ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಕೋಲಾರದ ಅಲೆಮಾರಿಗಳಿಗೆ ಸೂರು ಕಟ್ಟಿಕೊಟ್ಟ ರಘುನಾಥ ಮೇಷ್ಟ್ರು

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  "ಗುರುವೇ ಸೋಲಾರ್ ದೀಪವನ್ನು ಅಲ್ಲಿ ಹಾಕಿಸಬೇಕು ಅಂತಿದೀವಿ. ಒಳ್ಳೆಯ ಗುಣಮಟ್ಟದ್ದು ಹಾಗೂ ಸ್ವಲ್ಪ ಕಡಿಮೆ ದುಡ್ಡಿನದು ಎಲ್ಲಿ ಸಿಗಬಹುದು? ಈ ಬಗ್ಗೆ ಮಾಹಿತಿ ಸಿಕ್ಕರೆ ನನಗೆ ತಿಳಿಸಿ" ಅಂದರು ಸ.ರಘುನಾಥ ಮೇಷ್ಟ್ರು. ಅವರ ಮನೆಗೆ ತೆಗೆದುಕೊಳ್ಳುವುದಕ್ಕೆ ಇರಬಹುದಾ ಅಂತ ಅನುಮಾನ ಕೂಡ ಪಡುವಂತಿಲ್ಲ.

  ಆ ಕ್ಷಣ ಯಾರಾದರೊಬ್ಬರು ನಿಲ್ಲಿಸಿ ಮಾತನಾಡಿಸಿದ್ದರೆ!

  ಏಕೆಂದರೆ ಕೆಲವು ತಿಂಗಳಿನಿಂದ ಅವರ ಧ್ಯಾನವೆಲ್ಲ ಆ ಅಲೆಮಾರಿ ಕುಟುಂಬಗಳ ಬಗ್ಗೆಯೇ ಇದೆ. ಅಷ್ಟು ಮಂದಿಗೆ ಸೂರು, ಕೆಲಸ, ಆ ಮಕ್ಕಳಿಗೆ ಸ್ಕೂಲು ಹೀಗೆ ಯಾವ ಸಂದರ್ಭದಲ್ಲಿ ಮಾತನಾಡಿದರೂ ಅದೇ ವಿಚಾರ. ಕೋಲಾರದ ನಿವೃತ್ತ ಮೇಷ್ಟ್ರು ಸ.ರಘುನಾಥ ಅವರು ನಮ್ಮ ಮಕ್ಕಳು, ಹಸಿರು ಹೊನ್ನು ಎಂಬ ಸಂಘಟನೆ ಮಾಡಿಕೊಂಡಿದ್ದಾರೆ.

  ಕಾಲೇಜು ಮೆಟ್ಟಿಲನ್ನೇ ಹತ್ತದ ನಾನು 1954ನೇ ಬ್ಯಾಚಿನ ಎಮ್ಮೆ

  ಅದರ ಮೂಲಕ ಸಮಾಜಕ್ಕೆ ಉಪಯೋಗ ಆಗುವ ಕೆಲಸ ಆಗುತ್ತಲೇ ಇರಬೇಕು ಎಂಬುದು ಅವರ ಉದ್ದೇಶ ಹಾಗೂ ಪ್ರಯತ್ನ. ತಮಿಳುನಾಡಿನ ಸೇಲಂನಲ್ಲಿ ಹತ್ತು ವರ್ಷದ ಹಿಂದೆ ಬಿದ್ದ ಮಳೆಗೆ ತತ್ತರಿಸಿ ಹೋದ ಕೆಲ ಅಲೆಮಾರಿಗಳ ಕುಟುಂಬ ಅಲ್ಲಿಂದ ಹೊರಟು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮುದಿಮಡುಗು ಗ್ರಾಮದ ಹತ್ತಿರ ಸಣ್ಣ ಸಣ್ಣ ಟೆಂಟುಗಳನ್ನು ಹಾಕಿಕೊಂಡಿತ್ತು.

  ಆರು ತಿಂಗಳ ಮಗುವಿನಿಂದ ಎಂಬತ್ತು ವರ್ಷ ಮೇಲ್ಪಟ್ಟವರು

  ಆರು ತಿಂಗಳ ಮಗುವಿನಿಂದ ಎಂಬತ್ತು ವರ್ಷ ಮೇಲ್ಪಟ್ಟವರು

  ಅಲ್ಲಿ ಆರು ತಿಂಗಳು ಮಗುವಿನಿಂದ ಎಂಬತ್ತು ವರ್ಷಕ್ಕೂ ಮೇಲ್ಪಟ್ಟವರು ಇದ್ದರು. ಇವರ್ಯಾರಿಗೂ ಭಾರತೀಯರು ತಾವು ಅಂತ ಹೇಳಿಕೊಳ್ಳುವ ಯಾವ ದಾಖಲೆಯೂ ಇಲ್ಲ. ಶ್ರೀನಿವಾಸಪುರ ಸುತ್ತಮುತ್ತ ಸದಾ ಸುತ್ತಾಡುವ, ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಸ.ರಘುನಾಥ ಅವರ ಕಣ್ಣಿಗೆ ಹತ್ತೊಂಬತ್ತು ಮಂದಿ ಅಲೆಮಾರಿಗಳು ಕಂಡಿದ್ದಾರೆ.

  ಊರಿನ ರಹಸ್ಯವನ್ನೆಲ್ಲ ಬೀದಿಗೆಳೆಯುತ್ತಿದ್ದ ‘ಡೋಂಟ್ ಕೇರ್' ಮುನೆಪ್ಪ

  ದುಡಿಮೆಗೆ ದಾರಿ, ಜತೆಗೆ ಸೂರು

  ದುಡಿಮೆಗೆ ದಾರಿ, ಜತೆಗೆ ಸೂರು

  ದುಡಿಮೆಯಲ್ಲಿ ಮೈಗಳ್ಳತನ ಮಾಡಲಾರರು ಎಂಬುದನ್ನು ಖಾತ್ರಿಪಡಿಸಿಕೊಂಡು, ಶ್ರೀನಿವಾಸಪುರದಲ್ಲೇ ಟೊಮೆಟೊ ಬೆಳೆಯುವ ಕಡೆ ಕೆಲಸಕ್ಕೆ ವ್ಯವಸ್ಥೆ ಮಾಡಿಕೊಟ್ಟು, ಇವರೆಲ್ಲ ವಾಸಿಸಲು ಅನುಕೂಲವಾಗುವಂತೆ ತಮ್ಮ ಸಂಘಟನೆಯಿಂದ ಮೊರಕಿಂದಿಪಲ್ಲಿಯ ಹತ್ತಿರ ಮನೆಗಳನ್ನು ಕಟ್ಟಿಸಿಕೊಡುತ್ತಿದ್ದಾರೆ. ಇಂಥ ಕೈಂಕರ್ಯಕ್ಕೆ ಸ್ಥಳೀಯ ಗ್ರಾಮಸ್ಥರೂ ಕೈ ಜೋಡಿಸಿದ್ದಾರೆ.

  ರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆ

  ನೆರವು ಪಡೆಯಲು ಕೆಲ ನಿಯಮ

  ನೆರವು ಪಡೆಯಲು ಕೆಲ ನಿಯಮ

  ರಘುನಾಥ ಮೇಷ್ಟ್ರ ಈ ಕೆಲಸ ಇಲ್ಲಿ ಬರೆದಷ್ಟು ಸಲೀಸಾಗಿ ಆಗಿಲ್ಲ. ಅದಕ್ಕಾಗಿ ತಮ್ಮ ಉಳಿತಾಯ ಅಂತಿದ್ದದ್ದನ್ನೂ ಸೇರಿಸಿ ಸಾಕಷ್ಟು ಹಣ, ಶ್ರಮವನ್ನು ಧಾರೆ ಎರೆದಿದ್ದಾರೆ ರಘುನಾಥ. ಕನ್ನಡದ ಪ್ರಮುಖ ದಿನಪತ್ರಿಕೆಯೊಂದರ ಸಿಬ್ಬಂದಿಗೆ ಈ ವಿಚಾರ ತಿಳಿದು, ಈ ಕಾರ್ಯಕ್ಕಾಗಿ ನೆರವಾಗಿದ್ದಾರೆ. ಆದರೆ ರಘುನಾಥ ಅವರು ಕೆಲ ನಿಯಮ ಇಟ್ಟುಕೊಂಡಿದ್ದಾರೆ.

  ಭೈರಪ್ಪಜ್ಜನ ಆ 'ಒಂದು ರುಪಾಯಿ'ಯ ಮೌಲ್ಯ ಗೂಗಲ್ ಗೂ ಸಿಗಲ್ ವೇನೋ?

  ಮನೆಗಳು ತಲೆ ಎತ್ತಿವೆ

  ಮನೆಗಳು ತಲೆ ಎತ್ತಿವೆ

  ಈ ಕಾರ್ಯಕ್ಕಾಗಿ ನೆರವಾಗುವ ಉದ್ದೇಶ ಇರುವವರು ಯಾರನ್ನೂ ಬಲವಂತ ಮಾಡಿ ಹಣ ಪಡೆಯಬಾರದು, ಪ್ರಾಮಾಣಿಕವಾಗಿ ದುಡಿದ ಹಣ ಅದಾಗಿರಬೇಕು. "ನಿಮ್ಮ ಕೆಲಸಕ್ಕೆ ಈ ಹಣ ಬಳಸಿಕೊಳ್ಳಿ" ಅಂದರೆ ಮೊದಲಿಗೆ ತಮ್ಮ ನಿಯಮವನ್ನು ಹೇಳಿಬಿಡುತ್ತಾರೆ. ಹಸಿರು ಹೊನ್ನೂರಿನಲ್ಲಿ ಮನೆಗಳು ತಲೆ ಎತ್ತಿವೆ. ಇನ್ನೇನು ಕೆಲ ದಿನಕ್ಕೆ ಇಲ್ಲಿಗೆ ಅಲೆಮಾರಿ ಕುಟುಂಬಗಳು ಜೀವನ ಆರಂಭಿಸುತ್ತವೆ.

  ಎಲ್ಲೆ ಮೀರಿಯೂ ಎಲ್ಲೇ ಇದ್ದರೂ ಶರಣಯ್ಯ ಶ್ರದ್ಧಾಳು ವೈದ್ಯರಿಗೆ

  ಇನ್ನಷ್ಟು ದುಡಿಮೆಗೆ ಹಾದಿ

  ಇನ್ನಷ್ಟು ದುಡಿಮೆಗೆ ಹಾದಿ

  ಆದರೆ, ಈ ಕುಟುಂಬಗಳಿಗೆ ಸ್ವಾವಲಂಬಿಯಾಗಿ ಬದುಕಲು, ಶ್ರಮ ಸಂಸ್ಕೃತಿ ಅನುಸರಿಸಿದರೆ ಹೇಗೆ ಬದಲಾವಣೆ ಆಗಲು ಸಾಧ್ಯ ಎಂದು ಸಾಬೀತು ಪಡಿಸಲು ಇನ್ನಷ್ಟು ದುಡಿಮೆಯ ಹಾದಿ ಮಾಡಬೇಕು ಎಂಬುದು ಸ.ರಘುನಾಥ ಅವರ ಆಶಯ. ಇತ್ತೀಚೆಗೆ ಕಣ್ಣಿನ ಸಮಸ್ಯೆಯೊಂದು ಅವರ ಜತೆಗಾರನಾಗಿದೆ. "ಕಣ್ಣು ಸರಿಯಾಗಿರುವಾಗಲೇ ಈ ಕುಟುಂಬಗಳ ಬದುಕು ಚೆನ್ನಾಗಾಗಿ ಬಿಡಬೇಕು ಗುರುವೇ" ಎಂದು ಹೇಳುತ್ತಾರೆ ರಘುನಾಥ.

  ನೂರಹತ್ತು ವರ್ಷದ ವನಸುಮ ಸಾಕಲೋಳ್ಳ ವೆಂಕಟಮ್ಮ

  ಸರಕಾರಿ ದಾಖಲೆಗಳಲ್ಲಿ ಇವರ ಹೆಸರು

  ಸರಕಾರಿ ದಾಖಲೆಗಳಲ್ಲಿ ಇವರ ಹೆಸರು

  ಈ ಕುಟುಂಬಗಳ ಹೆಸರನ್ನು ಸರಕಾರಿ ದಾಖಲೆಗಳಲ್ಲಿ ದಾಖಲಾಗುವಂತೆ ಮಾಡಬೇಕು. ಆಧಾರ್, ರೇಷನ್ ಕಾರ್ಡ್ ಮಾಡಿಸಬೇಕು...ಹೀಗೆ ವಿವಿಧ ಯೋಚನೆಗಳು ಸದ್ಯ ಇವರಿಗಿದೆ. ನಿಮ್ಮೂರಿನ ಜನಪ್ರತಿನಿಧಿಗಳನ್ನು ಕೇಳಿ, ಇವರೆಲ್ಲರ ವಿಷಯ ಅವರ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರೆ, ಎಂದಿನ ಶೈಲಿಯಲ್ಲಿ ನಕ್ಕು ಮಾತನ್ನೇ ಅಲ್ಲಿಗೆ ನಿಲ್ಲಿಸಿಬಿಡುತ್ತಾರೆ ಮೇಷ್ಟ್ರು.

  ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಮಹಾತಾಯಿ ಪದ್ಮಸಾಲಿ ಲಕ್ಷ್ಮೀದೇವಮ್ಮ

  ಅಂದಹಾಗೆ ನಿಮಗೆ ಈ ಕೆಲಸದಲ್ಲಿ ನೆರವಾಗುವ ಮನಸ್ಸಿದ್ದರೆ ಸ ರಘುನಾಥ, ಮೊಬೈಲ್ ಫೋನ್ ಸಂಖ್ಯೆ 9980593921 ಸಂಪರ್ಕಿಸಬಹುದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  19 nomads will get shelter in Morakindapalli Srinivasapura taluk, Kolar district by Namma Makkalu and Hasiru Honnu organisation. A heart touching story,

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more