ಪ್ರವಾಸೋದ್ಯಮ ಗರಿ ಬಾಗಲಕೋಟೆ ಬಿಜೆಪಿ ಭದ್ರಕೋಟೆಯಾಗಿಯೇ ಉಳಿಯುತ್ತಾ?
Recommended Video

ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯು ಗೆಲ್ಲಬಹುದು ಎಂಬ ನಂಬಿಕೆ ಇರಿಸಿಕೊಂಡ ಕ್ಷೇತ್ರಗಳಲ್ಲಿ ಒಂದು ಬಾಗಲಕೋಟೆ ಲೋಕಸಭಾ ಕ್ಷೇತ್ರ. ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿದ್ದು 1967ರಲ್ಲಿ. ಈ ವರೆಗೆ ನಡೆದಿರುವ ಚುನಾವಣೆಗಳ ಪೈಕಿ ಎಂಟು ಬಾರಿ ಜಯಿಸಿರುವ ಕಾಂಗ್ರೆಸ್, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಜಯಿಸಿದ ಅಗ್ಗಳಿಕೆ ಪಡೆದಿದೆ.
ಆದರೆ, ಕಳೆದ ಮೂರು ಅವಧಿಗೆ ಅಂದರೆ 2004, 2009 ಹಾಗೂ 2014ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗದ್ದಿನಗೌಡರ್ ಪರ್ವತಗೌಡ ಚಂದನಗೌಡ (ಪಿ.ಸಿ.ಗದ್ದಿನಗೌಡರ್) ಜಯ ಸಾಧಿಸುತ್ತಾ ಬಂದಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಜಯ್ ಕುಮಾರ್ ಸನಾಯಕ್ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯ ದಾಖಲಿಸಿದ್ದಾರೆ ಪಿ.ಸಿ.ಗದ್ದಿನಗೌಡರ್.
ಇನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮುಧೋಳ, ತೇರದಾಳ, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನುಗುಂದ್ ಹಾಗೂ ನರಗುಂದ್ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ವರೆಗೂ ಪಿ.ಸಿ.ಗದ್ದಿನಗೌಡರಿಗೂ ಸಮಸ್ಯೆಗಳು ಇರಲಿಲ್ಲ. ಆದರೆ ಈ ಬಾರಿ ಅವರಿಗೆ ಬಿಜೆಪಿಯಿಂದ ಟಿಕೆಟ್ ದೊರೆಯುವುದು ಅನುಮಾನ ಎಂಬ ವದಂತಿಗಳು ಹರಿದಾಡುತ್ತಿವೆ.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಆ ವಿಧಾನಸಭಾ ಕ್ಷೇತ್ರವು ಇದೇ ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತಾವು ಪ್ರತಿನಿಧಿಸುವ ಕ್ಷೇತ್ರ ಇರುವ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಬಲವರ್ಧನೆ ಮಾಡಬಹುದಾ ಸಿದ್ದರಾಮಯ್ಯ ಅವರು ಎಂಬ ನಿರೀಕ್ಷೆ ಇದ್ದೇ ಇದೆ.
2011ರ ಗಣತಿ ಪ್ರಕಾರ ಬಾಗಲಕೋಟೆ ಜಿಲ್ಲೆಯ ಮಾಹಿತಿ ಹೀಗಿದೆ
ಒಟ್ಟು ಜನಸಂಖ್ಯೆ 18.90 ಲಕ್ಷ
ಪುರುಷರು 9,50,11
ಮಹಿಳೆಯರು 9,39,641
ಜನಸಂಖ್ಯಾ ಏರಿಕೆ ಪ್ರಮಾಣ 14.40%
ಲಿಂಗಾನುಪಾತ 989
ಸರಾಸರಿ ಸಾಕ್ಷರತಾ ಪ್ರಮಾಣ 68.82%
ಯಾವ ಧರ್ಮದವರು ಯಾವ ಪ್ರಮಾಣದಲ್ಲಿ ಇದ್ದಾರೆ ಎಂಬ ಲೆಕ್ಕಾಚಾರ ಹೀಗಿದೆ:
ಹಿಂದೂ 86.48%
ಜೈನ 1.33%
ಕ್ರಿಶ್ಚಿಯನ್ 0.18%
ಸಿಖ್ 0.02%
ಬೌದ್ಧರು 0.02%
ಇತರರು 0.01%
ಮಾಹಿತಿ ಇಲ್ಲದ್ದು 0.31%
ಮುಸ್ಲಿಮರು 11.64%

ಸಂಸದ ಪಿ.ಸಿ.ಗದ್ದಿನ ಗೌಡರ್ ಗೆ ಮೀಸಲಾದ ಸಂಸತ್ ನಿಧಿಯ ಪ್ರಮಾಣ 25 ಕೋಟಿ. ಅದರಲ್ಲಿ ಸರಕಾರದಿಂದ ಬಿಡುಗಡೆ ಆಗಿರುವುದು 17.5 ಕೋಟಿ. ಬಡ್ಡಿಯು ಸೇರಿ ವೆಚ್ಚ ಮಾಡಲು ದೊರೆತ ಮೊತ್ತ 18.05 ಕೋಟಿ. ಬಾಕಿ ಇರುವ ಮೊತ್ತವೂ ಸೇರಿ ಸಂಸದರೂ ಶಿಫಾರಸು ಮಾಡಿರುವುದು 21.25 ಕೋಟಿ. ಅದರಲ್ಲಿ ಜಿಲ್ಲಾ ಅಧಿಕಾರಿಗಳು ಮಂಜೂರು ಮಾಡಿರುವುದು 21.25 ಕೋಟಿಯಾದರೆ, ವೆಚ್ಚ ಮಾಡಿರುವುದು 15.84 ಕೋಟಿ ರುಪಾಯಿ. ಖರ್ಚಾಗದೆ ಉಳಿದಿರುವ ಮೊತ್ತ 2.21 ಕೋಟಿ.
ಇನ್ನು ಸಂಸತ್ ನಲ್ಲಿ ಪಿ.ಸಿ.ಗದ್ದಿನ ಗೌಡರ್ ಹೇಗೆ ಪಾಲ್ಗೊಂಡಿದ್ದರೆ ಎಂಬುದನ್ನು ಗಮನಿಸಿದರೆ, ಒಟ್ಟು 8 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. 94 ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಹಾಜರಾತಿ ಪ್ರಮಾಣ 86%.

ಬಾಗಲಕೋಟೆಯಲ್ಲಿನ ಒಟ್ಟು ಮತದಾರರ ಸಂಖ್ಯೆ 15,68,620. ಅದರಲ್ಲಿ ಪುರುಷ ಮತದಾರರು 7,93,338 ಹಾಗೂ ಮಹಿಳಾ ಮತದಾರರು 7,75,282. ಆ ಪೈಕಿ 2014ರಲ್ಲಿ 10,79,310 ಮಂದಿ ಮತ ಚಲಾಯಿಸುವ ಮೂಲಕ ಶೇಕಡಾ 69ರಷ್ಟು ಮತದಾನ ಆಯಿತು ಗದ್ದಿನಗೌಡರ್ 5,71,548 ಮತಗಳನ್ನು ಪಡೆಯುವ ಮೂಲಕ ವಿಜಯಿಯಾದರು.
ಬಾಗಲಕೋಟೆಯ ಜನಸಂಖ್ಯೆ ಬಗ್ಗೆ ಮತ್ತೊಮ್ಮೆ ತಿಳಿದುಕೊಂಡು ಬಿಡಿ. ಒಟ್ಟು ಜನಸಂಖ್ಯೆ 21,24,906. ಆ ಪೈಕಿ ಶೇಕಡಾ 70.16% ಗ್ರಾಮೀಣ ಭಾಗದವರು. 29.84%ರಷ್ಟು ನಗರ ಪ್ರದೇಶದವರು. 16.29% ಪರಿಶಿಷ್ಟ ಜಾತಿ ಹಾಗೂ 5.2% ಪರಿಶಿಷ್ಟ ಪಂಗಡದವರು ಇದ್ದಾರೆ.

ಈ ಜಿಲ್ಲೆಯ ಸರಾಸರಿ ಸಾಕ್ಷರತಾ ಪ್ರಮಾಣ ಹೆಚ್ಚಾಗಬೇಕಿದೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ, ಮಹಾಕೂಟ ಹೀಗೆ ಅದ್ಭುತ ಪ್ರವಾಸಿ ತಾಣಗಳಿರುವ ಬಾಗಲಕೋಟೆಯಲ್ಲಿ ಪ್ರವಾಸೋದ್ಯಮವನ್ನು ಉದ್ಯೋಗಾವಕಾಶವಾಗಿ ಬಳಸಿಕೊಂಡಿರುವುದು ಕಂಡುಬರುವುದಿಲ್ಲ. ಇನ್ನು ಸ್ಥಳೀಯವಾಗಿಯೂ ಉದ್ಯೋಗ ಸೃಷ್ಟಿ ಆಗಬೇಕು.
ಕೃಷಿಯೇ ಇಲ್ಲಿನ ಮುಖ್ಯ ಕಸುಬಾಗಿದ್ದು, ಕಾರ್ಮಿಕರ ಅಗತ್ಯ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ಆಯಾ ಕೃಷಿಗೆ ಪೂರಕವಾದ ಕೈಗಾರಿಕೆ-ಉದ್ಯಮಗಳು ಆರಂಭವಾದರೆ ಇನ್ನೂ ಹೆಚ್ಚಿನ ಅನುಕೂಲ ಆಗುತ್ತದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications