ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Pitru Paksha 2022 Pind Daan: ಪಿತೃಪಕ್ಷದಲ್ಲಿ ಹೆಣ್ಮಕ್ಕಳು ಪಿಂಡದಾನ ಮಾಡಬಹುದಾ? ಶಾಸ್ತ್ರ ಏನು ಹೇಳುತ್ತೆ?

|
Google Oneindia Kannada News

ಸೆಪ್ಟೆಂಬರ್ 10, ನಾಳೆ ಶನಿವಾರದಿಂದ ಪಿತೃ ಪಕ್ಷ ಪ್ರಾರಂಭವಾಗುತ್ತದೆ. ಶಾಸ್ತ್ರದ ಪ್ರಕಾರ ಪ್ರತೀ ವರ್ಷವೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೂ ಪಿತೃ ಪಕ್ಷ ಇರುತ್ತದೆ. ಅಂದರೆ 15 ದಿನಗಳವರೆಗೂ ಪಿತೃ ಪಕ್ಷ ಇರುತ್ತದೆ. ಸೆಪ್ಟೆಂಬರ್ 10ರಂದು ಶುರುವಾಗುವ ಪಿತೃ ಪಕ್ಷ ಸೆಪ್ಟೆಂಬರ್ 25ಕ್ಕೆ ಅಂತ್ಯವಾಗುತ್ತದೆ.

ಪಿತೃ ಪಕ್ಷದ ಅವಧಿಯಲ್ಲಿ ನಮ್ಮ ಮೂರು ತಲೆಮಾರಿನ ಪೂರ್ವಿಕರು ಕಾಗೆ ಅಥವಾ ಬೇರೆ ಪಕ್ಷಿ ರೂಪದಲ್ಲಿ ತಮ್ಮ ಕುಟುಂಬಗಳನ್ನು ನೋಡಲು ಬರುತ್ತಾರೆ. ಈ ಅವಧಿಯಲ್ಲಿ ಅವರಿಗೆ ಶಾಸ್ತ್ರೋಕ್ತವಾಗಿ ತರ್ಪಣ, ಪಿಂಡದಾನ, ಶ್ರಾದ್ಧ ಮಾಡಿದರೆ ಪೂರ್ವಿಕರ ಆತ್ಮಗಳಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ. ನಾವಿಟ್ಟ ಎಡೆಯನ್ನು ಕಾಗೆಗಳು ಬಂದು ತಿಂದರೆ ನಮ್ಮ ಶ್ರಾದ್ಧ ಕಾರ್ಯ ಸಾರ್ಥಕವಾದಂತೆ ಎಂಬ ಭಾವನೆ ಇದೆ.

Pitru Paksha 2022 Dates : ಪಿತೃ ಪಕ್ಷ ದಿನಾಂಕ, ಶುಭ ಮುಹೂರ್ತ, ಮಹತ್ವ ಮತ್ತು ಆಚರಣೆಗಳುPitru Paksha 2022 Dates : ಪಿತೃ ಪಕ್ಷ ದಿನಾಂಕ, ಶುಭ ಮುಹೂರ್ತ, ಮಹತ್ವ ಮತ್ತು ಆಚರಣೆಗಳು

ನಮ್ಮ ಪೂರ್ವಿಕರ ಆತ್ಮಗಳು ಸಂತುಷ್ಟಿಗೊಂಡರೆ ನಮ್ಮ ಕುಟುಂಬಕ್ಕೆ ಸೌಖ್ಯ ಬರುತ್ತದೆ. ಪೂರ್ವಜರ ಆಶೀರ್ವಾದ ನಮಗೆ ದೊರಕುತ್ತದೆ ಎಂಬ ನಂಬಿಕೆ ಉಂಟು.

Can Daughters Do Pinda Daana and Shradha During Pitru Paksha, Know What Shastras Say

ಪಿಂಡ ದಾನ ಎಂದರೇನು?
ನಮ್ಮ ಪೂರ್ವಿಕರ ಅತ್ಮಗಳಿಗೆ ಶಾಂತಿ ಮತ್ತು ಮುಕ್ತಿ ಸಿಗುವಂತೆ ದಾನ-ದಕ್ಷಿಣೆಗಳನ್ನು ಮಾಡಲಾಗುತ್ತದೆ. ಅಕ್ಕಿ, ಬಾರ್ಲಿ ಹಿಟ್ಟು, ಕಪ್ಪು ಎಳ್ಳು ಮತ್ತು ತುಪ್ಪವನ್ನು ಮಿಶ್ರ ಮಾಡಿ ಉಂಡೆ ಮಾಡಿದರೆ ಅದು ಪಿಂಡ. ಅದನ್ನು ಪೂರ್ವಿಕರ ಆತ್ಮಗಳಿಗೆ ನೇವೇದ್ಯವಾಗಿ ಅರ್ಪಿಸುವುದೇ ಪಿಂಡದಾನ. ಅದೇ ಶ್ರಾದ್ಧ ಕರ್ಮ. ಪಿತೃಪಕ್ಷದಲ್ಲಿ ಪಿಂಡದಾನ ಬಹಳ ಮುಖ್ಯ.

ಹೆಣ್ಮಕ್ಕಳು ಪಿಂಡದಾನ ಮಾಡಬಹುದೆ?
ಶಾಸ್ತ್ರಗಳ ಪ್ರಕಾರ ಗಂಡು ಮಕ್ಕಳು ಶ್ರಾದ್ಧ ವಿಧಿ ಮಾಡಬೇಕೆಂದಿದೆ. ಪಿಂಡದಾನ ಮತ್ತು ತರ್ಪಣೆ ಆಗದಿದ್ದರೆ ನಮ್ಮ ಪೂರ್ವಿಕರ ಆತ್ಮಗಳಿಗೆ ಮುಕ್ತಿ ಸಿಗುವುದಿಲ್ಲ. ಮೃತಪಟ್ಟ ತಂದೆ ಪಿತೃಋಣವನ್ನು ನೀಗಿಸಬೇಕಾದರೆ ಗಂಡುಮಕ್ಕಳು ಪಿಂಡದಾನ ಮಾಡಬೇಕು. ಅದು ಗಂಡು ಮಕ್ಕಳ ಕರ್ತವ್ಯ ಎಂದು ಶಾಸ್ತ್ರಗಳು ಹೇಳುತ್ತವೆ.

Can Daughters Do Pinda Daana and Shradha During Pitru Paksha, Know What Shastras Say

ಆದರೆ, ಗಂಡು ಮಕ್ಕಳ ಅನುಪಸ್ಥಿತಿಯಲ್ಲಿ ಅಥವಾ ತಂದೆಯ ಮನೆಯಲ್ಲಿ ಗಂಡು ಸಂತಾನವೇ ಇಲ್ಲದಿದ್ದಲ್ಲಿ ಹೆಣ್ಮಕ್ಕಳೇ ಪಿಂಡದಾನ ಮಾಡಲು ಅವಕಾಶ ಇದೆ.

ಪಿಂಡದಾನ ವಿಧಾನ ಹೇಗೆ?
ಶ್ರಾದ್ಧವನ್ನು ಸಾಮಾನ್ಯವಾಗಿ ಮಧ್ಯಾಹ್ನದ ಅವಧಿಯಲ್ಲಿ ಮಾಡಲಾಗುತ್ತದೆ. ಶ್ರಾದ್ಧ ಮಾಡುವವರು ಬಿಳಿ ಬಟ್ಟೆಗಳನ್ನು ಧರಿಸಬೇಕು. ಪಿಂಡಗಳನ್ನು ತಯಾರಿಸಿ ಇಟ್ಟುಕೊಂಡಿರಬೇಕು. ಪಿಂಡಕ್ಕೆ ಪೂಜೆ ಮಾಡಬೇಕು. ಪೂರ್ವಿಕರನ್ನು ಸ್ಮರಿಸಿ ಪೂಜೆ ಸಲ್ಲಿಸಬೇಕು. ನಂತರ ಪಿಂಡವನ್ನು ಎತ್ತಿ ನೀರಿಗೆ ಬಿಡಬೇಕು.

(ಒನ್ಇಂಡಿಯಾ ಸುದ್ದಿ)

English summary
There is a belief in Hindu religion that souls of our ancestors will get salvation if shraddha and pinda daana is done in correct way. Usually son should do shraddha. If son is unavailable, daughter can do this vidhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X