ಯಶ್ ಹುಟ್ಟುಹಬ್ಬಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ ದಿಢೀರ್ ಆಘಾತ... Yash Birthday
ಕನ್ನಡಿಗ ಯಶ್ ಅಂದ್ರೆ ಕನ್ನಡ ನಾಡು ಮಾತ್ರವಲ್ಲ ಇಡೀ ಜಗತ್ತು ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮ ಪಡುತ್ತದೆ. ಕನ್ನಡಿಗರ ಗತ್ತು & ಕನ್ನಡಿಗರ ತಾಕತ್ತು ಏನು ಅನ್ನೋದನ್ನ ಇಡೀ ಪ್ರಪಂಚ ನೋಡುವಂತೆ ಮಾಡಿದ ಕೀರ್ತಿ ನಟ ಯಶ್ ಅವರಿಗೆ ಸಲ್ಲುತ್ತದೆ ಅಂತಾ ಕೋಟಿ ಕೋಟಿ ಅಭಿಮಾನಿ ಬಳಗ ಹೆಮ್ಮೆಯಿಂದ ಎದೆ ತಟ್ಟಿಕೊಂಡು ಹೇಳಿಕೊಳ್ಳುತ್ತದೆ. ಅದರಲ್ಲೂ ನಟ ಯಶ್ ಅವರು ಈಗ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿದ್ದಾರೆ. ಹೀಗಿದ್ದಾಗಲೇ, ಯಶ್ ಹುಟ್ಟುಹಬ್ಬಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ ದಿಢೀರ್ ಆಘಾತ ಎದುರಾಗಿದೆ...
ಹೌದು, ಕನ್ನಡಿಗ ಯಶ್ ಕೆಪಾಸಿಟಿ ಕಂಡು ಹಿಂದಿ ಸಿನಿಮಾ ರಂಗ ಅಂದ್ರೆ ಬಾಲಿವುಡ್ ಕೂಡ ಥರ ಥರ ನಡುಗಿ ಹೋಗಿದೆ. ಕನ್ನಡಿಗ ಯಶ್ ಸಿನಿಮಾ ಕಂಡರೆ ಬೇರೆ ಸಿನಿಮಾ ಇಂಡಸ್ಟ್ರಿಯ ಜನರು ಸೈಲೆಂಟ್ ಆಗುವ ಪರಿಸ್ಥಿತಿ ಇದೆ. ಯಶ್ ಅವರ ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ರಿಲೀಸ್ ಮಾಡಲು ಸಾವಿರ ಬಾರಿ ಯೋಚನೆ ಮಾಡುವ ಸ್ಥಿತಿ ಈಗ ಇದೆ. ಇಷ್ಟೆಲ್ಲಾ ಹೆಸರು ಮಾಡಿರುವ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಹಾಲಿವುಡ್ ಅಂಗಳದಲ್ಲಿ ಕೂಡ ಕನ್ನಡಿಗರ ತಾಕತ್ ತೋರಿಸಲು ಮುಂದೆ ನುಗ್ಗಿದ್ದಾರೆ. ಇಷ್ಟೆಲ್ಲದರ ನಡುವೆ ಯಶ್ ಹುಟ್ಟುಹಬ್ಬಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ ದಿಢೀರ್ ಆಘಾತ ಎದುರಾಗಿದ್ದೇಕೆ ಗೊತ್ತಾ?

ಅಭಿಮಾನಿಗಳಿಗೆ ದಿಢೀರ್ ಆಘಾತ...
ಅಂದಹಾಗೆ ಯಶ್ ಅವರ ಹಾಲಿವುಡ್ ಸಿನಿಮಾ ಅಂತಾನೇ ಸಂಚಲನ ಸೃಷ್ಟಿ ಮಾಡುತ್ತಿರುವ & ಪ್ರತಿ ಹಂತದಲ್ಲೂ ಇಡೀ ಜಗತ್ತಿನ ಸಿನಿಮಾ ಇಂಡಸ್ಟ್ರಿಯ ಗಮನ ಸೆಳೆಯುತ್ತಿರುವ ಟಾಕ್ಸಿಕ್ ಈಗ ರಿಲೀಸ್ ಆಗಲು ರೆಡಿಯಾಗಿದೆ. ಇಂತಹ ಸಮಯದಲ್ಲಿ ಯಶ್ ಅವರ ಹುಟ್ಟುಹಬ್ಬ ಮುಗಿಲು ಮುಟ್ಟಿ ಸಂಭ್ರಮಿಸಬೇಕು ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಬೇಸರ ಸುದ್ದಿ ಸಿಕ್ಕಿದ್ದು, ನಟ ಯಶ್ ಅವರು ಈ ಬಾರಿಯ ಹುಟ್ಟುಹಬ್ಬಕ್ಕೆ ಕೂಡ ಅಭಿಮಾನಿಗಳ ಕೈಗೆ ಸಿಗುತ್ತಿಲ್ಲ. ಆದರೆ ಟಾಕ್ಸಿಕ್ ಸಿನಿಮಾ ಬಗ್ಗೆ ದೊಡ್ಡ ಹಬ್ಬವೇ ಕಾದಿದೆ ಅಂತಾ ದೊಡ್ಡದಾಗಿ ಮೆಸೇಜ್ ಕೊಟ್ಟಿದ್ದಾರೆ.
ಅಭಿಮಾನಕ್ಕೆ ನಾನು ಸದಾ ಋಣಿ...
ತಮ್ಮ ಕೋಟಿ ಕೋಟಿ ಅಭಿಮಾನಿಗಳಿಗೆ ಕನ್ನಡಿಗ ಯಶ್ ಅವರು ವಿಶೇಷ ಸಂದೇಶ ಕಳುಹಿಸಿದ್ದು 'ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ... ನೀವು ಕೊಟ್ಟ ಪ್ರೀತಿ, ತೋರಿದ ಅಭಿಮಾನದಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಿಮ್ಮ ಮುಗಿಲೆತ್ತರದ ನಿರೀಕ್ಷೆಯನ್ನ ನಿಜವಾಗಿಸುವ ಕೆಲಸದಲ್ಲಿ ನಾನಿದ್ದೇನೆ. ನೀವು ಈಗಾಗಲೇ ಸಂಭ್ರಮಿಸುತ್ತಿರುವುದು ಬಿಡುವಿಲ್ಲದ ಕೆಲಸದ ನಡುವೆ ಜನ್ಮದಿನವನ್ನು ನೆನಪಿಸಿದೆ. ಸಿನಿಮಾದ ಕೆಲಸ ಕೊನೆ ಹಂತದಲ್ಲಿರುವ ಕಾರಣ ನಿಮ್ಮೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿಷ್ಕಲ್ಮಶ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿ. ಜನ್ಮದಿನದ ಸಂಭ್ರಮದಲ್ಲಿ ನನ್ನ ಮನಸ್ಸಿಗೆ ಸಂಕಟ ತರುವ ಕೆಲಸ ಅಭಿಮಾನಿಗಳಿಂದಾಗುವುದಿಲ್ಲ ಎಂಬ ನಂಬಿಕೆ ನನ್ನದು. ಮಾರ್ಚ್ 19 ಎಲ್ಲರೂ ಸೇರಿ ಸಂಭ್ರಮಿಸೋಣ. ನಿಮಗೆ ಒಳ್ಳೆಯದಾಗಲಿ.' ಎಂದು ದೊಡ್ಡದಾಗಿ ಮೆಸೇಜ್ ಪಾಸ್ ಮಾಡಿದ್ದಾರೆ ಕನ್ನಡಿಗರ ಪ್ರೀತಿಯ ನಟ ಯಶ್ ಅವರು.












Click it and Unblock the Notifications