ಲಿಂಕ್ಡ್‌ಇನ್‌ನಲ್ಲಿ ತನ್ನ ಶ್ರದ್ಧಾಂಜಲಿ ಫೋಟೋ ಹಾಕಿ ನಿರುದ್ಯೋಗದ ಕರಾಳತೆ ಬಿಚ್ಚಿಟ್ಟ ಯುವಕ
ಒಳ್ಳೆಯ ಶಿಕ್ಷಣ ಪಡೆದರೂ ಒಂದೊಳ್ಳೆ ಕೆಲಸ ಸಿಗದ ಪರಿಸ್ಥಿತಿ ಈಗಲೂ ಇದೆ. ರೆಸ್ಯೂಮ್ ಹಿಡಿದು ಹತ್ತಾರು ಕಂಪನಿಗಳನ್ನ ಸುತ್ತಾಡಿದರೂ ಒಂದು ಉದ್ಯೋಗ ಗಿಟ್ಟಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ನಿರುದ್ಯೋಗಿಯೊಬ್ಬ ತನಗೆ ಉದ್ಯೋಗ ಸಿಗಲಿಲ್ಲ ಅಂತ ವಿಭಿನ್ನ ರೀತಿಯಲ್ಲಿ ಆಕ್ರೋಶ ಹೊರಹಾಕಿದ್ದಾನೆ. ತನಗೆ ತಾನೇ ಶ್ರದ್ಧಾಂಜಲಿ ಸಲ್ಲಿಸಿಕೊಂಡಿರುವ ಫೋಟೋ ಅನ್ನು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದರ ಜೊತೆಗೆ ಉದ್ಯೋಗ ಜಗತ್ತಿನ ಕರಾಳತೆಯನ್ನೂ ಆತ ಬಿಚ್ಚಿಟ್ಟಿದ್ದಾನೆ.
ಬೆಂಗಳೂರಿನ ಉದ್ಯೋಗಾಕಾಂಕ್ಷಿಯೊಬ್ಬ ಲಿಂಕ್ಡ್‌ಇನ್‌ನಲ್ಲಿ ಈ ರೀತಿ ಶ್ರದ್ಧಾಂಜಲಿ ಪೋಸ್ಟ್ ಹಂಚಿಕೊಂಡಿದ್ದಾನೆ. ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಅನೇಕರು ಅವರಿಗೆ ಉದ್ಯೋಗ ಅವಕಾಶಗಳ ದಾರಿ ತೋರುತ್ತಿದ್ದಾರೆ. LinkedIn, ಎಲ್ಲದಕ್ಕೂ ಧನ್ಯವಾದಗಳು. ಉದ್ಯಮ ನಾಯಕರೇ, ನನ್ನನ್ನು ನಿರ್ಲಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ನನ್ನನ್ನು ದೆವ್ವ ಮಾಡಲು ಹಣವನ್ನು ಖರ್ಚು ಮಾಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಪೋಸ್ಟ್‌ಗಳು ಮತ್ತು ರೇಟಿಂಗ್‌ಗಳಿಗೆ ಕ್ಷಮೆಯಾಚಿಸುತ್ತೇನೆ. ನಾನು ಎಷ್ಟೇ ಒಳ್ಳೆಯವನಾಗಿದ್ದರೂ ಅಥವಾ ರೆಫರೆನ್ಸ್‌ಗಳಿದ್ದರೂ ಈ ಪೋಸ್ಟ್‌ನಿಂದ ಯಾರೂ ನನ್ನನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ನನಗೆ ತಿಳಿದಿದೆ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ನಾನು ನಿಮ್ಮನ್ನು ನೋಯಿಸಿದರೆ ಕ್ಷಮಿಸಿ. ನಾನು ನಿಜವಾಗಿಯೂ ಎಲ್ಲವನ್ನೂ ಪ್ರಯತ್ನಿಸಿದೆ ಹಾಗೂ ಬೇಡಿಕೊಂಡೆ. ಆದರೆ ಕೆಲಸ ಸಿಗಲಿಲ್ಲ ಕ್ಷಮಿಸಿ. ನಾನು ನನ್ನನ್ನು ಕೊಲ್ಲುವುದಿಲ್ಲ. ಮಾಡಲು ಬಹಳಷ್ಟು ಕೆಲಸಗಳಿವೆ, ರುಚಿ ನೋಡಲು ಪಾಕಪದ್ಧತಿಗಳು ಮತ್ತು ಭೇಟಿ ನೀಡಲು ಸ್ಥಳಗಳಿವೆ. ಕೇವಲ ಸತ್ತಿದ್ದೇನೆ ಎಂದು ಮಾರ್ಮಿಕವಾಗಿ ಈ ಫೋಟೋ ಹಂಚಿಕೊಂಡಿದ್ದಾರೆ. ಕೆಲಸ ಪಡೆಯಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದೇನೆ. ಎಲ್ಲ ವಿಷಯಗಳನ್ನು ಸರಿಪಡಿಸುತ್ತೇನೆ ಮತ್ತು ನನ್ನ ಜೀವನದ ಪ್ರೀತಿಯೊಂದಿಗೆ ಇರುತ್ತೇನೆ. ಸುಮಾರು 3 ವರ್ಷಗಳ ಕಾಲ ನಿರುದ್ಯೋಗಿಯಾಗಿರುವುದು ಮತ್ತು ಪ್ರತ್ಯೇಕವಾಗಿರುವುದು ತುಂಬಾ ಕಷ್ಟ ಎಂದು ನಿರುದ್ಯೋಗದ ಕರಾಳತೆ ಬಿಚ್ಚಿಟ್ಟಿದ್ದಾರೆ.
ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಕಾಮೆಂಟ್ ಅನ್ನು ಒಪ್ಪುತ್ತೇನೆ ಎಂದು ಹಲವರು ಹೇಳಿದ್ದಾರೆ. ನಾನು ಎರಡು ಬಾರಿ ನಿಮಗೆ ಕರೆ ಮಾಡಲು ಪ್ರಯತ್ನಿಸಿದೆ. ನಿಮಗೆ ಸಹಾಯ ಹಸ್ತ ನೀಡಲು ಬಯಸಿದ್ದೆ. ಆದರೆ ನೀವು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ನನ್ನ ಕಾಮೆಂಟ್ ನೀವು ಒಪ್ಪುವುದಿಲ್ಲವೇ ಅಥವಾ ಈ ಪೋಸ್ಟ್‌ಗೆ ಕಾರಣ ತೀವ್ರ ಮಾನಸಿಕ ಒತ್ತಡವೇ? ಎಂದು ಹೇಳಿದ್ದಾರೆ. ಅಲ್ಲದೆ ತಮಗೆ ಗೊತ್ತಿರುವ ಕಡೆಗೆ ಈ ಯುವಕನಿಗೆ ಕೆಲಸ ಕೊಡಿಸಲು ಹಲವರು ಕೈಜೋಡಿಸುತ್ತಿದ್ದಾರೆ.

ಲಿಂಕ್ಡ್ಇನ್ ಬಳಕೆದಾರರು, ಹೆಚ್ಚಾಗಿ ಉದ್ಯೋಗದಾತರು ಮತ್ತು ಉದ್ಯಮಿಗಳು ಈ ಯುವಕನ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ ಉದ್ಯೋಗಗಳನ್ನ ನೀಡುವುದಾಗಿಯೂ ಭರವಸೆ ಕೊಡುತ್ತಿದ್ದಾರೆ. ಚಿಂತಿಸಬೇಡಿ ಸಹೋದರ, ನಿಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸಿ. ನಾನು ಕೆಲಸ ಹುಡುಕಲು 6 ತಿಂಗಳು ಕಷ್ಟಪಟ್ಟಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ. ನಿಮ್ಮ ರೆಸ್ಯೂಮ್ ಪರಿಶೀಲಿಸುವುದು, ಉದ್ಯೋಗದ ಮಾಹಿತಿ ಸೇರಿ ನಿಮಗೆ ಏನಾದರೂ ಬೆಂಬಲ ಬೇಕಿದ್ದಲ್ಲಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ, ನೀವು ಒಬ್ಬಂಟಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications