ಜೀ ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಆಂಕರ್ ಅನುಶ್ರೀ ನಿವೃತ್ತಿ... Anchor Anushree
ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಇವತ್ತು ನೋಡಿದ್ದ ಆಂಕರ್ ಅನುಶ್ರೀ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿತ್ತು, ಕನ್ನಡ ಕಿರುತೆರೆಯಲ್ಲೇ ಅತಿದೊಡ್ಡ ರಿಯಾಲಿಟಿ ಶೋ ಎಂಬ ಕೀರ್ತಿ ಪಡೆದಿರುವ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಆಂಕರ್ ಅನುಶ್ರೀ ಅವರೇ ಕಿರೀಟ ಎನ್ನಬಹುದು. ಹೀಗಿದ್ದಾಗಲೇ, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಆಂಕರ್ ಅನುಶ್ರೀ ನಿವೃತ್ತಿ...
ಹೌದು, ಹಾಡು ಹಾಡಬೇಕು & ಜೀವನದಲ್ಲಿ ಸಂಗೀತ ಕಲಿತು ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಗೆ, ಕೋಟಿ ಕೋಟಿ ಯುವಕ & ಯುವತಿಯರಿಗೆ ಬೆಂಬಲ ನೀಡುತ್ತಾ ಬಂದಿರುವುದೇ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಎನ್ನಬಹುದು. ಯಾಕೆ ಅಂದ್ರೆ ಹತ್ತಾರು ವರ್ಷಗಳಿಂದ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಕನ್ನಡಿಗರ ಮನಸ್ಸು & ಹೃದಯ ಎರಡವನ್ನೂ ಗೆದ್ದಿದೆ. ಅದರಲ್ಲೂ ಆಂಕರ್ ಅನುಶ್ರೀ ಅವರ ನಿರೂಪಣೆ ಕನ್ನಡಿಗರಿಗೆ ಅಚ್ಚುಮೆಚ್ಚು...

ಆಂಕರ್ ಅನುಶ್ರೀ ನಿವೃತ್ತಿ...
ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಕನ್ನಡಿಗರಿಗೆ ಒಂದು ಹೆಮ್ಮೆಯ ವಿಚಾರ. ಯಾಕಂದ್ರೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮ ದೇಶದ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ್ದು, ಆ ಮೂಲಕ ಕನ್ನಡ ಹಾಡುಗಳ ಕಂಪು ಪಸರಿಸುತ್ತಿದೆ. ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಇದೇ ಆಂಕರ್ ಅನುಶ್ರೀ ಅವರು ಮತ್ತಷ್ಟು ಹೆಮ್ಮೆ ಮೂಡಿಸಿದ್ದಾರೆ. ಆದರೆ ಇದೀಗ ದಿಢೀರ್, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಆಂಕರ್ ಅನುಶ್ರೀ ನಿವೃತ್ತಿ...
ಅಂದಹಾಗೆ ಶನಿವಾರ ನಡೆದ ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಆಂಕರ್ ಅನುಶ್ರೀ ಅವರು ನಿರೂಪಣೆಗೆ ಬಂದಿರಲಿಲ್ಲ, ಆಂಕರ್ ಅನುಶ್ರೀ ಅವರ ಬದಲಾಗಿ ಮಾಸ್ಟರ್ ಆನಂದ್ ಅವರೇ ನಿರೂಪಣೆ ಮಾಡಿದ್ದಾರೆ. ಹೀಗಾಗಿಯೇ, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಆಂಕರ್ ಅನುಶ್ರೀ ನಿವೃತ್ತಿ ಆಗಿದ್ದಾರೆ ಅನ್ನೋ ಸುದ್ದಿಯ ಹಬ್ಬಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಈ ರೀತಿಯ ಪೋಸ್ಟ್ & ಚರ್ಚೆ ಶುರುವಾಗಿದೆ. ಆದರೆ ಅಸಲಿ ಸುದ್ದಿ ಏನು ಅಂದ್ರೆ... ಮುಂದೆ ಓದಿ.
ಆಂಕರ್ ಅನುಶ್ರೀ ಬದಲು ಮಾಸ್ಟರ್ ಆನಂದ್...
ಅಷ್ಟಕ್ಕೂ ಆಂಕರ್ ಅನುಶ್ರೀ ಅವರ ಹುಟ್ಟುಹಬ್ಬ ಇದ್ದ ಕಾರಣಕ್ಕೆ ಅವರು ಬಂದಿರಲಿಲ್ಲ, ಹೀಗಾಗಿ ಮಾಸ್ಟರ್ ಆನಂದ್ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ನಿರೂಪಣೆ ಮಾಡಿದ್ದರು ಎನ್ನಲಾಗಿದೆ. ಖುದ್ದು ಮಾಸ್ಟರ್ ಆನಂದ್ ಕೂಡ ಮುಂದಿನ ವಾರ ಆಂಕರ್ ಅನುಶ್ರೀ ಅವರೇ ವಾಪಸ್ ಬರ್ತಾರೆ ಅನ್ನೋ ಸ್ಪಷ್ಟನೆ ಕೂಡ ನೀಡಿದ್ದಾರೆ. ಆದರೆ ಈ ನಡುವೆ ಮಾತ್ರ ಹೀಗೆ ಆಂಕರ್ ಅನುಶ್ರೀ ಅವರ ನಿವೃತ್ತಿ ಬಗ್ಗೆ ವದಂತಿ ದೊಡ್ಡದಾಗಿ ಹಬ್ಬಿದೆ!
ಆಂಕರ್ ಅನುಶ್ರೀ ಮದುವೆ ಯಾವಾಗ...
ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಭರ್ಜರಿ ಚರ್ಚೆ ಆಗ್ತಿದೆ. ಅದರಲ್ಲೂ ಈ ನಿರೂಪಕಿ ಕನ್ನಡದಲ್ಲಿ ಆಂಕರಿಂಗ್‌ಗೆ ಹೊಸ ಗತ್ತು ತಂದುಕೊಟ್ಟವರು. ಹೀಗಿದ್ದಾಗ ನಟಿ ಅನುಶ್ರೀ ಅವರು ಇದೇ ಮೊದಲನೇ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಗೈರು ಹಾಜರಿ ಆಗಿದ್ದು ಸಾಕಷ್ಟು ಗಮನ ಸೆಳೆದಿತ್ತು. ಇದಕ್ಕೆ ಸ್ಪಷ್ಟನೆ ಕೂಡ ಸಿಕ್ಕಿದ್ದು, ಅನುಶ್ರೀ ಅವರು ಮುಂದಿನ ವಾರವೇ ವಾಪಸ್ ಬರಲಿದ್ದಾರೆ. ಇದರ ಜೊತೆಗೆ ಆದಷ್ಟು ಬೇಗ ಆಂಕರ್ ಅನುಶ್ರೀ ಅವರ ಮದುವೆಯೂ ನಡೆಯಲಿ ಅನ್ನೋದೆ ಅಭಿಮಾನಿಗಳ ಆಸೆ ಕೂಡ ಆಗಿದೆ. ಹೀಗಾಗಿ ಅಭಿಮಾನಿಗಳ ಆಸೆಯು ಈಡೇರುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications