Arvind Limbavali: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ವ್ಯಕ್ತಿಚಿತ್ರ
ಅರವಿಂದ ಲಿಂಬಾವಳಿ ಅವರ ರಾಜಕೀಯದ ಹಾದಿ ಬಗ್ಗೆ ತಿಳಿಯೋಣ ಬನ್ನಿ. ಇಲ್ಲಿದೆ ವಿವರ ಗಮನಿಸಿ.
ಬೆಂಗಳೂರು, ಮಾರ್ಚ್, 06: ಅರವಿಂದ ಲಿಂಬಾವಳಿ ಅವರು ಬಿಜೆಪಿ ಸರ್ಕಾರದಲ್ಲಿ 4 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕರ್ನಾಟಕ ವಿಧಾನಸಭೆ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. 2008 ರಿಂದ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನವನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಹಾಗೆಯೇ ಹಲವು ವಿವಾದಗಳಿಗೆ ಒಳಗಾಗುತ್ತಲೇ ಬಂದಿದ್ದಾರೆ. ಹಾಗಾದರೆ ಅವರ ರಾಜಕೀಯದ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.
ಅರವಿಂದ ಲಿಂಬಾವಳಿಯವರು ಫೆಬ್ರವರಿ 01, 1967ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದರು. ಇವರ ತಂದೆ ವೆಂಕಟರಾವ್ ಲಿಂಬಾವಳಿ ಮತ್ತು ಭೀಮಾಬಾಯಿ ತಾಯಿಯಾಗಿದ್ದಾರೆ. ಹಾಗೆಯೇ ಮಂಜುಳಾ ಲಿಂಬಾವಳಿಯವರು ಅವರವಿಂದ ಲಿಂಬಾವಳಿಯವರ ಪತ್ನಿಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದಾರೆ.

ಲಿಂಬಾವಳಿಯ ರಾಜಕೀಯ ಹಾದಿ
ಅರವಿಂದ ಲಿಂಬಾವಳಿ ಅವರು ತಮ್ಮ ಜೀವನದ ಆರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ಗೆ ಸೇರಿದರು. 35 ವರ್ಷಗಳಿಂದ ಆರ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ನಂತರ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)ಯ ಸದಸ್ಯರಾಗಿ ಸೇರಿಕೊಂಡರು. 1992-1995ರವೆಗೆ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಇವರು ಕ್ಯಾಂಪಸ್ ಉಳಿಸಿ ಎನ್ನುವ ಅಭಿಯಾನವನ್ನು ಮಾಡಿದರು. ಹಾಗೆಯೇ "ಕಾಶ್ಮೀರ ಚಲೋ" ಆಂದೋಲನದಲ್ಲಿ ಕೆಲಸ ಮಾಡಿದ್ದಾರೆ. ನಂತರ ಶ್ರೀನಗರದಲ್ಲಿ ನಡೆದ ಧ್ವಜಾರೋಹಣಕ್ಕೆ ಆಯ್ಕೆಯಾದ ಐವರು ನಾಯಕರಲ್ಲಿ ಇವರು ಕೂಡ ಒಬ್ಬರಾಗಿದ್ದರು.
ಭಾರತದಲ್ಲಿನ ನಿಯಮಾವಳಿಗಳ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನೋಟರಿಯವರ ಮುಂದೆ ಪ್ರಮಾಣ ವಚನ ಸ್ವೀಕರಿಸಿದ ಅಫಿಡವಿಟ್ ರೂಪದಲ್ಲಿ ತಮ್ಮ ಆಸ್ತಿಯನ್ನು ಘೋಷಿಸಬೇಕಾಗುತ್ತದೆ. ಕೆಲವು ವರ್ಷಗಳ ಅವಧಿಯಲ್ಲಿ ಅರವಿಂದ ಲಿಂಬಾವಳಿಯವರ ಆಸ್ತಿಗಯಲ್ಲಿ ತುಂಬಾ ಬೆಳವಣಿಗೆ ಆದವು.

ವಿವಾದಗಳಿಗೆ ಸಿಲುಕಿದ ಶಾಸಕ
ಅರವಿಂದ ಲಿಂಬಾವಳಿ ಅವರು 2013ರ ಚುನಾವಣೆಯಲ್ಲಿ ಮಹದೇವಪುರ (174) ಕ್ಷೇತ್ರದಿಂದ 11,0244 ಮತಗಳಳನ್ನು ಪಡೆಯುವ ಮೂಲಕ ಗೆಲುವು ಸಾಧಸಿದರು. ಎ.ಸಿ. ಕಾಂಗ್ರೆಸ್‌ನ ಶ್ರೀನಿವಾಸ್ ಅವರನ್ನು 6149 ಮತಗಳಿಂದ ಸೋಲಿಸುವ ಮೂಲಕ ವಿಧಾನಸಭೆಗೆ ಆಯ್ಕೆಯಾದರು. ಇನ್ನು 2018 ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಿಂದ ಮರುಆಯ್ಕೆಯಾದರು.
ಹಣದ ಲಾಭಕ್ಕಾಗಿ ಖಾಸಗಿ ಬಿಲ್ಡರ್‌ಗೆ ಅನುಕೂಲ ಮಾಡಿಕೊಡಲು ನಿಯಮಗಳನ್ನು ಉಲ್ಲಂಘಿಸಿದ್ದರು. ಈ ಆರೋಪದ ಮೇಲೆ ಅರವಿಂದ ಲಿಂಬಾವಳಿ ಮತ್ತು ಇತರ 10 ಜನರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು. 2009ರಲ್ಲಿ ಶಿಕ್ಷಣ ಸಚಿವರಾಗಿಯೂ ಕಾರ್ಯನಿರ್ವಹಿಸಿದರು.
ಉದ್ಯಮಿಯೊಬ್ಬರ ಆತ್ಮಹತ್ಯೆ
ಇನ್ನು ಜನವರಿ 2023ರಲ್ಲಿ ಉದ್ಯಮಿಯೊಬ್ಬರು ತಮ್ಮ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳಲ್ಲಿ ಒಬ್ಬರೆಂದು ಅರವಿಂದ ಲಿಂಬಾವಳಿಯನ್ನು ಹೆಸರಿಸುವ ಮೂಲಕ ಆತ್ಮಹತ್ಯೆ ಮಾಡಿಕೊಂಡರು. ಆಗ ಪೊಲೀಸರು ಅರವಿಂದ ಲಿಂಬಾವಳಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ನಂತರ ವಿರೋಧ ಪಕ್ಷಗಳು ಅವರ ಬಂಧನಕ್ಕೆ ಕರೆ ನೀಡಿದ್ದವು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯನ್ನೂ ಸಹ ಕೇಳಲಾಯಿತು.












Click it and Unblock the Notifications