ಭಾರತ ಬಂದ್‌ಗೂ ಮುನ್ನ ಪಂಜಾಬ್ ಸಿಎಂ ಹಾಗೂ ಮುಖೇಶ್ ಅಂಬಾನಿ ಭೇಟಿಯಾಗಿದ್ದರೇ?
ನವದೆಹಲಿ, ಡಿಸೆಂಬರ್ 10: ರೈತರು ಕರೆ ನೀಡಿದ್ದ ಭಾರತ್ ಬಂದ್ ಮುನ್ನಾ ದಿನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮುಖೇಶ್ ಅಂಬಾನಿಯವರನ್ನು ಭೇಟಿಯಾಗಿದ್ದರು ಎನ್ನುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅದಕ್ಕೆ ಪುಷ್ಠಿ ಎಂಬಂತೆ ಮುಖೇಶ್ ಅಂಬಾನಿ ಹಾಗೂ ಅಮರಿಂದರ್ ಇಬ್ಬರು ಜೊರೆಗಿರುವ ಫೋಟೊಗಳು ಕೂಡ ವೈರಲ್ ಆಗಿವೆ.ಮುಂಬೈನಲ್ಲಿ ಭಾರತ ಬಂದ್‌ಗೂ ಒಂದು ದಿನ ಮೊದಲು ಅಮರಿಂದರ್ ಸಿಂಗ್ ಮುಖೇಶ್ ಅಂಬಾನಿಯವರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.
ರೈತರ ಪ್ರತಿಭಟನೆ ವಿಚಾರವಾಗಿ ಅಮಿತ್ ಶಾ ನೀಡಿರುವ ಪ್ರಸ್ತಾಪವನ್ನು ಅಮಿರೀದರ್ ಸಿಂಗ್ ಒಪ್ಪಿಕೊಂಡಿದ್ದಾರೆ. ಪಂಜಾಬಿನ ಅಭಿವೃದ್ಧಿ ಯೋಜನೆಗಳ ಕುರಿತು ಅಂಬಾನಿ ಜತೆ ಮಾತುಕತೆ ನಡೆಸಿದ್ದಾರೆ. ಇದು ಯಾವ ರೀತಿಯ ರಾಜಕೀಯ ಎಂದು ಜನರು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ಹೊಸ ಕೃಷಿ ಕಾಯ್ದೆಯು ಮುಖೇಶ್ ಅಂಬಾನಿ, ಗೌತಮ್ ಅದಾನಿ ಅವರಿಗೆ ಸಹಕಾರಿಯಾಗಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.
ಆದರೆ ಈ ದೂರುಗಳೆಲ್ಲವೂ ಸುಳ್ಳು, ಈ ಫೋಟೊವನ್ನು 2017ರ ಅಕ್ಟೋಬರ್ 31 ರಂದು ಪೋಸ್ಟ್ ಮಾಡಿದ್ದರು. ಪಂಜಾಬ್‌ನ ವಿವಿಧ ಹೂಡಿಕೆ ಮತ್ತು ಕೈಗಾರಿಕಾ ಅಭಿವೃದ್ಧಿ ಅವಕಾಶಗಳ ಬಗ್ಗೆ ಚರ್ಚೆ ನಡೆಸಿ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದರು.
ಭಾರತ್ ಬಂದ್ ಮುನ್ನಾ ದಿನ ಅಮರಿಂದರ್ ಸಿಂಗ್ ಅವರು ಮುಖೇಶ್ ಅಂಬಾನಿಯನ್ನು ಭೇಟಿಯಾಗಿದ್ದರು ಎನ್ನುವ ಸುದ್ದಿ ಸುಳ್ಳು, ಅದು 2017ರಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಚಿತ್ರವಾಗಿದೆ. ಹಾಗೆಯೇ ಮುಖೇಶ್ ಅಂಬಾನಿ ಹಾಗೂ ಅಮರಿಂದರ್ ಸಿಂಗ್ ರೈತರ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ.

Fact Check
ಕ್ಲೇಮು
ಭಾರತ್ ಬಂದ್‌ಗೂ ಮೊದಲು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹಾಗೂ ಮುಖೇಶ್ ಅಂಬಾನಿ ಭೇಟಿಯಾಗಿದ್ದರು
ಪರಿಸಮಾಪ್ತಿ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊ 2017ದ್ದಾಗಿದ್ದು, ಭಾರತ ಬಂದ್‌ಗೂ ಮುನ್ನ ಅಮರಿಂದರ್ ಸಿಂಗ್ ಹಾಗೂ ಮುಖೇಶ್ ಅಂಬಾನಿ ಭೇಟಿಯಾಗಿರಲಿಲ್ಲ.












Click it and Unblock the Notifications