ಪುನೀತ್ ರಾಜ್‌ಕುಮಾರ್ ನೆನಪು & ಜಾಕಿ ಮತ್ತೆ ಬಂದ ಅಂತಿದ್ದಾರೆ ‘ಎಕ್ಕ’ ಟ್ರೇಲರ್ ನೋಡಿದ ಕನ್ನಡಿಗರು... Yuva Rajkumar
ಕನ್ನಡ ಸಿನಿಮಾ ರಂಗದಲ್ಲಿ ಜಾಕಿ ಸಿನಿಮಾ ದೊಡ್ಡ ಹವಾ ಎಬ್ಬಿಸಿತ್ತು, ಕನ್ನಡಿಗರ ಮನಸ್ಸು ಗೆದ್ದಿದ್ದ ಈ ಸಿನಿಮಾ ಎವರ್‌ಗ್ರೀನ್ ಆಗಿದೆ. ಅದರಲ್ಲೂ ಜಾಕಿ ಸಿನಿಮಾ ರೀ ರಿಲೀಸ್ ಮಾಡಿದಾಗಲೂ ಕೋಟಿ, ಕೋಟಿ ರೂಪಾಯಿ ಹಣ ಗಳಿಸಿತ್ತು ಅಂದ್ರೆ ಆ ಸಿನಿಮಾ ಗತ್ತು ಏನು ಅಂತಾ ನೀವೇ ತಿಳಿದುಕೊಳ್ಳಿ. ಯಾಕಪ್ಪಾ ಈಗ ಅಪ್ಪು ಅವರ ಜಾಕಿ ಸಿನಿಮಾ ವಿಚಾರ? ಅಂತಾ ನೀವು ಕೇಳುತ್ತಿದ್ದರೆ, ಅಸಲಿ ಮ್ಯಾಟರ್ ಇಲ್ಲಿಂದಲೇ ಈಗ ಶುರುವಾಗುತ್ತಿದೆ. ಯುವ ಅವರ ಹೊಸ ಸಿನಿಮಾ 'ಎಕ್ಕ' ಟ್ರೇಲರ್ ಒಳಗೆ ಜಾಕಿ ಸಿನಿಮಾ ಬೆರೆತು ಹೋಗಿದೆ!
ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಬಿಟ್ಟು ಹೊದ ನಂತರ ಕನ್ನಡ ನಾಡು ನೋವಿನಲ್ಲಿ ಇದ್ದು, ಈಗ ಕೂಡ ಅಭಿಮಾನಿಗಳು ಕಂಬನಿ ಮಿಡಿಯುತ್ತಾರೆ. ಹೀಗಿದ್ದಾಗಲೇ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಸ್ಥಾನವನ್ನು ಯುವ ರಾಜ್‌ಕುಮಾರ್ ಅವರು ತುಂಬುತ್ತಾರೆ ಅನ್ನೋ ಮಾತು ಅಭಿಮಾನಿಗಳ ಬಾಯಲ್ಲಿ ಕೇಳಿಬರುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಮತ್ತೊಂದು ವಿಚಾರ ಸಂಚಲನ ಸೃಷ್ಟಿ ಮಾಡಿದ್ದು, ಇದೀಗ ರಿಲೀಸ್ ಆಗಿರುವ ಎಕ್ಕ ಸಿನಿಮಾ ಟ್ರೇಲರ್ ಅಪ್ಪು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡುವ ಜೊತೆಗೆ, ಜಾಕಿ ಸಿನಿಮಾದ ಅಬ್ಬರವನ್ನೂ ಮತ್ತೊಮ್ಮೆ ತೆರೆ ಮೇಲೆ ತಂದಿದೆ!

ಜಾಕಿ ಖದರ್ ವಾಪಸ್ ತಂದ 'ಎಕ್ಕ'?
ಹೌದು, ಯುವ ರಾಜ್‌ಕುಮಾರ್ ಅವರ 'ಎಕ್ಕ' ಸಿನಿಮಾ ಟ್ರೇಲರ್ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾದಲ್ಲಿ ಏನೋ ದೊಡ್ಡ ಕಂಟೆಂಟ್ ಇದೆ ಅನ್ನೋದನ್ನ ಟ್ರೇಲರ್ ಮೂಲಕವೇ ಹಿಂಟ್ ಕೊಟ್ಟು ತೋರಿಸಿದ್ದಾರೆ ನಿರ್ದೇಶಕ. ಇದೆಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಪುನೀತ್ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ 'ಎಕ್ಕ' ಸಿನಿಮಾ ಡಬಲ್ ಧಮಾಖ ತರುತ್ತಿದೆ!












Click it and Unblock the Notifications