• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೋಟು ಅಮಾನ್ಯೀಕರಣವಾಗಿ 5 ವರ್ಷ: ಇಲ್ಲಿದೆ ನೋಡಿ Memes

|
Google Oneindia Kannada News

ನವದೆಹಲಿ, ನವೆಂಬರ್‌ 08: ಕೇಂದ್ರ ಸರ್ಕಾರವು ಐನ್ನೂರು ರೂಪಾಯಿ ಹಾಗೂ ಒಂದು ಸಾವಿರ ರೂಪಾಯಿಯ ನೋಟುಗಳನ್ನು ದೇಶದಲ್ಲಿ ಅಮಾನ್ಯೀಕರಣ ಮಾಡಿ ಇಂದಿಗೆ ಐದು ವರ್ಷಗಳು ಆಗಿದೆ. 2016 ರ ನವೆಂಬರ್‌ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ದೇಶದಲ್ಲಿ ಅಮಾನ್ಯೀಕರಣ ಮಾಡಿದ್ದು, ಬಳಿಕ ಐನ್ನೂರು ಹಾಗೂ ಎರಡು ಸಾವಿರ ರೂಪಾಯಿಯ ಹೊಸ ನೋಟನ್ನು ಚಲಾವಣೆಗೆ ತರಲಾಗಿದೆ.

ನೋಟು ಅಮಾನ್ಯೀಕರಣಗೊಂಡು ಐದು ವರ್ಷ ಆಗುತ್ತಿರುವಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ಮುಂದುವರಿಸಿದೆ. 2016 ರ ನವೆಂಬರ್‌ 8 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯ ರಾತ್ರಿಯಿಂದ ಜಾರಿಗೆ ಬರುವಂತೆ 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ದೇಶದಲ್ಲಿ ನಿಷೇಧ ಮಾಡುವ ನಿರ್ಧಾರ ಪ್ರಕಟ ಮಾಡಿದ್ದರು. ಈ ಹಠಾತ್‌ ಬೆಳವಣಿಗೆಯಿಂದಾಗಿ ದೇಶದಲ್ಲಿ ಭಾರೀ ಸಂಚಲನ ಮೂಡಿತ್ತು.

ಕೇಂದ್ರ ನೋಟು ಅಮಾನ್ಯೀಕರಣ, ಜಿಎಸ್‌ಟಿ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಅಶೋಕ್ ಗೆಹ್ಲೋಟ್ಕೇಂದ್ರ ನೋಟು ಅಮಾನ್ಯೀಕರಣ, ಜಿಎಸ್‌ಟಿ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಅಶೋಕ್ ಗೆಹ್ಲೋಟ್

ಜನರು ಹೊಸ ನೋಟು ಪಡೆದುಕೊಳ್ಳಲು ಬ್ಯಾಂಕುಗಳಿಗೆ ಮುಗಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಹಲವಾರು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಹಳೆಯ ನೋಟುಗಳನ್ನು ಪಡೆಯದ ಕಾರಣದಿಂದಾಗಿ ಹಣವನ್ನು ಆಸ್ಪತ್ರೆಯಲ್ಲಿ ಕಟ್ಟಲಾಗದೆ, ಚಿಕಿತ್ಸೆಯೂ ದೊರೆಯದೆ ಮೃತಪಟ್ಟ ಘಟನೆಗಳು ಕೂಡಾ ವರದಿ ಆಗಿದೆ. ಸುಮಾರು ನೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜಕೀಯ ನಾಯಕರುಗಳು ಹೇಳಿಕೊಂಡಿದ್ದಾರೆ. ಆದರೆ 2018 ರ ಡಿಸೆಂಬರ್‌ನಲ್ಲಿ ಸಂಸತ್ತಿಗೆ ಹಣಕಾಸು ಸಚಿವ ವರದಿ ಸಲ್ಲಿಸುವಾಗ ನಾಲ್ವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಎಲ್ಲಾ ವಿಚಾರಗಳ ನಡುವೆ ಇಂದು ನೋಟು ಅಮ್ಯಾನೀಕರಣವಾಗಿ ಐದು ವರ್ಷವಾದ ಹಿನ್ನೆಲೆ ಮೇಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಮೇಮ್ಸ್‌ಗಳನ್ನು ನೋಡಲು ಮುಂದೆ ಓದಿ.

ಎಲ್ಲವೂ ಹಾಗೆಯೇ ಇದೆ ಮಾರಾಯಾ!

ಟ್ವೀಟ್‌ ಒಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ವ್ಯಂಗ್ಯ ಮಾಡಲಾಗಿದೆ. ಫೋಟೋ ಒಂದನ್ನು ಎಡಿಟ್ ಮಾಡಲಾಗಿದ್ದು, ಅದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಮಾಡಿ ಈ ಐದು ಆದರೂ ಯಾವುದೇ ಬದಲಾವಣೆ ಆಗಿಲ್ಲ ಮಾರಾಯ ಎಂದು ಹೇಳುವಂತೆ ಫೋಟೋವನ್ನು ಎಡಿಟ್‌ ಮಾಡಿ ಮೇಮ್‌ ಮಾಡಲಾಗಿದೆ. ಈ ನೋಟು ಬ್ಯಾನ್‌ ಮಾಡಿದ ಬಳಿಕ ದೇಶದಲ್ಲಿ ಕಪ್ಪು ಹಣ ಹತೋಟಿಗೆ ಬರಲಿದೆ, ಈ ಮೂಲಕ ಭಯೋತ್ಪಾದನೆ ತಗ್ಗಲಿದೆ ಎಂದು ನರೇಂದ್ರ ಮೋದಿ ಹೇಳಿದ್ದರು. ಆದರೆ ಪ್ರಸ್ತುತ ಯಾವುದೇ ಬದಲಾವಣೆಗಳು ಕಂಡು ಬಂದಿರದ ಕಾರಣ ಈ ರೀತಿ ಮೇಮ್‌ ಮಾಡಲಾಗುತ್ತಿದೆ.

ಮರಣ ವಾರ್ಷಿಕೋತ್ಸವ!

ಇನ್ನು 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳು ರದ್ದು ಆಗಿ ಐದು ವರ್ಷಗಳು ಆದ ಕಾರಣದಿಂದಾಗಿ ಈ ದಿನವನ್ನು 500 ರೂಪಾಯಿ ಹಾಗೂ 1,000 ರೂಪಾಯಿ ನೋಟುಗಳ ಮರಣ ವಾರ್ಷಿಕೋತ್ಸವ ಎಂದು ಕೂಡಾ ಮೇಮ್ಸ್‌ ಮಾಡಲಾಗುತ್ತಿದೆ. ಈ ಐದು ವರ್ಷದ ಮರಣ ವಾರ್ಷಿಕೋತ್ಸವದಂದು ನಾವು 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ನಾವು ನೆನೆಯುತ್ತೇವೆ ಎಂದು ವ್ಯಂಗ್ಯ ಮಾಡಲಾಗಿದೆ.

ಮೇಮ್ಸ್‌ ಆಗುತ್ತಿರುವ ಈ ವ್ಯಕ್ತಿ

ಈ ನಡುವೆ ಈ ನೋಟು ಬ್ಯಾನ್‌ ಆಗಿ ನೀವು ಈ ಚಳಿಯಲ್ಲಿಯೂ ಸರತಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ನೀವು ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ವ್ಯಕ್ತಿಯೋರ್ವ ಬಾಯಿಗೆ ಬಂದಂತೆ ಬೈದಿದ್ದು ಕೂಡಾ ಮೇಮ್ಸ್‌ ಮಾಡಲಾಗುತ್ತಿದೆ. ನಾವು ಈ ನೋಟು ಅಮ್ಯಾನೀಕರಣದಿಂದಾಗಿ ಪಡೆದ ಏಕೈಕ ಲಾಭ ಎಂದರೆ ಈ ಮೇಮ್ಸ್‌ ದೊರೆತದ್ದು ಎಂದು ಓರ್ವ ವ್ಯಕ್ತಿ ಟ್ವೀಟ್‌ ಮಾಡಿದ್ದಾರೆ. ಈ ಐಕಾನಿಕ್‌ ಮೇಮ್‌ನ ಐದನೇ ವಾರ್ಷಿಕೋತ್ಸವ. ಈ ವ್ಯಕ್ತಿ ಮನೆಯಲ್ಲಿಯೇ ಇದ್ದನೇ ಎಂದು ನಾವು ಭಾವಿಸುತ್ತೇವೆ ಎಂದು ಕೂಡಾ ಮೇಮ್ಸ್‌ ಮಾಡಲಾಗಿದೆ. ಇನ್ನು ಕೆಲವರು ಈ ವ್ಯಕ್ತಿಯ ನೆನಪು ನಿಮಗೆ ಇರಬಹುದು ಎಂದು ಮೇಮ್‌ ಅನ್ನು ಟ್ವೀಟ್‌ ಮಾಡಿದ್ದಾರೆ.

  Pakistanದಲ್ಲಿ Petrol ಬೆಲೆ ಎಷ್ಟು ಗೊತ್ತಾ | Oneindia Kannada

  ಶಶಿ ತರೂರ್‌ ಟ್ವೀಟ್‌ ನೋಡಿ..

  ಇನ್ನು ಶಶಿ ತರೂರ್‌ ಸಣ್ಣ ವಿಡಿಯೋ ಓಂದನ್ನು ಟ್ವೀಟ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ನನ್ನ ಪ್ರೀತಿಯ ದೇಶವಾಸಿಗಳೇ, ನನಗೆ ಕೆಲವೇ ದಿನ ಸಹಾಯ ಮಾಡಿ ಎಂದು ಹೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿ ಕಪ್ಪು ಹಣ್ಣಗಳ ಮೇಲೆ ಬಾಣ ಬಿಡುತ್ತಿರುವುದು ಕಂಡು ಬಂದಿದೆ. ಆದರೆ ಆ ಬಾಣ ಮಾತ್ರ ಕಪ್ಪು ಹಣದ ಮೇಲೆ ಬೀಳದೆ ತರಕಾರಿ ಮಾಡುವ ವ್ಯಕ್ತಿಯ ಅಂಗಡಿಗೆ, ಕಾರ್ಮಿಕನಿಗೆ, ಕೃಷಿ ಬೆಳೆಗೆ, ಎಟಿಎಂಗೆ ಹಾಗೂ ಜನ ಸಾಮಾನ್ಯರ ಮೇಲೆ ಬಾಣ ಬಿದ್ದಂತೆ ಕಂಡು ಬಂದಿದೆ. ಅಂದರೆ ಈ ಕಪ್ಪು ಹಣವನ್ನು ತಡೆಯಲು ಮಾಡಿದ ನೋಟು ಅಮಾನ್ಯೀಕರಣ ದೇಶದ ಬಡ ಜನರಿಗೆ ಸಂಕಷ್ಟವನ್ನು ತಂದಿದೆ ಎಂದು ಈ ಮೂಲಕ ತೋರಿಸಲಾಗಿದೆ. "ಇಂದಿಗೆ ಐದು ವರ್ಷಗಳ ಹಿಂದೆ, ಹಠಾತ್-ಕಲ್ಪಿತ, ಕೆಟ್ಟ ಚಿಂತನೆಯ, ಕಳಪೆ ಅನುಷ್ಠಾನದ ನಿರ್ಧಾರವು ನಮ್ಮ ಆರ್ಥಿಕತೆಯ ತಳವನ್ನು ಅಳುಗಾಡಿಸಿದೆ. ಇದಕ್ಕೆ ಯಾರು ಹೊಣೆ ಎಂದು ನಾವು ಪ್ರಶ್ನೆ ಮಾಡುವ ಸಮಯ ಇದು," ಎಂದು ಶಶಿ ತರೂರು ಹೇಳಿದ್ದಾರೆ.

  English summary
  5 Years Of Demonetization: Here's demonitization day memes.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X