ಭೂಮಿಗೆ ಎದುರಾಯ್ತು ಬಹುದೊಡ್ಡ ಕಂಟಕ?
ಭೂಮಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಒಂದು ಕಡೆ ಕೊರೊನಾ ಅಪ್ಪಳಿಸಿ ಬಹುದೊಡ್ಡ ವಿನಾಶ ಸೃಷ್ಟಿಸಿದೆ. ಈ ಹೊತ್ತಲ್ಲೇ ಪದೇ ಪದೆ ಕ್ಷುದ್ರಗ್ರಹ ಹಾಗೂ ಬಾಹ್ಯಾಕಾಶ ವಸ್ತುಗಳಿಂದ ಡೇಂಜರಸ್ ಸಿಗ್ನಲ್ ಸಿಗ್ತಾನೆ ಇದೆ. ಇದೇ ರೀತಿ ಮತ್ತೊಂದು ಬೃಹತ್ ಗಾತ್ರದ ಬಂಡೆ ಅಥವಾ ಕ್ಷುದ್ರಗ್ರಹ ಭೂಮಿಗೆ ಅತಿ ಸಮೀಪದಲ್ಲೇ ಹಾದು ಹೋಗಲಿದೆ. ಜುಲೈ 25ರಂದು ಭೂಮಿಗೆ ಅತ್ಯಂತ ಹತ್ತಿರದಲ್ಲೇ ಈ ಕ್ಷುದ್ರಗ್ರಹ ಹಾದು ಹೋಗಲಿದ್ದು, ಇದನ್ನ '2008 GO20' ಎಂದು ಹೆಸರಿಸಲಾಗಿದೆ.
220 ಮೀಟರ್ ವ್ಯಾಸವಿರುವ ಕ್ಷುದ್ರಗ್ರಹ ಭೂಮಿಗೆ ಆಪತ್ತು ತರಬಹುದು ಎಂಬುದನ್ನು ಬಹು ಹಿಂದೆಯೇ ಕಂಡುಕೊಳ್ಳಲಾಗಿತ್ತು. ಸಾಮಾನ್ಯ ಭಾಷೆಗೆ ಈ ಕ್ಷುದ್ರಗ್ರಹದ ಗಾತ್ರ ಹೋಲಿಕೆ ಮಾಡುವುದಾದರೆ, ತಾಜ್‌ಮಹಲ್ ಲೆಕ್ಕದಲ್ಲಿ 3 ಪಟ್ಟು ದೊಡ್ಡದಾಗಿದೆ.
ಅಂದ್ರೆ 3 ತಾಜ್‌ಮಹಲ್ ಸೇರಿಸಿದರೆ 1 '2008 GO20' ಕ್ಷುದ್ರಗ್ರಹಕ್ಕೆ ಸಮ. ಅಷ್ಟಕ್ಕೂ ಕ್ಷುದ್ರಗ್ರಹ ಭೂಮಿಯಿಂದ ಸುಮಾರು 4.7 ದಶಲಕ್ಷ ಕಿಲೋ ಮೀಟರ್ ದೂರದಲ್ಲಿ ಹಾದು ಹೋಗಲಿದೆ ಅಂತಾ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಆದ್ರೆ ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯ ಕಾಡತೊಡಗಿದೆ.

ವಿಜ್ಞಾನಿಗಳಿಗೆ ಭಯ ಏಕೆ..?
ಆಕಾಶ ಕಾಯಗಳ ವಿಚಾರದಲ್ಲಿ ಸಣ್ಣ ಬೇಜವಾಬ್ದಾರಿ ಕೂಡ ದೊಡ್ಡ ಕಂಟಕವನ್ನೇ ಸೃಷ್ಟಿಸಬಹುದು. ಅದರಲ್ಲೂ ಕ್ಷುದ್ರಗ್ರಹದ ವಿಚಾರದಲ್ಲಿ ವಿಜ್ಞಾನಿಗಳು ಮತ್ತೊಂದು ಚಾನ್ಸ್ ತೆಗೆದುಕೊಳ್ಳುವುದಿಲ್ಲ. ಅಪ್ಪಿತಪ್ಪಿ ಲೆಕ್ಕಾಚಾರವೇ ಉಲ್ಟಾ ಆಗೋಯ್ತು ಅಥವಾ ಯಾವುದೋ ಗುರುತ್ವ ಬಲದಿಂದ ಕ್ಷುದ್ರಗ್ರಹ ಸ್ವಲ್ಪ ಆಚೆ, ಈಚೆ ಜರುಗಿತೆಂದರೆ ಕಥೆ ಮುಗಿಯಿತು ಅಂತಾನೆ ಅರ್ಥ. ಏಕೆಂದರೆ ಒಂದು ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ನೂರಾರು ಅಣು ಬಾಂಬ್ ಸಿಡಿಸಿದಂತಹ ಸ್ಫೋಟ, ದುರಂತ ಸಂಭವಿಸಲಿದೆ. ಹೀಗಾಗಿ ವಿಜ್ಞಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ‘2008 GO20' ಕ್ಷುದ್ರಗ್ರಹ ಭೂಮಿಯಿಂದ ದೂರ ಹೋಗುವ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

ಡೈನೋಸಾರ್ ನಾಶಕ್ಕೆ ಇದೇ ಕಾರಣ..!
ಭೂಮಿ ಮೇಲೆ ಇವತ್ತು ಮಾನವನೇ ‘ಕಿಂಗ್'! ಆದರೆ ಕೆಲವು ಕೋಟಿ ವರ್ಷಗಳ ಹಿಂದೆ ಮಾನವನ ಅಸ್ತಿತ್ವ ಇರಲೇ ಇಲ್ಲ. ಆ ಸಮಯದಲ್ಲಿ ‘ಡೈನೋಸಾರ್' ಎಂಬ ದೈತ್ಯ ಜೀವಿಗಳದ್ದೇ ಹವಾ ಹಬ್ಬಿತ್ತು. ಆದರೆ ದಿಢೀರ್ ಕ್ಷುದ್ರಗ್ರಹ ದಾಳಿಯ ಪರಿಣಾಮ ‘ಡೈನೋಸಾರ್' ಸಂತತಿ ನಾಶವಾಗಿ ಹೋಯಿತು ಎನ್ನುತ್ತಾರೆ ವಿಜ್ಞಾನಿಗಳು. ‘ಡೈನೋಸಾರ್' ಸಂತತಿ ಅಳಿಸಿ ಹೋಗಲು ಹಲವು ಕಾರಣಗಳನ್ನ ನೀಡಿದ್ದರೂ, ಕ್ಷುದ್ರಗ್ರಹ ದಾಳಿಯಿಂದಲೇ ಆ ದೈತ್ಯ ಜೀವಿಗಳು ಮೃತಪಟ್ಟವು ಎಂಬುದಕ್ಕೆ ಹಲವು ಪುರಾವೆ ಸಿಗುತ್ತಿವೆ. ಹೀಗಾಗಿಯೇ ಮಾನವರ ಭವಿಷ್ಯ ಭದ್ರಪಡಿಸಲು ಕ್ಷುದ್ರಗ್ರಹಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿರುವುದು ಅತ್ಯಗತ್ಯ.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!
ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.
Recommended Video

ಊಹೆಗೂ ನಿಲುಕದಷ್ಟು ಸಂಪತ್ತು!
ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications