Fact check: ರಾಮನೂರಿನಲ್ಲಿ ಭ್ರಷ್ಟಾಚಾರ: ನಿರ್ಮಾಣಗೊಂಡ 6 ತಿಂಗಳಲ್ಲೇ ಕುಸಿದ ಗೋಡೆ- ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ
ಸಣ್ಣ ಮಳೆಗೆ ಅಯೋಧ್ಯೆ ರೈಲು ನಿಲ್ದಾಣದ ಗೋಡೆ ಕುಸಿದಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಅಯೋಧ್ಯೆ ರೈಲು ನಿಲ್ದಾಣದ ಗೋಡೆ ಕುಸಿದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷವೂ ಬಿಜೆಪಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದೆ.
ಅಯೋಧ್ಯೆ ರೈಲು ನಿಲ್ದಾಣದ 20 ಮೀಟರ್ ಉದ್ದದ ಗಡಿ ಗೋಡೆ ಕುಸಿದಿದೆ. 6 ತಿಂಗಳ ಹಿಂದೆಯಷ್ಟೇ ಈ ನಿಲ್ದಾಣವನ್ನು ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈ ಕುಸಿದು ಬಿದ್ದಿರುವ ಗಡಿ ಗೋಡೆ ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದೆ. ವಾಸ್ತವ ಸತ್ಯ ಬಯಲಾಗಿದೆ. ಈ ಗೋಡೆಯ ಗುಣಮಟ್ಟ ಹಾಗೂ ಇದರ ನಿರ್ಮಾಣಕ್ಕಾಗಿ ಬಿಜೆಪಿ ಹಣವನ್ನು ಕೊಳ್ಳೆ ಹೊಡೆದು ಕಳಪೆ ಮಟ್ಟದ ಗೋಡೆ ನಿರ್ಮಾಣ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಹೌದು.. ಗೋಡೆ ಕುಸಿದಿರುವ ಬೆನ್ನಲ್ಲೇ ಅಯೋಧ್ಯೆಯಲ್ಲಿ ಬಿಜೆಪಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, "ಪ್ರಭುರಾಮನ ಅಯೋಧ್ಯೆಯಲ್ಲಿಯೂ ಬಿಜೆಪಿ ಭ್ರಷ್ಟಾಚಾರ ನಡೆಸಿದೆ. ಅಯೋಧ್ಯೆ ರೈಲು ನಿಲ್ದಾಣದ 20 ಮೀಟರ್ ಉದ್ದದ ಗಡಿ ಗೋಡೆ ಕುಸಿದಿದೆ. ಈ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು 6 ತಿಂಗಳ ಹಿಂದೆಯಷ್ಟೇ ಉದ್ಘಾಟಿಸಿದ್ದರು. ಈ ಕುಸಿದ ಗಡಿರೇಖೆ ಗೋಡೆ ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದೆ. ಬಿಜೆಪಿಯ ಭ್ರಷ್ಟಾಚಾರ ಆಡಳಿತದಲ್ಲಿ ಗುಣಮಟ್ಟ ಮತ್ತು ಗ್ಯಾರಂಟಿ ನಿರೀಕ್ಷಿಸಬೇಡಿ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
BJP ने प्रभु राम की अयोध्या में भी भ्रष्टाचार कर दिया।
— Congress (@INCIndia) June 23, 2024
अयोध्या रेलवे स्टेशन का 20 मीटर लंबा बाउंड्री वॉल ढह गया है। इस स्टेशन का उद्घाटन नरेंद्र मोदी ने सिर्फ 6 महीने पहले किया था।
ये टूटा हुआ बाउंड्री वॉल BJP के भ्रष्टाचार की पोल खोल रहा है।
साफ है- BJP के 'भ्रष्टाचार मॉडल'… pic.twitter.com/yU2lS4DxEl
ಅದೃಷ್ಟವಶಾತ್ ಗೋಡೆ ಕುಸಿತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳದಲ್ಲಿ ವಾಹನಗಳೂ ಇರಲಿಲ್ಲ ಎಂದು ತಿಳಿದು ಬಂದಿದೆ. ಆದರೆ ವೈರಲ್ ಆಗಿರುವ ವಿಡಿಯೋ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲು ಮಾಡಲಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ಪ್ರಕಾರ ವೈರಲ್ ವಿಡಿಯೋದಲ್ಲಿ ಗೋಡೆ ಕುಸಿದಿರುವುದು ನಿಜವಾದರೂ ಅದು ಇತ್ತೀಚೆಗೆ ಉದ್ಘಾಟನೆ ಮಾಡಿದ ಗೋಡೆಯಲ್ಲ.
ಪಿಐಬಿ ಫ್ಯಾಕ್ಟ್ ಚೆಕ್ ಪ್ರಕಾರ, ವೀಡಿಯೊದಲ್ಲಿ ತೋರಿಸಿರುವ ಗಡಿ ಗೋಡೆಯು ಹಳೆಯ ನಿಲ್ದಾಣದ ಗೋಡೆಯಾಗಿದೆ. ಇಲ್ಲಿನ ಗೋಡೆ ಕೂಡ ಹಳೆಯದಾಗಿದೆ. ಇದು ಇತ್ತೀಚೆಗೆ ಉದ್ಘಾಟನೆಯಾದ ಗೋಡೆ ಅಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಮಾಹಿತಿ ಹಂಚಿಕೊಂಡಿದೆ.
A video claims that boundary wall of recently inaugurated new Ayodhya Dham railway station has collapsed#PIBFactCheck
— PIB Fact Check (@PIBFactCheck) June 23, 2024
✔️ The boundary wall shown in video was part of old station
✔️The wall collapsed due to excavation work by a private person & water logging in a private area pic.twitter.com/cXSaKFCRZx
ವ್ಯಕ್ತಿಯೊಬ್ಬರು ಗೋಡೆಯ ಬಳಿ ನೆಲವನ್ನು ಅಗೆದಿದ್ದಾರೆ. ಅಲ್ಲಿ ನೀರು ಹೊಕ್ಕ ಪರಿಣಾಮ ಗೋಡೆ ಕುಸಿದಿದೆ ಎಂದು ಫಾಸ್ಟ್ ಚೆಕ್ ತಿಳಿಸಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದರು. ನಿಲ್ದಾಣದ ಮೂರು ಅಂತಸ್ತಿನ ಕಟ್ಟಡವು ಲಿಫ್ಟ್, ಎಸ್ಕಲೇಟರ್, ಫುಡ್ ಪ್ಲಾಜಾ, ಪೂಜಾ ಸಾಮಗ್ರಿಗಳ ಅಂಗಡಿಗಳು, ಕ್ಲೋಕ್‌ರೂಮ್ ಮತ್ತು ಶಿಶುಪಾಲನಾ ಕೊಠಡಿಯಂತಹ ಸೌಲಭ್ಯಗಳನ್ನು ಹೊಂದಿದೆ. ಆದರೆ ಮೋದಿ ಅವರು ಉದ್ಘಾಟನೆ ಮಾಡಿದ ರೈಲು ನಿಲ್ದಾಣದ ಗೋಡೆಗೂ ವೈರಲ್ ವಿಡಿಯೋದಲ್ಲಿರುವ ಕುಸಿದ ಗೋಡೆ ಬೇರೆ ಬೇರೆಯಾಗಿದೆ.

Fact Check
ಕ್ಲೇಮು
ಅಯೋಧ್ಯೆಯಲ್ಲಿ ಆರು ತಿಂಗಳ ಹಿಂದೆ ಉದ್ಘಾಟನೆಯಾದ ರೈಲು ನಿಲ್ದಾಣದ ತಡೆ ಗೋಡೆ ಕುಸಿದಿದೆ ಎಂದು ಕಾಂಗ್ರೆಸ್ ವಿಡಿಯೋವನ್ನು ಹಂಚಿಕೊಂಡಿದೆ.
ಪರಿಸಮಾಪ್ತಿ
ಅಯೋಧ್ಯೆಯಲ್ಲಿ ಹಳೆ ರೈಲು ನಿಲ್ದಾಣದ ತಡೆ ಗೋಡೆ ಕುಸಿದಿದ್ದು ತಪ್ಪಾದ ಸಂದೇಶದೊಂದಿಗೆ ವಿಡಿಯೋವನ್ನು ಹಂಚಿಕೊಂಡಿದೆ.
Rating
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications