• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿವಿಸಿ ಪೈಪ್ ಮಾರಾಟದಿಂದ ಕೇಂದ್ರದ ಸಂಪುಟ ಸಚಿವ ಸ್ಥಾನದವರೆಗೆ ಅಮಿತ್ ಶಾ ಪಯಣ

By ಅನಿಲ್ ಆಚಾರ್
|
   ಪಿವಿಸಿ ಮಾರಾಟದಿಂದ ಕೇಂದ್ರ ಸಂಪುಟ ಸಚಿವ ಸ್ಥಾನದವರೆಗೆ ಅಮಿತ್ ಶಾ ಪಯಣ

   ಬಿಜೆಪಿಗೆ ಎಂಥ ಸಂಕಟದ ಸಮಯ ಬಂದರೂ ಈ ವ್ಯಕ್ತಿ ಏನಾದರೂ ಮಾಡೇ ಮಾಡ್ತಾರೆ ಎಂಬುದು ಕಾರ್ಯಕರ್ತರು- ನಾಯಕರ ನಂಬಿಕೆ. ಒಂದು ಕಾಲಕ್ಕೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ಕಡೆ ಬಿಜೆಪಿ ಸರಕಾರ ರಚಿಸಲು ಕಾರಣವಾಗಿ, "ನಿಂಗೆ ನಂಬರ್ ಗಳೇ ಲೆಕ್ಕ ಇಲ್ಲ ಕಣಣ್ಣೋ" ಎಂದೆನಿಸಿಕೊಂಡ ವ್ಯಕ್ತಿ ಈತ. ಹೆಸರು ಅಮಿತ್ ಶಾ ಅಥವಾ ಅಮಿತಾಬ್ ಅನಿಲ್ ಚಂದ್ರ ಶಾ. ಇದೀಗ ಕೇಂದ್ರ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ.

   ಕೇಸರಿ ಪಕ್ಷದ ಹಿರಿ ತಲೆ ಎಲ್.ಕೆ.ಅಡ್ವಾಣಿ ಸ್ಪರ್ಧಿಸುತ್ತಿದ್ದ ಗಾಂಧೀನಗರದಿಂದ ಈ ಬಾರಿ ಅಮಿತ್ ಶಾ ಸ್ಪರ್ಧಿಸಿ, ಆರಿಸಿ ಬಂದಿದ್ದಾರೆ. ಆ ಕಾರಣಕ್ಕೋ ಏನೋ ಬಿಜೆಪಿಯೊಳಗೆ ಪ್ರಧಾನಿ ಮೋದಿ ನಂತರದ ಪ್ರಭಾವಿ ಅಂದರೆ ಅದು ಅಮಿತ್ ಶಾ ಎಂಬಂತೆ ಆಗಿದೆ. ಅಮಿತ್ ಶಾ ಓಡಾಟ, ಪಕ್ಷದಲ್ಲಿನ ಕೆಲಸ ಇವೆಲ್ಲದರ ಮಧ್ಯೆ ಯಾರಪ್ಪ ಈ ಅಮಿತ್ ಶಾ, ಈತನಿಗೆ ಕುಟುಂಬ ಇಲ್ಲವೆ? ಹುಟ್ಟಿ- ಬೆಳೆದದ್ದು, ಸಾಧನೆ- ಅನುಭವ ಏನು ಎಂದು ಪ್ರಶ್ನೆ ಇರುವವರಿಗೆ ಉತ್ತರ ಇಲ್ಲಿದೆ.

   ಮೋದಿ ಸರ್ಕಾರ್ 2 : ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರು

   ಜನ್ಮ ದಿನಾಂಕ: 22 ಅಕ್ಟೋಬರ್ 1964

   ಜನ್ಮ ಸ್ಥಳ: ಮುಂಬೈ (ಮಹಾರಾಷ್ಟ್ರ)

   ತಂದೆ ಹೆಸರು: ಅಮಿತ್ ಅನಿಲ್ ಚಂದ್ರ ಶಾ

   ತಾಯಿ ಹೆಸರು: ಕುಸುಮ್ ಬೆನ್ ಶಾ

   ಪತ್ನಿ ಹೆಸರು: ಸೋನಾಲ್ ಬೆನ್ ಶಾ

   ಮಕ್ಕಳು: ಜಯ್ ಶಾ (ಮಗ)

   ಅಮಿತ್ ಶಾ ತಂದೆ ಪಿವಿಸಿ ಪೈಪ್ಸ್ ವ್ಯಾಪಾರ ಮಾಡುತ್ತಿದ್ದರು. ಅಹ್ಮದಾಬಾದ್ ನ ಸಿಯು ಶಾ ವಿಜ್ಞಾನ ಕಾಲೇಜಿನಲ್ಲಿ ಅಮಿತ್ ಶಾ ಬಯೋ ಕೆಮಿಸ್ಟ್ರಿಯಲ್ಲಿ ಪದವಿ ಪಡೆದಿದ್ದಾರೆ. ತಮ್ಮ ಹದಿನಾಲ್ಕನೇ ವಯಸ್ಸಿಗೆ ಆರೆಸ್ಸೆಸ್ ಗೆ ಸೇರ್ಪಡೆಯಾದ ಅಮಿತ್ ಶಾ, ಬಿಎಸ್ಸಿ ಪದವಿ ಪಡೆದ ನಂತರ ತಮ್ಮ ತಂದೆಯ ವ್ಯಾಪಾರದಲ್ಲಿ ಕೈ ಜೋಡಿದರು.

   ಕೇಂದ್ರ ಗೃಹ ಖಾತೆ ಅಮಿತ್ ಶಾ ಅವರಿಗೋ, ಮತ್ತಾರಿಗೋ?

   ಷೇರು ದಲ್ಲಾಳಿಯಾಗಿ ಕೂಡ ಅಮಿತ್ ಶಾ ಕೆಲಸ ಮಾಡಿದ್ದಾರೆ. ಜತೆಗೆ ಅಹ್ಮದಾಬಾದ್ ನ ಕೋ ಆಪರೇಟಿವ್ ಬ್ಯಾಂಕ್ ನಲ್ಲೂ ಕೆಲಸ ಮಾಡಿದ್ದಾರೆ. ಅಹ್ಮದಾಬಾದ್ ನಲ್ಲಿ ತಮಗಿದ್ದ ಆರೆಸ್ಸೆಸ್ ನ ಸಂಪರ್ಕದ ಮೂಲದ ನರೇಂದ್ರ ಮೋದಿ ಅವರಿಗೆ ಪರಿಚಯ ಆದರು. ಮೂವತ್ತಾರು ಕೋಟಿ ರುಪಾಯಿ ನಷ್ಟದಲ್ಲಿದ್ದ ಅಹ್ಮದಾಬಾದ್ ಡಿಸ್ಟ್ರಿಕ್ಟ್ ಕೋ ಆಪರೇಟಿವ್ ಬ್ಯಾಂಕ್ ಅನ್ನು ಇಪ್ಪತ್ತಾರು ಕೋಟಿ ರುಪಾಯಿ ಲಾಭ ಪಡೆಯುವಂತೆ ಮಾಡಿದ್ದರು ಅಮಿತ್ ಶಾ.

   ಅಮಿತ್ ಶಾ ರಾಜಕೀಯ ಪಯಣ

   * 1983 ಆರೆಸ್ಸೆಸ್ ನ ವಿದ್ಯಾರ್ಥಿ ವಿಭಾಗದ ನಾಯಕರಾದರು.

   * 1984 ಬಿಜೆಪಿಯ ಸದಸ್ಯರಾದರು

   * 1987- ಭಾರತೀಯ ಜನತಾ ಯುವ ಮೋರ್ಚಾದ ಕಾರ್ಯಕರ್ತರಾದರು.

   * 1991ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಪರ ಪ್ರಚಾರ ನಡೆಸಿದರು.

   * ಗುಜರಾತ್ ನ ಸರ್ಖೇಜ್ ವಿಧಾನಸಭಾ ಕ್ಷೇತ್ರದಿಂದ 1995ರಲ್ಲಿ ಶಾಸಕರಾಗಿ ಆಯ್ಕೆಯಾದರು. ಅದೇ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು.

   * 2009ರಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ ಆಯ್ಕೆಯಾದರು.

   ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ 'ಅಂಗಡಿ' ತೆರೆದ ಸುರೇಶ್

   * 2012ರ ವಿಧಾನಸಭಾ ಚುನಾವಣೆಯಲ್ಲಿ ನರನ್ ಪುರ್ ಕ್ಷೇತ್ರದಿಂದ ಸ್ಪರ್ಧಿಸಿ, ಅರವತ್ತು ಸಾವಿರ ಮತಗಳಿಂದ ಗೆದ್ದಿದ್ದರು.

   * ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆದರು.

   * 2014ರಲ್ಲಿ ಬಿಜೆಪಿಯ ಅಧ್ಯಕ್ಷರಾದರು.

   * 2017ರಲ್ಲಿ ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾದರು.

   * 2019ರ ಲೋಕಸಭೆ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಐದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸಿದರು.

   ಗುಜರಾತ್ ನಲ್ಲಿ ಹನ್ನೆರಡು ವರ್ಷಗಳ ಕಾಲ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದಾಗ ಅಮಿತ್ ಶಾ ಪ್ರಮುಖ ನಾಯಕರಾಗಿದ್ದರು. 2002ರ ಚುನಾವಣೆಯಲ್ಲಿ ಮೋದಿ ಸರಕಾರದ ಅತ್ಯಂತ ಕಿರಿಯ ವಯಸ್ಸಿನ ಸಚಿವರಾಗಿ, ಹಲವು ಖಾತೆಗಳನ್ನು ವಹಿಸಿಕೊಂಡರು. ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಅಮಿತ್ ಶಾ ಪ್ರಮುಖ ಪಾತ್ರ ವಹಿಸಿದ್ದರು.

   English summary
   BJP national president Amit Shah journey from PVC pipes business to union cabinet minister. Here is an interesting story.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more