Women's Day 2025: ಜವಾಬ್ದಾರಿ ಮುಗಿಸುವ ಆತುರದಲ್ಲಿ ಹೆಣ್ಮಕ್ಕಳ ಬದುಕಿಗೆ ಮುಳ್ಳಾಗದಿರಿ
ಇವತ್ತು ಮಹಿಳೆಯರು ಆಡಳಿತದ ಚುಕ್ಕಾಣಿ ಹಿಡಿದು ದೇಶವನ್ನೇ ಆಳುವಷ್ಟು ಮಟ್ಟಿಗೆ ಬೆಳೆದು ನಿಂತಿದ್ದರೂ ಇನ್ನೂ ಕೂಡ ಹೆತ್ತವರಿಗೆ ಹೆಣ್ಣು ಭಾರ ಎಂಬ ಮನಸ್ಥಿತಿ ಬದಲಾಗಿಲ್ಲ. ಹೀಗಾಗಿಯೇ ಆಕೆ ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆಯೇ ಹೆತ್ತವರು ಅವಳ ಆಶೋತ್ತರಗಳನ್ನು ಬದಿಗೊತ್ತಿ ಅವಳಿಗೊಂದು ಮದುವೆ ಮಾಡಿ ಜವಬ್ದಾರಿ ಕಳೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಪರಿಣಾಮ ಚೆನ್ನಾಗಿ ಓದಿ ಕೆಲಸ ಪಡೆದು ದುಡಿಮೆಯೊಂದಿಗೆ ಬದುಕು ಕಟ್ಟಿಕೊಳ್ಳಬೇಕೆನ್ನುವ ಎಂಬ ಬಯಕೆಗೆ ತಣ್ಣೀರು ಬೀಳುತ್ತಿದೆ.
ನಾವು ನೋಡುತ್ತಿರುವ ಮತ್ತು ಬದುಕುತ್ತಿರುವ ಸಮಾಜ ಬದಲಾಗಿದೆ. ಈಗಿನ ದುಬಾರಿ ಬದುಕಿನಲ್ಲಿ ಇಬ್ಬರು ಕಾಲಿಗೆ ಚಕ್ರಕಟ್ಟಿಕೊಂಡು ದುಡಿದರಷ್ಟೇ ಬದುಕನ್ನು ನಿರ್ವಹಿಸಲು ಸಾಧ್ಯ. ಹೀಗಾಗಿ ಗಂಡ ಮಾತ್ರವಲ್ಲದೆ ಹೆಂಡತಿಯೂ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಕೂಡ ಏನಾದರೊಂದು ಕೆಲಸ ಅಥವಾ ಬದುಕಿಗೆ ಆದಾಯ ತಂದು ಕೊಡುವ ದುಡಿಮೆಯನ್ನು ಮಾಡಲೇಬೇಕು. ಅದು ಅವರ ಬದುಕಿಗೆ ಆರ್ಥಿಕ ಆಸರೆಯಾಗುತ್ತದೆ. ಇಲ್ಲಿ ನಾವೇನು ಕೆಲಸ ಮಾಡುತ್ತಿದ್ದೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಕಷ್ಟಪಟ್ಟು ಸಂಪಾದಿಸಿ ಬದುಕುತ್ತಿದ್ದೇವೆ ಎಂಬ ನೆಮ್ಮದಿ ಹೆಣ್ಣು ಮಕ್ಕಳನ್ನು ಖುಷಿಯಾಗಿಡುತ್ತದೆ.

ಇದೆಲ್ಲದರ ನಡುವೆಯೂ ಕೆಲವು ಹೆತ್ತವರು ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕೆಂದು ಚಿಂತನೆಯಲ್ಲಿರುತ್ತಾರೆ. ಹುಡುಗ ಒಳ್ಳೆ ಕೆಲಸದಲ್ಲಿದ್ದಾನೆ. ಮನೆಕಡೆ ಚೆನ್ನಾಗಿದೆ. ಇನ್ನೇನು ಬೇಕೆಂದು ಮಗಳು ಒಪ್ಪಲಿ ಒಪ್ಪದಿರಲಿ ಹಠಕ್ಕೆ ಬಿದ್ದವರಂತೆ ಮದುವೆ ಮಾಡಿ ಮುಗಿಸುವ ಆತುರ ತೋರುತ್ತಾರೆ. ಕೆಲವು ಹೆಣ್ಣು ಮಕ್ಕಳು ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲಾಗದೆ ಕೊರಳೊಡ್ಡಿ ದಾಂಪತ್ಯ ಬದುಕನ್ನು ಸ್ವೀಕರಿಸುತ್ತಾರೆ. ಮದುವೆ ಮಾಡಿಕೊಂಡವನು ಒಳ್ಳೆಯವನಾದರೆ ಅವಳ ಬದುಕು ಸುಖಮಯವಾಗಿರುತ್ತದೆ. ಇಲ್ಲದೇ ಹೋದರೆ? ಎಂಬ ಪ್ರಶ್ನೆಗೆ ಉತ್ತರಗಳು ನಮ್ಮ ಸುತ್ತಮುತ್ತಲೇ ಸಿಗುತ್ತವೆ.
ಜವಬ್ದಾರಿ ಕಳೆದು ಕೊಳ್ಳುವ ಆತುರ ಬೇಕೇ?
ಮಗಳಿಗೆ ಮದುಗೆ ಮಾಡಿ ಜವಬ್ದಾರಿ ಕಳೆದುಕೊಳ್ಳುವವರ ನಡುವೆ ಮಗಳನ್ನು ಮಗನಿಗಿಂತ ಹೆಚ್ಚಾಗಿ ಬೆಳೆಸುವ, ಅವಳ ಬೇಕು ಬೇಡಗಳೆಲ್ಲವನ್ನು ಈಡೇರಿಸಿ ಓದಿ ಅವಳದ್ದೇ ಆದ ಬದುಕು ಕಟ್ಟಿಕೊಳ್ಳಲಿ ಎಂದು ಆಶಿಸುವ ಹೆತ್ತವರು ದೊಡ್ಡಮಟ್ಟದಲ್ಲಿದ್ದಾರೆ. ಇವತ್ತು ಸಮಾಜದಿಂದ ಬೇಕಾದಷ್ಟು ಕಲಿಯುವುದಿದೆ. ಅದರಲ್ಲಿಯೂ ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳು ಆರ್ಥಿಕ ಸ್ವಾವಲಂಬಿಯಾಗುವ ಅನಿವಾರ್ಯತೆ ಬಂದೊದಗಿದೆ. ಹೆಣ್ಣು ಮಕ್ಕಳಿಗೆ ಸಂಸ್ಕಾರದ ಜತೆಗೆ ವಿದ್ಯಾಭ್ಯಾಸ ಮತ್ತು ಸ್ವಾವಲಂಬಿಯಾಗಿ ಬದುಕುವುದಕ್ಕೆ ಏನೆಲ್ಲ ಮಾರ್ಗಗಳಿವೆಯೋ ಅದೆಲ್ಲವನ್ನು ಹೇಳಿಕೊಡುವ ಕೆಲಸಗಳನ್ನು ಹೆತ್ತವರು ಮಾಡಿದರೆ ಪ್ರತಿಯೊಬ್ಬ ಹೆಣ್ಣು ಮಗಳು ನೆಮ್ಮದಿಯಾಗಿರುತ್ತಾಳೆ.

ಕಷ್ಟಪಟ್ಟು ದುಡಿಯಲು ಶಕ್ತಳಾಗಿದ್ದರೆ ಮಾಡೋದಕ್ಕೆ ಬೇಕಾದಷ್ಟು ಕೆಲಸಗಳಿವೆ. ಓದುವಾಗಲೇ ಮುಂದೆ ಏನು ಕೆಲಸ ಮಾಡಬೇಕು? ಅಥವಾ ಏನು ಮಾಡಿದರೆ ಬದುಕಲ್ಲಿ ಯಶಸ್ಸು ಕಾಣಬಹುದು ಎಂಬುದರ ಬಗ್ಗೆ ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮಾಡಿಕೊಂಡು ಮುನ್ನಡೆದರೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಕೃಷಿಯಿಂದ ವ್ಯಾಪಾರದ ತನಕ, ಗುಡಿಕೈಗಾರಿಕೆಯಿಂದ ಉದ್ಯಮದ ತನಕ ಹಲವರು ಹಲವು ರೀತಿಯಲ್ಲಿ ಯಶಸ್ಸು ಕಂಡಿದ್ದಾರೆ. ಹೀಗಿರುವಾಗ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು ಜವಬ್ದಾರಿ ಕಳೆದು ಕೊಳ್ಳುವ ಆತುರಕ್ಕೆ ಬೀಳುವುದು ಎಷ್ಟು ಸರಿ?
ಅವಳ ನಿರ್ಧಾರಕ್ಕಾಗಿ ಕಾಯುವ ತಾಳ್ಮೆಯಿರಲಿ
ಇನ್ನು ಚಿಕ್ಕವಯಸ್ಸಿಗೆ ಮದುವೆ ಮಾಡಿ ಜವಬ್ದಾರಿ ಕಳೆದುಕೊಂಡೆವು ಎನ್ನುವ ಹೆತ್ತವರು ಹೆಣ್ಣುಮಕ್ಕಳ ಮುಂದಿನ ಜೀವನದ ಬಗ್ಗೆ ಯೋಚಿಸುವುದೇ ಇಲ್ಲ. ಇಲ್ಲಿ ಹೆತ್ತವರು ಜವಬ್ದಾರಿ ಕಳೆದುಕೊಂಡ ನಿರಾಳತೆಯಲ್ಲಿದ್ದರೆ, ಅತ್ತ ಮದುವೆ ಮಾಡಿಕೊಂಡ ಹುಡುಗಿ ಚಿಕ್ಕವಯಸ್ಸಿಗೆ ಬೇರೆ ಮನೆಗೆ ಹೋಗಿ ಅಲ್ಲಿನ ಬದುಕಿಗೆ ಹೊಂದಿಕೊಳ್ಳಬೇಕಾಗುತ್ತದೆ. ಇದರಿಂದ ಚಿಕ್ಕವಯಸ್ಸಿಗೆ ದೊಡ್ಡ ಜವಬ್ದಾರಿ ವಹಿಸಿಕೊಂಡು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆ ನಂತರದ ಗಂಡ, ಮಕ್ಕಳು ಸೇರಿದಂತೆ ಸಂಸಾರದ ಜವಬ್ದಾರಿಗಳು ಹೆಚ್ಚಾಗುವುದರಿಂದಾಗಿ ಮಾನಸಿಕವಾಗಿ ಒತ್ತಡಗೊಳಗಾಗಬೇಕಾಗುತ್ತದೆ.
ಇನ್ನು ಪ್ರಾಪಂಚಿಕ ವಿಚಾರಗಳು ಸರಿಯಾಗಿ ಗೊತ್ತಿಲ್ಲದ ಕಾರಣಗಳಿಂದ ಮತ್ತು ಚಿಕ್ಕವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಗರ್ಭಪಾತ ಉಂಟಾಗುವುದು, ಗರ್ಭ ಚೀಲಕ್ಕೆ ಪೆಟ್ಟು ಬೀಳುವುದು ಹೀಗೆ ದೈಹಿಕ ಸಮಸ್ಯೆಗಳು ಒಂದೆಡೆಯಾದರೆ, ಮತ್ತೊಂದೆಡೆ ಸಂಸಾರದ ಜವಬ್ದಾರಿಗಳು ಹೆಚ್ಚಾಗುವುದರಿಂದ ಅದೆಲ್ಲವನ್ನು ನಿಭಾಯಿಸಲು ಸಾಧ್ಯವಾಗದೆ ಮಾನಸಿಕ ದೌರ್ಬಲ್ಯತೆ ಮತ್ತು ಖಿನ್ನತೆ ಬಾಧಿಸಬಹುದು.
ಇದೆಲ್ಲದರ ನಡುವೆ ತಮ್ಮದೇ ವಯಸ್ಸಿನವರು ಸ್ವಾತಂತ್ರ್ಯವಾಗಿ ಓಡಾಡುತ್ತಾ ಖುಷಿಯಾಗಿರುವುದನ್ನು ಕಂಡು ಮನಸ್ಸಿನೊಳಗೆ ಕೊರಗುವುದು, ಮದುವೆಯಾಗಿ ಎಲ್ಲ ಕಳೆದು ಹೋಯಿತೆಂಬ ಕೀಳರಿಮೆಯೂ ಕಾಡಬಹುದು. ಇದೆಲ್ಲವನ್ನು ತಪ್ಪಿಸಬೇಕಾದರೆ ಅವಳೇ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತನಕ ಕಾಯುವ ತಾಳ್ಮೆ ಹೆತ್ತವರಿಗೆ ಇರಬೇಕಷ್ಟೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications