Fake: ಕೇಂದ್ರ ಸರ್ಕಾರದಿಂದ ಕೊವಿಡ್ 19 ಉಸ್ತುವಾರಿ ಸಮಿತಿ ರಚನೆ
ನವದೆಹಲಿ, ಜುಲೈ 11: ಕೇಂದ್ರ ಸರ್ಕಾರವು ಯಾವುದೇ ಕೊವಿಡ್ 19 ಉಸ್ತುವಾರಿ ಸಮಿತಿಯನ್ನು ರಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
Recommended Video
ಇವರೇ ಕೇಂದ್ರ ಸರ್ಕಾರ ಸ್ಥಾಪನೆ ಮಾಡಿರುವ ಕೊವಿಡ್ 19 ಉಸ್ತುವಾರಿ ಸಮಿತಿ ಸದಸ್ಯರು ಎಂದು ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಕುರಿತು ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದ್ದು, ನಾವು ಯಾವುದೇ ರೀತಿಯ ಸಮಿತಿ ರಚನೆ ಮಾಡಲ್ಲ, ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಹೇಳಿದ್ದಾರೆ.
ಆ ಸಮಿತಿಗೆ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ಅಧ್ಯಕ್ಷರು ಎಂದು ಅದರಲ್ಲಿ ಬರೆಯಲಾಗಿದೆ. ಐಎಸ್ ಅಧಿಕಾರಿ ಕವಿತಾ ಪದ್ಮನಾಭನ್ ಪ್ರಿನ್ಸಿಪಲ್ ಅಡ್ವೈಸರ್ ಎಂದು ಬರೆದಿದೆ.

ಭಾರತದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗಿದೆ. ಇಂದು 27,114 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನಿತ್ಯ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸುತ್ತಿರುವ ಕಾರಣ ಸೋಂಕಿತರ ಪತ್ತೆ ಕೂಡ ಬೇಗ ಆಗುತ್ತಿದೆ.
ಪ್ರತಿನಿತ್ಯ ಇಷ್ಟೊಂದು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವ ಕಾರಣ ಸಧ್ಯಕ್ಕೆ ಚೇತರಿಕೆ ಕ್ರಮಾಣ ಕೊಂಚ ತಗ್ಗಿದೆ ಮುಂದಿನ ಒಂದು ವಾರದೊಳಗೆ ಚೇತರಿಕೆ ಪ್ರಮಾಣ ಸೋಂಕಿತರಿಗಿಂತ ಹೆಚ್ಚಾಗಲಿದೆ.
24 ಗಂಟೆಗಳಲ್ಲಿ 519 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 8,20,916 ಕೊರೊನಾ ಸೋಂಕಿತರಿದ್ದಾರೆ. ಅದರಲ್ಲಿ 2,83,407 ಪ್ರಕರಣಗಳು ಸಕ್ರಿಯವಾಗಿವೆ. 5,15,386 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 22,123 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 2,82,511 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

Fact Check
ಕ್ಲೇಮು
ಕೇಂದ್ರ ಸರ್ಕಾರ ಸ್ಥಾಪನೆ ಮಾಡಿರುವ ಕೊವಿಡ್ 19 ಉಸ್ತುವಾರಿ ಸಮಿತಿ ಸದಸ್ಯರು
ಪರಿಸಮಾಪ್ತಿ
ಕೇಂದ್ರ ಸರ್ಕಾರವು ಯಾವುದೇ ಕೊವಿಡ್ 19 ಉಸ್ತುವಾರಿ ಸಮಿತಿಯನ್ನು ರಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.












Click it and Unblock the Notifications