ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nobel Peace Prize- ಅಲೆಸ್ ಬಯಾಲಿಯಾಸ್ಕಿ, ಮೆಮೋರಿಯಲ್, ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್‌ಗೆ 2022 ನೊಬೆಲ್ ಶಾಂತಿ ಪ್ರಶಸ್ತಿ

|
Google Oneindia Kannada News

ನವದೆಹಲಿ, ಅ. 7: ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಒಬ್ಬ ವ್ಯಕ್ತಿ ಹಾಗೂ ಎರಡು ಸಂಘಟನೆಗಳಿಗೆ ನೀಡಲಾಗಿದೆ. ಬೆಲಾರಸ್ ದೇಶದ ಮಾನವ ಹಕ್ಕು ಹೋರಾಟಗಾರ ಅಲೆಸ್ ಬಯಾಲಿಯಾಸ್ಕಿ ಮತ್ತು ರಷ್ಯಾದ ಮೆಮೋರಿಯಲ್ ಮತ್ತು ಉಕ್ರೇನ್‌ನ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆಗಳಿಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿದೆ.

ಮೆಮೋರಿಯಲ್ ಮತ್ತು ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ರಷ್ಯಾ ಹಾಗೂ ಉಕ್ರೇನ್ ದೇಶಗಳ ಮಾನವ ಹಕ್ಕು ಸಂಘಟನೆಗಳಾಗಿವೆ. ಬೆಲಾರಸ್, ರಷ್ಯಾ ಮತ್ತು ಉಕ್ರೇನ್ ದೇಶಗಳ ಮಾನವ ಹಕ್ಕು ಸಂಘಟನೆಗಳಿಗೆ ಪ್ರಶಸ್ತಿ ನೀಡಲಾಗಿದೆ.

2022 Nobel Peace Prize awarded to human rights advocate Ales Bialiatski

2022ರಲ್ಲಿ ನೀಡಲಾದ ನೊಬೆಲ್ ಪ್ರಶಸ್ತಿಗಳ ವಿವರ ಇಲ್ಲಿದೆ:
ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ: ಅಲೇನ್ ಆಸ್ಪೆಕ್ಟ್, ಜಾನ್ ಎಫ್ ಕ್ಲೌಸರ್, ಆಂಟೋನ್ ಝೇಲಿಂಗರ್
ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ: ಕೆರೋಲಿನ್ ಆರ್ ಬೆರ್ತೋಜಿ, ಮಾರ್ಟನ್ ಮೆಲ್ಡಾಲ್, ಕೆ ಬ್ಯಾರಿ ಶಾರ್ಪ್ಲೆಸ್
ವೈದ್ಯಕೀಯ ವಿಜ್ಞಾನದಲ್ಲಿ: ಸ್ವಾಂಟೆ ಪಾಬೊ
ಸಾಹಿತ್ಯದಲ್ಲಿ ನೊಬೆಲ್: ಆನೀ ಎರ್ನಾಕ್ಸ್
ಶಾಂತಿ ನೊಬೆಲ್: ಅಲೆಸ್ ಬಯಾಲಿಯಾಸ್ಕಿ, ಮೆಮೋರಿಯಲ್, ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ಪಟ್ಟಿಯಲ್ಲಿದ್ದರಾ ಜುಬೇರ್, ಪ್ರತೀಕ್, ಹರ್ಷ್?
ಕೆಲ ದಿನಗಳಿಂದ ನೊಬೆಲ್ ಶಾಂತಿ ಪುರಸ್ಕಾರ ವಿಚಾರವಾಗಿ ಭಾರತದಲ್ಲಿ ವಿವಾದಗಳೆದ್ದಿದ್ದವು. ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಭಾರತದ ಆಲ್ಟ್ ನ್ಯೂಸ್‌ನ ಮೊಹಮ್ಮದ್ ಜುಬೇರ್, ಪ್ರತೀಕ್ ಸಿನ್ಹಾ ಮತ್ತು ಹರ್ಷ್ ಮಂದರ್ ಅವರ ಹೆಸರು ಅನಧಿಕೃತ ಪಟ್ಟಿಯಲ್ಲಿ ಇದೆ ಎಂಬಂತಹ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಟೈಮ್ಸ್ ಪತ್ರಿಕೆಯಲ್ಲಿ ಮೊದಲು ಇದರ ಸುದ್ದಿಯಾಗಿ ನಂತರ ಆ ಮೂಲಕ ಭಾರತೀಯ ಮಾಧ್ಯಮಗಳಲ್ಲಿ ಸುದ್ದಿ ಕಾಣಿಸಿಕೊಂಡಿತ್ತು. ನೊಬೆಲ್ ಶಾಂತಿ ಪ್ರಶಸ್ತಿಗೆ ಈ ಮೂವರು ಫೇವರಿಟ್‌ಗಳೆಂದು ಹೇಳಲಾಗಿತ್ತು.

ಅಲೆಸ್ ಬಿಯಾಲಿಯಾಸ್ಕಿ ಯಾರು?
ಬೆಲಾರಸ್ ದೇಶದಲ್ಲಿ ಎಂಬತ್ತರ ದಶಕದಲ್ಲಿ ಪ್ರಜಾತಂತ್ರ ಚಳವಳಿ ಆರಂಭ ಮಾಡಿದವರ ಮೊದಲಿಗರಲ್ಲಿ ಅಲೆಸ್ ಬಯಾಲಿಯಾಸ್ಕಿ ಒಬ್ಬರು. 1996ರಲ್ಲಿ ವಿಯಾಸ್ನಾ (ವಸಂತ ಕಾಲ ಎಂದರ್ಥ) ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅಂದಿನ ಅಧ್ಯಕ್ಷರು ಸರ್ವಾಧಿಕಾರ ಪಡೆಯಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಹೊರಟಾಗ ವಿಯಾಸ್ನಾ ಸಂಘಟನೆಯನ್ನು ಕಟ್ಟಿ ಆ ಮೂಲಕ ಎಲ್ಲೆಡೆ ಜನಪ್ರತಿಭಟನೆಗೆ ಕಿಚ್ಚೆಬ್ಬಿಸಿದವರು ಅಲೆಸ್.

ಅಲೆಸ್ ಬಿಯಾಲಿಯಾಸ್ಕಿ ಅವರ ವಿಯಾಸ್ನಾ ಸಂಘಟನೆ ಹೋಗಹೋಗುತ್ತಾ ಮಾನವ ಹಕ್ಕು ಹೋರಾಟಕ್ಕೆ ಮುಡಿಪಾಗತೊಡಗಿತು. ಅಧಿಕಾರ ವರ್ಗದ ದರ್ಪ, ದೌರ್ಜನ್ಯ ವಿರುದ್ಧ ಜನಹೋರಾಟಕ್ಕೆ ಪ್ರೇರೇಪಿಸತೊಡಗಿತು.

ಮೆಮೋರಿಯಲ್:
ಸೋವಿತ್ ರಷ್ಯಾ ಅವಧಿಯಲ್ಲಿ ಹುಟ್ಟಿಕೊಂಡ ಮಾನವ ಹಕ್ಕು ಸಂಘಟನೆ ಇದು. ಕಮ್ಯೂನಿಸ್ಟ್ ಆಡಳಿತದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಕಾರ್ಯವನ್ನು ಇದು ಮಾಡುತ್ತಿತ್ತು. ಹಿಂದೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದ ಆಂಡ್ರೇ ಸಖರೋವ್ ಮತ್ತು ಮಾನವ ಹಕ್ಕು ಹೋರಾಟಗಾರ್ತಿ ಸ್ವೆಟ್ಲಾನ ಗನ್ನುಶ್ಕಿನಾ ಅವರು ಮೆಮೋರಿಯಲ್‌ನ ಸಂಸ್ಥಾಕರು.

ಹಿಂದಿನ ಅಪರಾಧಗಳನ್ನು ಕಲೆಹಾಕಿದರೆ ಮುಂಬರುವ ಅಪರಾಧಗಳನ್ನು ತಡೆಯಬಹುದು ಎಂಬ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡ ಸಂಘಟನೆ. ಆದರೆ, ಸೋವಿಯತ್ ರಷ್ಯಾ ಪತನದ ಬಳಿಕ ಮೆಮೋರಿಯಲ್ ಸಂಘಟನೆ ರಷ್ಯಾದ ಅತಿದೊಡ್ಡ ಮಾನವ ಹಕ್ಕು ಸಂಸ್ಥೆಯಾಗಿ ಬೆಳೆಯಿತು.

ಚೆಚೆನ್ಯಾ ಯುದ್ಧದಲ್ಲಿ ರಷ್ಯಾ ಆಡಳಿತ ಮತ್ತು ಸೇನೆ ನಡೆಸಿದ ಯುದ್ಧಾಪರಾಧಗಳನ್ನು ಮೆಮೋರಿಯಲ್ ಎತ್ತಿತೋರಿಸುವ ಕೆಲಸ ಆಡಿತು. ರಷ್ಯಾ ಆಡಳಿತದಿಂದ ಪ್ರಾಣಾಪಾಯ ಇದ್ದರೂ ಲೆಕ್ಕಿಸದೇ ಮೆಮೋರಿಯಲ್ ಕಾರ್ಯಕರ್ತರು ಶ್ರದ್ಧೆಯಿಂದ ಕೆಲಸ ಮಾಡಿದ್ದರು.

ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್
ಉಕ್ರೇನ್‌ನ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ 2007ರಲ್ಲಿ ಕಿಯಿವ್‌ನಲ್ಲಿ ಸ್ಥಾಪನೆ ಆಯಿತು. ಉಕ್ರೇನ್‌ನಲ್ಲಿ ಮಾನವ ಹಕ್ಕು ಮತ್ತು ಪ್ರಜಾತಂತ್ರ ಹಕ್ಕಿಗಾಗಿ ಹೋರಾಡುವ ಉದ್ದೇಶದಿಂದ ಈ ಸಂಘಟನೆ ಶುರುವಾಗಿದ್ದು. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡಿದ ಬಳಿಕ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಬಹಳ ಕೆಚ್ಚೆದೆಯಿಂದ ಕೆಲಸ ಮಾಡಿ, ರಷ್ಯಾದ ಯುದ್ಧಾಪರಾದಗಳನ್ನು ಎತ್ತಿತೋರಿಸುವ ಕೆಲಸ ಮಾಡಿದೆ.

(ಒನ್ಇಂಡಿಯಾ ಸುದ್ದಿ)

English summary
Nobel Peace Prize 2022 is given to human rights advocate and organizations of Belarus, Russia and Ukraine. Ales Bialiatski is human rights advocate in Belarus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X