ಭೂಮಿ ಜಸ್ಟ್ ಮಿಸ್! ಕೂದಲೆಳೆ ಅಂತರದಲ್ಲಿ ದೂರವಾಯ್ತು ಮಹಾ ಕಂಟಕ!
ಭೂಮಿಗೆ ಎದುರಾಗಿದ್ದ ಕಂಟಕ ಕೂದಲೆಳೆ ಅಂತರದಲ್ಲಿ ದೂರವಾಗಿದೆ. '2001- F032' ಹೆಸರಿನ ಕ್ಷುದ್ರಗ್ರಹ ಭೂಮಿಯಿಂದ ಕೂದಲೆಳೆ ಅಂತರದಲ್ಲಿ ಹಾದು ಹೋಗಿದೆ. ವಿಜ್ಞಾನಿಗಳು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಮತ್ತೆ ಇದೇ ಕ್ಷುದ್ರಗ್ರಹ 2029ರಲ್ಲಿ ಭೂಮಿಗೆ ಸಮೀಪದಲ್ಲೇ ಹಾದು ಹೋಗಲಿದ್ದು ಆಗ ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
440 ರಿಂದ 680 ಮೀಟರ್ ದೊಡ್ಡದಾದ ಬೃಹತ್ ಬಂಡೆ ಇದು. ಈ ಬಂಡೆಯನ್ನ ನೋಡಲು ಜಗತ್ತಿನ ಸಾವಿರಾರು ಟೆಲಿಸ್ಕೋಪ್‌ಗಳು ಬಾಹ್ಯಾಕಾಶದತ್ತ ತಿರುಗಿದ್ದವು. ಆದರೆ ಜಸ್ಟ್ ಮಿಸ್ ಎಂಬಂತೆ, ಕೆಲವೇ ಮಿಲಿಯನ್ ಕಿಲೋಮೀಟರ್ ಅಂತರದಲ್ಲಿ ಈ ಕ್ಷುದ್ರಗ್ರಹ ಭೂಮಿ ಸಮೀಪದಲ್ಲೇ ಹಾದು ಹೋಗಿದೆ.
ಸೂರ್ಯನ ಸುತ್ತ ರೌಂಡ್ ಹಾಕಲು 810 ಭೂ ದಿನಗಳನ್ನ '2001- F032' ಕ್ಷುದ್ರಗ್ರಹ ತೆಗೆದುಕೊಳ್ಳುತ್ತದೆ. ಕ್ಷುದ್ರಗ್ರಹದ ವೇಗ ಗಂಟೆಗೆ 1 ಲಕ್ಷ 24 ಸಾವಿರ ಕಿಲೋಮೀಟರ್. ಹೀಗಾಗಿ ಕ್ಷುದ್ರಗ್ರಹ ಮಾನವನಿಗೆ ಭಯ ಹುಟ್ಟಿಸಿತ್ತು, ಆದರೆ ಆ ಭಯ ಸದ್ಯಕ್ಕೆ ಮಾಯವಾಗಿದೆ. ಆದರೆ ಈಗ 2029ರ ಪ್ರಳಯಕ್ಕೆ ಸಿದ್ಧವಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಮಾನವರಿಗೆ 20 ವರ್ಷಗಳ ಪರಿಚಯ..!
ಅಂದಹಾಗೆ ಮಾರ್ಚ್ 21ರಂದು ಭೂಮಿ ಸಮೀಪ ಹಾದು ಹೋಗಿರುವ ಈ ಕ್ಷುದ್ರಗ್ರಹ ಮೊದಲಿಗೆ ಪತ್ತೆ ಆಗಿದ್ದು 20 ವರ್ಷಗಳ ಹಿಂದೆ. ಇದೇ ಕಾರಣಕ್ಕೆ ಈ ಕ್ಷುದ್ರಗ್ರಹಕ್ಕೆ '2001- F032' ಎಂದು ನಾಮಕರಣ ಮಾಡಲಾಗಿತ್ತು. 2001ರಲ್ಲಿ ಇದೇ ಕ್ಷುದ್ರಗ್ರಹ ಭೂಮಿಗೆ ಸಮೀಪದಲ್ಲೇ ಅಂದರೆ ಮೆಕ್ಸಿಕೋ ದೇಶದ ಬಳಿ ಹಾದು ಹೋಗಿತ್ತು. ಈ ಬಾರಿ ಕೂಡ ಭೂಮಿಗೆ ಅತ್ಯಂತ ಸಮೀಪದಲ್ಲೇ ವಕ್ಕರಿಸಿ ಭಾರಿ ಆತಂಕ ಸೃಷ್ಟಿಸಿತ್ತು. ಕಳೆದ ಕೆಲವು ದಿನಗಳಿಂದ ವಿಜ್ಞಾನಿಗಳು ಇದೊಂದೇ ಆಲೋಚನೆಯಲ್ಲಿ ಮುಳುಗಿದ್ದರು. ಆದರೆ ಆತಂಕದ ಕಾರ್ಮೋಡ ಈಗ ದೂರವಾಗಿದೆ.

ವಿಜ್ಞಾನಿಗಳ ಪಾಲಿಗೆ ಮಹತ್ವದ ದಿನ..!
ಒಂದು ಕಡೆ ಆತಂಕ, ಮತ್ತೊಂದು ಕಡೆ ಕುತೂಹಲ. ಹೀಗೆ ಎರಡನ್ನೂ ಸೃಷ್ಟಿಸಿದೆ 2001- F032 ಕ್ಷುದ್ರಗ್ರಹ. ಭೂಮಿಗೆ ಸಮೀಪದಲ್ಲಿ ಕ್ಷುದ್ರಗ್ರಹ ಹಾದು ಹೋಗುವ ಹಿನ್ನೆಲೆಯಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಹಲವಾರು ಮಹತ್ವದ ಸಂಶೋಧನೆಗೆ ತಯಾರಿ ನಡೆಸಿದ್ದಾರೆ. ನಾಸಾ ವಿಜ್ಞಾನಿಗಳು ನಿದ್ದೆಯನ್ನೇ ಮರೆತು 2001- F032 ಕ್ಷುದ್ರಗ್ರಹ ಬರುವಿಕೆಗೆ ಕಾಯುತ್ತಿದ್ದಾರೆ. ಭೂಮಿಗೆ ಸಮೀಪದಲ್ಲಿ ಸಾಗುವ ಹಿನ್ನೆಲೆಯಲ್ಲಿ ಅದರ ರಚನೆ ಮತ್ತು ಭೂಮಿ ಮೇಲೆ ಕ್ಷುದ್ರಗ್ರಹಗಳ ನಿಖರ ಪರಿಣಾಮ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ಭವಿಷ್ಯದಲ್ಲಿ ಗಣಿಗಾರಿಕೆ ನಡೆಸಲು ಇದೇ ಕ್ಷುದ್ರಗ್ರಹಗಳನ್ನ ಬಳಸಿಕೊಳ್ಳಲು ಸಹಾಯಕವಾಗಲಿದೆ.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!
ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.

ಊಹೆಗೂ ನಿಲುಕದಷ್ಟು ಸಂಪತ್ತು..!
ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications