ನನ್ನ ಸೊಸೆ ರಾಧಿಕಾ ಬಗ್ಗೆ ಮಾತ್ನಾಡಿದ್ರೆ ಸುಮ್ಮನಿರಲ್ಲ: ಯಶ್ ತಾಯಿ ಪುಷ್ಪಾ ಖಡಕ್ ಎಚ್ಚರಿಕೆ: ಅಷ್ಟಕ್ಕೂ ಆಗಿದೇನು?
ಯಶ್ ಮತ್ತು ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ. ಅವರ ವೈಯಕ್ತಿಕ ಜೀವನವನ್ನು ಮಾಧ್ಯಮಗಳು ಮತ್ತು ಅಭಿಮಾನಿಗಳು ಸದಾ ಗಮನಿಸುತ್ತಿರುತ್ತಾರೆ. ಕೆಲವೊಮ್ಮೆ, ನಕಾರಾತ್ಮಕ ಟೀಕೆಗಳಿಗೂ ಕಾರಣವಾಗಬಹುದು. ಸದ್ಯ ಯಶ್ ಅವರ ತಾಯಿ ಪುಷ್ಪ ಅವರು 'ಕೊತ್ತಲವಾಡಿ' ಎಂಬ ಸಿನಿಮಾ ನಿರ್ಮಾಣ ಮಾಡಿದ್ದು, ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕೊತ್ತಲವಾಡಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತಾಯಿ ನಿರ್ಮಾಣ ಮಾಡಿರುವ ಮೊದಲ ಸಿನಿಮಾ ಪ್ರಚಾರದಿಂದ ನಟ ಯಶ್ ದೂರ ಉಳಿದಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, ನಿಮ್ಮ ಮೊದಲ ಕೊತ್ತಲವಾಡಿ ಸಿನಿಮಾವನ್ನ ನಿಮ್ಮ ಮಗ ಯಶ್ಗೆ ತೋರಿಸಿ ಅಭಿಪ್ರಾಯ ಪಡೆಯುತ್ತೀರಾ ಎಂದು ಮಾಧ್ಯಮಗಳ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಯಶ್ ತಾಯಿ ಪುಷ್ಪ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. 'ಯಶ್, ರಾಧಿಕಾ ಯಾರಿಗೂ ನಾನು ಸಿನಿಮಾ ತೋರಿಸಲ್ಲ. ಮಗ ಬೇರೆ, ಅಮ್ಮ ಬೇರೆ. ಮಗ ಎಂದ ಮಾತ್ರಕ್ಕೆ ನನ್ನ ಮಾತು ಕೇಳಬೇಕು ಅಂತ ಏನೂ ಇಲ್ಲ. ಅವನು ನನ್ನ ಸಿನಿಮಾ ನೋಡುತ್ತಾನೆ ಅಂತ ನಾನು ನಿರೀಕ್ಷಿಸಲ್ಲ. ಯಶ್ ನೋಡಿದ ತಕ್ಷಣ ಸಿನಿಮಾ ಓಡುತ್ತಾ? ನನ್ನ ದುಡ್ಡು ವಾಪಸ್ ಬರುತ್ತಾ? ಪ್ರೇಕ್ಷಕರು ನೋಡಬೇಕು. ಮಗನ ಅಭಿಪ್ರಾಯ ನನಗೆ ಬೇಕಿಲ್ಲ. ಜನರ ಅಭಿಪ್ರಾಯ ಬೇಕು' ಎಂದು ಪುಷ್ಪ ಅವರು ಹೇಳಿದ್ದಾರೆ.

ಜನ ನಾನು ಯಶ್ ಮಾತನಾಡುತ್ತಿಲ್ಲ ಅಂತ ಹೇಳುತ್ತಾರೆ. ಮಾತನಾಡುವವರು ಏನ್ ಮಾಡಿದ್ದಾರೆ. ನಾವು ಆದ್ರೂ ಸಿನಿಮಾ ಮಾಡಿದಿವಿ ಎಂದು ತಿರುಗೇಟು ಕೊಟ್ಟಿದ್ದಾರೆ. ಯಶ್ ಹೆಂಡತಿಯನ್ನ ಚನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಅಂತ ಮಾತ್ನಾಡ್ತಿರಾ ಆ ಸಂಸ್ಕಾರ ಕೊಟ್ಟಿರುವುದಕ್ಕೆ ಅವನು ರಾಧಿಕಾನಾ ಚನ್ನಾಗ್ ನೋಡಿಕೊಳ್ಳುತ್ತಿದ್ದೇನೆ. ಯಶ್ ಬಗ್ಗೆ ಮಾತ್ನಾಡಿದ್ರು ಪರವಾಗಿಲ್ಲ, ನನ್ನ ಸೊಸೆ ಬಗ್ಗೆ ಮಾತ್ನಾಡುತ್ತಾರೆ. ಸೊಸೆ ಬಗ್ಗೆ ಮಾತ್ನಾಡಿದ್ರೆ ನಾನು ಸುಮ್ಮನಿರಲ್ಲ. ನಾನು ನನ್ನ ಸೊಸೆ ಮಾತ್ನಾಡಲ್ಲ ಅಂತ ಹೇಳ್ತಾರೆ. ಇವರು ಬಂದು ನೋಡಿದ್ರಾ ನಾನು ನನ್ನ ಸೊಸೆ ಮಾತ್ನಾಡಲ್ಲ ಅಂತ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು. ನನ್ನ ಸೊಸೆ ಬಗ್ಗೆ ಕೆಟ್ಟ ಮಾತುಗಳು ಹರಡಬಾರದು ಮತ್ತು ಅವಳ ಗೌರವಕ್ಕೆ ಧಕ್ಕೆ ಬರುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ
ಯಾರಿಗೋ ಬದುಕಬಾರದು, ನಾವು ಹೇಗಿದ್ದೇವೆ ಅಷ್ಟು ಸಾಕು. ಜನ ಎಲ್ಲಾರ ಬಗ್ಗೆ ಮಾತನಾಡುತ್ತಾರೆ. 60 ಸಿನಿಮಾ ಆದಮೇಲೆ ರಾಜ್ ಕುಮಾರ್ ಅವರ ಬಗ್ಗೆಯೂ ಸಹ ಮಾತ್ನಾಡಿದ್ದಾರೆ. ನನ್ನ ಮಗ ಯಶ್‌ನ ಮುದ್ದು ಮಾಡಿ ಬಳಿಸಿಲ್ಲ ನಾನು. ಮಗು ಸುಖವಾಗಿ ಇರ್ಬೇಕು. ನನ್ನ ಮಗನಿಗೆ ಕಷ್ಟ ಕೊಡ್ಬಾರ್ದು. ಅವನು ಬೇರೆ ಬೇರೆ ಸಾಧನೆ ಮಾಡುತ್ತೀದ್ದಾನೆ. ನಾವು ಕಷ್ಟ ಕೊಟ್ಟರೆ ಹೇಗೆ ಎಂದು ಯಶ್ ತಾಯಿ ಪುಷ್ಪಾ ಹೇಳಿದ್ದಾರೆ. ಯಶ್ ಎಲ್ಲಾವನು ನೋಡಿಕೊಂಡು ಮಾಡಿಕೊಂಡು ಹೋಗುತ್ತಿದಾನೆ. ನನ್ನ ಸೊಸೆಯೂ ದೊಡ್ಡ ಸ್ಟಾರ್ ಅವಳಿಗೆ ಕೆಟ್ಟ ಹೆಸರು ಬರಬಾರದು ಅದಕ್ಕೆ ನಾವು ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications