"ಯುವ" ಸಿನಿಮಾದ ಮೊದಲ ಹಾಡು ಕೆಲವೇ ಕ್ಷಣಗಳಲ್ಲಿ ಬಿಡುಗಡೆ- ಎಲ್ಲಿ ಹಾಗೂ ವಿಶೇಷ ಅತಿಥಿ ಯಾರು?-ಮಾಹಿತಿ, ವಿವರ
ಚಾಮರಾಜನಗರ, ಮಾರ್ಚ್, 02: ಯುವ ರಾಜ್‍ಕುಮಾರ್ ಹಾಗೂ "ಸಿಂಗಾರ ಸಿರಿ" ಸಪ್ತಮಿ ಗೌಡ ಜೋಡಿಯಾಗಿ ನಟನೆ ಮಾಡಿರುವ ಬಹುನಿರೀಕ್ಷಿತ "ಯುವ" ಸಿನಿಮಾದ ಮೊದಲ ಹಾಡಿನ ಬಿಡುಗಡೆ ಇನ್ನೂ ಕೆಲವೇ ಕ್ಷಣಗಳಲ್ಲಿ ಚಾಮರಾಜನಗರದಲ್ಲಿ ಆಗಲಿದೆ.
"ಯುವ" ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದು, ಮೊದಲ ಹಾಡಿನ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಂತೋಷ್ ಆನಂದ್ರಾಮ್ ಅವರು ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಹಾಡಿಗೆ ಬಹಳ ಮಹತ್ವ ನೀಡಲಾಗಿರುತ್ತದೆ. ಹಾಗೆಯೇ ಇದೀಗ ಇಂದು (ಮಾರ್ಚ್ 02) 'ಯುವ' ಚಿತ್ರದ ಮೊದಲ ಹಾಡು ಚಾಮರಾಜನಗರದಲ್ಲಿ ಬಿಡುಗಡೆಯಾಗಲಿದೆ.

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಯುವ ರಾಜಕುಮಾರ್ ನಟನೆಯ ಯುವ ಚಿತ್ರದ "ಒಬ್ಬನೇ ಶಿವ ಒಬ್ಬನೇ ಯುವ" ಎಂಬ ಮೊದಲ ಹಾಡು ಇಂದು ಸಂಜೆ 6 ಗಂಟೆಗೆ ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ರಿಲೀಸ್ ಆಗಲಿದೆ. ಈ ವೇಳೆ ಅಣ್ಣಾವ್ರ ಕುಟುಂಬ ಭಾಗಿಯಾಗಲಿದೆ.
ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘಣ್ಣ ಕುಟುಂಬ ಭಾಗಿಯಾಗಲಿದ್ದಾರೆ. ಹಾಡನ್ನು ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡಲಿದ್ದಾರೆ ಎಂದಷ್ಟೇ ಚಿತ್ರತಂಡ ಹೇಳಿದ್ದು, ಯಾರು ಆ ವಿಶೇಷ ಆತಿಥಿ ಎಂಬುದನ್ನು ಸಸ್ಪೆನ್ಸ್ ಆಗಿಟ್ಟಿದೆ.
ಒಟ್ಟಿನಲ್ಲಿ ಅಣ್ಣಾವ್ರ ತವರಲ್ಲಿ ಯುವ ರಾಜ್ ಕುಮಾರ್ ಅವರ ಮೊದಲ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿದೆ.












Click it and Unblock the Notifications