ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ‘ಕಚ್ಚಾ ಬಾದಮ್’ ಹಾಡಿಗೆ ಪೊಲೀಸರು ಡ್ಯಾನ್ಸ್ ಮಾಡಿದ್ದು ನಿಜವೇ?

|
Google Oneindia Kannada News

ಹೊಸದಿಲ್ಲಿ ಏಪ್ರಿಲ್ 11: ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಹಾಡುಗಳು ವೈರಲ್ ಆಗುತ್ತಲೇ ಇರುತ್ತವೆ. ಇದರಲ್ಲಿ 'ಕಚ್ಚಾ ಬಾದಂ' ಹಾಡು ಕೂಡ ಒಂದು. ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರ 'ಕಚ್ಚಾ ಬಾದಮ್' ಹಾಡಿಗೆ ಜನ ಫುಲ್ ಫಿದಾ ಆಗಿದ್ದಾರೆ. ಮಾತ್ರವಲ್ಲದೆ ಜನರು 'ಕಚ್ಚಾ ಬಾದಮ್' ಮ್ಯೂಸಿಕ್ ವಿಡಿಯೊವನ್ನು ಸಹ ಇಷ್ಟಪಟ್ಟಿದ್ದಾರೆ. ಜನ ಸಾಮಾನ್ಯರಲ್ಲದೆ ನಟರು ಕೂಡ ಈ ಹಾಡಿನಲ್ಲಿ ಕುಣಿದು ಕುಪ್ಪಳಿಸುವ ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎನ್ನುವುದರಲ್ಲೇ ಈ ಹಾಡಿನ ಜನಪ್ರಿಯತೆಯನ್ನು ಅಳೆಯಬಹುದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಕೆಲವು ಪೊಲೀಸರು ಸಮವಸ್ತ್ರದಲ್ಲಿ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

Fact check: ಕರೌಲಿ ಮಸೀದಿಯ ಮುಂದೆ ಹಿಂದೂ ಗುಂಪು: ಇದರ ಹಿಂದಿರುವ ಸತ್ಯFact check: ಕರೌಲಿ ಮಸೀದಿಯ ಮುಂದೆ ಹಿಂದೂ ಗುಂಪು: ಇದರ ಹಿಂದಿರುವ ಸತ್ಯ

15 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ 5 ಪೊಲೀಸ್ ಅಧಿಕಾರಿಗಳು 'ಕಚ್ಚಾ ಬಾದಮ್' ಹಾಡಿಗೆ ನೃತ್ಯ ಮಾಡುವುದನ್ನು ನೋಡಬಹುದು. ಈ ಪೊಲೀಸರಲ್ಲಿ ಒಬ್ಬರು ಮಹಿಳೆ ಮತ್ತು ಉಳಿದಂತೆ ಪುರುಷ ಪೊಲೀಸರಿದ್ದಾರೆ. ಮಹಿಳಾ ಪೊಲೀಸರ ಬಲ-ಎಡಕ್ಕೆ ನಿಂತ ಪೊಲೀಸರ ಡ್ಯಾನ್ಸ್ ಸ್ಟೆಪ್ ಗಳನ್ನು ಕಂಡು ಜನ ನಕ್ಕು ನಕ್ಕು ಸುಸ್ತಾಗಿದ್ದಾರೆ. ಪೊಲೀಸ್ ಸಮವಸ್ತ್ರದಲ್ಲಿ ನೃತ್ಯ ಮಾಡುತ್ತಿರುವ ಈ ಪುರುಷರು ಮತ್ತು ಮಹಿಳೆ ಕೇರಳದ ಪೊಲೀಸರು ಎಂದು ಹಲವಾರು ಜನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಹಲವು ವೆಬ್ ಸೈಟ್ ಗಳು ಪೊಲೀಸರ ಡ್ಯಾನ್ಸ್ ನೋಡಿ ಎಂದು ಸುದ್ದಿ ಮಾಡುತ್ತವೆ.

Fact Check: Is policemen dancing to the song Kachha Badam real? know the truth

ಒನ್ ಇಂಡಿಯಾದ ಫ್ಯಾಕ್ಟ್ ಚೆಕ್ ತಂಡವು ಈ ವೈರಲ್ ವೀಡಿಯೊವನ್ನು ತನಿಖೆ ಮಾಡಿದೆ. ವೈರಲ್ ವಿಡಿಯೊವನ್ನು ತನಿಖೆ ಮಾಡಲು Google ನಲ್ಲಿ ಕೀವರ್ಡ್‌ಗಳೊಂದಿಗೆ ಹುಡುಕಲಾಗಿದೆ. ಈ ಹುಡುಕಾಟದಲ್ಲಿ ಮಾರ್ಚ್ 25 ರಂದು ನ್ಯೂಸ್ 18 ನಲ್ಲಿ ಪ್ರಕಟವಾದ ಸುದ್ದಿಯ ಲಿಂಕ್ ನಮಗೆ ಸಿಕ್ಕಿತು. ವೈರಲ್ ಆದ ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಇದರಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ಕೇರಳ ಪೊಲೀಸರು ಕಚ್ಚಾ ಬಾದಮ್ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕೇರಳ ಪೊಲೀಸರ ಸಮವಸ್ತ್ರದಲ್ಲಿ ಹಾಡಿನಲ್ಲಿ ಮೋಜು ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೊಚ್ಚಿಯ ಹೋಟೆಲ್ ಡ್ಯೂಲ್ಯಾಂಡ್‌ನ ಪ್ರವೇಶ ದ್ವಾರದಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಈ ವಿಡಿಯೋ ಬಗ್ಗೆ ಕೇರಳ ಪೊಲೀಸರು ಸ್ಪಷ್ಟನೆ

ವೈರಲ್ ವಿಡಿಯೊವನ್ನು ಖಚಿತಪಡಿಸಲು ಸುದ್ದಿ ವೆಬ್‌ಸೈಟ್ ಕೇರಳ ರಾಜ್ಯ ಪೊಲೀಸ್ ಮಾಧ್ಯಮ ಕೇಂದ್ರವನ್ನು ಸಂಪರ್ಕಿಸಿದೆ. ಮಾಧ್ಯಮ ಕೇಂದ್ರದ ಉಪನಿರ್ದೇಶಕ ಮತ್ತು ಪಿಆರ್‌ಒ ವಿಪಿ ಪ್ರಮೋದ್‌ ಕುಮಾರ್‌ ಮಾತನಾಡಿ, ವೈರಲ್‌ ಆಗಿರುವ ವಿಡಿಯೋದಲ್ಲಿರುವ ನೃತ್ಯಗಾರರಲ್ಲಿ ಯಾರೂ ಕೇರಳ ಪೊಲೀಸ್‌ ಅಧಿಕಾರಿಗಳು ಅಥವಾ ನೌಕರರಿಲ್ಲ. ಅವರೆಲ್ಲರೂ ಚಿತ್ರೀಕರಣಕ್ಕೆ ಬಂದಿರುವ ಸಿನಿಮಾ ನಟರು. ಇದಾದ ನಂತರ ಕೊಚ್ಚಿಯ ಹೋಟೆಲ್ ಡ್ಯುಲ್ಯಾಂಡ್‌ನಲ್ಲಿ ಚಿತ್ರೀಕರಿಸಿದ ಈ ವೀಡಿಯೊದ ಕುರಿತು ಹೋಟೆಲ್ ಅನ್ನು ಸಂಪರ್ಕಿಸಲಾಯಿತು.

Fact Check: Is policemen dancing to the song Kachha Badam real? know the truth

ಹೋಟೆಲ್ ಮಾಲೀಕರು ಹೇಳಿದ್ದೇನು?

ಈ ಬಗ್ಗೆ ಮಾಹಿತಿ ನೀಡಿರುವ ಹೋಟೆಲ್ ಮಾಲೀಕರು, ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವ ಐವರು ನಿಜವಾದ ಪೊಲೀಸರಲ್ಲ ಎಂದು ಹೇಳಿದ್ದಾರೆ. ಇವರು ಪೊಲೀಸ್ ಸಮವಸ್ತ್ರದಲ್ಲಿ ನೃತ್ಯ ಮಾಡುವ ಕಲಾವಿದರು. ಅವರು ನಮ್ಮ ಹೋಟೆಲ್‌ನಲ್ಲಿ ಅವರ ಚಲನಚಿತ್ರವನ್ನು ಚಿತ್ರೀಕರಿಸಿದರು. ಪೊಲೀಸ್ ಆಗಿ ವೈರಲ್ ಆಗುತ್ತಿರುವ ವಿಡಿಯೋ ನಕಲಿ ಎಂಬುದು ಇದರಿಂದ ಸ್ಪಷ್ಟವಾಗಿದೆ. ವಿಡಿಯೋದಲ್ಲಿ ನೃತ್ಯ ಮಾಡುವವರೆಲ್ಲರೂ ನಟರು ಮತ್ತು ಚಿತ್ರೀಕರಣಕ್ಕಾಗಿ ಅವರು ಪೊಲೀಸ್ ಬಟ್ಟೆಗಳನ್ನು ಧರಿಸಿದ್ದರು ಎನ್ನುವುದು ಸ್ಪಷ್ಟವಾಗಿದೆ.

Fact Check

ಕ್ಲೇಮು

'ಕಚ್ಚಾ ಬಾದಮ್' ಹಾಡಿಗೆ ನೃತ್ಯ ಮಾಡಿದ ಕೇರಳ ಪೊಲೀಸರು

ಪರಿಸಮಾಪ್ತಿ

'ಕಚ್ಚಾ ಬಾದಮ್' ಹಾಡಿಗೆ ನೃತ್ಯ ಮಾಡಿದವರೆಲ್ಲಾ ನಿಜವಾದ ಪೊಲೀಸರಲ್ಲ ಬದಲಿಗೆ ಅವರು ನಟರಾಗಿದ್ದಾರೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Are the policemen dancing to the song 'Kachha Badam' real? know what is the truth in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X