ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಭಾರತೀಯ ರೈಲ್ವೆ 10 ಹೊಸ ನಿಯಮ ಜಾರಿ ಮಾಡಿದೆಯೇ?

|
Google Oneindia Kannada News

ನವದೆಹಲಿ, ಜೂ.23: ಹಲವಾರು ರಾಜ್ಯಗಳು ಕೋವಿಡ್ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಮೂಲಕ, ನಮ್ಮಲ್ಲಿ ಹಲವಾರು ಮಂದಿ ಪ್ರಯಾಣ ನಿಯಮ ಸಡಿಲಿಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಈ ನಡುವೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈ 1 ರಿಂದ 10 ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ ಎಂದು ನಂಬಿದ್ದಾರೆ.

ಈ ನಿಮಯದ ಪಟ್ಟಿಯಲ್ಲಿ ಸುವಿದಾ ಎಕ್ಸ್‌ಪ್ರೆಸ್‌ನಲ್ಲಿ ದೃಢಪಡಿಸಿದ ಟಿಕೆಟ್‌ಗಳು, ತತ್ಕಾಲ್ ಬುಕಿಂಗ್‌ಗಾಗಿ ನಿಗದಿತ ಸಮಯ, ರಾಜಧಾನಿ ಮತ್ತು ಶತಾಬ್ದಿ ರೈಲುಗಳಿಗೆ ಟಿಕೆಟಿಂಗ್ ಸೌಲಭ್ಯ ಮತ್ತು ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲಿ ಟಿಕೆಟ್‌ಗಳು ಸೇರಿವೆ.

ಹಳೆಯ 10, 5 ನಾಣ್ಯಗಳನ್ನು ಮಾರಿ ಸಾಕಷ್ಟು ಹಣ ಗಳಿಸಿ, ಷರತ್ತು ಅನ್ವಯ!ಹಳೆಯ 10, 5 ನಾಣ್ಯಗಳನ್ನು ಮಾರಿ ಸಾಕಷ್ಟು ಹಣ ಗಳಿಸಿ, ಷರತ್ತು ಅನ್ವಯ!

ಈ 10 ಹೊಸ ನಿಯಮಗಳ ಪಟ್ಟಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಆದರೆ ಈ ಬಗ್ಗೆ ಇಂಡಿಯಾ ಟುಡೆ (ಎಎಫ್‌ಡಬ್ಲ್ಯೂಎ) ಫಾಕ್ಟ್‌ ಚೆಕ್‌ ಮಾಡಿದ್ದು ಈ ವೈರಲ್‌ ಪೋಸ್ಟ್‌ ಸುಳ್ಳು ಎಂದು ಕಂಡುಕೊಂಡಿದೆ.

Fact Check: Old social media post on new train rules again viral in social media

ಫಾಕ್ಟ್‌ ಚೆಕ್‌ ಪ್ರಕಾರ, ಜುಲೈ 1 ರಿಂದ ಅಂತಹ ಯಾವುದೇ ನಿಯಮಗಳು ಜಾರಿಗೆ ಬಂದಿಲ್ಲ. ಈ ಸಂದೇಶವು 2015 ರಲ್ಲಿಯೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ರೈಲ್ವೆ ಇದು ಆಧಾರರಹಿತವಾಗಿದೆ ಎಂದು ಹಲವು ಬಾರಿ ಸ್ಪಷ್ಟಪಡಿಸಿದೆ.

ಇಂಟರ್‌ನೆಟ್‌ನಲ್ಲಿ ಹುಡುಕಿದ ಸಂದರ್ಭ ಇಂಡಿಯಾ ಟುಡೆಗೆ ಈ ಪೋಸ್ಟ್‌ 2015 ರ ಹಿಂದೆಯದ್ದು ಎಂದು ತಿಳಿದುಬಂದಿದೆ. 2015 ರಲ್ಲಿ ಕೆಲವು ಸುದ್ದಿ ವೆಬ್‌ಸೈಟ್‌ಗಳು ಇದರ ಮಾಹಿತಿಯನ್ನು ಪ್ರಕಟ ಕೂಡಾ ಮಾಡಿದೆ.

2017 ರಲ್ಲಿ ರೈಲ್ವೆ ಸಚಿವಾಲಯವು ವೈರಲ್ ಸಂದೇಶದ ಬಗ್ಗೆ ವಿವರವಾದ ಸ್ಪಷ್ಟೀಕರಣವನ್ನು ನೀಡಿದೆ. ''ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ. ಭಾರತೀಯ ರೈಲ್ವೆಯ ಅಧಿಕೃತ ಮೂಲಗಳಿಂದ ಪರಿಶೀಲಿಸದೆ ಒಂದು ಭಾಗದ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿವೆ. ಇದು ರೈಲು ಪ್ರಯಾಣಿಕರ ಮನಸ್ಸಿನಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದೆ,'' ಎಂದು ತಿಳಿಸಿದೆ.

ರೈಲ್ವೆ ಆನ್‌ಲೈನ್ (ಇ-ಟಿಕೆಟ್) ಮತ್ತು ಪಿಆರ್‌ಎಸ್ ಕೌಂಟರ್‌ಗಳ ಮೂಲಕ ವೇಟ್‌ಲಿಸ್ಟ್ ಮಾಡಿದ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಅಂದಿನಿಂದ ಈ ಯೋಜನೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. "ಆದಾಗ್ಯೂ ಪ್ರಯಾಣಿಕರ ಬೇಡಿಕೆಯ ಹೆಚ್ಚಳಕ್ಕೆ ಅನುಗುಣವಾಗಿ ಹೆಚ್ಚಿನ ರೈಲುಗಳನ್ನು ಯೋಜಿಸಲಾಗಿದೆ. ಇದು ವೇಟಿಂಗ್‌ ಲಿಸ್ಟ್‌ಅನ್ನು ಗಮನಾರ್ಹವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ," ಎಂದು ಭಾರತೀಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲ್ವೆ ಹೊಸ ಮರುಪಾವತಿ ನಿಯಮಗಳನ್ನು ನವೆಂಬರ್ 2015 ರಲ್ಲೆ ಜಾರಿಗೆ ತರಲಾಗಿದ್ದು, ಈ ನಿಯಮಗಳು ಇನ್ನೂ ಮುಂದುವರೆದಿದೆ. ಇದಲ್ಲದೆ, ಶತಾಬ್ದಿ ಮತ್ತು ರಾಜಧಾನಿ ರೈಲುಗಳಿಗೆ ಪೇಪರ್ ಟಿಕೆಟ್ ನಿಲ್ಲಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ರೈಲ್ವೆ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಆನ್‌ಲೈನ್‌ನಲ್ಲಿ ತಮ್ಮ ಆಸನಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ, ಇಮೇಲ್ ಅಥವಾ ಎಸ್‌ಎಂಎಸ್‌ನಲ್ಲಿ ಪಡೆದ ಟಿಕೆಟ್ ಮಾನ್ಯ ದಾಖಲೆಯಾಗಿದೆ, ಆದರೆ ಅದರೊಂದಿಗೆ ಐಡಿ ಪ್ರೂಫ್ ಇರಬೇಕಾಗಿದೆ.

''ತತ್ಕಾಲ್ ಟಿಕೆಟ್‌ಗಳ ಸ್ಥಗಿತ ಸಮಯವನ್ನು 2015 ರಲ್ಲಿಯೂ ತಿಳಿಸಲಾಗಿದೆ. ಹಾಗೆಯೇ ಟಿಕೆಟ್‌ಗಳನ್ನು (ಇ-ಟಿಕೆಟ್‌ಗಳು ಮತ್ತು ಪಿಆರ್‌ಎಸ್ ಎರಡೂ) ಪ್ರಾದೇಶಿಕ ಭಾಷೆಗಳಲ್ಲಿ ಮುದ್ರಿಸುವ ಯಾವುದೇ ಪ್ರಸ್ತಾಪವಿಲ್ಲ,'' ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷವೂ ಕೋವಿಡ್ -19 ಲಾಕ್‌ಡೌನ್ ನಂತರ ರೈಲ್ವೆ ತನ್ನ ಮಾರ್ಗಸೂಚಿಗಳನ್ನು ಬದಲಾಯಿಸಿದೆ ಎಂದು ಸಂದೇಶಗಳು ವೈರಲ್ ಆಗಿದ್ದವು. ಆಗ ಭಾರತೀಯ ರೈಲ್ವೆ ಇದು ಊಹಾತ್ಮಕ ಮತ್ತು ತಪ್ಪಾದ ಮಾಹಿತಿ ಎಂದು ಸ್ಪಷ್ಟಪಡಿಸಿತ್ತು.

(ಒನ್‌ಇಂಡಿಯಾ ಸುದ್ದಿ)

Fact Check

ಕ್ಲೇಮು

ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈ 1 ರಿಂದ 10 ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ

ಪರಿಸಮಾಪ್ತಿ

ಭಾರತೀಯ ರೈಲ್ವೆ ಯಾವುದೇ ಹೊಸ ನಿಯಮಗಳನ್ನು ರೂಪಿಸಿಲ್ಲ. ಈಗಾಗಲೇ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ ಎಂದು ಭಾರತೀಯ ರೈಲ್ವೆ ತಿಳಿಸಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Old social media post on new train rules again viral in social media. Read more..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X