Fact check: ರಷ್ಯಾ ದಾಳಿ ಬಳಿಕ ಉಕ್ರೇನ್‌ನಲ್ಲಿ ಹೃದಯ ಸ್ಪರ್ಶದ ದೃಶ್ಯ

ನವದೆಹಲಿ ಫೆಬ್ರವರಿ 27: ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ, ಎಲ್ಲಾ ರೀತಿಯ ಚಿತ್ರಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆದರೆ ಈ ಪ್ರತಿಯೊಂದು ಚಿತ್ರಗಳು ಮತ್ತು ವಿಡಿಯೊಗಳು ಎಷ್ಟು ನಿಖರವಾಗಿದೆ ಎಂಬುದರ ಕುರಿತು ಸರಿಯಾದ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಯುದ್ಧಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾ ಅಂದರೆ ಎಲ್ಲಾ ತರಹದ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬ ಸತ್ಯವನ್ನು ತಿಳಿಯಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ, ಮಗುವಿನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಫೋಟೋ ಆ ಸಮಯದಲ್ಲಿ ಸಂಘರ್ಷ ನಡೆಯುತ್ತಿರುವ ಉಕ್ರೇನ್‌ನಿಂದ ಬಂದಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಆಗಿರುವ ಚಿತ್ರದಲ್ಲಿ ಏನಿದೆ?

ವೈರಲ್ ಫೋಟೋ ಯುದ್ಧ ಪೀಡಿತ ಪ್ರದೇಶದ್ದು ಎಂದು ತೋರುತ್ತದೆ. ಜೊತೆಗೆ ಈ ಫೋಟೋವನ್ನು ಉಕ್ರೇನ್ ಎಂದು ಹಂಚಿಕೊಳ್ಳಲಾಗುತ್ತಿದೆ. ಫೋಟೋದಲ್ಲಿ ಕಟ್ಟಡದ ಅವಶೇಷಗಳ ನಡುವೆ ಮಗು ನಿಂತಿದೆ ಮತ್ತು ಅವನ ಸುತ್ತಲೂ ಸುಟ್ಟುಹೋದ ಅವಶೇಷಗಳು ಕಂಡುಬರುತ್ತವೆ. ಅವಶೇಷಗಳಿಲ್ಲಿ ಕಂಡು ಬರುವ ಮಗು ಸಂಪೂರ್ಣವಾಗಿ ಕಪ್ಪು ಮಸೆಯಾಗಿದೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾ, ರಷ್ಯಾದ ಆಕ್ರಮಣದಲ್ಲಿ ಈ ಹುಡುಗಿಗೆ ಅಂತಹ ಸ್ಥಿತಿ ಬಂದಿದೆ, ಆದ್ದರಿಂದ ಈ ಹೋರಾಟವನ್ನು ನಿಲ್ಲಿಸಬೇಕು ಎಂದು ಹೇಳಿಕೊಳ್ಳಲಾಗುತ್ತಿದೆ.

ಚಿತ್ರದ ಸತ್ಯವನ್ನು ತಿಳಿಯಿರಿ

ಇಂಡಿಯಾ ಟುಡೇ ಸುದ್ದಿ ಪ್ರಕಾರ, ಈ ಚಿತ್ರದ ಬಗ್ಗೆ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಚಿತ್ರವು ಉಕ್ರೇನ್‌ನಿಂದ ಬಂದಿಲ್ಲ. ಆಗಸ್ಟ್ 2015 ರಲ್ಲಿ ಬಿಡುಗಡೆಯಾದ ಸಂಗೀತ ವೀಡಿಯೊದಿಂದ ಈ ವಿಡಿಯೋ ಬಂದಿದೆ. ಈ ವಿಡಿಯೋದಲ್ಲಿ ಈ ಮಗು 50ನೇ ಸೆಕೆಂಡ್‌ನಲ್ಲಿ ಕಾಣಿಸಿಕೊಂಡಿದೆ. ವರದಿಯ ಪ್ರಕಾರ, ಗೂಗಲ್‌ನಲ್ಲಿ ಹುಡುಕಿದ ನಂತರ, ಈ ಚಿತ್ರವು 2015 ರಿಂದ ಅನೇಕ ವೆಬ್‌ಸೈಟ್‌ಗಳಲ್ಲಿ ಕಂಡುಬಂದಿದೆ. ಹೀಗಾಗಿ ಈ ಫೋಟೋ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದ ಬಂದಿದ್ದಲ್ಲ ಎಂದು ದೃಢಪಡಿಸಲಾಗಿದೆ.

ಈ ವಿಡಿಯೋದಲ್ಲಿ ವೈರಲ್ ಮಗು

ಇತ್ತ ಉಕ್ರೇನ್ ನಲ್ಲಿ ರಷ್ಯಾ ದಾಳಿ ಇಂದೂ ಕೂಡ ಮುಂದುವರೆದಿದೆ. ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ ಇದೀಗ ಮಾತುಕತೆಗೆ ಉಕ್ರೇನ್ ಅನ್ನು ಆಹ್ವಾನಿಸಿದೆ. ಈ ಆಹ್ವಾನವನ್ನು ತಿರಸ್ಕರಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಾನು ಮಾತುಕತೆಗೆ ಸಿದ್ಧ ಆದರೆ ಬೆಲಾರಸ್ ನಲ್ಲಿ ಬೇಡ ಎಂದು ಹೇಳಿದ್ದಾರೆ.

Fact Check: A Heartbreaking Scene in Ukraine After the Russian Invasion

ಅದಾಗಲೇ ರಷ್ಯಾ ನಿಯೋಗ ಬೆಲಾರಸ್ ಗೆ ಆಗಮಿಸಿದೆ. ನಾವು ಶಾಂತಿ ಮಾತುಕತೆಗೆ ಸಿದ್ಧ ಆದರೆ ಮೊದಲು ಯುದ್ಧ ನಿಲ್ಲಿಸಿ. ಇನ್ನು ಉಕ್ರೇನ್ ಮೇಲೆ ಯುದ್ಧ ಮಾಡಲು ಬೆಲಾರಸ್ ಅನ್ನು ರಷ್ಯಾ ಬಳಸಿಕೊಳ್ಳುತ್ತಿರುವುದರಿಂದ ಅಲ್ಲಿ ಮಾತುಕತೆಗೆ ನಾವು ಸಿದ್ಧವಾಗಿಲ್ಲ ಎಂದು ಹೇಳಿರುವ ಝೆಲೆನ್ಸ್ಕಿ, ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್ ಮತ್ತು ಬಕು ಮೊದಲ ಪ್ರದೇಶಗಳಲ್ಲಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ ಸೇನಾ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆ ಉಕ್ರೇನ್ ರಷ್ಯಾದ ಆಕ್ರಮಣದ ವಿರುದ್ಧ ಹೋರಾಟವನ್ನು ಮುಂದುವರೆಸಿದೆ. ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದಲ್ಲಿ ಗ್ಯಾಸ್ ಪೈಪ್‌ಲೈನ್ ಅನ್ನು ಸ್ಫೋಟಿಸಿದ ನಂತರ ರಷ್ಯಾದ ಪಡೆಗಳು ಖಾರ್ಕಿವ್‌ಗೆ ನುಗುತ್ತಿದೆ.

ಉಕ್ರೇನ್‌ನ ದಕ್ಷಿಣ ಮತ್ತು ಆಗ್ನೇಯದಲ್ಲಿರುವ ಇನ್ನೂ ಎರಡು ನಗರಗಳನ್ನು ರಷ್ಯಾ ವಶಪಡಿಸಿಕೊಂಡಿದೆ. ಉಕ್ರೇನ್‌ನಲ್ಲಿ ಇದುವರೆಗೆ ಸುಮಾರು 200 ನಾಗರಿಕರು ಸಾವನ್ನಪ್ಪಿದ್ದಾರೆ. 150,000ಕ್ಕೂ ಹೆಚ್ಚು ಜನರು ಪೋಲೆಂಡ್, ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ.

Fact Check

ಕ್ಲೇಮು

ರಷ್ಯಾ ದಾಳಿ ಬಳಿ ಉಕ್ರೇನ್‌ನಿಂದ ಬಂದ ಹೃದಯ ಸ್ಪರ್ಶದ ದೃಶ್ಯ

ಪರಿಸಮಾಪ್ತಿ

ಆಗಸ್ಟ್ 2015 ರಲ್ಲಿ ಬಿಡುಗಡೆಯಾದ ಸಂಗೀತ ವಿಡಿಯೊದಿಂದ ಈ ವಿಡಿಯೋ ಬಂದಿದೆ

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+