Fact check: ಕಲ್ಲು ಉಪ್ಪು ಮತ್ತು ಈರುಳ್ಳಿ ಕೊರೊನಾದಿಂದ ಗುಣಪಡಿಸುತ್ತಂತೆ
ಹೊಸದಿಲ್ಲಿ ಜನವರಿ 7: ಕೊರೊನಾ ಮಹಾಮಾರಿಯ ಮೂರನೇ ಅಲೆಯ ಭೀತಿ ಮುಂದುವರಿದಿದ್ದು, ದೇಶದಲ್ಲಿ ದಿನನಿತ್ಯ ರೋಗಿಗಳ ಸಂಖ್ಯೆ ಈಗ ಒಂದು ಲಕ್ಷ ದಾಟಿದೆ. ಇದಲ್ಲದೆ ಓಮಿಕ್ರಾನ್ ರೋಗಿಗಳು ಸಹ ವೇಗವಾಗಿ ಹೆಚ್ಚಾಗುತ್ತಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜ್ಯಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಆದರೆ ಅನೇಕರು ಜನರನ್ನು ದಾರಿ ತಪ್ಪಿಸುವಂತ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿದ್ದಾರೆ. ಇಂಥಹ ವದಂತಿಗಳಲ್ಲಿ ಈಗ ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಅವೈಜ್ಞಾನಿಕ ಹೇಳಿಕೆಗಳನ್ನು ಹರಿಬಿಡಲಾಗಿದೆ. ಇದನ್ನು ಜನರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. 'ಕಲ್ಲು ಉಪ್ಪಿನೊಂದಿಗೆ ಸಿಪ್ಪೆ ಸುಲಿದ ಹಸಿ ಈರುಳ್ಳಿಯನ್ನು 15 ನಿಮಿಷಗಳ ನಂತರ ತಿಂದರೆ, ಕೊರೊನಾ ಸೋಂಕಿತ ಜನರು ಸೋಂಕು ರಹಿತರಾಗುತ್ತಾರೆ ಎಂದು ಬರೆಯಲಾಗಿದೆ. ಇದು ಸಂಪೂರ್ಣ ಸತ್ಯ. ನೀವೇ ಪ್ರಯತ್ನಿಸಿ... ಕೊರೊನಾ ಇರಲಿ, ಇಲ್ಲದಿರಲಿ, ಕಲ್ಲು ಉಪ್ಪನ್ನು ಹಚ್ಚಿ ಪ್ರತಿದಿನ ಹಸಿ ಈರುಳ್ಳಿಯನ್ನು ತಿನ್ನುವುದರಿಂದ. ಗಂಟಲಲ್ಲಿ ವೈರಸ್ ಸಾಯುತ್ತೆ. ಉಪಯೋಗವಾದರೆ ಎಲ್ಲರಿಗೂ ಶೇರ್ ಮಾಡಿ' ಎಂದು ಬರೆಯಲಾಗಿದೆ. ಇದಾದ ನಂತರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.
ಈ ಸಂದೇಶವನ್ನು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ನಿರಾಕರಿಸಿದೆ. ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟರ್‌ನಲ್ಲಿ ಅದು, 'ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಕಲ್ಲು ಉಪ್ಪಿನೊಂದಿಗೆ ಕಚ್ಚಾ ಈರುಳ್ಳಿ ಸೇವನೆಯು ಕೊರೋನಾ ವೈರಸ್‌ಗೆ ಚಿಕಿತ್ಸೆ ನೀಡಬಹುದು ಎಂದು ಹೇಳುತ್ತದೆ. ಈ ಸಂದೇಶ ಹುಸಿಯಾಗಿದೆ. ಹಸಿ ಈರುಳ್ಳಿ ಮತ್ತು ಕಲ್ಲು ಉಪ್ಪಿನ ಸೇವನೆಯಿಂದ ಕೊರೋನಾ ಚಿಕಿತ್ಸೆ ಸಾಧ್ಯ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ' ಎಂದು ಹೇಳಲಾಗಿದೆ.

ಹೀಗಾಗಿ ನಿಮಗೆ ಕೊರೊನಾ ರೋಗ ಲಕ್ಷಣಗಳಿದ್ದರೆ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಹೋಗಿ ಮತ್ತು ತಕ್ಷಣವೇ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ವರದಿ ಬರುವವರೆಗೆ ಎಲ್ಲರಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ ವರದಿಯು ಧನಾತ್ಮಕವಾಗಿ ಬಂದರೆ, ತಕ್ಷಣ ಜಿಲ್ಲಾ ಮಟ್ಟದ ಕೊರೋನಾ ನಿಯಂತ್ರಣ ಕೇಂದ್ರಕ್ಕೆ ತಿಳಿಸಿ, ಅಲ್ಲಿಂದ ನಿಮಗೆ ತಕ್ಷಣ ವೈದ್ಯಕೀಯ ಸಹಾಯವನ್ನು ಒದಗಿಸಲಾಗುತ್ತದೆ.
ಕೋವಿಡ್-19 ಸಾಂಕ್ರಾಮಿಕ ಕಳೆದೆರಡು ವರ್ಷಗಳಿಂದ ವಿಶ್ವವ್ಯಾಪಿಯಾಗಿ ಹಬ್ಬಿ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗಿರುವುದು ನಮಗೆಲ್ಲರಿಗೂ ತಿಳಿದೇ ಇದೆ. ದೈನಂದಿನ ಜೀವನ ಅಸ್ತವ್ಯಸ್ತವಾಗಿ ಕಂಡುಕೇಳರಿಯದ ಈ ವ್ಯಾಧಿಗೆ ಪ್ರತಿಯೊಬ್ಬರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಕೊರೋನಾ ವೈರಸ್ ಮಹಾಮಾರಿ ಉದ್ಯಮ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ವ್ಯಾಪಾರ ವಹಿವಾಟು, ಕೈಗಾರಿಕೆ, ತಾಂತ್ರಿಕ ಕ್ಷೇತ್ರ, ಹೀಗೆ ಜನರು ಹೆಚ್ಚು ಜೀವನಾಧಾರಕ್ಕೆ ಆಶ್ರಯಿಸಿಕೊಂಡಿದ್ದ ಕ್ಷೇತ್ರಗಳ ಮೇಲೆ ತೀವ್ರತರನಾದ ಪರಿಣಾಮವನ್ನುಂಟು ಮಾಡಿದೆ.

ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಲಸಿಕೆಯ ಕುರಿತು ಸುಳ್ಳು ಸುದ್ದಿಯೊಂದು ಹರಿದಾಡಿತ್ತು. ಕೊರೋನಾ ಲಸಿಕೆಯಿಂದ ಎಚ್‌ಐವಿ ಬರುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಲಸಿಕೆ ಪಡೆಯಲು ಜನ ಹಿಂದೆ ಮುಂದೆ ಯೋಚಿಸುವಂತಾಗಿತ್ತು. ಲಸಿಕೆಗಳ ತಯಾರಿಯಲ್ಲಿ ವೈರಸ್‌ಗಳ ಭಾಗಗಳನ್ನು ಬಳಸಿರುವುದರಿಂದ ಇದು ಎಚ್‌ಐವಿಗೆ ಕಾರಣವಾಗಲಿದೆ ಎಂಬುದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿತ್ತು. ಈ ರೀತಿಯ ಸುದ್ದಿ ಹಬ್ಬುತ್ತಿರುವಂತೆಯೇ ಹಲವಾರು ಸತ್ಯಾನ್ವೇಷಣೆ (ಫ್ಯಾಕ್ಟ್ ಚೆಕ್) ಈ ಸುದ್ದಿ ಸುಳ್ಳು ಎಂಬುದನ್ನು ಬಿಂಬಿಸಲು ಹಲವಾರು ವೈಜ್ಞಾನಿಕ ಆಧಾರಗಳನ್ನು ಪತ್ತೆ ಮಾಡಿದರು. ತಜ್ಞರು ಹೇಳುವಂತೆ ಲಸಿಕೆ ತೆಗೆದುಕೊಂಡ ನಂತರ ಎಚ್‌ಐವಿ ಉಂಟಾಗುವುದಿಲ್ಲ. ಇದ್ದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸಿದ್ದರು.
Recommended Video

Fact Check
ಕ್ಲೇಮು
ಕಲ್ಲು ಉಪ್ಪು ಮತ್ತು ಈರುಳ್ಳಿ ಕೊರೊನಾದಿಂದ ಗುಣಪಡಿಸುತ್ತೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
ಪರಿಸಮಾಪ್ತಿ
ವೈರಸ್ ಸಂದೇಶ ತಪ್ಪಾಗಿದೆ. ಕಲ್ಲು ಉಪ್ಪು ಮತ್ತು ಈರುಳ್ಳಿ ಕೊರೊನಾದಿಂದ ಗುಣಪಡಿಸುತ್ತೆ ಎಂದು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.











Click it and Unblock the Notifications