ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕೆರೆಯ ಬಣ್ಣ ದಿನಕ್ಕೆರಡು ಬಾರಿ ಬದಲು

|
Google Oneindia Kannada News

ಸುರ್ಗುಜಾ, ಜನವರಿ 20: ಛತ್ತೀಸ್‌ಗಢದ ಸುರ್ಗುಜಾದಲ್ಲಿ ಮೈನ್‌ಪತ್, ಉಲ್ಟಾಪಾನಿ ಸೇರಿದಂತೆ ಒಂದಕ್ಕಿಂತ ಹೆಚ್ಚು ಪ್ರವಾಸಿ ತಾಣಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿನ ಒಂದು ಸರೋವರವು ಜನರಿಗೆ ಭಾರಿ ಕುತೂಹಲವನ್ನು ಮೂಡಿಸಿದೆ. ನಿನ್ನೆ ಮೊನ್ನೆಯಷ್ಟೇ ಕಡಿಮೆ ಜನಕ್ಕೆ ತಿಳಿದಿದ್ದ ಅಂಬಿಕಾಪುರದ ಕೆರೆ ಈಗ ಅದರ ವಿಶೇಷತೆಯಿಂದಾಗಿ ಪ್ರವಾಸಿಗರನ್ನು ದಿಢೀರನೆ ಸೆಳೆಯುತ್ತಿದೆ. ಯಾಕೆ ಅಂತ ಕೇಳಿದರೆ ನಿಮಗಿದು ಕೇಳಲು ಸ್ವಲ್ಪ ವಿಚಿತ್ರವೆನಿಸಬಹುದು. ಈ ಸರೋವರವು ದಿನಕ್ಕೆ ಎರಡು ಬಾರಿ ಬಣ್ಣವನ್ನು ಬದಲಾಯಿಸುತ್ತದೆ ಎಂದು ಚರ್ಚಿಸಲಾಗುತ್ತಿದೆ. ಹೀಗಾಗಿ ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ಜೊತೆಗೆ ಸರೋವರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಸ್ಥಳೀಯರಲ್ಲಿ ಆಶ್ಚರ್ಯ

ಸ್ಥಳೀಯರಲ್ಲಿ ಆಶ್ಚರ್ಯ

ಇದನ್ನು ನಂಬುವುದು ಕಷ್ಟವಾದರೂ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕುತೂಹಲ ಕೆರಳಿಸಿರುವ ಈ ಘಟನೆಗೆ ಕಾರಣವನ್ನು ಯಾರೂ ಗುರುತಿಸಲು ಸಾಧ್ಯವಾಗಿಲ್ಲ. ಈ ಬಣ್ಣ ಬದಲಾವಣೆಗೆ ಕಾರಣ ತಿಳಿಯುವ ಪ್ರಯತ್ನದಲ್ಲಿ ದೂರದೂರುಗಳಿಂದ ಜನರು ಕೆರೆ ನೋಡಲು ಬರುತ್ತಿದ್ದಾರೆ. ಬಂದಿರುವ ಮಾಹಿತಿಯ ಪ್ರಕಾರ, ಅಂಬಿಕಾಪುರ ಜಿಲ್ಲೆಯ ಸುರ್ಗುಜಾ ಮತ್ತು ಮೈನ್‌ಪತ್ ಸರೋವರದ ನಡುವೆ 15 ಕಿಮೀ ದೂರದಲ್ಲಿರುವ ಬಾರ್ಗಾಂವ್ ಗ್ರಾಮದಲ್ಲಿ ಕೆರೆಯಿದ್ದು, ಅದರ ನೀರು ಬೆಳಗ್ಗೆ ಮತ್ತು ಸಂಜೆ ಬಣ್ಣ ಬದಲಾಯಿಸುತ್ತದೆ. ಕೆರೆಯ ನೀರು ಬೆಳಗ್ಗೆ ಕೆಂಪು ಬಣ್ಣಕ್ಕೆ ತಿರುಗಿದರೆ ಸಂಜೆ ವೇಳೆ ಹಸಿರು ಬಣ್ಣಕ್ಕೆ ತಿರುಗುತ್ತದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಸರೋವರದ ಬಗ್ಗೆ ವ್ಯಾಪಕ ಚರ್ಚೆ

ಸರೋವರದ ಬಗ್ಗೆ ವ್ಯಾಪಕ ಚರ್ಚೆ

ಇದು ಏಕೆ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಮುಂಚೂಣಿಗೆ ಬಂದಿಲ್ಲ. ಆದರೆ ಬಣ್ಣ ಬದಲಾಯಿಸುವ ಸರೋವರದ ಕಥೆಯು ಎಲ್ಲೆಡೆ ಚರ್ಚೆಗಳಲ್ಲಿ ಉಳಿದಿದೆ. ಚರ್ಚೆಗಳ ಪರಿಣಾಮ ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾರ್ಗಾಂವ್‌ಗೆ ಆಗಮಿಸಲು ಪ್ರಾರಂಭಿಸಿದ್ದಾರೆ. ಸರೋವರದ ಬಗ್ಗೆ ಉದ್ಭವಿಸುವ ಪ್ರಶ್ನೆಗಳಿಗೆ ಯಾರೂ ತಾರ್ಕಿಕ ಉತ್ತರವನ್ನು ನೀಡಲು ಸಾಧ್ಯವಾಗದಿದ್ದರೂ, ಕೆಲವು ರೀತಿಯ ಭೂಗತ ರಾಸಾಯನಿಕ ಚಟುವಟಿಕೆಯಿಂದಾಗಿ, ನೀರಿನ ಬಣ್ಣವು ಬದಲಾಗಬಹುದು ಅಥವಾ ಬದಲಾವಣೆಯಿಂದಾಗಿ ನೀರಿನ ಬಣ್ಣವು ಬದಲಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಹವಾಮಾನ ಬದಲಾವಣೆಯಿಂದಾಗಿ ನೀರಿನ ಬಣ್ಣ ಜನರಿಗೆ ಹೀಗೆ ಕಾಣುವ ಭ್ರಮೆಯೂ ಇರಬಹುದು ಎನ್ನಲಾಗುತ್ತದೆ.

ಟಿಂಟಿನ್ ಕಲ್ಲು ವಿಶೇಷತೆ

ಟಿಂಟಿನ್ ಕಲ್ಲು ವಿಶೇಷತೆ

ಆದರೆ ಕಾರಣವೇನೇ ಇರಲಿ ಛತ್ತೀಸ್‌ಗಢದ ಸುರ್ಗುಜಾದಿಂದ ಹೊರಹೊಮ್ಮುವ ಈ ಚರ್ಚೆಯು ಕುತೂಹಲದಿಂದ ಕೂಡಿದೆ. ಬಾರ್ಗಾಂವ್‌ನ ಈ ವಿಶಿಷ್ಟ ಸರೋವರದತ್ತ ಜನರನ್ನು ಆಕರ್ಷಿತರಾಗುತ್ತಿದ್ದಾರೆ. ಸುರ್ಗುಜಾದಲ್ಲಿ ಅಂತಹ ಅನೇಕ ಸ್ಥಳಗಳಿವೆ. ಅವುಗಳು ತಮ್ಮ ಅದ್ಭುತ ವೈಶಿಷ್ಟ್ಯಗಳಿಂದ ಯಾವಾಗಲೂ ಚರ್ಚೆಯಲ್ಲಿ ಉಳಿದಿವೆ. ಅವುಗಳಲ್ಲಿ ಒಂದು ಟಿಂಟಿನ್ ಕಲ್ಲು. ಇದು ಹೊಡೆದಾಗ ಅದ್ಭುತವಾದ ಶಬ್ದವನ್ನು ಮಾಡುತ್ತದೆ. ಹಿಂದೆ ಕರ್ನಾಟಕದ ಹಂಪಿಯಲ್ಲಿ ಕಲ್ಲುಗಳನ್ನು ಬಾರಿಸುವುದರಿಂದ ಅದ್ಬುತವಾದ ಶಬ್ದ ಕೇಳಿರುತ್ತಿತ್ತು ಎಂದು ಇತಿಹಾಸ ಹೇಳುತ್ತಿದೆ. ಅದರಂತೆ ಟಿಂಟಿನ್ ಕಲ್ಲು ಕೂಡ ವಿಶೇಷತೆಯನ್ನು ಹೊಂದಿದೆ.

Recommended Video

Union Budget 2022-23ಈ ಬಾರಿಯ Budgetನಲ್ಲಿ ದೇಶ ನಿರೀಕ್ಷಿಸುತ್ತಿರುವುದೇನು | Oneindia Kannada
ಮೈನ್ ಪತ್ ಬಳಿ ಉಲ್ಟಾ ಪಾನಿ

ಮೈನ್ ಪತ್ ಬಳಿ ಉಲ್ಟಾ ಪಾನಿ

ಇನ್ನೂ ಛತ್ತೀಸ್‌ಗಢದ ಸುರ್ಗುಜಾದಲ್ಲಿ ಮತ್ತೊಂದು ವಿಶೇಷತೆಯ ಸ್ಥಳವಿದೆ. ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಸ್ಥಳವೀಕ್ಷಣೆಗೆ ಆಗಮಿಸುತ್ತಾರೆ. ಇದೊಂದು ನಿಜಕ್ಕೂ ಅದ್ಬುತ ಮತ್ತು ಸುಂದರವಾದ ಸ್ಥಳ. ಮೈನ್ ಪತ್ ಬಳಿ ಉಲ್ಟಾ ಪಾನಿ ಎಂಬ ಸ್ಥಳವಿದೆ. ಇದಕ್ಕೆ ಉಲ್ಟಾ ಪಾನಿ ಎಂದು ಕರೆಯಲು ಕಾರಣವಿದೆ. ಸಾಮಾನ್ಯವಾಗಿ ನೀರು ಅಥವಾ ಯಾವುದೇ ವಸ್ತು ಎಸೆದಾಗ ಅಥವಾ ಬೀಳುವಾಗ ಕೆಳಗೆ ಬೀಳುತ್ತದೆ. ಇದಕ್ಕೆ ನಾವು ಭೂಮಿಗೆ ಗುರುತ್ವಾಕರ್ಷಣೆ ಇರುವುದರಿಂದ ಎಲ್ಲವೂ ಭೂಮಿಗೆ ಬೀಳುತ್ತವೆ ಎಂದು ಕರೆಯಲಾಗುತ್ತದೆ. ಆದರೆ ಈ ಸ್ಥಳ ಗುರುತ್ವಾಕರ್ಷಣೆಯ ನಿಯಮಗಳಿಗೆ ವಿರುದ್ಧವಾಗಿ ನೀರು ಕೆಳಗಿನಿಂದ ಮೇಲಕ್ಕೆ ಹರಿಯುತ್ತದೆ. ಇದು ನಿಜಕ್ಕೂ ಅದ್ಬುತ ಮತ್ತು ಅತ್ಯಂತ ಸುಂದರವಾದ ಸ್ಥಳವಾಗಿದೆ. ಅಂತೆಯೇ, ಜೌಗು ಎಂಬ ಹೆಸರಿನ ಸ್ಥಳವೂ ಇದೆ, ಅಲ್ಲಿ ಭೂಮಿ ಸ್ಪಂಜಿನಂತಿದೆ.

English summary
There are more than one tourist destination in Chhattisgarh's Surguja including Mainpat, Ultapani, but these days a lake remains a matter of curiosity for the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X