• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಶ್ಮೀರಿ ಅಮ್ಮಂದಿರಿಗೆ ಪತ್ರ : ನಿಮ್ಮ ಮಗ ಬೀದಿ ಹೆಣವಾಗುವುದು ಬೇಕಾ?

By ಇರ್ಫಾನ್. ಹ., ಮಡಿಕೇರಿ
|

ಅಸ್ಸಲಾಂ ಅಲೈಕುಂ....

ನನ್ನ ಹೆಸರು ಇರ್ಫಾನ್ ಅಂತ. ದಕ್ಷಿಣದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗಿನವನು... ಕೊಡಗು ಅಂದರೆ ನಿಮಗೆ ನೆನಪಾಗಿರಬಹುದು, ಭಾರತೀಯ ಸೇನೆಯಲ್ಲಿ ಸೇವೆ ಮಾಡಿದ, ಮಾಡುತ್ತಿರುವ ಅನೇಕ ವೀರಯೋಧರ ಜನ್ಮನಾಡು.. ನಮ್ಮ ನಾಡಿನ ಮಹಿಳೆಯರು ವೀರಯೋಧರಿಗೆ ಜನ್ಮ ನೀಡಿದರೆ, ನಿಮ್ಮಲ್ಲಿ (ಕಾಶ್ಮೀರದಲ್ಲಿ) ಅನೇಕ ಮಹಿಳೆಯರು ಭಯೋತ್ಪಾದಕರಿಗೆ ಜನ್ಮ ನೀಡಿದ್ದಾರೆ. ಆದರಿಂದಲೇ ನೇರವಾಗಿ ನಿಮನ್ನು ಉದ್ದೇಶಿಸಿ ಈ ಪತ್ರವನ್ನು ಬರೆಯುತ್ತಿದ್ದೇನೆ.. ಪುರುಸೊತ್ತು ಮಾಡಿಕೊಂಡು ಈ ಪತ್ರ ಓದಿ.. ನೇರವಾಗಿ ವಿಷಯಕ್ಕೆ ಬರುತ್ತೇನೆ...

ಅದ್ಯಾಕೆ ನಿಮ್ಮ ಮಕ್ಕಳಿಗೆ ನಮ್ಮ ಮೇಲೆ ಈ ಪರಿ ಸಿಟ್ಟು? ಈ ಮಣ್ಣಿನಲ್ಲಿ ಜನಿಸಿ ಈ ಮಣ್ಣಿನ ಎಲ್ಲಾ ಸವಲತ್ತುಗಳನ್ನು ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆಯುವಂತಹ ಸ್ವಭಾವ ಯಾಕೆ? ಭಾರತೀಯರು ಮತ್ತು ಭಾರತ ಸರ್ಕಾರ ನಿಮಗೆ ಏನು ಕೊರತೆ ಮಾಡಿದೆ? ನೀವು ಇರುವ ಜಾಗ, ನೀವು, ಎಲ್ಲವೂ ಈ ದೇಶದ ಅವಿಭಾಜ್ಯ ಅಂಗವಾದ ಕಾರಣದಿಂದಲೇ ನಿಮಗಾಗಿ ಸರ್ಕಾರ ಅಷ್ಟೊಂದು ಮುತುವರ್ಜಿಯಿಂದ ಅನೇಕ ಕಾರ್ಯಕ್ರಮಗಳನ್ನು ನೀಡಿರುವುದು. ಆದರೂ ನಿಮಗ್ಯಾಕೆ ಶತ್ರು ರಾಷ್ಟ್ರವಾದ ಪಾಕಿಸ್ತಾನದ ಮೇಲೆ ಒಲವು?

ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ

ಅವರೇನು ಮುಸ್ಲಿಂ ಅಂತನೋ, ಇಸ್ಲಾಂ ಧರ್ಮದ ಅನುಯಾಯಿಗಳು ಅಂತನೋ? ಹಾಗಾದರೆ ಕೇಳು ಈ ಭವ್ಯ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಪಾಕಿಸ್ತಾನಕ್ಕಿಂತಲೂ ಅಧಿಕವಿದೆ... ಆದರೆ ನಾವ್ಯಾರು ನಿಮ್ಮ ಮಕ್ಕಳಂತೆ ದೇಶದ್ರೋಹಿ ಕೆಲಸ ಮಾಡುತ್ತಿಲ್ಲವಲ್ಲ..

ಆ ಪಾಪಿಗಳು ನಿಮಗೆ ಕೊಟ್ಟಿದಾದರೂ ಏನು?

ಆ ಪಾಪಿಗಳು ನಿಮಗೆ ಕೊಟ್ಟಿದಾದರೂ ಏನು?

ಆ ಪಾಪಿಗಳು ನಿಮಗೆ ಕೊಟ್ಟಿದಾದರೂ ಏನು? ಧರ್ಮದ ಅಫೀಮು ತಲೆಯಲ್ಲಿ ತುಂಬಿ, ಅವರನ್ನು ಭಯೋತ್ಪಾದಕರಾಗಿ ಮಾಡಿ, ಈ ದೇಶಕ್ಕೆ ಇಡೀ ಮಾನವ ಕುಲಕ್ಕೆ ಕಂಟಕವಾಗುವಂತೆ ಮಾಡಿ, ದೇಶದ್ರೋಹಿ ಎಂಬ ಪಟ್ಟ ಕಟ್ಟಿ, ನಮ್ಮ ವೀರಯೋಧರ ಗುಂಡಿಗೆ ಬಲಿಯಾಗಿ ಚಟ್ಟ ಕಟ್ಟಿ.. ಸ್ವರ್ಗದ ಆಸೆಯಿಂದ ದುಷ್ಕೃತ್ಯಗಳನ್ನು ಮಾಡಿ, ಭೂಮಿಯ ಮೇಲಿನ ಸ್ವರ್ಗದಂತಹ ಈ ಭಾರತ ದೇಶವನ್ನು ಹಾಳು ಮಾಡಲು ನೋಡಿ, ಸ್ವತಃ ನರಕಕ್ಕೆ ಆಹ್ವಾನ ನೀಡುವಂತೆ ಪ್ರೇರಣೆ ನೀಡುವ ಪಾಪಿಸ್ತಾನದ ಬಗ್ಗೆ ನಿಮಗೆ ಯಾಕೆ ಅಷ್ಟು ಮೃದು ಧೋರಣೆ...?

ನಿಮ್ಮ ಮಕ್ಕಳ ಕ್ರೂರ ಕೃತ್ಯಗಳಿಗೆ ಬಲಿಯಾಗಿ ಹುತಾತ್ಮರಾದ ವೀರಯೋಧರ ಮಡದಿಯ ಕುಂಕುಮ ಅಳಿದ ಆ ನೆತ್ತಿಯನ್ನು, ತಂದೆಯ ಪ್ರೀತಿಯಿಂದ ವಂಚಿತರಾದ ಆ ಮುಗ್ಧ ಮಕ್ಕಳ ಮುಖವನ್ನು, ಪ್ರೀತಿಯ ಮಗನ ಸಾವಿನಿಂದ ಕಂಗೆಟ್ಟ ಪೋಷಕರ, ಅವರ ಸಹೋದರ ಸಹೋದರಿಯರ ಅಳಲನ್ನು ಕೇಳಿದ್ದೀರಾ, ನೋಡಿದ್ದೀರಾ? ಅವರೆಲ್ಲರ ಹಿಡಿಶಾಪ ಇಡೀ ಭಾರತೀಯ ಪ್ರಜೆಗಳ ಕೋಪ ನಿಮಗೆ ಬೇಕಾ?

ಅಮ್ಮ, ನೀವು ಮಾಡುವ ಮೊದಲ ತಪ್ಪು

ಅಮ್ಮ, ನೀವು ಮಾಡುವ ಮೊದಲ ತಪ್ಪು

ಅಮ್ಮಾ.. ತಾಯಿ ನೀವು ಮಾಡುವ ಮೊದಲ ತಪ್ಪು ಏನೆಂದರೆ, ನಿಮ್ಮ ಮಕ್ಕಳು ಸಣ್ಣವರಿರುವಾಗಲೇ ಅವರಿಗೆ ಬುರ್ಹಾನ್ ವಾಣಿ, ಅಫ್ಜಲ್ ಗುರು, ಸಮೀರ್ ಭಟ್, ಅಬು ಖಾಸಿಂ, ರೌಪ್ ಅಹ್ಮದ್ ರಂತಹ ದೇಶದ್ರೋಹಿಗಳ ರಕ್ತ ಪಿಪಾಸುಗಳ ಕಥೆಯನ್ನು, ಅವರೇನೋ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾರೇನೋ ಅಂದುಕೊಂಡು ಎಳೆಯ ಪ್ರಾಯದ ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿಯಲ್ಲಾ.. ನಿಮ್ಮ ಕಣ್ಣಿನ ಪರದೆ ಸರಿಸಿ ಒಂದು ಸಲವಾದರೂ ನೋಡಿದ್ದೀರಾ?

ಪುಲ್ವಾಮಾ ದಾಳಿ ಪಿತೂರಿ ನಡೆದಿದ್ದು ಮಾರ್ಚ್ ನಲ್ಲಿ! RDX ಸಾಗಿಸಿದ್ದು ಸಿಲಿಂಡರ್ ನಲ್ಲಿ!

ಕಾಶ್ಮೀರದ ಈ ಪುತ್ರರ ಬಗ್ಗೆ ಹೆಮ್ಮೆ ಇಲ್ಲವೆ?

ಕಾಶ್ಮೀರದ ಈ ಪುತ್ರರ ಬಗ್ಗೆ ಹೆಮ್ಮೆ ಇಲ್ಲವೆ?

ನಿಮ್ಮದೇ ನೆಲದಲ್ಲಿ ಹುಟ್ಟಿದ ಭಾರತವನ್ನು ಪ್ರೀತಿಸುವ, ಕಾಶ್ಮೀರದ ಹೆಮ್ಮೆ, ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ವೀರ ಸೇನಾನಿ ಜನರಲ್ ಸೈಯದ್ ಅತಾ ಹಸನೈನ್, ಪರಮ ವೀರ ಚಕ್ರ ಪಡೆದ ಲ್ಯಾನ್ಸ್ ನಾಯಕ್ ನಾಸಿರ್ ವಾಣಿ, ಮೇಜರ್ ನಾಯಕ್, ಅಥವಾ ತನ್ನ 21ನೇ ವಯಸ್ಸಿನಲ್ಲಿಯೇ ಈ ದೇಶಕ್ಕಾಗಿ ಹುತಾತ್ಮನಾದ ಲೆಫ್ಟಿನೆಂಟ್ ಉಮ್ಮರ್ ಪಯಾಝ್ ಎಂಬ ವೀರನ ಕೆಚ್ಚದೆಯ ಕಥೆ ನಿಮ್ಮ ಮಕ್ಕಳಿಗೆ ಹೇಳಿ.

ಉಮ್ಮರ್ ಫಯಾಜ್ ತಾಯಿ ಕೂಡಾ ನಿಮ್ಮಂತೆ ಕಾಶ್ಮೀರಿ. ಆದರೆ ಅವರು ಅವನನ್ನು ದೇಶಪ್ರೇಮಿ ಮಾಡಿದರು. ಅವನು ದೇಶಕ್ಕಾಗಿ ಹುತಾತ್ಮನಾದಾಗ ಈ ದೇಶವೇ ಕಂಬನಿ ಮಿಡಿದು ಅವನಿಗೆ ತ್ರಿವರ್ಣ ಧ್ವಜ ಹೊದಿಸಿ, ಕುಶಾಲತೋಪು ಸಿಡಿಸಿ ಅತ್ಯುನ್ನತ ಗೌರವ ನೀಡಿದ ವಿಷಯ ನಿಮಗೆ ಗೊತ್ತಾ? ಎಷ್ಟೋ ವೀರಶೂರರ ಮೈ ನವಿರೇಳಿಸುವ ಕಥೆಗಳು ಇದೆ ಆದರೆ ನಿಮಗೆ ಅರ್ಥ ಆಗಲಿ ಎಂದು ನಿಮ್ಮದೇ ಮಣ್ಣಿನ ಮಕ್ಕಳ ಕಥೆ ಹೇಳಿರುವೆ... ಇದೆಲ್ಲಾ ಬಿಟ್ಟು ತಾಯಿಯಾದ ನೀವು ನಿಮ್ಮ ಮಕ್ಕಳನ್ನು ಯಾಕೆ ದೇಶದ್ರೋಹಿಗಳು ಆಗುವಂತೆ ಬೆಳೆಸುತ್ತಿರುವೆ? ಆದರಿಂದ ನಿಮಗೇನು ಸಿಕ್ಕಿದೆ? ದೇಶದ್ರೋಹಿಯ ತಾಯಿಯೆಂಬ ಹಣೆಪಟ್ಟಿ ಹೊತ್ತು ಹೇಗೆ ಬದುಕುತ್ತಿರುವೆ?

ಗುಜರಾತ್ ನಲ್ಲಿ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ

ಕಾಶ್ಮೀರಿ ಯುವಕರಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ

ಕಾಶ್ಮೀರಿ ಯುವಕರಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ

ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದರೆ

ಅವರ ವಿದ್ಯಾರ್ಹತೆಗೆ ತಕ್ಕಂತೆ ಭಾರತದ ಯಾವ ಮೂಲೆಯಲ್ಲಿಯಾದರೂ ಒಳ್ಳೆಯ ಕೆಲಸ ಸಿಗುತ್ತದೆ. ಓದು ಬರಹ ಮೈಗೆ ಹತ್ತಿಲ್ಲ ಅಂದರೆ ಬೇಡ ಬಿಡು.. ಮೈ ಮುರಿದು ದುಡಿಯುವುದಾದರೆ ಎಷ್ಟೆಲ್ಲಾ ಕೆಲಸಗಳಿವೆ... ಮನೆಯಲ್ಲಿ ನಿಮ್ಮ ಜೊತೆಯಲ್ಲಿಯೇ ಇದ್ದು ಚಳಿಗಾಲದ ಉಡುಪುಗಳಾದ ಉಣ್ಣೆಯ ಬಟ್ಟೆ ತಯಾರಿಸಿ ಮಾರಬಹುದು.. ವಿಶ್ವ ಪ್ರಸಿದ್ಧ ದಾಲ್ ಸರೋವರದಲ್ಲಿ ದೋಣಿಯಲ್ಲಿ ಹೂ ಹಣ್ಣು ತರಕಾರಿ ಮಾರುವುದು.. ಟೀ ಮಾರುವುದು ಅಥವಾ ಝೇಲಂ, ರಾವಿ, ನದಿಯಲ್ಲಿ ಮೀನು ಹಿಡಿದು ಅದನ್ನು ಮಾರಿ ಬದುಕುವುದು.. ನೀರ್ಗಲ್ಲಿನ ಮೇಲೆ ಸ್ಕೀಯಿಂಗ್ ಮಾಡುವವರಿಗೆ, ಸ್ಕೇಟಿಂಗ್, ರಿವರ್ ರಾಫ್ಟಿಂಗ್, ಹಿಮಪರ್ವತದ ಮೇಲೆ ಚಾರಣ ಮಾಡುವವರಿಗೆ ಮಾರ್ಗದರ್ಶನ ತರಬೇತಿ ನೀಡುವುದು.. ಅದು ಆಗಿಲ್ಲ ಅಂದರೆ ಕನಿಷ್ಠ ಪಕ್ಷ ಅಮರನಾಥ ಯಾತ್ರೆ ಮಾಡುವ ಭಕ್ತಾದಿಗಳಿಗೆ ಪ್ರಯಾಣದಲ್ಲಿ ನೆರವಾಗುವ ನಿಟ್ಟಿನಲ್ಲಿ ಒಂದೆರಡು ಕತ್ತೆಗಳನ್ನು ಸಾಕಿಯಾದರೂ ಜೀವನ ನಿರ್ವಹಣೆ ಮಾಡಬಹುದು.. ಅಲ್ವಾ?

ಕ್ಷೋಭೆ ಮಾಡುವವರಿಗೆ ಅಲ್ಲಾಹನ ಶಾಪ

ಕ್ಷೋಭೆ ಮಾಡುವವರಿಗೆ ಅಲ್ಲಾಹನ ಶಾಪ

ಜೀವನೋಪಾಯಕ್ಕಾಗಿ ಇಷ್ಟೆಲ್ಲಾ ಮಾರ್ಗ ಇದ್ದರೂ

"ಒಂದು ಜೀವವನ್ನು ವಧಿಸಿದರೆ ಇಡೀ ಮನುಕುಲವನ್ನು ವಧಿಸಿದಂತೆ. ಒಂದು ಜೀವವನ್ನು ಉಳಿಸಿದರೆ ಇಡೀ ಮನುಕುಲವನ್ನು ಉಳಿಸಿದಂತೆ." ಈ ಭೂಮಿಯಲ್ಲಿ ಕ್ಷೋಭೆಯನ್ನು ಉಂಟು ಮಾಡುವವರಿಗೆ ಆ ಅಲ್ಲಾಹನ ಶಾಪವಿದೆ ಖಂಡಿತವಾಗಿಯೂ ಅವರು ನರಕದ ಜ್ವಾಲಾಗ್ನಿಯಲ್ಲಿ ಬೇಯಲಿದ್ದಾರೆ" ಎಂಬ ಕುರಾನ್ ವಚನಗಳು ಮತ್ತು ಕುರಾನ್ ನ ನಿಜವಾದ ಆಶಯಗಳನ್ನು ಗಾಳಿಗೆ ತೂರಿ ಪಾಪಿಸ್ತಾನದ ಪಾಪಿಗಳು ನಿಮ್ಮ ಮೆದುಳಿನಲ್ಲಿ ತುಂಬಿಸಿರುವ ಧರ್ಮದ ಅಫೀಮು ತುಂಬಿಸಿಕೊಂಡು.. ಪಾಕಿಸ್ತಾನವೆಂಬ ವಿಷಸರ್ಪಕ್ಕೆ ಹಾಲುಣಿಸಿ ಅದು ನಿಮ್ಮ ಮೇಲೆಯೇ ವಿಷ ಕಕ್ಕುವಂತೆ ಮಾಡಿದ್ದೀರ. ಕಾಶ್ಮೀರದ ಕಣಿವೆ ತುಂಬಾ ವಿಷ ಉಸಿರುಗಟ್ಟಿದ ವಾತಾವರಣ ನಿರ್ಮಾಣ ಮಾಡಿದ್ದೀರ.

ಸ್ಫೋಟಕ್ಕೆ ಉಗ್ರರು ಬಳಸುತ್ತಿರುವ ಹೊಸ ಟೆಕ್ನಿಕ್ ಏನು ಗೊತ್ತಾ?

ಇಲ್ಲವೆ, ಬಿರಿಯಾನಿಯಲ್ಲಿ ವಿಷ ಹಾಕಿ ಕೊಡಿ

ಇಲ್ಲವೆ, ಬಿರಿಯಾನಿಯಲ್ಲಿ ವಿಷ ಹಾಕಿ ಕೊಡಿ

ಈಗಲೂ ಕಾಲ ಮಿಂಚಿಲ್ಲ ನೋಡಿ ನಿಮ್ಮ ಮಕ್ಕಳೇನಾದರೂ ಹಾದಿ ತಪ್ಪುತ್ತಿದ್ದರೆ ತಿದ್ದಿ ತಿದ್ದಿ ಬುದ್ಧಿ ಹೇಳಿ. ನಾನು ಹೇಳಿದ ಎಲ್ಲಾ ವಿಷಯಗಳನ್ನು ಅಳವಡಿಸಿ ನೋಡಿ. ಇಷ್ಟು ಹೇಳಿಯೂ ಅವರು ಬದಲಾಗುತ್ತಿಲ್ಲ ಒಳ್ಳೆಯ ಬುದ್ಧಿ ಕಲಿಯುವ ಲಕ್ಷಣ ಇಲ್ಲ ಅಂದರೆ, ಕೊನೆಯದಾಗಿ ಒಂದು ಕೆಲಸ ಮಾಡಿ ಅವನಿಗೆ ನೀವು ಒಂದು ಸ್ಪೆಷಲ್ ಬಿರಿಯಾನಿ ಮಾಡಿ ಅದರಲ್ಲಿ ಚೆನ್ನಾಗಿ ವಿಷ ಕಲಸಿ ಅವನಿಗೆ ಕೊಡಿ. ಅಂತಹ ಪಾಪಿ ಮಗ ನಿಮಗೆ ಬೇಡವೇ ಬೇಡ.

ನೀವೇನು ಯೋಚಿಸಬೇಡಿ ಮಕ್ಕಳು ಇಲ್ಲ ಅಂತ ನಿಮ್ಮನ್ನು ಅಮ್ಮಾ ಅಮ್ಮಾ ಎಂದು ಬಾಯ್ತುಂಬಾ ಕರೆಯಲು ನಮ್ಮ ವೀರಯೋಧರು ಕಾಯುತ್ತಿರುತ್ತಾರೆ.

ನಿಮ್ಮ ದೇಶಪ್ರೇಮ ಸದಾ ಚರಿತ್ರೆಯಲ್ಲಿ ಹಸಿರಾಗಿ ಇರುತ್ತದೆ. ಭಾರತೀಯರು ಎಲ್ಲರೂ ನಿಮ್ಮ ಆದರ್ಶಗಳನ್ನು ಸದಾ ಕೊಂಡಾಡುತ್ತಾರೆ. ಜೊತೆಗೆ ನೀವು ನಂಬಿದ ದೇವರು ನಿಮಗೆ ಸ್ವರ್ಗ ಖಂಡಿತಾ ನೀಡುತ್ತಾನೆ.

ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ

ಎಲ್ಲೇ ಅವಿತ್ತಿದ್ದರೂ ಹುಡುಕಿ ಕೊಲ್ಲುತ್ತಾರೆ

ಎಲ್ಲೇ ಅವಿತ್ತಿದ್ದರೂ ಹುಡುಕಿ ಕೊಲ್ಲುತ್ತಾರೆ

ನನ್ನ ಕಳಕಳಿಯ ಮಾತುಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಂಡು ಓದಿ.. ಅಲ್ಲಾಹನ ಆಣೆಗೂ ನಮ್ಮ ಸೈನಿಕರು ಒಬ್ಬರನ್ನೂ ಬಿಡಲ್ಲ, ಎಲ್ಲೇ ಅವಿತ್ತಿದ್ದರೂ ಹುಡುಕಿ ಹುಡುಕಿ ಕೊಲ್ಲುತ್ತಾರೆ. ನಿಮ್ಮ ಮಗ ಬೀದಿ ಹೆಣವಾಗುತ್ತಾನೆ.

ನಿಮ್ಮ ಮಗನಂತೆ ಇರುವ ಪ್ರತಿಯೊಬ್ಬ ದೇಶದ್ರೋಹಿಗಳು ಇಂದಲ್ಲ ನಾಳೆ ಸರ್ವನಾಶವಾಗುತ್ತಾರೆ. ಆಯ್ಕೆ ನಿಮ್ಮದ್ದು...

ಜೈ.. ಹಿಂದ್...ಜೈ... ಭಾರತ್..

ಇತಿ...............

ಇರ್ಫಾನ್. ಹ...

English summary
An open and heart touching letter to mothers of Kashmir who have givn birth to terrorists. Why are they hating India and loving Pakistan? The writer asks the mothers to teach their sons a lesson and instil love for India in them. He warns, otherwise they will meet the dogs death in the hands of brave Indian soldiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more