ಇದುವರೆಗೆ ವಾಯು ದುರಂತದಲ್ಲಿ ಮೃತಪಟ್ಟ ಗಣ್ಯರ ಪಟ್ಟಿ
ನವದೆಹಲಿ, ಡಿಸೆಂಬರ್ 08: ಭಾರತೀಯ ಸೇನಾ ಅಧಿಕಾರಿಗಳು ಸೇರಿದಂತೆ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಘಟನೆಯಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ , ಪತ್ನಿ ಮಧುಲಿಕಾ ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.
ಇದುವರೆಗೆ ಬಹಳಷ್ಟು ಗಣ್ಯರು ವಾಯು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೊದಲನೆಯದಾಗಿ 1945ರಲ್ಲಿ ತೈವಾನ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್ ಅವರು ವಾಯು ದುರಂತದಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು, ಅದರ ಹಿಂದೆ ಸಾಕಷ್ಟು ವಿವಾಗಳು ಇದೆ.
ಮತ್ತೊಂದು ವಿಮಾನ ಅಪಘಾತವೆಂದರೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿತ್ತು. ವೈಎಸ್‌ಆರ್‌ನ ಬೆಲ್ 430 ಹೆಲಿಕಾಪ್ಟರ್ ಆಂದ್ರಪ್ರದೇಶದ ಚಿತ್ತೂರಿಗೆ ಹೋಗುತ್ತಿದ್ದಾಗ ಪತನವಾಗಿತ್ತು. 2009ರಲ್ಲಿ ಈ ಘಟನೆ ನಡೆದಿದ್ದು, ನಾಪತ್ತೆಯಾದ 27 ಗಂಟೆಗಳ ಬಳಿಕ ಅವರ ದೇಹವನ್ನು ಪತ್ತೆಹಚ್ಚಲಾಗಿತ್ತು.

1980ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯ್ ಗಾಂಧಿ ದೆಹಲಿಯ ಸಫ್ತರ್‌ಜಂಗ್‌ನಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ವಿಮಾನ ಅಪಘಾತಕ್ಕೀಡಾಗಿತ್ತು.
ಹಿರಿಯ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಅವರು 2001ರಲ್ಲಿ ಕಾನ್ಪುರಕ್ಕೆ ಸಮಾವೇಶವನ್ನುದ್ದೇಶಿಸಿ ಮಾತನಾಡಲು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸೆಸ್ನಾ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.

ಲೋಕಸಭೆ ಸ್ಪೀಕರ್ ಹಾಗೂ ತೆಲುಗು ದೇಶಂ ನಾಯಕ ಜಿಎಂಸಿ ಬಾಲಯೋಗಿ ಕೂಡ 2002ರಲ್ಲಿ ಆಂಧ್ರಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. 2005ರಲ್ಲಿ ಸಹರಾನ್‌ಪುರ ಬಳಿ ಚಾಪರ್ ತಾಂತ್ರಿಕ ದೋಷವನ್ನು ಅಭಿವೃದ್ಧಿಪಡಿಸಿ ಕೆಲಗಿಳಿದ ಕಾರಣ ಹರ್ಯಾಣದ ಆಗಿನ ಸಚಿವರಾದ ಒಪಿ ಜಿಂದಾಲ್ ಹಾಗೂ ಸುರೇಂದ್ರ ಸಿಂಗ್ ಸಾವನ್ನಪ್ಪಿದ್ದರು.
1994ರಲ್ಲಿ ಹಿಮಾಚಲ ಪ್ರದೇಶದಲ್ಲಿ ಸರ್ಕಾರದ ಸೂಪರ್-ಕಿಂಗ್ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಪರ್ವತಗಳಿಗೆ ಅಪ್ಪಳಿಸಿದಾಗ ಪಂಜಾಬ್ ರಾಜ್ಯಪಾಲ ಸುರೇಂದ್ರ ನಾಥ್ ಹಾಗೂ ಕುಟುಂಬದ 9 ಮಂದಿ ಮೃತಪಟ್ಟಿದ್ದರು. ಸುರೇಂದ್ರ ನಾಥ್ ಆಗ ಹಿಮಾಚಲದ ರಾಜ್ಯಪಾಲರೂ ಆಗಿದ್ದರು.












Click it and Unblock the Notifications