೇವೆಯನ್ನು ಆರಂಭಿಸುವ ಯಾವ ಯೋಜನೆಯನ್ನು ಹಾಕಿಕೊಂಡಿಲ್ಲ ಎಂದು ಮಾಹಿತಿಗಳು ವರದಿಯಾಗಿವೆ.

ಸರಿಯಾಗಿ ಕೆಲಸ ಮಾಡಿ, ಇಲ್ಲದಿದ್ದರೆ ಮನೆಯಲ್ಲಿ ಕುಳಿತುಕೊಳ್ಳಿ
ಬಿಎಸ್‌ಎನ್‌ಎಲ್ ಪುನರುಜ್ಜೀವನಕ್ಕಾಗಿ 1.64 ಲಕ್ಷ ಕೋಟಿ ರೂ.ಗಳನ್ನು ಅನುಮೋದಿಸಿದ ನಂತರ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಆಗಸ್ಟ್ 4 ರಂದು ಹಿರಿಯ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇದರಲ್ಲಿ 62 ಸಾವಿರ ನೌಕರರಿಗೆ ಸೂಚನೆ ನೀಡಿದ್ದು, ಅದರ ಆಡಿಯೋ ಲೀಕ್ ಆಗಿದ್ದು, ಅದರಲ್ಲಿ 'ಸರ್ಕಾರ' ಧೋರಣೆ ಬಿಟ್ಟು ನೌಕರರು ಸರಿಯಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಇದರೊಂದಿಗೆ ಸರ್ಕಾರದ ಧೋರಣೆ ಬಿಟ್ಟು ಸರಿಯಾಗಿ ಕೆಲಸ ಮಾಡಿ, ಇಲ್ಲದಿದ್ದರೆ ಮನೆಯಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದರು.

62,000 ಬಿಎಸ್‌ಎನ್‌ಎಲ್ ಉದ್ಯೋಗಿಗಳು
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ 62,000 ಬಿಎಸ್‌ಎನ್‌ಎಲ್ ಉದ್ಯೋಗಿಗಳಿಗೆ ಎಚ್ಚರಿಕೆಯ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ. ವೈಷ್ಣವ್ ಹಿರಿಯ ಮ್ಯಾನೇಜ್‌ಮೆಂಟ್ ಜೊತೆ ಸಭೆ ನಡೆಸಿದ್ದು, ಈ ಸಭೆಯಲ್ಲಿಯೇ ನಿಮ್ಮಿಂದ ಏನನ್ನು ನಿರೀಕ್ಷಿಸುತ್ತೀರೋ ಅದನ್ನು ಮಾಡಲೇಬೇಕು ಇಲ್ಲದಿದ್ದರೆ ಪ್ಯಾಕ್ ಅಪ್ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮಗೆ ಯಾವುದೇ ಅನುಮಾನ ಬೇಡ.












Click it and Unblock the Notifications