ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಬಾರಿ ಶಾಸಕರಾಗಿ, 3 ಬಾರಿ ಮಂತ್ರಿಯಾದ ಆನಂದ್ ಸಿಂಗ್ ಪರಿಚಯ

By ಭೀಮರಾಜ.ಯು. ವಿಜಯನಗರ
|
Google Oneindia Kannada News

ವಿಜಯನಗರ (ಹೊಸಪೇಟೆ) ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟವನ್ನು ಸೇರಿದ್ದಾರೆ. ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ಸಹ ಅನಂದ್ ಸಿಂಗ್ ಸಚಿವರಾಗಿದ್ದರು. ವಿಜಯನಗರ ಜಿಲ್ಲೆ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಅವರು ಮತ್ತೊಮ್ಮೆ ಸಚಿವರಾಗಿದ್ದಾರೆ.

ಆನಂದ್ ಸಿಂಗ್ ಯಾವ ಫಲಪೇಕ್ಷಗಳಿಲ್ಲದೆ ಬಸ್ ಉದ್ಯಮಿಯಾಗಿ ನೂರಾರು ಜನರಿಗೆ ಹೃದಯ, ಕಣ್ಣು ಇತರೆ ಶಸ್ತ್ರ ಚಿಕಿತ್ಸೆಗಳಿಗೆ ಸಹಾಯ ಮಾಡುತ್ತಿದ್ದರು. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬರಬೇಕಾಯಿತು. ಈಗ ಸಚಿವರಾಗುವ ಅವಕಾಶ ಸಿಕ್ಕಿದೆ.

ಆನಂದ್ ಸಿಂಗ್‌ರನ್ನು ಡಿಸಿಎಂ ಮಾಡುವಂತೆ ಅಭಿಮಾನಿಗಳ ಕ್ಯಾಂಪೇನ್ಆನಂದ್ ಸಿಂಗ್‌ರನ್ನು ಡಿಸಿಎಂ ಮಾಡುವಂತೆ ಅಭಿಮಾನಿಗಳ ಕ್ಯಾಂಪೇನ್

ಅದು ಒಂದು ಕಾಲಘಟ್ಟ ರೆಡ್ಡಿ ಬ್ರದರ್ಸ್ ಅಂದರೇ ಇಡೀ ರಾಜ್ಯವೇ ಬಳ್ಳಾರಿಯತ್ತ ಮುಖ ಮಾಡಿ ನೋಡುವಂತಹ ಕಾಲವಾಗಿತ್ತು. ರೆಡ್ಡಿಯವರ ವರ್ಚಸ್ಸು ಸರ್ಕಾರವನ್ನೇ ಅಲುಗಾಡಿಸುವಂತಹದ್ದು. ಆ ದಿನಗಳು ಹಾಗಿತ್ತು. ಆನಂದ್ ಸಿಂಗ್ ಸಮಾರು ವರ್ಷಗಳಿಂದ ಜನರ ಸೇವೆ ಮಾಡುತ್ತಿರುವುದನ್ನು ರೆಡ್ಡಿ ಬ್ರದರ್ಸ್ ಗಮನಿಸಿದ್ದರು. ಖುದ್ಧಾಗಿ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಮನೆ ಬಾಗಿಲಿಗೆ ಬಂದು ಆನಂದ್‌ ಸಿಂಗ್‌ರನ್ನು ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿದ್ದರು. ಆನಂದ್ ಸಿಂಗ್ ಕೆಲವು ಕಾಲ ಸಮಯ ತೆಗೆದುಕೊಂಡು ತದನಂತರ ಒಪ್ಪಿದ್ದರು. 2008ರಲ್ಲಿ ಮೊದಲ ಬಾರಿಗೆ ವಿಧಾಸಭೆಗೆ ಪ್ರವೇಶ ಮಾಡಿದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಂದೆ ನಿಧನ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಂದೆ ನಿಧನ

Anand Singh Biography: Age, Education, Family, Political Career, Assets And Net Worth

ಬಸ್ ಉದ್ಯಮಿ; ಆನಂದ್ ಸಿಂಗ್ ಮೂಲತಃ ಬಸ್ ಉದ್ಯಮಿಯಾಗಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿದರು. ತಮ್ಮ ತಂದೆಯವರ ಮೈನಿಂಗ್ ಇದ್ದರು ಅತ್ತಕಡೆ ಹೋಗದೇ ಸ್ವಂತ ಉದ್ಯಮಿಯಾಗಬೇಕೆಂದು ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳದ್ಯಾಂತ ಬಸ್‌ಗಳನ್ನು ಓಡಿಸಿದರು. ನಂತರ ತಂದೆ ಪೃಥ್ವಿರಾಜ್ ಸಿಂಗ್ ವಯಸ್ಸಾಗಿದ್ದಕ್ಕೆ ಗಣಿ ಉದ್ಯಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು.

ವಿಜಯನಗರ; ಬಾಯಿ ಬಡಿದು ಕೊಂಡ್ರು ಬಾಯಿ ತುಂಬಾ ನೀರು ಸಿಗಲ್ಲ! ವಿಜಯನಗರ; ಬಾಯಿ ಬಡಿದು ಕೊಂಡ್ರು ಬಾಯಿ ತುಂಬಾ ನೀರು ಸಿಗಲ್ಲ!

ಸಮಾಜ ಸೇವೆ; ಮೊದಲು ಉದ್ಯಮಿಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹೊಸಪೇಟೆ ನಗರದ್ಯಾಂತ ಉಚಿತವಾಗಿ ಪ್ರತಿ ವಾರ್ಡಗಳಿಗೆ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಪೂರೈಕೆ ಮಾಡುತ್ತಿದ್ದರು. ರಾಜ್ಯದ ಯಾವ ಮೂಲೆಯಲ್ಲಿಯೂ ಶಸ್ತ್ರ ಚಿಕಿತ್ಸೆ ಮಾಡಿದರೆ ಕಣ್ಣು ಬರುತ್ತವೆ ಎಂದು ತಿಳಿದರೆ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದರು. ತಮ್ಮ ವೈಯಕ್ತಿಕ ಹಣದಿಂದ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದಾರೆ. ನಾರಾಯಣ ಹೃದಲಾಯದಲ್ಲಿ ಹೃದಯ ಚಿಕಿತ್ಸೆಯನ್ನು ನೂರಾರು ಜನರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.

ಆನಂದ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸೇರುವುದರ ಮೂಲಕ ಮೂರನೇ ಬಾರಿಗೆ ಸಚಿವರಾಗಿದ್ದಾರೆ. ಅವಿಭಜಿತ ಬಳ್ಳಾರಿ ಜಿಲ್ಲೆಯ ನೂತನ ವಿಜಯನಗರ ಜಿಲ್ಲೆಗೆ ಸಚಿವನಾಗುವ ಮೂಲಕ ಪ್ರಾಬಲ್ಯವನ್ನು ಪಡೆದಿದ್ದಾರೆ.

ಆನಂದ್ ಸಿಂಗ್ ಕಾರಣ; ವಿಜಯನಗರ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ಆದರೆ ಬದಲಾದ ರಾಜಕಾರಣದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೊದಲು ರಾಜೀನಾಮೆ ನೀಡಿದ್ದು ಆನಂದ್ ಸಿಂಗ್. ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ಕೊಟ್ಟರು.

ರೆಸಾರ್ಟ್ ರಾಜಕೀಯ; ಜೆಡಿಎಸ್-ಕಾಂಗ್ರೆಸ್ ಸರ್ಕಾರವಿದ್ದಾಗ ರಾಜೀನಾಮೆ ನೀಡಿದ ಶಾಸಕರು ಮುಂಬೈ ಹೋಟೆಲ್‌ನಲ್ಲಿದ್ದರು. ಆದರೆ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರಕ್ಕೆ ಮರಳಿದರು. ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2019ರ ನವೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಆನಂದ್ ಸಿಂಗ್ ಪುನಃ ಗೆದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಲ್ಲಿ ಮೊದಲಿಗರಾಗಿದ್ದರಿಂದ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿತು.

4 ಬಾರಿ ಶಾಸಕರಾಗಿರುವ ಆನಂದ್ ಸಿಂಗ್ 3 ಬಾರಿ ಸಚಿವರಾಗಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಕೆಲಸ ಮಾಡಿದ್ದರು. ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರಾದರು. ನಂತರ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ಧಿ, ಹಜ್ ಖಾತೆ ಸಚಿವರಾದರು. ಯಡಿಯೂರಪ್ಪ ಸಂಪುಟದಲ್ಲಿ ಆನಂದ್ ಸಿಂಗ್ ಖಾತೆಗಳನ್ನು ಮೂರು ಸಲ ಬದಲಿಸಲಾಯಿತು.

ವಿಜಯನಗರ ಜಿಲ್ಲೆ ಕನಸು; ಆನಂದ್ ಸಿಂಗ್ ತಮ್ಮ ಅನೇಕ ಭಾಷಣಗಳಲ್ಲಿ ಅಧಿಕಾರ ಶಾಶ್ವತವಲ್ಲ ಜನರ ಪ್ರೀತಿ ವಿಶ್ವಾಸ ಮುಖ್ಯ ಮತ್ತು ನಾವು ಮಾಡಿದ ಕೆಲಸ ಮುಖ್ಯ ಎಂದು ಹೇಳಿದ್ದಾರೆ. ವಿಜಯನಗರ ಜಿಲ್ಲೆ ಮಾಡುವುದು ಅವರ ಪ್ರಮುಖ ಉದ್ದೇಶವಾಗಿತ್ತು. ಈಗ ಪುನಃ ಸಚಿವರಾಗಿರುವುದರಿಂದ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ.

ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇತರೆ ಪ್ರಮುಖ ಇಲಾಖೆಗಳಿಗೆ ಅಧಿಕಾರಿಗಳ ನೇಮಕ ಪ್ರಕ್ರಿಯೆ ಬಹಳ ತಿಂಗಳಿಂದ ನನೆಗುದಿಗೆ ಬಿದ್ದಿದೆ. ಅನುದಾನವೂ ಬಿಡುಗಡೆಯಾಗಿಲ್ಲ. ಈಗ ಆನಂದ್ ಸಿಂಗ್ ಸಚಿವರಾಗಿದ್ದರಿಂದ ಇದಕ್ಕೆ ಇನ್ನಷ್ಟು ವೇಗ ಸಿಗಬಹುದು.

ವೈಯಕ್ತಿಕ ಮಾಹಿತಿ; ಆನಂದ್ ಸಿಂಗ್ ದಿ. ಬಿ. ಎಸ್. ಪೃಥ್ವಿರಾಜ್‌ ಸಿಂಗ್ ಹಾಗೂ ಸುನಿತಾ ಬಾಯಿ ಪುತ್ರ. 3/10/1966ರಲ್ಲಿ ಶಂಕರ ಸಿಂಗ್ ಕ್ಯಾಂಪ್, ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿ ಜನನ. ಆನಂದ್​ ಸಿಂಗ್​ ಪತ್ನಿ ಲಕ್ಷ್ಮೀ ಸಿಂಗ್. ವೈಷ್ಣವಿ, ಯಶಸ್ವಿನಿ, ಸಿದ್ಧಾರ್ಥ್ ಸಿಂಗ್ ಮಕ್ಕಳು.

English summary
Vijayanagara (Hospet) BJP MLA Anand Singh joined Karnataka chief minister Basavaraj Bommai cabinet on August 4, 2021. Here are the profile of Anand Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X