Fact check: ಉರ್ದು ಮಾತನಾಡದಿದ್ದಕ್ಕಾಗಿ ಯುವಕನ ಕೊಲೆ?

ಬೆಂಗಳೂರು ಏಪ್ರಿಲ್ 7: ಬೆಂಗಳೂರು ನಗರದ ಜೆ.ಜೆ.ನಗರದಲ್ಲಿ ಉರ್ದು ಭಾಷೆಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂಬ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಂತರ ಅಳಿಸಲಾದ ಈ ಪೋಸ್ಟ್ ಅನ್ನು ವಿವಿಧ ಹ್ಯಾಂಡಲ್‌ಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಆದರೆ, ಇದು ಸಂಪೂರ್ಣ ಸುಳ್ಳು ಆರೋಪವಾಗಿದ್ದು, ಪೋಸ್ಟ್‌ನಲ್ಲಿ ಆರೋಪಿಸಿದಂತೆ ವ್ಯಕ್ತಿಗೆ ಉರ್ದು ಭಾಷೆ ತಿಳಿದಿಲ್ಲದ ಕಾರಣ ಈ ಕೊಲೆ ನಡೆದಿಲ್ಲ. ದಿನಾಂಕ 05/04/2022 ರಂದು ರಾತ್ರಿ ನಡೆದ ಕೊಲೆ ರಸ್ತೆಯಲ್ಲಿ ನಡೆದ ಸಣ್ಣ ಅಪಘಾತಕ್ಕೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಟ್ವಿಟ್‌ನಲ್ಲಿ 'ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ (05.04.2022)ನಡೆದ ಕೊಲೆ ಪ್ರಕರಣ. ಸೈಮನ್ ರಾಜ್ ಮತ್ತು ಚಂದ್ರು ಇಬ್ಬರು ಮೈಸೂರು ರಸ್ತೆಯಲ್ಲಿ ಊಟಕ್ಕೆ ತೆರಳಿ ಹಿಂದಿರುಗುವಾಗ ಇವರ ಮತ್ತು ಶಾಹಿದ್ ಚಾಲನೆ ಮಾಡುತ್ತಿದ್ದ ಮತ್ತೊಂದು ಬೈಕುಗಳ ಪರಸ್ಪರ ತಗುಲಿದ ವಿಷಯವು ಗಲಾಟೆಗೆ ಕಾರಣವಾಗಿದೆ' ಎಂದು ಬರೆದಿದ್ದಾರೆ.

Fact Check: A Person Got Killed for Not Speaking Urdu in a Muslim Area

'ಈ ಗಲಾಟೆಗೆ ಇತರರು ಸೇರಿಕೊಂಡಿರುತ್ತಾರೆ. ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ & ತನಿಖೆ ಮುಂದುವರೆದಿದೆ' ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.

Fact Check: A Person Got Killed for Not Speaking Urdu in a Muslim Area

ಆಗಿದ್ದೇನು?

ಏಪ್ರಿಲ್ 5ರಂದು ತಡರಾತ್ರಿ ಗೋರಿಪಾಳ್ಯದಲ್ಲಿ ಕೊಲೆಯೊಂದು ನಡೆದಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು ಎಂಬ ಯುವಕ ತಡರಾತ್ರಿ ಹೋಟೆಲ್‌ನಲ್ಲಿ ಊಟ ಮಾಡಿ ಮನೆಗೆ ಬರುತ್ತಿದ್ದಾಗ ಈ ಕೊಲೆ ನಡೆದಿದೆ. ಕೊಲೆ ನಡೆದ ಮರುದಿನ ಮುಸ್ಲಿಮರ ಪ್ರಾಭಲ್ಯ ಇರುವ ಪ್ರದೇಶದಲ್ಲಿ ನಡೆದ ಘಟನೆಗೆ ಕೋಮು ಬಣ್ಣ ಹಚ್ಚಲಾಯಿತು. ಯುವಕನಿಗೆ ಉರ್ದು ಮಾತನಾಡಲು ಬರಲಿಲ್ಲ ಎನ್ನುವ ಕಾರಣಕ್ಕೆ ಗುಂಪೊಂದು ಆತನನ್ನು ಕೊಲೆ ಮಾಡಿದಿದೆ ಎನ್ನುವ ಆರೋಪಗಳು ಕೇಳಿ ಬಂದವು. ಉನ್ನತ ಸ್ಥಾನದಲ್ಲಿರುವ ರಾಜಕಾರಣಿಗಳೇ ಪೊಲೀಸ್ ತನಿಖೆಗೂ ಮುನ್ನ ಕೊಲೆಗೆ ಕಾರಣವನ್ನು ನೀಡಿದ್ದರು. ಮಾದ್ಯಮದಲ್ಲೂ ಇದೇ ಹೇಳಿಕೆಗಳು ಬರಲಾರಂಭಿಸಿದವು. ಕೋಮು ಬಣ್ಣ ತೀವ್ರಗೊಳ್ಳುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸತ್ಯಾಂಶದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ಫೇಕ್ ಎಂದು ತಿಳಿದುಬಂದಿದೆ. ಮೊನ್ನೆ ರಾತ್ರಿ ಕೊಲೆಯಾದ ಯುವಕ ಉರ್ದು ಭಾಷೆ ಮಾತನಾಡಲು ಬರಲಿಲ್ಲ ಎನ್ನುವ ಕಾರಣಕ್ಕೆ ಕೊಲೆಯಾಗಿಲ್ಲ ಎನ್ನುವುದು ತಿಳಿದುಬಂದಿದೆ.

ಸರಿಯಾದ ಪರಿಶೀಲನೆ ನಡೆಸದೆ ಇಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ವಿನಂತಿಸಲಾಗಿದೆ. ಅಲ್ಲದೇ ಉದ್ದೇಶಪೂರ್ವಕವಾಗಿ ಸಾಮಾಜಿಕ ಸೌಹಾರ್ದತೆ ಕದಡುವ ಹಾಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸೂಕ್ತ ಅಧಿಕಾರಿಗಳಿಂದ ಸರಿಯಾದ ಪರಿಶೀಲನೆ ಇಲ್ಲದೆ ಯಾವುದೇ ರೀತಿಯ ಅನಧಿಕೃತ ವೀಡಿಯೊಗಳು, ಫೋಟೋಗಳು ಮತ್ತು ಬರಹಗಳನ್ನು ಹಂಚಿಕೊಳ್ಳದಂತೆ ವಿನಂತಿಸಲಾಗಿದೆ.

Fact Check

ಕ್ಲೇಮು

ಬೆಂಗಳೂರಿನ ಮುಸ್ಲಿಂ ಪ್ರದೇಶದಲ್ಲಿ ಉರ್ದು ಮಾತನಾಡದಿದ್ದಕ್ಕಾಗಿ ಯುವಕನೊಬ್ಬನನ್ನು ಕೊಲ್ಲಲಾಯಿತು

ಪರಿಸಮಾಪ್ತಿ

ಯುವಕನನ್ನು ಉರ್ದು ಮಾತನಾಡದಿದ್ದಕ್ಕಾಗಿ ಕೊಲೆ ಮಾಡಲಾಗಿಲ್ಲ ಬದಲಿಗೆ ಸಣ್ಣ ಅಪಘಾತಕ್ಕಾಗಿ ಕೊಲೆ ಮಾಡಲಾಗಿದೆ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+