ಯುವ ರಾಜ್‌ಕುಮಾರ್ ಡಿವೋರ್ಸ್ ಬೆನ್ನಲ್ಲೇ ಅಣ್ಣ ವಿನಯ್ ರಾಜ್‌ಕುಮಾರ್ ಬಗ್ಗೆ ಸ್ಫೋಟಕ ಸುದ್ದಿ?

ಯುವ ರಾಜ್‌ಕುಮಾರ್ ತಮ್ಮ ಪತ್ನಿ ಶ್ರೀದೇವಿ ಅವರಿಂದ ಡಿವೋರ್ಸ್ ಪಡೆದು ಮದುವೆಯ ಸಂಬಂಧ ಮುರಿದುಕೊಳ್ಳಲು ಮುಂದಾಗಿದ್ದಾರೆ. ಕನ್ನಡಿಗರ ಪಾಲಿನ ಆರಾಧ್ಯ ದೈವ ಮತ್ತು ವರನಟ ಡಾ. ರಾಜ್‌ಕುಮಾರ್ ಮೊಮ್ಮಗನ ಈ ವರ್ತನೆ ಬಗ್ಗೆ ಸಾಕಷ್ಟು ಚರ್ಚೆಗಳು ಇದೀಗ ನಡೆಯುತ್ತಿವೆ. ಪರಿಸ್ಥಿತಿ ಹೀಗಿದ್ದಾಗ ಯುವ ರಾಜ್‌ಕುಮಾರ್ ಅಣ್ಣ ವಿನಯ್ ರಾಜ್‌ಕುಮಾರ್ ಬಗ್ಗೆ ಸ್ಫೋಟಕ ಸುದ್ದಿಯೊಂದು ಸಂಚಲನ ಸೃಷ್ಟಿ ಮಾಡಿದೆ. ಹಾಗಾದರೆ ವಿನಯ್ ಕುರಿತು ಇದೀಗ ಹಬ್ಬಿರುವ ಸುದ್ದಿ ಏನು? ಮುಂದೆ ಓದಿ.

ಡಾ. ರಾಜ್‌ಕುಮಾರ್ ಅಂದ್ರೆ ಒಂದು ಶಕ್ತಿ, ಕನ್ನಡ ಸಿನಿಮಾ ರಂಗ ಮಾತ್ರ ಅಲ್ಲ ಕನ್ನಡದ ಅಸ್ಮಿತೆ ಉಳಿಸುವಲ್ಲಿ ಕೂಡ ನಮ್ಮ ಡಾ. ರಾಜ್‌ಕುಮಾರ್ ಅವರು ಅಪಾರ ಶ್ರದ್ಧೆ & ಭಕ್ತಿಯ ತೋರಿಸಿದ್ದರು. ಗೋಕಾಕ್ ಚಳುವಳಿ ಇದಕ್ಕೆ ಒಂದು ಉದಾಹರಣೆ ಎನ್ನಬಹುದು. ಹಾಗೇ ಡಾ. ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್‌ಕುಮಾರ್ ಈಗ ದೇವರಾಗಿದ್ದಾರೆ. ಎಲ್ಲಾ ವಿಚಾರದಲ್ಲೂ ಘನತೆ & ಹೆಮ್ಮೆ ಕಾಪಾಡಿಕೊಂಡು ಬಂದ 'ದೊಡ್ಮನೆ' ಅಂದ್ರೆ ಡಾ. ರಾಜ್ ಅವರ ಕುಟುಂಬಕ್ಕೆ ಈಗ ಸಮಸ್ಯೆ ಎದುರಾಗಿದೆ.

Yuva Rajkumar Brother Vinay Rajkumar Is Now On Trend For This Reason

ದೊಡ್ಮನೆಯಲ್ಲಿ ಮತ್ತೊಮ್ಮೆ ಸಂಚಲನ?

ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಮಗ ಯುವ ರಾಜ್‌ಕುಮಾರ್ ಮಾಡಿಕೊಂಡಿರುವ ಕಾಂಟ್ರವರ್ಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಮಯದಲ್ಲೇ ಯುವ ಅವರ ಅಣ್ಣ ವಿನಯ್ ರಾಜ್‌ಕುಮಾರ್ ಬಗ್ಗೆಯೂ ಸ್ಫೋಟಕ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ವಿನಯ್ ರಾಜ್‌ಕುಮಾರ್ ಏನ್ ಕಾಂಟ್ರವರ್ಸಿ ಮಾಡಿಕೊಂಡರು? ಇವರ ಬಗ್ಗೆ ಸೋಷಿಯಲ್ ಮೀಡಿಯಾ ಮಾತನಾಡುತ್ತಿರುವುದು ಏನು? ಮುಂದೆ ಓದಿ.

ವಿನಯ್ ರಾಜ್‌ಕುಮಾರ್ ಗುಟ್ಟಾಗಿ ಮದುವೆ?

ಅಂದಹಾಗೆ, ವಿನಯ್ ರಾಜ್‌ಕುಮಾರ್ ಅವರು ಗುಟ್ಟಾಗಿ ಮದುವೆ ಆಗಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಶುರುವಾಗಿದೆ. ಅಲ್ಲದೆ ವಿನಯ್ ರಾಜ್‌ಕುಮಾರ್ ಅವರು ಮದುಮಗನ ಗೆಟಪ್ ಅಲ್ಲಿ ಹುಡುಗಿ ಜೊತೆ ಕೂತು ಮದುವೆ ಮಾಡಿಕೊಂಡಿರುವ ಫೋಟೋಸ್ ವೈರಲ್ ಆಗುತ್ತಿವೆ. ಈ ಸುದ್ದಿ ಇದೀಗ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲು ಸೌಂಡ್ ಮಾಡುತ್ತಿದೆ. ಆದರೆ ಆ ಫೋಟೋದ ಅಸಲಿ ಕಥೆ ಏನು ಗೊತ್ತಾ? ಅಷ್ಟಕ್ಕೂ ಈ ವದಂತಿ ಹಬ್ಬಿದ್ದು ಹೇಗೆ? ಈ ಸುದ್ದಿ ಸುಳ್ಳಾ ಅಥವಾ ನಿಜವಾ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಸಿನಿಮಾ ಫೋಟೋ ಮೂಲಕ ವಿವಾದ!

ಅಷ್ಟಕ್ಕೂ ಈಗ ವಿನಯ್ ರಾಜ್‌ಕುಮಾರ್ ಅವರ ಬಗ್ಗೆ ಹರಡಿರುವುದು ಪಕ್ಕಾ ಸುಳ್ಳು ಸುದ್ದಿ. ಅದು ಹೇಗೆ ಅಂದ್ರೆ ವಿಕ್ರಂ ಚಿತ್ರದಲ್ಲಿ ಕಮಲ್ ಹಾಸನ್ ಸೊಸೆ ಪಾತ್ರ ನಿರ್ವಹಿಸಿ ಸುದ್ದಿಯಾಗಿದ್ದ ಸ್ವಾತಿಷ್ಠಾ ಕೃಷ್ಣನ್ ಅವರು ವಿನಯ್ ರಾಜ್ ಕುಮಾರ್ ಜತೆಗೆ 'ಒಂದು ಸರಳ ಪ್ರೇಮಕಥೆ' ಎಂಬ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಈ ಸಿನಿಮಾದಲ್ಲೇ ಮದುವೆ ಸೀನ್ ಬರತ್ತದೆ.

ಅದೇ ಸೀನ್‌ನಲ್ಲಿ ವಿನಯ್ ರಾಜ್‌ಕುಮಾರ್ & ಸ್ವಾತಿಷ್ಠಾ ಜೊತೆಯಲ್ಲಿ ಕೂತು ಗಂಡ & ಹೆಂಡತಿ ರೀತಿ ನಟನೆ ಮಾಡಿದ್ದಾರೆ. ಆದರೆ ಇದೀಗ ಅದೇ ಫೋಟೋ ಇಟ್ಟುಕೊಂಡು ಏನೇನೋ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಆರೋಪ ಕೇಳಿಬಂದಿದೆ. ಹೀಗಿದ್ದಾಗ ಈ ಸುಳ್ಳು ಸುದ್ದಿ ಬಗ್ಗೆ ದೊಡ್ಮನೆ ಫ್ಯಾನ್ಸ್ ಸೂಕ್ತವಾಗಿ ಪ್ರತ್ಯುತ್ತರ ನೀಡುತ್ತಿದ್ದಾರೆ. ಒಟ್ನಲ್ಲಿ ಯುವ ರಾಜ್‌ಕುಮಾರ್ ಕಾಂಟ್ರವರ್ಸಿ ಬೆನ್ನಲ್ಲೇ ಏನೂ ತಪ್ಪನ್ನು ಮಾಡದ ವಿನಯ್ ರಾಜ್‌ಕುಮಾರ್ ಅವರ ವಿರುದ್ಧವೂ, ಈ ರೀತಿ ಮಾತು ಕೇಳಿಬಂದಿರುವುದು ದುರಂತವೇ ಸರಿ ಅಂತಾ ಕನ್ನಡಿಗರು ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+