ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಡ್ರೋ ಗಾಂಜಾ ಮಾರಾಟ ಮಾಡುವರಿಗಿಂತಲೂ ತನಿಖೆ ಮಾಡುವರಿಗೆ ಕಷ್ಠ !

|
Google Oneindia Kannada News

ಬೆಂಗಳೂರು, ಸೆ. 28: ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ವಿಲ್ಲಾ ಪತ್ತೆ ಮಾಡಿದರೂ ಸಿಸಿಬಿ ಪೊಲೀಸರು ಅದರ ಮೇಲೆ ಕೇಸು ಹಾಕಲು ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಹೈಡ್ರೋ ಗಾಂಜಾ ಬಗ್ಗೆ ದೇಶದಲ್ಲಿ ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯ್ದೆ ( NDPS act) ಯಲ್ಲಿ ಹೈಡ್ರೋ ಗಾಂಜಾ ಉಲ್ಲೇಖವೇ ಇಲ್ಲ. ಹೈಡ್ರೋ ಗಾಂಜಾ ಪ್ರಕರಣದಲ್ಲಿ ಸಿಕ್ಕಿಬಿದ್ದರೂ ಆರೋಪಿಗಳಿಗೆ ಶಿಕ್ಷೆ ಕೊಡಲು ಸಾಧ್ಯವಾಗುತ್ತಿಲ್ಲ.

ಹೌದು. ಇಂತಹ ಆಘಾತಕಾರಿ ಸಂಗತಿ ಈಗ ಹೊರಗೆ ಬಿದ್ದಿದೆ. ರಾಮನಗರದ ಈಗಲ್‌ಟನ್ ರೆಸಾರ್ಟ್ ವಿಲ್ಲಾದಲ್ಲಿ ಇರಾನಿ ಪ್ರಜೆಯೊಬ್ಬ ಹೈಡ್ರೋ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾನೆ. ವಿಲ್ಲಾ ದಲ್ಲಿಯೇ ವೈಜ್ಞಾನಿಕವಾಗಿ ಹೈಡ್ರೋ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದು ಸುಮಾರು ಮೂರು ಕೋಟಿ ಮೌಲ್ಯದ ಎಂಟು ಕೆ.ಜಿ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇರಾನಿ ಮೂಲದ ಜಾವಿದ್ ರುಸ್ತುಂ ಪುರಿ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆದರೆ, ಈ ಹಿಂದೆ ಸಿಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣಗಳ ಮೂಲ ಹುಡುಕಿದರೆ ಹೈಡ್ರೋ ಗಾಂಜಾ ಮಾರಾಟ ಮಾಡಿ ಸಿಕ್ಕಿ ಬಿದ್ದಿರುವ ಅರೋಪಿಗಳಿಗಿಂತಲೂ ತನಿಖಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಏನಿದು ಹೈಡ್ರೋ ಗಾಂಜಾ

ಏನಿದು ಹೈಡ್ರೋ ಗಾಂಜಾ

ಗಾಂಜಾ ಮಾದರಿಯಲ್ಲಿಯೇ ಬೀಜಗಳನ್ನು ಎಸಿ ರೂಮ್‌ನಲ್ಲಿ ಬೆಳೆಯಲಾಗುತ್ತದೆ. ಎಂಡಿಎಂಎ, ಎಲ್ಎಸ್‌ಡಿ ಮಾದರಿ ಸಿಂಥೆಟಿಕ್ ಡ್ರಗ್‌ನಷ್ಟೇ ಅಪಾಯಕಾರಿ. ಇದರ ಸೇವನೆ ಕೂಡ ತೀರಾ ಅಪಾಯಕಾರಿ. ಅದರಲ್ಲೂ ಇವತ್ತಿನ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ಡ್ರಗ್ ಹೈಡ್ರೋ ಗಾಂಜಾ. ಇದರಿಂದ ಯಾವುದೇ ರೀತಿಯ ವಾಸನೆ ಬರಲ್ಲ. ಇದನ್ನು ಪತ್ತೆ ಮಾಡುವುದು ಕೂಡ ಪೊಲೀಸರಿಗೆ ತುಂಬಾ ಕಷ್ಟ. ಇನ್ನು ಅಮಲು ವಿಚಾರಕ್ಕೆ ಬಂದರೆ ಎಲ್ಲಾ ಸಿಂಥೆಟಿಕ್ ಡ್ರಗ್‌ನ್ನು ಮೀರಿಸುತ್ತದೆ. ಆರೋಗ್ಯಕ್ಕೂ ಅಷ್ಟೇ ಅಪಾಯಕಾರಿ ಕೂಡ ಎನ್ನುತ್ತಾರೆ ಹೈಡ್ರೋ ಗಾಂಜಾ ಬಗ್ಗೆ ತನಿಖೆ ಮಾಡಿರುವ ಪೊಲೀಸ್ ಅಧಿಕಾರಿಗಳು. ಹೈಡ್ರೋ ಗಾಂಜಾವನ್ನು ಔಷಧೀಯ ವಸ್ತುವನ್ನಾಗಿ ಕೂಡ ಬಳಸುತ್ತಾರೆ. ಮಾನಸಿಕ ಖಿನ್ನತೆಗೆ ಒಳಗಾಗಿರುವರಿಗೆ, ಕ್ಯಾನ್ಸರ್ ಪೀಡಿತರಿಗೆ ಮನೋ ನಿವಾರಕ ಔಷಧಿ ತಯಾರಿಸಲು ಇದನ್ನು ಬಳಸುತ್ತಾರೆ. ಹೀಗಾಗಿ ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈ ಹೈಡ್ರೋ ಗಾಂಜಾವನ್ನು ಕಾನೂನು ಬದ್ಧವಾಗಿ ಬೆಳೆಯುತ್ತಾರೆ. ಆದರೆ ಭಾರತ ಸೇರಿದಂತೆ ಸುಮಾರು ರಾಷ್ಟ್ರಗಳಲ್ಲಿ ಹೈಡ್ರೋ ಗಾಂಜಾ ಕಾನೂನು ಬಾಹಿರ. ವಿಪರ್ಯಸವೆಂದರೆ ಭಾರತದ ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯ್ದೆಯಲ್ಲಿ ಹೈಡ್ರೊ ಗಾಂಜಾ ಎನ್ನುವ ಪದವೇ ಇಲ್ಲ! ಹೀಗಾಗಿ ವಿದೇಶಿ ಡ್ರಗ್ ಪೆಡ್ಲರ್‌ಗಳು ಈ ಹೈಡ್ರೋ ಗಾಂಜಾ ವಹಿವಾಟು ನಡೆಸಿ ಸಿಕ್ಕಿಬಿದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ.

ಭಾರತದಲ್ಲಿ ಮೊದಲು ಪತ್ತೆ ಮಾಡಿದ್ದು ಸಿಸಿಬಿ

ಭಾರತದಲ್ಲಿ ಮೊದಲು ಪತ್ತೆ ಮಾಡಿದ್ದು ಸಿಸಿಬಿ

ಹೈಡ್ರೋ ಗಾಂಜಾ ಅಂತ ಮಾದಕ ವಸ್ತು ಇದೆ ಎಂಬುದನ್ನು ರಾಜ್ಯದ ಮಟ್ಟಿಗೆ ಮೊದಲು ಕೇಸು ಮಾಡಿದ್ದು ಸಿಸಿಬಿ ಪೊಲೀಸರು. 2018 ರಲ್ಲಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದರು. ಅಲ್ಲಿ ಪತ್ತೆಯಾಗಿದ್ದ ಉಂಡೆ ಮಾದರಿಯ ಪದಾರ್ಥ ನೋಡಿ ಸಿಸಿಬಿ ಪೊಲೀಸರು ಹೈಡ್ರೋ ಗಾಂಜಾ ಎಂಬುದನ್ನು ಪತ್ತೆ ಮಾಡಿದ್ದರು. ಅಲ್ಲಿಯ ವರೆಗೂ ಬೆಂಗಳೂರು ಪೊಲೀಸರು ಮಾತ್ರವಲ್ಲ ರಾಜ್ಯದ ಪೊಲೀಸರಿಗೆ ಅದರ ಹೆಸರು ಕೂಡ ಗೊತ್ತಿರಲಿಲ್ಲ. ವಿಪರ್ಯಾಸವೆಂದರೆ ಹೈಡ್ರೋ ಗಾಂಜಾ ಸಿಂಥೆಟಿಕ್ ಡ್ರಗ್‌ಗಿಂತಲೂ ಅಪಾಯಕಾರಿಯಾಗಿದ್ದರೂ ಅದನ್ನು ಗಾಂಜಾ ಅಂತಲೇ ಪರಿಭಾವಿಸಿ ಎನ್‌ ಡಿಪಿಎಸ್ ಆಕ್ಟ್ ಅಡಿಯಲ್ಲಿ ಅರೋಪಿಗಳ ವಿರುದ್ಧ ಕೇಸು ದಾಖಲಿಸುತ್ತಾರೆ. ಆದರೆ, ನ್ಯಾಯಾಲಯದಲ್ಲಿ ಕಾನೂನು ಸಮರದ ವಿಚಾರ ಬಂದಾಗ ನ್ಯಾಯಾಲಯದ ಮುಂದೆ ತನಿಖಾಧಿಕಾರಿಗಳು ಕೈಕಟ್ಟಿ ಕೂರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹೈಡ್ರೋ ಗಾಂಜಾ ಮರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದಾಗ , ಹೈಡ್ರೋ ಗಾಂಜಾ ಬಗ್ಗೆ ದೊಡ್ಡ ವಾದವೇ ಆಗಿತ್ತು. ಎನ್‌ಡಿಪಿಎಸ್ ಅಕ್ಟ್ ನಲ್ಲಿ ಹೈಡ್ರೋ ಗಾಂಜಾ ಎಂಬುದರ ಬಗ್ಗೆ ಉಲ್ಲೇಖವೇ ಆಗಿಲ್ಲ ಎಂಬುದನ್ನು ಪರಿಗಣಿಸಿ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದ್ದ ಪ್ರಸಂಗವೂ ಈ ಹಿಂದೆ ನಡೆದಿದ್ದನ್ನು ಪೊಲೀಸ್ ತನಿಖಾಧಿಕಾರಿಯೊಬ್ಬರು ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡರು.

ಎನ್‌ಡಿಪಿಎಸ್ ಆಕ್ಟ್ ಏನು ಹೇಳುತ್ತದೆ?

ಎನ್‌ಡಿಪಿಎಸ್ ಆಕ್ಟ್ ಏನು ಹೇಳುತ್ತದೆ?

ದೇಶದಲ್ಲಿ ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಮಾಡುವ ಎನ್‌ಡಿಪಿಎಸ್ ಕಾಯ್ದೆ ಚಾಲ್ತಿಯಲ್ಲಿದೆ. ಅದರಲ್ಲಿ ಸಿಂಥೆಟಿಗ್ ಡ್ರಗ್ ಸೆಮಿ ಸಿಂಥೆಟಿಕ್ ಡ್ರಗ್ ಹಾಗೂ ನಾಚುರಲ್ ಡ್ರಗ್ ಎಂದು ವರ್ಗೀಕರಿಸಲಾಗಿದೆ.

ಎನ್‌ಡಿಪಿಎಸ್ ಅಕ್ಟ್ ಸೆಕ್ಷನ್ 20 ಗಾಂಜಾ, ಗಾಂಜಾದಿಂದ ತಯಾರಿಸಲ್ಪಡುವ ಆಶಿಷ್ ಅಯಿಲ್, ಚರಸ್, ವೀಡ್ ಆಯಿಲ್ ಬಗ್ಗೆ ಉಲ್ಲೇಖಿಸಲಾಗಿದೆ. ಅದೇ ಜಾತಿಗೆ ಸೇರಿದ ಹೈಡ್ರೋ ಗಾಂಜಾ ಬಗ್ಗೆ ಉಲ್ಲೇಖ ಮಾಡಿಲ್ಲ. ಮಾತ್ರವಲ್ಲ ಹೈಡ್ರೋ ಗಾಂಜಾ ಕುರಿತು ವಿವರಣೆ ಕೂಡ ನೀಡಿಲ್ಲ. ಹೀಗಾಗಿ ಇದನ್ನು ಗಾಂಜಾ ಪರಿವ್ಯಾಪ್ತಿಗೆ ಸೇರಿಸಿ ಕೇಸು ಹಾಕಿದರೂ ಅದು ನ್ಯಾಯಾಲಯದಲ್ಲಿ ನಿಲ್ಲುವುದೇ ಕಷ್ಟಕರ ಎನ್ನುತ್ತಾರೆ ಹಿರಿಯ ವಕೀಲ ಬಿ. ಸಿದ್ದೇಶ್ವರ್.

ಇನ್ನು ಸಿಂಥೆಟಿಕ್ ಡ್ರಗ್ ವಿಚಾರವಾಗಿ ಎನ್‌ಡಿಪಿಎಸ್ ಅಕ್ಟ್ ಸೆಕ್ಷನ್ 21 ವಿವರಣೆ ನೀಡುತ್ತದೆ. ಡ್ರಗ್ ಮ್ಯಾನಿಫ್ಯಾಕ್ಷರ್ ಬಗ್ಗೆ ಸೆಕ್ಷನ್ 22 ನಲ್ಲಿ ವಿವರಿಸಲಾಗಿದೆ. ನ್ಯಾಚುರಲ್ ಡ್ರಗ್, ಸಿಂಥೆಟಿಕ್ ಡ್ರಗ್ ಅಥವಾ ಸೆಮಿ ಸಿಂಥೆಟಿಕ್ ಯಾವ ಕೆಟಗಿರಿಯಲ್ಲೂ ಹೈಡ್ರೋ ಗಾಂಜಾ ಬಗ್ಗೆ ಪಸ್ತಾಪ ಮಾಡಿಲ್ಲ. ಹೀಗಾಗಿ ಹೈಡ್ರೋ ಗಾಂಜಾ ಮಾರಾಟಗಾರರ ವಿರುದ್ದ ಕೇಸು ದಾಖಸಿದರೂ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸುವುದು ತುಂಬಾ ಕಷ್ಟಕರ. ಹೈಡ್ರೋ ಗಾಂಜಾ ನಿಯಂತ್ರಣ ಮಾಡಬೇಕಾದರೆ, ಎನ್‌ಡಿಪಿಎಸ್ ಕಾಯ್ದೆಗೆ ತಿದ್ದುಪಡಿ ಮಾಡಿ ಹೈಡ್ರೋ ಗಾಂಜಾ ಬಗ್ಗೆ ಡೆಫಿನೇಷನ್ ಮತ್ತು ಶಿಕ್ಷೆ ಕೊಡುವ ಬಗ್ಗೆ ಸೇರಿಸುವ ಅನಿವಾರ್ಯತೆ ಎದುರಾಗಿದೆ ಎಂದು ಹಿರಿಯ ವಕೀಲ ಬಿ. ಸಿದ್ದೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಕಷ್ಟ ಇನ್ನು ಹೈಡ್ರೋ ಗಾಂಜಾ ಅಂತ ಡ್ರಗ್ ಇದೆ ಎಂಬುದನ್ನು ಪರಿಚಯಿಸಿದ್ದ ಮೊದಲ ಪ್ರಕರಣ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಕೂಡ ಬಂದಿರಲಿಲ್ಲ. ಎನ್‌ಡಿಪಿಎಸ್ ಆಕ್ಟ್ ನಲ್ಲಿ ಹೈಡ್ರೋ ಗಾಂಜಾ ಉಲ್ಲೇಖವಾಗದೇ ಇರುವ ಕಾರಣ ಇದರ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕೂಡ ತಲೆ ಕೆಡಿಸಿಕೊಂಡಿದ್ದರು. ಹೈಡ್ರೋ ಗಾಂಜಾ ಬಗ್ಗೆ ಎದ್ದಿದ್ದ ಕಾನೂನು ತೊಡಕಿನ ಬಗ್ಗೆ ಕೆಳ ಹಂತದ ಅಧಿಕಾರಿಗಳು ಸಿಸಿಬಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ, ಅದರ ಬಗ್ಗೆ ಅಧಿಕಾರಿಗಳು ಹೆಚ್ಚು ತಲೆ ಕೆಡಿಸಿಕೊಳ್ಳದ ಕಾರಣ ಸದ್ಯಕ್ಕೆ ಹೈಡ್ರೋ ಗಾಂಜಾ ಕಾನೂನು ತೊಡಕು ಹಾಗೆಯೇ ಮುಂದುವರೆದಿದೆ.

Recommended Video

Inzamam ul haqಗೆ ಸೋಮವಾರ ಲಘು ಹೃದಯಾಘಾತ | Oneindia Kannada
ಸರ್ಕಾರಕ್ಕೆ ಮನವಿ

ಸರ್ಕಾರಕ್ಕೆ ಮನವಿ

ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಸೇವನೆ ಮಾಡುತ್ತಿರುವುದು ಹೈಡ್ರೋ ಗಾಂಜಾ. ಅತಿ ಹೆಚ್ಚು ಅಮಲು ಕೊಡುವ ಕಾರಣಕ್ಕೆ ಇದರ ಮೊರೆ ಹೋಗಿದ್ದಾರೆ. ಇದಕ್ಕೆ ನಿಯಂತ್ರಣ ಹಾಕಬೇಕಾದರೆ, ಎನ್‌ಡಿಪಿಎಸ್ ಅಕ್ಟ್‌ಗೆ ತಿದ್ದುಪಡಿ ತರಬೇಕು. ಎನ್ ಡಿಪಿಎಸ್ ಅಕ್ಟ್ ಅಡಿಯಲ್ಲಿ ಹೈಡ್ರೋ ಗಾಂಜಾ ಸೇರ್ಪಡೆ ಮಾಡಬೇಕು. ಆಗಷ್ಟೇ ಹೈಡ್ರೋ ಗಾಂಜಾ ಮಾರಾಟ ಮಾಡುವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ. ಹೈಡ್ರೋ ಗಾಂಜಾ ಮಾರಾಟ ಮಾಡುವ ಪೆಡ್ಲರ್ ಗಳ ವಿರುದ್ಧ ತನಿಖೆ ನಡೆಸಲು ಸಾಧ್ಯವಾಗಿದೆ ಎಂಬುದು ಪೊಲೀಸರು ಹಾಗೂ ಕಾನೂನು ತಜ್ಞರ ಅಭಿಪ್ರಾಯ.

ರಾಜಕಾರಣಿಗಳ ರಾಜಕೀಯ ತಂತ್ರದ ಕೇಂದ್ರವಾಗಿ ಸುದ್ದಿ ಕೇಂದ್ರಕ್ಕೆ ಬರುತ್ತಿದ್ದ ರಾಮನಗರದ ಈಗಲ್ ಟನ್ ರೆಸಾರ್ಟ್ ಮಾದಕ ವಸ್ತು ಬೆಳೆಯಿಂದ ವಿವಾದಕ್ಕೆ ಒಳಗಾಗಿದೆ. ಈಗಲ್ ಟನ್ ರೆಸಾರ್ಟ್ ನಲ್ಲಿ ಹೈಡ್ರೋ ಗಾಂಜಾ ಕೃಷಿ ಮಾಡುತ್ತಿದ್ದ ಇರಾನಿ ಮೂಲದ ಪ್ರಜೆಯನ್ನು ಬಂಧಿಸಿದ್ದಾರೆ. ಹತ್ತು ಅಡಿ ಜಾಗದಲ್ಲಿ ಮೂರು ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಬೆಳೆದಿದ್ದ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಸುಮಾರು 150 ಕ್ಕೂ ಹೆಚ್ಚು ಹೈಡ್ರೋ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಅಚ್ಚರಿ ಏನೆಂದರೆ ಒಂದೂವರೆ ವರ್ಷದಿಂದ ಈತ ಹೈಡ್ರೋ ಗಾಂಜಾ ಫಸಲು ತೆಗೆದು ಡ್ರಗ್ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದ ಸಂಗತಿ ಹೊರ ಬಂದಿದ್ದು, ಹೈಡ್ರೋ ಗಾಂಜಾ ಸುತ್ತ ಕಾನೂನು ವಿಚಾರ ಚರ್ಚೆಗೆ ಬಂದಿದೆ.

English summary
CCB police have arrested 4 drug peddlers in Eagleton resort at Ramanagara, legal dispute about hydro Ganja know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X