• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Best of 2019: ಟಿಕ್ ಟಾಕ್ ಟಾಪ್ 10 ಕ್ರೇಜಿ ವಿಡಿಯೋಗಳು

|

ಚೀನಾ ಮೂಲದ ಬೈಟ್ ಡ್ಯಾನ್ಸ್(ByteDance) ಒಡೆತನದ ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್ ಆಪ್ ವಿಶ್ವದೆಲ್ಲೆಡೆ ಸಕತ್ ಕ್ರೇಜ್ ಹುಟ್ಟಿಸುವ ಮೊಬೈಲ್ ಅಪ್ಲಿಕೇಷನ್ ಎನಿಸಿಕೊಂಡಿದೆ. 2019ರಲ್ಲಿ ಈ ಆಪ್ ಬಳಸಿ ಅತಿ ಹೆಚ್ಚು ವೀಕ್ಷಕರನ್ನು ತಲುಪಿದ, ಬಹು ಮೆಚ್ಚುಗೆ ಪಡೆದ ಟಾಪ್ ಟೆನ್ ಪಟ್ಟಿ ಇದೀಗ ಬಿಡುಗಡೆಯಾಗಿದೆ.

2019 ಟಿಕ್ ಟಾಕ್ ಗೆ ಸೇರಿದ ವರ್ಷ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಸಂಚಲನವನ್ನೇ ಸೃಷ್ಟಿಸಿದ ಟಿಕ್ ಟಾಕ್ ನಿಷೇಧಕ್ಕೆ ಹಲವು ರಾಜ್ಯಗಳು ಮುಂದಾಗಿ ಕಾನೂನು ಹೋರಾಟ ನಡೆಸಿದ್ದು ನೆನಪಿರಬಹುದು. ಕೆಲ ಸಮಯ ಟಿಕ್ ಟಾಕ್ ಆಪ್ ಡೌನ್ ಆಗಿದ್ದರಿಂದ ಚೀನಾ ಸಂಸ್ಥೆಗೆ ಕೋಟ್ಯಂತರ ರುಪಾಯಿ ನಷ್ಟವಾಗಿತ್ತು. ಆದರೆ, ಟಿಕ್ ಟಾಕ್ ಹುಚ್ಚಿಗೆ ಅನೇಕ ಜೀವಗಳು ಬಲಿಯಾಗಿದ್ದನ್ನು ಮರೆಯುವಂತಿಲ್ಲ. ಯಾವುದೇ ಅಭ್ಯಾಸ ಚಟವಾಗಿ, ಚಟ ಅತಿಯಾದರೆ ಆಗುವ ಪರಿಣಾಮವನ್ನೇ ಭಾರತದಲ್ಲಿ ಕಾಣಲಾಯಿತು.

ಭಾರತದಲ್ಲಿ ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್ ಪರ ವಿರೋಧ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಬ್ರಿಟನ್ನಿನ 23ರ ಯುವತಿಯೊಬ್ಬಳು ಟಿಕ್ ಟಾಕ್ ವಿಡಿಯೋ ಮೂಲಕ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಲ್ಲದೆ, ಆರು ಅಂಕಿ ಸಂಬಳ ಎಣಿಸುತ್ತಿದ್ದಾಳೆ ಎಂಬ ಆಶಾದಾಯಕ ಸುದ್ದಿಯೂ ಬಂದಿದೆ.

ಟಿಕ್‌ಟಾಕ್ ವಿಡಿಯೋ ಮಾಡ್ತೀರಾ?: ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ಜನಪ್ರಿಯ ಪಾಪ್ ಗೀತೆಗೆ ಲಿಪ್ ಸಿಂಕ್ ಮಾಡುವುದು, ಜನಪ್ರಿಯ ಹಾಡಿಗೆ ಡ್ಯಾನ್ಸ್ ಮಾಡುವುದು, ಹಾಸ್ಯ, ಗೇಲಿ, ಮಿಮಿಕ್ರಿ ವಿಡಿಯೋಗಳು ಟಿಕ್ ಟಾಕ್ ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿವೆ. ಟಿಕ್ ಟಾಕ್ ಜನಪ್ರಿಯತೆ ಟಾಪ್ ಟೆನ್ ಪಟ್ಟಿಯಲ್ಲಿ ಎಲಿಫೆಂಟ್ ಟೂತ್ ಪೇಸ್ಟ್ ಹೆಚ್ಚು ಜನಪ್ರಿಯತೆ ಗಳಿಸಿದೆ ಎಂದು ಬೈಟ್ ಡ್ಯಾನ್ಸ್ ಪ್ರಕಟಿಸಿದೆ.

ಟಾಪ್ 1: ಎಲಿಫೆಂಟ್ ಟೂತ್ ಪೇಸ್ಟ್

ಜನಪ್ರಿಯ ಯೂಟ್ಯೂಬರ್ ಡೇವಿಡ್ ಡೊಬ್ರಿಕ್ ತಯಾರಿಸಿದ ಎಲಿಫೆಂಟ್ ಟೂತ್ ಪೇಸ್ಟ್ ವಿಡಿಯೋ 17.5 ಮಿಲಿಯನ್ ಜನ ಇಷ್ಟಪಟ್ಟಿದ್ದಾರೆ. 87.9K ಕಾಮೆಂಟ್ ಬಂದಿದೆ. ವಿಶ್ವದಾಖಲೆಯ ಪ್ರಯೋಗಾತ್ಮಕ ಬೃಹತ್ ಟೂತ್ ಪೇಸ್ಟ್ ವಿಡಿಯೋ ನಂಬರ್ ಒನ್ ಸ್ಥಾನದಲ್ಲಿದೆ.

ಟಾಪ್ 2: ಬಾಳೆಹಣ್ಣು ಶಸ್ತ್ರಚಿಕಿತ್ಸೆ

ಬಾಳೆಹಣ್ಣಿನ ಮೇಲೆ ಇವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬ ಹೆಡ್ ಲೈನ್ ಉಳ್ಳ ಟಿಕ್ ಟಾಕ್ ವಿಡಿಯೋ ಎರಡನೇ ಸ್ಥಾನ ಪಡೆದಿದೆ. ಬಾಳೆಹಣ್ಣಿಗೆ ಸರ್ಜರಿ, ಹೊಸ ಬಾಳೆಹಣ್ಣು ಹೊರತೆಗೆದು, ಬ್ಯಾಂಡೇಜ್ ಹಾಕುವ ಸೆಕೆಂಡುಗಳ ಕಾಲದ ವಿಡಿಯೋ ಮಂದಹಾಸ ಮೂಡಿಸದೆ ಇರದು. ಕಲೇಬ್ ಕಟ್ಲರ್(Caleb Cutler) ಅವರು ಹಾಕಿರುವ ಈ ವಿಡಿಯೋ 6.1 ಮಿಲಿಯನ್ ಲೈಕ್ಸ್, 30K ಕಾಮೆಂಟ್ಸ್ ಬಂದಿದೆ.

6 ಅಂಕಿ ಸಂಬಳ ಗಳಿಸುತ್ತಿರುವ 23ರ ಹರೆಯದ ಟಿಕ್ ಟಾಕ್ ಸ್ಟಾರ್!

ಟಾಪ್ 3: ಈಜುಕೊಳದ ಕ್ರೇಜಿ ವಿಡಿಯೋ

ಕೃತಕವಾಗಿ ನಿರ್ಮಿಸಿರುವ ಈಜುಕೊಳಕ್ಕೆ ಹರಿತವಾದ ವಸ್ತುವಿನಿಂದ ಚುಚ್ಚಿ ನೀರು ಹೊರ ಹಾಕಲು ಯತ್ನಿಸಲು ಹೋದಾಗ ಏನಾಗಲಿದೆ ನೋಡಿ ಆನಂದಿಸಿ. ಮಲೋರಿ ಲಿನ್ ಅವರ ಖಾತೆಯಲ್ಲಿರುವ ಈ ವಿಡಿಯೋ ಸ್ಮಿಮ್ಮಿಂಗ್ ಪೂಲ್ ಫೇಲ್ಸ್ ಎಂದು ಹಾಕಿಕೊಂಡಿದ್ದಾರೆ. 7 ಮಿಲಿಯನ್ ಲೈಕ್ಸ್, 79.9 ಕೆ ಕಾಮೆಂಟ್ಸ್ ಬಂದಿದೆ.

ಟಾಪ್ 4: ಜಿರಲೆ ಔಷಧ ಸಿಂಪಡಣೆ

ಜಿರಲೆ ಔಷಧ ಸಿಂಪಡಣೆ ಮಾಡಲು ಮುಂದಾದ ಯುವತಿಯತ್ತಲೇ ಜಿರಳೆ ಹಾರಿ ಬರುವ ವಿಡಿಯೋ ಕ್ಲಿಪ್ ಇದಾಗಿದೆ. ಜೇಲಿನ್ನಾ ಅವರ ವಿಡಿಯೋ 4.9 ಬಾರಿ ವೀಕ್ಷಿಸಲ್ಪಟ್ಟಿದ್ದು, 90K ಕಾಮೆಂಟ್ಸ್ ಬಂದಿದೆ.

ಟಾಪ್ 5: ಟಿಕ್ ಟಾಕ್ ಸ್ಟಾರ್ Sammie

ಟಿಕ್ ಟಾಕ್ ಸ್ಟಾರ್ ಸ್ಯಾಮಿಲೆವಿಸ್ ತನ್ನ ಗೆಳತಿ ಜೊತೆಗೆ ಕಾರಿನಲ್ಲಿ ಕುಳಿತು ಜ್ಯೂಸ್ ಹೀರುತ್ತಾ ಹರಟೆ ಹೊಡೆಯುವ ವಿಡಿಯೋ ಕ್ಲಿಪ್ಪಿಂಗ್ 2.1 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದೆ. 20K ಕಾಮೆಂಟ್ ಬಂದಿದೆ.

ಸೂಚನೆ: ಈ ವಿಡಿಯೋದಲ್ಲಿ ಬಳಸಿರುವ ಭಾಷೆ ಮಕ್ಕಳಿಗೆ ಸೂಕ್ತವಲ್ಲ. ವೀಕ್ಷಿಸುವ ಮುನ್ನ ಪರಿಶೀಲಿಸಿ.

ಟಾಪ್ 5-10 ಕ್ರೇಜಿ ವಿಡಿಯೋ

ಬೆಕ್ಕಿನ ನೃತ್ಯ, ಶೂ ಒಳಗೆ ಶೇವಿಂಗ್ ಕ್ರೀಂ ಚಿತ್ತಾರ, ಟೆಡ್ಡಿಬೇರ್ ವೇಷದಲ್ಲಿ ಮೆಟ್ಟಿಲಿನಿಂದ ಕೆಳಗೆ ಜಾರುವುದು ಬೈಕ್ ಓಡಿಸುವುದು ಭಾರೀ ವೈರಲ್ ಆಗಿತ್ತು. ಹೀಗೆ ವಿವಿಧ ಕ್ರೇಜಿ ವಿಡಿಯೋಗಳು ವೈರಲ್ ಆಗಿದ್ದವು ಎಂದು ಸಂಸ್ಥೆ ಹೇಳಿಕೊಂಡಿದೆ.

English summary
Best of 2019: Here are the list of Top Ten Tiktok videos of the year 2019.TikTok is a video-sharing social networking service owned by ByteDance
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X