Get Updates
Get notified of breaking news, exclusive insights, and must-see stories!

ಸಾಧಾರಣ ಮೆಕ್ಯಾನಿಕ್ ಆಗಿದ್ದ ವ್ಯಕ್ತಿ ಚಿನ್ನದ ಗೋಡೆಗಳ ಬುರ್ಜ್ ಖಲೀಫಾ 22 ಅಪಾರ್ಟ್‌ಮೆಂಟ್‌ ಮಾಲೀಕ!

ನವದೆಹಲಿ, ಅಕ್ಟೋಬರ್‌ 09: ಬುರ್ಜ್ ಖಲೀಫಾ ದುಬೈನ ಅತ್ಯಂತ ಬೃಹತ್‌ ಕಟ್ಟಡವಾಗಿದೆ. ಈ ಎತ್ತರದ ಗಗನಚುಂಬಿ ಕಟ್ಟಡದಲ್ಲಿ ಚಿನ್ನದ ಗೋಡೆಯನ್ನೊಳಗೊಂಡ ನಿಮ್ಮ ಅಪಾರ್ಟ್‌ಮೆಂಟ್‌ ಇದೆ ಎಂದರೆ ಊಹಿಸಿಕೊಳ್ಳಿ. ಅದು ನಿಮ್ಮ ಶ್ರೀಮಂತಿಕೆಯ ಪ್ರತೀಕವಾಗಿದೆ. ಇಂತಹ ಶ್ರೀಮಂತ ಒಬ್ಬ ಭಾರತೀಯ. ಅವರ ಬಗ್ಗೆ ತಿಳಿಯೋಣ.

ಬುರ್ಜ್ ಖಲೀಫಾದಲ್ಲಿನ ಅಪಾರ್ಟ್‌ಮೆಂಟ್‌ಗಳು ಭಾರತದ ಅತ್ಯಂತ ಶ್ರೀಮಂತರಲ್ಲಿ ಕೆಲವರಿಗೆ ಸೇರಿವೆ. ವಾಸ್ತವವಾಗಿ ಬುರ್ಜ್ ಖಲೀಫಾ ನೀಡುವ 900 ರಲ್ಲಿ ಸುಮಾರು 150 ಅಪಾರ್ಟ್‌ಮೆಂಟ್‌ಗಳನ್ನು ಭಾರತೀಯರು ಹೊಂದಿದ್ದಾರೆ. ಅಂತಹ ಭಾರತೀಯರೊಬ್ಬರು ಬುರ್ಜ್ ಖಲೀಫಾದ ಅತಿದೊಡ್ಡ ಆಸ್ತಿ ಮಾಲೀಕರಾಗಿದ್ದಾರೆ ಎಂದು ಡಿಎನ್‌ಎ ವರದಿ ತಿಳಿಸಿದೆ.

burj-khalifa

ಅವರು ಬೇರೆ ಯಾರು ಅಲ್ಲ. ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದ ಮತ್ತು ಸ್ಪೂರ್ತಿದಾಯಕ ರಾಗ್ಸ್-ಟು-ರಿಚಸ್ ಕಥೆಯನ್ನು ಸ್ಕ್ರಿಪ್ಟ್ ಮಾಡಿದ ವ್ಯಕ್ತಿ ಜಾರ್ಜ್ ವಿ ನೆರೆಯಂಪರಂಬಿಲ್.

ಜಾರ್ಜ್ ಕೇರಳದಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ ವ್ಯಕ್ತಿ. ಅವರು ಚಿಕ್ಕಂದಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದರು. 11ನೇ ವಯಸ್ಸಿನಲ್ಲಿ ಅವರು ತಮ್ಮ ತಂದೆಗೆ ಬೆಳೆಗಳನ್ನು ಸಾಗಿಸಲು ಮತ್ತು ವ್ಯಾಪಾರ ಮಾಡಲು ಸಹಾಯ ಮಾಡುತ್ತಿದ್ದರು. ಅದನ್ನು ದೊಡ್ಡದಾಗಿಸುವ ಮೊದಲು ಜಾರ್ಜ್ ಸ್ಥಳೀಯ ಮೆಕ್ಯಾನಿಕ್ ಆಗಿಯೂ ಕೆಲಸ ಮಾಡಿದ್ದರು.

burj-khalifa

1976 ರಲ್ಲಿ ಅವರು ಶಾರ್ಜಾಕ್ಕೆ ಆಗಮಿಸಿದಾಗ ಅವರ ಜೀವನಕ್ಕೆ ಮಹತ್ವದ ತಿರುವು ಸಿಕ್ಕಿತು. ಅಲ್ಲಿ ಅವರು ಈ ಮರುಭೂಮಿಯ ಶಾಖದ ನಡುವೆ ಹವಾನಿಯಂತ್ರಣ ವಲಯದಲ್ಲಿ ಬೃಹತ್ ಸಾಮರ್ಥ್ಯವಿದೆ ಎಂದು ಅರಿತುಕೊಂಡರು. ಅವರು ಕ್ರಮೇಣ ವ್ಯಾಪಾರ ಶುರು ಮಾಡಿದರು. ಇಂದು ಜಿಇಒ ಗ್ರೂಪ್ ಆಫ್ ಕಂಪನೀಸ್ ಎಂಬ ಬೃಹತ್ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದರು. ಗಲ್ಫ್ ಪ್ರದೇಶದಲ್ಲಿನ ಅತ್ಯಂತ ಪ್ರಮುಖ ಭಾರತೀಯ ವ್ಯಾಪಾರ ಉದ್ಯಮಿಗಳಲ್ಲಿ ಒಬ್ಬರಾದರು.

ಬುರ್ಜ್ ಖಲೀಫಾದ ಬೆಲೆಬಾಳುವ ಅಪಾರ್ಟ್‌ಮೆಂಟ್‌ ಖರೀದಿಸಲು ನೆರೆಯಪರಂಬಿಲ್ ಅವರಿಗೆ ಬಯಕೆಯಾಯಿತು. ಆದರೆ ಅಲ್ಲಿನ ಅವರ ಸಂಬಂಧಿಯೊಬ್ಬರು ಅವರಿಗೆ ನೀನು ಬುರ್ಜ್ ಖಲೀಫಾವನ್ನು ಪ್ರವೇಶಿಸಲೂ ಸಾಧ್ಯವಿಲ್ಲ ಎಂದು ಅವರನ್ನು ಗೇಲಿ ಮಾಡಿದರು. ಆದರೆ ಮುಂದೆ ಜಾರ್ಜ್ 2010ರಲ್ಲಿ ಕಟ್ಟಡದಲ್ಲಿ ಅಪಾರ್ಟ್ ಮೆಂಟ್ ಬಾಡಿಗೆಗೆ ಪಡೆದರು.

ಜಾರ್ಜ್ ವಿ ನೆರೆಯಂಪರಂಬಿಲ್ ಅವರು ಅನೇಕ ವರ್ಷಗಳಲ್ಲಿ ಬುರ್ಜ್ ಖಲೀಫಾದಲ್ಲಿ ಒಟ್ಟು 22 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಸ್ವಾಧೀನಪಡಿಸಿಕೊಂಡರು. ತನ್ನ ಸಂಪತ್ತನ್ನು ಪ್ರದರ್ಶಿಸಲು ಹಿಂಜರಿಯದ ಜಾರ್ಜ್ ಅವರ ಅಪಾರ್ಟ್‌ಮೆಂಟ್‌ಗಳ ಗೋಡೆಗಳು, ಸೀಲಿಂಗ್‌ಗಳು ಮತ್ತು ಮಹಡಿಗಳನ್ನು ಚಿನ್ನದಿಂದ ಅಲಂಕಾರ ಮಾಡಿದರು. ಈ ಮೂಲಕ ತಮ್ಮನ್ನು ಜರಿದವರಿಗೆ ಮಾತನಾಡದೇ ತಿರುಗೇಟು ಕೊಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+