ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ಐತಿಹಾಸಿಕ ತೀರ್ಪು: ಅರ್ಜಿದಾರರಿಗೆ ಸಿಹಿ-ಕಹಿ

|
Google Oneindia Kannada News

Recommended Video

Ayodhya Verdict : Sunni Waqf Board expressed dissatisfaction against the Supreme Court judgement.

ನವದೆಹಲಿ, ನವೆಂಬರ್ 09: ಹಲವು ದಶಕಗಳ ಅಯೋಧ್ಯೆ ವಿವಾದದ ತೀರ್ಪು ಇಂದು ಪ್ರಕಟವಾಗಿದ್ದು, ಈ ತೀರ್ಪಿಗೆ ಅರ್ಜಿದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಿರ್ಮೋಹಿ ಅಖಾರ, ಸ್ವತಂತ್ರ ಅರ್ಜಿದಾರಿ ಇಖ್ಬಾಲ್ ಅನ್ಸಾರಿ, ಹಿಂದು ಮಹಾಸಭಾ ತೀರ್ಪನ್ನು ಸ್ವಾಗತಿಸಿದ್ದರೆ, ಸುನ್ನಿ ವಕ್ಫ್ ಬೋರ್ಡ್, ಸುಪ್ರೀಂ ತೀರ್ಪಿಗೆ ಗೌರವ ನೀಡುತ್ತೇವೆ. ಆದರೆ ತೀರ್ಪಿನ ಬಗ್ಗೆ ತೃಪ್ತಿಯಿಲ್ಲ ಎಂದಿದೆ.

ತೀರ್ಪಿನಲ್ಲಿ ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ

ಈ ಕುರಿತು ಅರ್ಜಿದಾರರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.

ಇಕ್ಬಾಲ್ ಅನ್ಸಾರಿ

ಇಕ್ಬಾಲ್ ಅನ್ಸಾರಿ

"ಸುಪ್ರೀಂ ಕೋರ್ಟ್ ಕೊನೆಗೂ ಒಂದು ತೀರ್ಪು ನೀಡಿದೆ ಎಂದು ನನಗೆ ಸಂತಸವಾಗಿದೆ. ನಾನು ಈ ತರ್ಪನ್ನು ಗೌರವಿಸುತ್ತೇನೆ" ಇಕ್ಬಾಲ್ ಅನ್ಸಾರಿ, ಸ್ವತಂತ್ರ ಅರ್ಜಿದಾರ

ನಿರ್ಮೋಹಿ ಅಖಾರದ ವಕ್ತಾರ

ನಿರ್ಮೋಹಿ ಅಖಾರದ ವಕ್ತಾರ

"ಕಳೆದ 150 ವರ್ಷಗಳಿಂದ ನಮ್ಮ ಹೋರಾಟವನ್ನು ಗುರುತಿಸಿದ ಸುಪ್ರೀಂ ಕೋರ್ಟ್ ಗೆ ನಾವು ಋಣಿಯಾಗಿದ್ದೇವೆ. ಶ್ರೀರಾಮ ಜನ್ಮಸ್ಥಾನ್ ದೇವಾಲಯವನ್ನು ಕಟ್ಟಲು ನಿರ್ಮಿಸಿರುವ ಟ್ರಸ್ಟ್ ನಲ್ಲಿ ನಮಗೆ ಪ್ರಾತಿನಿಧ್ಯ ನೀಡಿದ್ದಕ್ಕೂ ಧನ್ಯವಾದಗಳು" -ಕಾರ್ತಿಕ್ ಚೋಪ್ರಾ, ನಿರ್ಮೋಹಿ ಅಖಾರದ ವಕ್ತಾರ

Ayodhya Verdict Live Updates: ವಿವಾದಿತ ಭೂಮಿ ಸರ್ಕಾರೇತರ ಸಂಸ್ಥೆಗೆAyodhya Verdict Live Updates: ವಿವಾದಿತ ಭೂಮಿ ಸರ್ಕಾರೇತರ ಸಂಸ್ಥೆಗೆ

ಹಿಂದು ಮಹಾಸಭಾ

ಹಿಂದು ಮಹಾಸಭಾ

"ಇದೊಂದು ಐತಿಹಾಸಿಕ ತೀರ್ಪು. ಈ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ ವಿವಿಧತೆಯೆಲ್ಲಿ ಏಕತೆಯ ಸಂದೇಶ ನೀಡಿದೆ" ವರುಣ್ ಕುಮಾರ್ ಸಿನ್ಹಾ, ಹಿಂದು ಮಹಾಸಭಾ ವಕೀಲ

ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

"ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ಆದರೆ ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ"- ಜಫಾರ್ಯಾಬ್ ಜಿಲಾನಿ, ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

ಅಯೋಧ್ಯಾ ವಿವಾದ: ಸುಪ್ರೀಂಕೋರ್ಟ್ ತೀರ್ಪಿಗೆ ಸುನ್ನಿ ವಕ್ಫ್ ಮಂಡಳಿ ಅತೃಪ್ತಿಅಯೋಧ್ಯಾ ವಿವಾದ: ಸುಪ್ರೀಂಕೋರ್ಟ್ ತೀರ್ಪಿಗೆ ಸುನ್ನಿ ವಕ್ಫ್ ಮಂಡಳಿ ಅತೃಪ್ತಿ

English summary
Ayodhya Land Dispute Verdict: Petitioners' Express Their Reactions On The Historical Judgement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X