BSNL:ಅಗ್ಗದ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ಬಿಎಸ್ಎನ್ಎಲ್
ಈಗಿನ ಮೊಬೈಲ್ ನೆಟ್‌ವರ್ಕ್ ಕಂಪನಿಗಳು ಗ್ರಾಹಕನ ಬೇಡಿಕೆಗೆ ತಕ್ಕಂತೆ ತನ್ನ ರಿಚಾರ್ಜ್ ಪ್ಲ್ಯಾನ್ ಲಾಂಚ್ ಮಾಡುತ್ತವೆ. ಅಂದರೆ ಗ್ರಾಹಕನಿಗೆ ಎಂತಹ ರಿಚಾರ್ಜ್ ಪ್ಲ್ಯಾನ್‌ಗಳು ಬೇಕು ಎಂಬುದರ ಬಗ್ಗೆ ಸಾಮಾನ್ಯ ಮಾಹಿತಿ ಇರುತ್ತದೆ. ಅದರಂತೆ ಬಳಕೆ ದಾರ ಡೇಟಾ ಹೊಂದಿರುವ ಪ್ಲ್ಯಾನ್ ಬಳಿಸುತ್ತಾನೋ, ಅಥವಾ ಬರೀ ಸಿಮ್ ಸಕ್ರಿಯವಾಗಿರಿಸಿಕೊಳ್ಳುವ ಪ್ಲ್ಯಾನ್ ಅಳವಡಿಸಿಕೊಳ್ಳುತ್ತಾನೋ, ಇನ್ನು ಹೆಚ್ಚು ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪಡೆಯುತ್ತಾನೋ, ಇದನ್ನು ನೋಡಿಕೊಂಡು ನಿಮ್ಮ ಪ್ಲ್ಯಾನ್ ನಿರ್ಧರಿಸಿಕೊಳ್ಳಬಹುದು.
Reliance Jio, Airtel, Vi ಮತ್ತು BSNL ನಂತಹ ವಿವಿಧ ಟೆಲಿಕಾಂ ಕಂಪನಿಗಳು ವಿವಿಧ ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ. ಈ ಸಾಲಿಗೆ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ BSNL ಅಗ್ಗದ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿ. ಈ ಕಂಪನಿಯು ಇನ್ನು ತನ್ನ ಬಳಕೆದಾರರಿಗೆ ವೇಗದ ಇಂಟರ್ನೆಟ್ ಸೇವೆಗಳನ್ನು ನೀಡುವಲ್ಲಿ ವಿಫರಾಗಿದ್ದರೂ, ಇದರ ರಿಚಾರ್ಜ್ ಪ್ಲ್ಯಾನ್ ಹಣ ಉಳಿಸುವ ದೃಷ್ಟಿಯಿಂದ ಬೇರೆ ಎಲ್ಲ ಕಂಪನಿಗಳಿಗಿಂತ ಕಡಿಮೆ ಆಗಿವೆ.

ಅಗ್ಗದ ಬೆಲೆಗೆ ಬಿಎಸ್‌ಎನ್‌ಎಲ್ ರಿಚಾರ್ಜ್
ನೀವು ಹೆಚ್ಚು ಮಾನ್ಯತೆಯ ಅಗ್ಗದ ರೀಚಾರ್ಜ್ ಯೋಜನೆಯನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ, ನೀವು BSNL ಯೋಜನೆಯತ್ತ ಮುಖ ಮಾಡುವುದು ಬೆಸ್ಟ್. ಸರ್ಕಾರಿ ಸೌಮ್ಯದ ಕಂಪನಿ ತನ್ನ ಗ್ರಾಹಕರಿಗೆ 108 ರೂಪಾಯಿಯ ಪ್ಲ್ಯಾನ್ ಒಂದನ್ನು ಲಾಂಚ್ ಮಾಡಿದೆ. ಇದರೊಂದಿಗೆ ನೀವು ಪ್ರತಿದಿನ 1 GB ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ. ಯೋಜನೆಯೊಂದಿಗೆ ನೀವು ಒಟ್ಟು 60GB ಡೇಟಾವನ್ನು ಪಡೆಯಬಹುದು.
ಕಾಲ್ ಫೆಸಿಲಿಟಿ ಇದೆಯಾ?
ಒಂದು ವೇಳೆ ನೀವು 108 ರೂಪಾಯಿಗಳ ರಿಚಾರ್ಜ್ ಮಾಡಿಸಿಕೊಂಡಲ್ಲಿ ನಿಮಗೆ ಇದರಲ್ಲಿ ಕಾಲ್ ಫೆಸಿಲಿಟಿ ನೀಡಲಾಗುವುದಿಲ್ಲ. ಈ ಯೋಜನೆಯು ಅಸ್ತಿತ್ವದಲ್ಲಿರುವ ರೀಚಾರ್ಜ್ ಯೋಜನೆಯೊಂದಿಗೆ ಅಳವಡಿಸಿಕೊಳ್ಳಲು ಉತ್ತಮ ಆಯ್ಕೆಯಾಗಿದೆ. BSNL ರೂ 108 ರೀಚಾರ್ಜ್ ಮಾಡಿಸಿಕೊಂಡಲ್ಲಿ 60 ದಿನಗಳ ವರೆಗೆ 1 ಜಿಬಿ ಡೇಟಾವನ್ನು ಬಳಸಬಹುದು. ಅಲ್ಲದೆ 500 ಎಸ್‌ಎಂಎಸ್ ಕಳಿಸುವ ಪ್ರಯೋಜನವೂ ಇದೆ. ಒಂದು ವೇಳೆ ಡೇಟಾ ಖಾಲಿಯಾದಾಗ, ನೀವು ಪ್ರತಿ MB ಗೆ 5 ಪೈಸೆ ನೀಡಬೇಕು.

139 ರೀಚಾರ್ಜ್
ನೀವು ಕರೆ ಮಾಡುವ ಪ್ರಯೋಜನವನ್ನು ಪಡೆಯಲು ಬಯಸಿದ್ದರೆ, ನೀವು BSNLನ ರೂ 139 ರ ರೀಚಾರ್ಜ್ ಯೋಜನೆಯ ಲಾಭ ಪಡೆಯಬಹುದು. ಇದರೊಂದಿಗೆ ಅನಿಯಮಿತ ಕರೆಗಳ ಲಾಭ ಬಳಕೆದಾರರಿಗೆ ಸಿಗುತ್ತದೆ. ಇಷ್ಟೇ ಅಲ್ಲದೆ ಬಳಕೆ ದಾರ ಪ್ರತಿ ದಿನಕ್ಕೆ 1.5GB ಡೇಟಾವನ್ನು ಸಹ ಎಂಜಾಯ್ ಮಾಡಬಹುದು. ಡೇಟಾ ಮಿತಿ ಮುಗಿದ ನಂತರ, ನೀವು 40 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು. ಈ ರೀಚಾರ್ಜ್ 28 ದಿನಗಳ ವರೆಗೆ ಮಾನ್ಯತೆ ಪಡೆದಿರುತ್ತದೆ.
ಇತ್ತಿಚಿಗೆ ಬಿಎಸ್‌ಎನ್‌ಎಲ್ ಇಂತಹದ್ದೇ ಒಂದು ಆಫರ್ ನೀಡಿ ಗ್ರಾಹಕರ ಮನ ಗೆದ್ದಿತ್ತು. ಈಗ 108 ರೂಪಾಯಿ ರಿಚಾರ್ಜ್ ಪ್ಲ್ಯಾನ್ ನೊಂದಿಗೆ ಮತ್ತೆ ಬಳಕೆದಾರರಿಗೆ ಖುಷಿ ನೀಡಲಿದೆ.












Click it and Unblock the Notifications