ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ವಿಪಕ್ಷ ನಾಯಕರ ಸಭೆಗೆ ಸುಬ್ರಮಣಿಯನ್ ಸ್ವಾಮಿ ಭಾಗಿಯಾಗಿದ್ರಾ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌, 27: ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೆಚ್ಚಾಗಿ ತನ್ನ ಪಕ್ಷದ ವಿರುದ್ದವೇ ವಾಗ್ದಾಳಿಯನ್ನು ನಡೆಸುತ್ತಿರುತ್ತಾರೆ. ಇತ್ತೀಚೆಗೆ ಸುಬ್ರಮಣಿಯನ್ ಸ್ವಾಮಿ ತನ್ನ ಪಕ್ಷವನ್ನೇ ಹಾಗೂ ಅದರ ನಾಯಕರನ್ನು ಟೀಕೆ ಮಾಡಿದ ಕಾರಣಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಎಸ್‌ ಬೊಮ್ಮಾಯಿ, ಸುಬ್ರಮಣಿಯನ್ ಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಸುಬ್ರಮಣಿಯನ್ ಸ್ವಾಮಿಯನ್ನು "ಸ್ವತಂತ್ರ ರಾಜಕಾರಣಿ" ಎಂದು ಟೀಕೆ ಮಾಡಿದ್ದರು.

ಇವೆಲ್ಲದರ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ವಿರೋಧ ಪಕ್ಷ ನಾಯಕರ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. "ಸುಬ್ರಮಣಿಯನ್ ಸ್ವಾಮಿ ಈಗ ವಿರೋಧ ಪಕ್ಷಗಳ ಸಭೆಯಲ್ಲಿ ಕೂಡಾ ಭಾಗಿಯಾಗುತ್ತಿದ್ದಾರೆ. ಇದು ಸುಬ್ರಮಣಿಯನ್ ಸ್ವಾಮಿ ವಿರೋಧ ಪಕ್ಷಗಳನ್ನು ಸೇರಿಕೊಳ್ಳುತ್ತಾರೆ ಎಂಬುವುದನ್ನು ಸೂಚಿಸುತ್ತಿದೆ," ಎಂಬ ಅಡಿಬರಹದೊಂದಿಗೆ ಈ ಫೋಟೋವು ವೈರಲ್‌ ಆಗುತ್ತಿದೆ.

Fact Check: ತಾಲಿಬಾನ್‌ ಬಗ್ಗೆ ಅಜಿತ್‌ನ 8 ವರ್ಷದ ಹಿಂದಿನ ಹೇಳಿಕೆ ಈಗಿನದ್ದು ಎಂದು ವೈರಲ್‌Fact Check: ತಾಲಿಬಾನ್‌ ಬಗ್ಗೆ ಅಜಿತ್‌ನ 8 ವರ್ಷದ ಹಿಂದಿನ ಹೇಳಿಕೆ ಈಗಿನದ್ದು ಎಂದು ವೈರಲ್‌

ಈ ಚಿತ್ರವನ್ನು ದೆಹಲಿಯ ಬಿಜೆಪಿ ವಕ್ತಾರ ತಾಜಿಂದರ್‌ ಪಾಲ್‌ ಸಿಂಗ್‌ ಬಗ್ಗಾ ಶೇರ್‌ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಹಲವಾರು ವಿರೋಧ ಪಕ್ಷದ ನಾಯಕರು ಕಾಣಿಸಿಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮಾಜಿ ಪ್ರಧಾನ ಮಂತ್ರಿ ಎಚ್‌ ಡಿ ದೇವೇಗೌಡ, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಟ್ವೀಟ್‌ ಮಾಡಿರುವ ಬಿಜೆಪಿ ವಕ್ತಾರ ತಾಜಿಂದರ್‌ ಪಾಲ್‌ ಸಿಂಗ್‌ ಬಗ್ಗಾ, "ಅಧಿಕೃತವಾಗಿ ವಿರೋಧ ಪಕ್ಷಕ್ಕೆ ಸೇರ್ಪಡೆಯಾದ ನಿಮಗೆ ಶುಭಾಶಯಗಳು ಸುಬ್ರಮಣಿಯನ್ ಸ್ವಾಮಿ ಅವರೇ," ಎಂದು ಹೇಳಿದ್ದಾರೆ.

 ವಿಪಕ್ಷ ನಾಯಕರ ಸಭೆಗೆ ಸುಬ್ರಮಣಿಯನ್ ಸ್ವಾಮಿ ಭಾಗಿಯಾಗಿದ್ರಾ?

ವಿಪಕ್ಷ ನಾಯಕರ ಸಭೆಗೆ ಸುಬ್ರಮಣಿಯನ್ ಸ್ವಾಮಿ ಭಾಗಿಯಾಗಿದ್ರಾ?

ಈ ಫೋಟೋದಲ್ಲಿ ಇರುವುದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೌದೇ, ಅಲ್ಲವೇ ಎಂದು ಪತ್ತೆ ಹಚ್ಚುವ ಸಲುವಾಗಿ ಇಂಡಿಯಾ ಟುಡೇ ಆಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ (ಎಎಫ್‌ಡಬ್ಲ್ಯೂಎ) ಈ ಚಿತ್ರವನ್ನು ಪರಿಶೀಲಿಸಿದ್ದು ಈ ಚಿತ್ರದಲ್ಲಿ ಇರುವುದು ಸುಬ್ರಮಣಿಯನ್ ಸ್ವಾಮಿ ಅಲ್ಲ. ಇದು ಸುಳ್ಳು ಸುದ್ದಿ ಎಂದು ಪತ್ತೆ ಹಚ್ಚಿದೆ. ಇನ್ನು ಈ ಬಗ್ಗೆ ಇಂಡಿಯಾ ಟುಡೇಗೆ ಮಾಹಿತಿ ನೀಡಿರುವ ಕಾಂಗ್ರೆಸ್‌ ನಾಯಕ ಮನೀಶ್‌ ಚಂತ್ರಾತ್‌ "ಈ ಚಿತ್ರದಲ್ಲಿ ಇರುವ ವ್ಯಕ್ತಿ ನಾನು, ಸುಬ್ರಮಣಿಯನ್ ಸ್ವಾಮಿ ಅಲ್ಲ," ಎಂದು ತಿಳಿಸಿದ್ದಾರೆ. ಇನ್ನು ಈ ಚಿತ್ರದ ಬಗ್ಗೆ ಅಧಿಕ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹಿಂದೂಸ್ತಾನ್ ಟೈಮ್ಸ್‌ನ ಛಾಯಾಗ್ರಾಹಕ ಅರವಿಂದ್ ಯಾದವ್‌ ತೆಗೆದಿರುವ ಚಿತ್ರ Getty Images ನಲ್ಲಿ ಪತ್ತೆಯಾಗಿದೆ. Getty Images ಪ್ರಕಾರ ಈ ಚಿತ್ರವು, "ಡಿಸೆಂಬರ್ 10, 2018 ಎಂದು ನವದೆಹಲಿಯಲ್ಲಿ ವಿರೋಧ ಪಕ್ಷಗಳು ನಡೆಸಿದ ಪತ್ರಿಕಾಗೋಷ್ಠಿಯದ್ದು ಆಗಿದೆ". 2019 ರ ಲೋಕ ಸಭಾ ಚುನಾವಣೆಯಲ್ಲಿ ಮಹಾಘಟ ಬಂಧನದ ಬಗ್ಗೆ ಚರ್ಚೆ ನಡೆಸಿದ ನಂತರ ಈ ಪತ್ರಿಕಾಗೋಷ್ಠಿಯನ್ನು ವಿರೋಧ ಪಕ್ಷಗಳು ನಡೆಸಿದೆ. ಈ ಬಗ್ಗೆ ಮಾಧ್ಯಮ ವರದಿಗಳನ್ನು ನೋಡಿದಾಗ ಯಾವುದೇ ಮಾಧ್ಯಮ ವರದಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಈ ಸಭೆಯಲ್ಲಿ ಆಗಲಿ, ಪತ್ರಿಕಾಗೋಷ್ಠಿಯಲ್ಲಿ ಆಗಲಿ ಭಾಗಿಯಾದ ಬಗ್ಗೆ ಉಲ್ಲೇಖವಿಲ್ಲ.

ಸುಬ್ರಮಣಿಯನ್ ಸ್ವಾಮಿ ಕನ್ನಡಕ ಧರಿಸಿರುವ ಯಾವುದೇ ಚಿತ್ರವಿಲ್ಲ

ಮಾಧ್ಯಮಗಳ ವರದಿಯ ಪ್ರಕಾರ ಸುಮಾರು 21 ವಿರೋಧ ಪಕ್ಷಗಳು ಈ ಸಭೆಯಲ್ಲಿ ಭಾಗಿಯಾಗಿದೆ. ಆದರೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ಈ ಸಭೆಯಲ್ಲಿ ಭಾಗಿಯಾಗಿಲ್ಲ. ಇನ್ನು ಈ ಸಭೆಯ ವಿಡಿಯೋ ವರದಿಯನ್ನು ಕೂಡಾ ಪರಿಶೀಲನೆ ಮಾಡಲಾಗಿದ್ದು, ಈ ವ್ಯಕ್ತಿಯು ಕಂದು ಜಾಕೆಟ್‌ ಅನ್ನು ಧರಿಸಿ ವಿರೋಧ ಪಕ್ಷದ ನಾಯಕರುಗಳ ಹಿಂಬದಿಯಲ್ಲಿ ಹೋಗುವುದು ಕಂಡು ಬಂದಿದೆ. ಈ ವಿಡಿಯೋ ಹಾಗೂ ಚಿತ್ರವನ್ನು ಪರಿಶೀಲನೆ ಮಾಡಿದಾಗ, ಈ ವ್ಯಕ್ತಿಯು ಒಂದು ಬದಿಯಿಂದ ಸುಬ್ರಮಣಿಯನ್ ಸ್ವಾಮಿಯಂತೆ ಕಂಡು ಬರುತ್ತಾರೆ. ಆದರೆ ನಿಜವಾಗಿ ಸುಬ್ರಮಣಿಯನ್ ಸ್ವಾಮಿ ಅಲ್ಲ ಕಂಡು ಬಂದಿದೆ. ಈ ವೈರಲ್‌ ಚಿತ್ರದಲ್ಲಿ ಇರುವ ವ್ಯಕ್ತಿಯು ಕನ್ನಡಕವನ್ನು ಧರಿಸಿರುವುದು ಕಂಡು ಬಂದಿದೆ. ಆದರೆ ಸುಬ್ರಮಣಿಯನ್ ಸ್ವಾಮಿ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಕನ್ನಡಕವನ್ನು ಧರಿಸಿಲ್ಲ.

Fact Check: ಈ ಸುಂದರ ಎಕ್ಸ್‌ಪ್ರೆಸ್‌ವೇ ಕಾಶ್ಮೀರದಲ್ಲ, ಕರ್ನಾಟಕದ್ದುFact Check: ಈ ಸುಂದರ ಎಕ್ಸ್‌ಪ್ರೆಸ್‌ವೇ ಕಾಶ್ಮೀರದಲ್ಲ, ಕರ್ನಾಟಕದ್ದು

 ಈ ವ್ಯಕ್ತಿ ಯಾರು?

ಈ ವ್ಯಕ್ತಿ ಯಾರು?

ಆ ಬಳಿಕ ಎಐಸಿಸಿ ಮಾಧ್ಯಮ ಕಾರ್ಯದರ್ಶಿ ಪ್ರಣವ್‌ ಝಾರನ್ನು ಇಂಡಿಯಾ ಟುಡೇ ಸಂಪರ್ಕ ಮಾಡಿದಾಗ ಕಂದು ಬಣ್ಣದ ಜಾಕೆಟ್‌ ಧರಿಸಿರುವ ವ್ಯಕ್ತಿ ಮನೀಶ್‌ ಚತ್ರಾತ್‌ ಎಂದು ಹೇಳಿದ್ದಾರೆ. ಪ್ರಣವ್‌ ಝಾ ಕೂಡಾ ಈ ಸಭೆಯಲ್ಲಿ ಭಾಗಿಯಾಗಿದ್ದರು. ಮನೀಶ್‌ ಚತ್ರಾತ್‌ ಪ್ರಸ್ತುತ ಅರುಣಾಚಲ ಪ್ರದೇಶ ಹಾಗೂ ಮೇಘಾಲಯದ ಎಐಸಿಸಿ ಮಾಧ್ಯಮ ಉಸ್ತುವಾರಿ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಬಳಿಕ ಮನೀಶ್‌ ಚತ್ರಾತ್‌ರನ್ನು ಸಂಪರ್ಕ ಮಾಡಿದಾಗ ಅವರು ಕೂಡಾ ಈ ಬಗ್ಗೆ ಖಚಿತ ಪಡಿಸಿದ್ದಾರೆ. "ಈ ವ್ಯಕ್ತಿಯು ನಾನು. ಈ ಸಭೆಯ ಬಗ್ಗೆ ನನಗೆ ಈಗಲೂ ಸರಿಯಾಗಿ ನೆನಪಿದೆ. ಆ ಸಂದರ್ಭದಲ್ಲಿ ನಾನು ಎಐಸಿಸಿ ಕಾರ್ಯದರ್ಶಿಯಾಗಿದೆ," ಎಂದಿದ್ದಾರೆ.

 ಡಿಸೆಂಬರ್ 10, 2018 ರಂದು ಸುಬ್ರಮಣಿಯನ್ ಸ್ವಾಮಿ ಎಲ್ಲಿದ್ದರು?

ಡಿಸೆಂಬರ್ 10, 2018 ರಂದು ಸುಬ್ರಮಣಿಯನ್ ಸ್ವಾಮಿ ಎಲ್ಲಿದ್ದರು?

ಡಿಸೆಂಬರ್‌ 10, 2018 ರಂದು ಸುಬ್ರಮಣಿಯನ್ ಸ್ವಾಮಿ ಎಎನ್‌ಐಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಆರ್‌ಬಿಐ ಗವರ್ನರ್‌ ಆಗಿದ್ದ ಉರ್ಜಿತ್‌ ಪಟೇಲ್‌ ರಾಜೀನಾಮೆ ನೀಡಿದ್ದರು. ಈ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ಈ ಹಿನ್ನೆಲೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಡಿಸೆಂಬರ್‍ 10, 2018 ರಂದು ಎಎನ್‌ಐಗೆ ಆರ್‌ಬಿಐ ಗವರ್ನರ್‌ ರಾಜೀನಾಮೆಯ ವಿಚಾರದಲ್ಲಿ ಸಂದರ್ಶನವೊಂದನ್ನು ನೀಡಿದ್ದಾರೆ. ಈ ವಿಡಿಯೋವನ್ನು ಪರಿಶೀಲನೆ ಮಾಡಿದಾಗ ಸುಬ್ರಮಣಿಯನ್ ಸ್ವಾಮಿ ತನ್ನ ಕಚೇರಿಯಲ್ಲೇ ಇರುವುದು ಕಂಡು ಬಂದಿದೆ. ಆದ್ದರಿಂದ ಈ ಚಿತ್ರದಲ್ಲಿ ಇರುವ ವ್ಯಕ್ತಿ ಸುಬ್ರಮಣಿಯನ್ ಸ್ವಾಮಿ ಅಲ್ಲ ಎಂಬುವುದು ಖಚಿತವಾಗಿದೆ. ಹಾಗೆಯೇ ಈ ವ್ಯಕ್ತಿ ಕಾಂಗ್ರೆಸ್‌ ಮುಖಂಡ ಮನೀಶ್‌ ಚತ್ರಾತ್‌ ಎಂಬುವುದು ಕೂಡಾ ಖಾತರಿ ಆಗಿದೆ.

(ಒನ್‌ಇಂಡಿಯಾ ಸುದ್ದಿ)

Fact Check

ಕ್ಲೇಮು

ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರೋಧ ಪಕ್ಷ ನಾಯಕರ ಸಭೆಯಲ್ಲಿ ಭಾಗಿಯಾಗಿದ್ದಾರೆ. ವೈರಲ್‌ ಚಿತ್ರದಲ್ಲಿ ಇರುವ ವ್ಯಕ್ತಿ ಸುಬ್ರಮಣಿಯನ್ ಸ್ವಾಮಿ.

ಪರಿಸಮಾಪ್ತಿ

ವೈರಲ್‌ ಚಿತ್ರದಲ್ಲಿ ಇರುವ ವ್ಯಕ್ತಿ ಸುಬ್ರಮಣಿಯನ್ ಸ್ವಾಮಿ ಅಲ್ಲ. ಇದು Getty Images ಚಿತ್ರ. ಹಾಗೆಯೇ ಈ ವ್ಯಕ್ತಿ ಕಾಂಗ್ರೆಸ್‌ ನಾಯಕ ಮನೀಶ್‌ ಚಂತ್ರಾತ್‌.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: This is not Subramanian Swamy, He did attended Opposition leaders meeting. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X