ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡುವ ಸಂಧಿವಾತದಿಂದ ಮುಕ್ತಿ ಪಡೆಯುವುದು ಹೇಗೆ?

|
Google Oneindia Kannada News

ಈಗ ಮನುಷ್ಯನನ್ನು ಒಂದಲ್ಲ ಒಂದು ರೀತಿಯ ರೋಗಗಳು ಕಾಡುತ್ತಲೇ ಇರುತ್ತವೆ. ನಾವು ಎಷ್ಟೇ ಜಾಗರೂಕರಾಗಿದ್ದರೂ ಸಾಲದಾಗಿದೆ. ಅದರಲ್ಲೂ ಬಹಳಷ್ಟು ಮಂದಿ ಸಂಧಿವಾತದ ತೊಂದರೆಯಿಂದ ಬಳಲುತ್ತಿದ್ದು ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಂಧಿವಾತ ಕಾಣಿಸಿಕೊಂಡರೆ ಅದನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿಲ್ಲವಾದರೂ ಸೂಕ್ತ ಚಿಕಿತ್ಸೆ ನೀಡಿ ನಿಯಂತ್ರಿಸಬಹುದು ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಈ ರೋಗದ ಕುರಿತಂತೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸಂಧಿವಾತ ಸಲಹಾ ತಜ್ಞೆ ಡಾ.ಕೆಎನ್ ಸಂಗೀತ ಅವರು ಒಂದಷ್ಟು ಉಪಯುಕ್ತ ಮಾಹಿತಿ ನೀಡಿದ್ದಾರೆ. ಇದು ಈಗಾಗಲೇ ಸಂಧಿವಾತದಿಂದ ಬಳಲುತ್ತಿರುವವರಿಗೆ ಉಪಯುಕ್ತವಾಗಿದೆ.

ಬೆನ್ನು ನೋವು ತಡೆಗೆ ಮೂರು ವ್ಯಾಯಾಮಗಳು ಬೆನ್ನು ನೋವು ತಡೆಗೆ ಮೂರು ವ್ಯಾಯಾಮಗಳು

ಸಂಧಿವಾತ ಎನ್ನುವುದು ಕೀಲುಗಳ ಉರಿಯೂತವಾಗಿದ್ದು, ಇದು ಬಾವು ಮತ್ತು ಗಡುಸಾಗುವಿಕೆಯಿಂದ ಕೂಡಿದ ಕೀಲು ನೋವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಆರಂಭದಿಂದಲೂ ನಿರ್ಲಕ್ಷಿಸದೆ ಬೇಗನೆ ಚಿಕಿತ್ಸೆ ನೀಡಿದರೆ ಉತ್ತಮ. ಇಲ್ಲದೆ ಹೋದರೆ ರೋಗಿಯನ್ನು ಇನ್ನಿಲ್ಲದಂತೆ ಕಾಡಬಹುದು.

Causes And Treatment For Arthritis

ಆರಂಭದಲ್ಲಿಯೇ ಪತ್ತೆ ಹಚ್ಚಿ; ಸಂಧಿವಾತವನ್ನು ಆರಂಭದಿಂದಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದೆ ಹೋದರೆ ಕೈ, ಪಾದ, ಮಣಿಕಟ್ಟು, ಭುಜಗಳು, ಮೊಣಕಾಲು ಮತ್ತು ಪಾದದ ಸಣ್ಣಕೀಲುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆನ್ನೆಲುಬುಗೂ ತೊಂದರೆಯಾಗುವ ಸಾಧ್ಯತೆಯೂ ಇದೆ. ಸಂಧಿವಾತಕ್ಕೆ ಧೂಮಪಾನ ಒಂದು ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಿತ್ಯ ವ್ಯಾಯಾಮ, ನಡೆಯುವುದು, ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಿಕೊಳ್ಳಬಹುದಂತೆ.

ತಲೆನೋವು ಇದೆಯೇ? ಅದು ಕೋವಿಡ್ ಲಕ್ಷಣವಾಗಿರಬಹುದು: ಹೊಸ ಅಧ್ಯಯನ ವರದಿತಲೆನೋವು ಇದೆಯೇ? ಅದು ಕೋವಿಡ್ ಲಕ್ಷಣವಾಗಿರಬಹುದು: ಹೊಸ ಅಧ್ಯಯನ ವರದಿ

ನೋವು, ಗಡುಸಾಗುವಿಕೆ, ಬಾವು, ಕೆಂಪಾಗುವುದು ಮತ್ತು ಚಲನೆಯ ವ್ಯಾಪ್ತಿ ಕಡಿಮೆಯಾಗುವುದು ಮೊದಲಾದ ಲಕ್ಷಣಗಳ ಮೂಲಕ ಯಾವ ವಿಧದ ಸಂಧಿವಾತ ಎಂಬುದನ್ನು ಹೇಳಬಹುದಾಗಿದೆ. ಹಲವು ರೀತಿಯ ಸಂಧಿವಾತಗಳಿದ್ದರೂ, ಎರಡು ಸಾಮಾನ್ಯ ರೂಪಗಳೆಂದರೆ ಅಸ್ಥಿ ಸಂಧಿವಾತ ಮತ್ತು ರ್ಯುಮಟಾಯ್ಡ್ ಸಂಧಿವಾತಗಳು. ಇವು ಕೀಲುಗಳಿಗೆ ಬೇರೆ ಬೇರೆ ರೀತಿಯಲ್ಲಿ ಹಾನಿಯುಂಟು ಮಾಡಬಹುದು. ಗೌಟಿ ಸಂಧಿವಾತ, ಸೋರಿಯಾಟಿಕ್ ಸಂಧಿವಾತ, ಸ್ಪಾಂಡಿಲೊ ಸಂಧಿವಾತ, ಪ್ರತಿಕ್ರಿಯಾತ್ಮಕ ಸಂಧಿವಾತಗಳು ಕಾಣಿಸಿಕೊಳ್ಳುವುದು ಕಡಿಮೆ. ಸೋಂಕು ಕೂಡ ಸಂಧಿವಾತಕ್ಕೆ ಕಾರಣವಾಗಬಹುದು.

ಆರೋಗ್ಯ, ಫ್ರಂಟ್ ಲೈನ್ ಕಾರ್ಯಕರ್ತರ ಲಸಿಕೆ ನೋಂದಣಿ ಸ್ಥಗಿತ ಆರೋಗ್ಯ, ಫ್ರಂಟ್ ಲೈನ್ ಕಾರ್ಯಕರ್ತರ ಲಸಿಕೆ ನೋಂದಣಿ ಸ್ಥಗಿತ

ಎಲುಬು ಕೀಲುಗಳಿಗೆ ಹಾನಿ; ಅತ್ಯಂತ ಸಾಮಾನ್ಯವಾದ ಅಸ್ಥಿ ಸಂಧಿವಾತದಲ್ಲಿ ಕೀಲುಗಳ ಮೃದುವಾದ ಎಲುಬುಗಳಿಗೆ ಮತ್ತು ಕೀಲಾಗಿ ರೂಪುಗೊಳ್ಳುವ ಮೂಳೆಗಳ ತುದಿಯಲ್ಲಿ ದೃಢವಾದ, ನುಣುಪಾದ ಲೇಪನಕ್ಕೆ ಸಹಜ ಹಾನಿಯಾಗುತ್ತದೆ. ಮೃದುವಾದ ಎಲುಬುಗಳು ಮೂಳೆಗಳ ತುದಿಯನ್ನು ಮೆದುವಾಗಿಸುತ್ತವೆ ಮತ್ತು ಯಾವುದೇ ಘರ್ಷಣೆಯಿಲ್ಲದ ಕೀಲಿನ ಚಲನೆಗೆ ಅನುವು ಮಾಡಿಕೊಡುತ್ತವೆ, ಆದರೆ ಮೂಳೆ ತಿರುಗುವುದರ ಪರಿಣಾಮವಾಗಿ ಹೆಚ್ಚಿನ ಹಾನಿಯಾಗಬಹುದು, ಇದರಿಂದ ನೋವಾಗುವುದರ ಜೊತೆಗೆ ಚಲನೆಗೆ ಅಡ್ಡಿಯಾಗಬಹುದು. ಈ ಸಹಜ ಹಾನಿ ಹಲವಾರು ವರ್ಷಗಳಲ್ಲಿ ಆಗಬಹುದು ಮತ್ತು ಇಡೀ ಕೀಲಿಗೆ ಹಾನಿಯಾಗಬಹುದು.

ಚಿಕಿತ್ಸೆಗಳು; ರ್ಯುಮಟಾಯ್ಡ್ ಸಂಧಿವಾತದಲ್ಲಿ ಕೀಲಿನ ಕ್ಯಾಪ್ಸೂಲ್ ನ ಒಳಪದರದ ಮೇಲೆ ದೇಹದ ರೋಗ ನಿರೋಧಕ ಶಕ್ತಿ ದಾಳಿ ಮಾಡುತ್ತದೆ. ಈ ರೋಗ ಪ್ರಕ್ರಿಯೆ ನಿಧಾನವಾಗಿ ಮೃದು ಎಲುಬುಗಳನ್ನು ಮತ್ತು ನಿರ್ಧಿಷ್ಟ ಜಾಗದೊಳಗಿನ ಎಲುಬನ್ನು ನಾಶಪಡಿಸಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಇದು ಶ್ವಾಸಕೋಶ, ನರಗಳು, ಚರ್ಮ, ಕಣ್ಣುಗಳನ್ನೂ ಕೂಡ ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಶಿಸ್ತಿಯಿಲ್ಲದ ಜೀವನಶೈಲಿ, ಕುಟುಂಬದ ಹಿನ್ನೆಲೆ, ವಯಸ್ಸು, ಮಿತಿಮೀರಿ ಆಲ್ಕೋಹಾಲ್ ಸೇವಿಸುವುದು, ಹಳೆಯ ಕೀಲು ನೋವುಗಳು ಮತ್ತು ಬೊಜ್ಜು. ಗಂಭೀರವಾದ ಸಂಧಿವಾತಕ್ಕೆ ಕಾರಣವಾಗಬಹುದು.

ಬಿಸಿ ನೀರ ಸ್ನಾನ ಮಾಡಿ; ಇನ್ನು ಸಂಧಿವಾತ ಯಾವುದೇ ವಯಸ್ಸು, ಲಿಂಗ, ಜನಾಂಗ ಅಥವಾ ಯಾವುದೇ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲೂ ಬರಬಹುದು. ಮುಂಜಾನೆ ಮತ್ತು ಚಳಿಗಾಲದಲ್ಲಿ ಸಂಧಿವಾತದ ನೋವು ತೀವ್ರವಾಗಿರುತ್ತದೆ. ಹೀಗಾಗಿ, ಬಿಸಿನೀರಿನ ಶಾಖ, ಬಿಸಿನೀರಲ್ಲಿ ಕೈ ಅಥವಾ ಕಾಲನ್ನು ಮುಳುಗಿಸುವುದು, ಬಿಸಿ ನೀರಸ್ನಾನ ಮಾಡುವುದು ಒಳ್ಳೆಯದು. ತೀವ್ರವಾದ ಸಂಧಿವಾತದಲ್ಲಿ ಕೀಲುಗಳು ಬೆಚ್ಚಗಿದ್ದರೆ ಕೋಲ್ಡ್ ಪ್ಯಾಕ್ ಮಾಡಬಹುದಾಗಿದೆ.

ನೋವಿದ್ದಾಗ ವ್ಯಾಯಾಮ ಒಳ್ಳೆಯದಲ್ಲ; ವ್ಯಾಯಾಮ ಒಳ್ಳೆಯದಾದರೂ ನೋವು ತೀವ್ರವಿದ್ದಾಗ ಮಾಡುವುದು ಒಳ್ಳೆಯದಲ್ಲ. ಹಲವು ಕೀಲುಗಳಲ್ಲಿ ನೋವಿದ್ದಾಗ ಫಿಸಿಯೋಥೆರಪಿಯಲ್ಲಿ ಸೂಚಿಸುವ ವ್ಯಾಕ್ಸ್ ಬಾತ್ ನೆರವಿಗೆ ಬರಬಹುದು.

ಒಟ್ಟಾರೆಯಾಗಿ ಹೇಳಬೇಕೆಂದರೆ ಸಂಧಿವಾತ ಕಾಣಿಸಿಕೊಂಡ ಆರಂಭದಲ್ಲಿಯೇ ತಜ್ಞವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಮತ್ತು ವೈದ್ಯರು ಹೇಳಿದ ಕ್ರಮಗಳನ್ನು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿದೆ.

English summary
Here are the causes and treatment for the Arthritis. It is an inflammation of the joints. It can affect one joint or multiple joints.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X