ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಕ್ ಫ್ರಂ ಹೋಮ್ ಮುಂದುವರಿಸಲು 75% ಉದ್ಯೋಗಿಗಳ ಒಲವು: ಸಮೀಕ್ಷೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಕೊರೊನಾ ವೈರಸ್ ಸೋಂಕು ದೇಶದೆಲ್ಲೆಡೆ ಹರಡುತ್ತಿದ್ದಂತೆಯೇ ಬಹುತೇಕ ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಿವೆ. ಕೆಲವು ಕಂಪೆನಿಗಳು ಈಗ ಕಚೇರಿಗಳನ್ನು ತೆರೆಯುತ್ತಿವೆ. ಕೆಲವು ಮಂದಿಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡುತ್ತಿವೆ. ಈ ಸೌಲಭ್ಯ ಬಳಸಿಕೊಂಡ ಬೇರೆ ಬೇರೆ ಊರಿನ ಜನರು ತಮ್ಮ ಮನೆಗಳಿಗೆ ತೆರಳಿ ಕುಟುಂಬದವರೊಂದಿಗೆ ಕಾಲ ಕಳೆಯುತ್ತಲೇ ಕೆಲಸ ಮಾಡುವ ಅಪೂರ್ವ ಅವಕಾಶ ಸಿಗುತ್ತಿದೆ. ಇದರಿಂದ ಹೆಚ್ಚಿನ ಜನರು ಈ ಆರೇಳು ತಿಂಗಳಿನಿಂದ ವರ್ಕ್ ಫ್ರಂ ಹೋಮ್ ಚಟುವಟಿಕೆಗೆ ಒಗ್ಗಿಕೊಂಡಿದ್ದಾರೆ.

ಕೊರೊನಾ ವೈರಸ್ ಪಿಡುಗು ನಿವಾರಣೆಯಾದ ಬಳಿಕವೂ ವರ್ಕ್ ಫ್ರಂ ಹೋಮ್ ಮುಂದುವರಿಸುವುದಕ್ಕೆ ಹೆಚ್ಚಿನ ಭಾರತೀಯರು ಆಸಕ್ತಿ ಹೊಂದಿದ್ದಾರೆ ಎಂದು ಕೈಗಾರಿಕಾ ಸಂಸ್ಥೆ ಅಸೋಚಾಮ್ ದೇಶದಾದ್ಯಂತ ನಡೆಸಿದ ಸಮೀಕ್ಷೆ ಹೇಳಿದೆ.

ಕೋವಿಡ್-19 ವಿಮೆ ರಕ್ಷಣೆಯಲ್ಲಿ ದಕ್ಷಿಣ ಭಾರತವೇ ಮುಂದುಕೋವಿಡ್-19 ವಿಮೆ ರಕ್ಷಣೆಯಲ್ಲಿ ದಕ್ಷಿಣ ಭಾರತವೇ ಮುಂದು

ಲಾಕ್‌ಡೌನ್ ಅವಧಿ ಮುಗಿದ ನಂತರವೂ ವರ್ಕ್ ಫ್ರಂ ಹೋಮ್ ವ್ಯವಸ್ಥೆಯಲ್ಲಿಯೇ ಮುಂದುವರಿಸಲು ಶೇ 74ರಷ್ಟು ಮಂದಿ ಬಯಸುತ್ತಿದ್ದಾರೆ ಎಂದು ದೇಶದ ಪ್ರಮುಖ ಎಂಟು ನಗರಗಳಲ್ಲಿ ಪ್ರೈಮಸ್ ಪಾರ್ಟ್ನರ್ಸ್ ನಡೆಸಿದ ಉದ್ಯಮ ವಲಯದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಮುಂದೆ ಓದಿ.

ಕಂಪೆನಿಗಳಿಗೆ ಹೆಚ್ಚು ಲಾಭ

ಕಂಪೆನಿಗಳಿಗೆ ಹೆಚ್ಚು ಲಾಭ

ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ ಮತ್ತು ಅಹ್ಮದಾಬಾದ್ ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ವರ್ಕ್ ಫ್ರಂ ಹೋಮ್ ಮಾಡಲು ಉದ್ಯೋಗಿಗಳಿಗೆ ಅವಕಾಶ ನೀಡುವುದರಿಂದ ಕಂಪೆನಿಗಳು ಹೆಚ್ಚಿನ ಪ್ರಯೋಜನಗಳನ್ನು ಕಂಡುಕೊಂಡಿವೆ ಎಂದು ಸಮೀಕ್ಷೆ ಹೇಳಿದೆ. ಸಾರಿಗೆ, ಕಚೇರಿ ಬಾಡಿಗೆ, ನಿರ್ವಹಣೆ ಮುಂತಾದ ವೆಚ್ಚಗಳಲ್ಲಿ ಕಡಿತವಾಗಿವೆ.

ಸಾರ್ವಜನಿಕ ಸಾರಿಗೆ ಬಳಸಲು ಭಯ

ಸಾರ್ವಜನಿಕ ಸಾರಿಗೆ ಬಳಸಲು ಭಯ

ಕೊರೊನಾ ವೈರಸ್ ಸಂಪೂರ್ಣವಾಗಿ ನಿವಾರಣೆಯಾದ ಬಳಿಕವೂ ವರ್ಕ್ ಫ್ರಂ ಹೋಮ್ ಮುಂದುವರಿಸಲು ಶೇ 74ರಷ್ಟು ಉದ್ಯೋಗಿಗಳು ಬಯಸಿದ್ದಾರೆ. ಇದಕ್ಕೆ ಸಾರ್ವಜನಿಕ ಸಾರಿಗೆ ಕುರಿತಾದ ವಿಶ್ವಾಸದ ಕೊರತೆ ಅತಿ ದೊಡ್ಡ ಕಾರಣ. ಕೆಲವು ರಾಜ್ಯಗಳಲ್ಲಿ ಬಸ್, ಮೆಟ್ರೋ ರೈಲುಗಳ ಸಂಚಾರ ಪುನರಾರಂಭವಾಗಿದ್ದರೂ ಅವುಗಳನ್ನು ಬಳಸುವುದು ಅಪಾಯಕಾರಿ ಎನ್ನುವುದು ಹೆಚ್ಚಿನವರ ಅಭಿಪ್ರಾಯ.

ಕೋವಿಡ್‌ನಿಂದ ಚೇತರಿಸಿಕೊಂಡ ಎಲ್ಲರಲ್ಲೂ ಜೀವರಕ್ಷಕ ಇರುವುದಿಲ್ಲ: ಸಮೀಕ್ಷೆಕೋವಿಡ್‌ನಿಂದ ಚೇತರಿಸಿಕೊಂಡ ಎಲ್ಲರಲ್ಲೂ ಜೀವರಕ್ಷಕ ಇರುವುದಿಲ್ಲ: ಸಮೀಕ್ಷೆ

ಸ್ವಂತ ವಾಹನ ಬಳಕೆಗೆ ಒಲವು

ಸ್ವಂತ ವಾಹನ ಬಳಕೆಗೆ ಒಲವು

ಮುಂದೆ ಕಚೇರಿಗೆ ಹೋಗಬೇಕಾದರೆ ತಮ್ಮ ಸ್ವಂತ ದ್ವಿಚಕ್ರ ವಾಹನ ಅಥವಾ ಕಾರ್ ಬಳಸುವುದಾಗಿ ಶೇ 73ರಷ್ಟು ಮಂದಿ ತಿಳಿಸಿದ್ದಾರೆ. ಶೇ 21ರಷ್ಟು ಮಂದಿ ಮಾತ್ರ ಸಾರ್ವಜನಿಕ ಸಾರಿಗೆ ಬಳಸುವುದನ್ನು ಮುಂದುವರಿಸಲು ಆಸಕ್ತಿ ಹೊಂದಿದ್ದಾರೆ. ಜುಲೈ 2020ರ ವೇಳೆಗೆ ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿದ್ದು, 1.97 ಲಕ್ಷ ಕಾರುಗಳ ಮಾರಾಟವಾಗಿರುವುದು ಇದಕ್ಕೆ ಸಾಕ್ಷಿ.

Recommended Video

ಹಿಂಗ್ ಮಾಡಿದ್ರೆ ಕಳೆದು ಹೋಗಿರೊ ಫೋನ್ ಸಿಗತ್ತೆ | Oneindia Kannada
ತಂತ್ರಜ್ಞಾನ ಸವಲತ್ತು, ಸವಾಲು

ತಂತ್ರಜ್ಞಾನ ಸವಲತ್ತು, ಸವಾಲು

'ತಂತ್ರಜ್ಞಾನವು ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಸುಲಭಗೊಳಿಸಿದೆ. ಇದು ಹೇಗೆ ಯಶಸ್ವಿಯಾಗುತ್ತಿದೆ ಎಂಬುದನ್ನು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ದೂರ ಊರುಗಳಿಂದ ಕೆಲಸ ಮಾಡುವುದು ಅದರದೇ ಅವಕಾಶಗಳ ಹಾಗೂ ಸವಾಲುಗಳನ್ನು ಹೊಂದಿರುತ್ತದೆ. ಈ ವ್ಯವಸ್ಥೆಗೆ ನಾವು ಬೇಗನೆ ಹೊಂದಿಕೊಳ್ಳಬೇಕಿದೆ' ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಹೇಳಿದ್ದಾರೆ.

English summary
ASSOCHAM Survey said 74% of emoloyees across 8 Indian cities want to continue Work From Home after coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X