Rishab Shetty: ಶಿವಾಜಿಯಾಗ್ತಿರುವ ರಿಷಬ್‌ ಶೆಟ್ಟಿಗೆ ಒಂದೇ ಚಿತ್ರದಲ್ಲಿ 8 ಹೀರೋಯಿನ್ಸ್‌?

ಕಾಂತಾರ -೧ ಹಿಟ್‌ ಬಳಿಕ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಸಖತ್‌ ಬ್ಯೂಸಿಯಾಗಿದ್ದಾರೆ. ಕನ್ನಡ ಮಾತ್ರವದಲ್ಲದೇ ಇತರ ಭಾಷೆಯ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿಯೂ ರಿಷಬ್‌ ಶೆಟ್ಟಿ ನಟಿಸುತ್ತಿದ್ದಾರೆ. ಇನ್ನು ಮೊನ್ನೆಯಷ್ಟೇ ರಿಷಬ್ ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಬಯೋಪಿಕ್‌ನಲ್ಲಿ ರಿಷಬ್‌ ಶೆಟ್ಟಿ ನಟಿಸುವುದು ಖಚಿತವಾಗಿದೆ.

ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಪ್ರೀಕ್ವೇಲ್‌ ಚಿತ್ರ ಕೂಡ ಮಾಡುತ್ತಿದ್ದು, ಈ ಚಿತ್ರ ಮುಂದಿನ ವರ್ಷ ತೆರೆಕಾಣಲಿದೆ. ಅಲ್ಲದೇ ಇತ್ತೀಚಿಗಷ್ಟೇ ರಿಷಬ್‌ ಶೆಟ್ಟಿ ಅಭಿನಯದ ತೆಲುಗಿನ ಜೈ ಹನುಮಾನ್‌ ಸಿನಿಮಾದ ಪೋಸ್ಟರ್‌ ಬಿಡುಗಡೆ ಆಗಿತ್ತು. ಈ ಪೋಸ್ಟರ್‌ ನೋಡಿದ ಫ್ಯಾನ್ಸ್‌ ಫುಲ್‌ ಥ್ರಿಲ್‌ ಆಗಿದ್ದು, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಎರಡೂ ಸಿನಿಮಾಗಳಿಗಾಗಿ ಕಾಯುತ್ತಿರುವ ರಿಷಬ್‌ ಶೆಟ್ಟಿ ಅಭಿಮಾನಿಗಳು, ಇದೀಗ ಘೋಷಣೆಯಾಗಿರುವ ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Will Kannada Actor Rishabh Shetty Have 8 Heroines In His Next One Film

ರಿಷಬ್‌ ಶೆಟ್ಟಿ ಎಲ್ಲಾ ಸಿನಿಮಾಗಳಿಗೂ ಜೈ ಎನ್ನುತ್ತಿದ್ದ ಅಭಿಮಾನಿಗಳು ಇದೇ ಮೊದಲ ಬಾರಿಗೆ ರಿಷಬ್‌ ಒಪ್ಪಿಕೊಂಡಿರುವ ಸಿನಿಮಾಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಯಾವಾಗ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದ ಫಸ್ಟ್ ಲುಕ್ ಹೊರಬಿತ್ತೋ ಅಂದಿನಿಂದ ಬಹುತೇಕ ಅಭಿಮಾನಿಗಳು ಈ ಸಿನಿಮಾವನ್ನು ಇಲ್ಲಿಗೆ ಕೈ ಬಿಡುವಂತೆ ರಿಷಬ್‌ಗೆ ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ.

ಇನ್ಸ್ಟಾಗ್ರಾಮ್‌ನಲ್ಲಿ ರಿಷಬ್‌ ಶೆಟ್ಟಿ ಪೋಸ್ಟ್‌ಗೆ ಬರುತ್ತಿರುವ ಕಮೆಂಟ್‌ಗಳನ್ನು ಒಮ್ಮೆ ಗಮನಿಸಿದರೆ ರಿಷಬ್‌ ಹೊಸ ಚಿತ್ರಕ್ಕೆ ವ್ಯಾಪಕ ವಿರೋಧವನ್ನು ನೀವು ಗಮನಿಸಬಹುದು. ನಮ್ಮ ಹೆಮ್ಮೆ ಕನ್ನಡತಿ ಬೆಳವಾಡಿ ಮಲ್ಲಮ್ಮನಿಗೆ ಕ್ಷಮೆ ಯಾಚಿಸಿದ ದೃಶ್ಯ ಇರಬೇಕು ನಿಮ್ಮ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಅವರೇ, ಇಲ್ಲವಾದಲ್ಲಿ ನಿಮ್ಮ ಚಿತ್ರಕ್ಕೆ ನನ್ನದೊಂದು ಧಿಕ್ಕಾರ, ಕರುನಾಡ ಲೂಟಿ ಹೊಡೆದ, ತಾಯಿ ಬೆಳವಾಡಿ ಮಲ್ಲಮ್ಮ ಕಾಲಿಗೆ ಬಿದ್ದು ಶರಣಾದ ಶಿವಾಜಿಯ ಸಿನಿಮಾ ಮಾಡಲು ಯಾವ ಆಧಾರದ ಮೇಲೆ ಒಪ್ಪಿ ಸಹಿ ಮಾಡುದ್ರಾ ಶೆಟ್ರೇ..?

'ದುಡ್ಡು ಎಲ್ಲವನ್ನೂ ಬದಲಾಯಿಸುತ್ತಾ ಹೋಗುತ್ತೆ ಅನ್ನೋದಕ್ಕೆ ನೀನೇ ಸಾಕ್ಷಿ . ಕನ್ನಡಿಗರು ನಿಮ್ಮ ಸಿನಿಮಾ ನೋಡುವುದನ್ನು ನಿಲ್ಲಿಸುತ್ತಾರೆ. ನಮ್ಮ ಕನ್ನಡದ ನಟ ಕನ್ನಡ ನಾಡಿನ ರಾಜರನ್ನು ಬಿಟ್ಟು, ಕನ್ನಡ ನಾಡಿನ ಮೇಲೆ ಲೂಟಿ, ದಾಳಿ ಮಾಡಿದ ರಾಜನ ಪಾತ್ರ ಮಾಡುತ್ತಿದ್ದಾರೆ ಅಂದರೆ ನಮ್ಮೆಲ್ಲರ ದೊಡ್ಡ ದುರಂತವೇ ಸರಿ ಎಂದೆಲ್ಲಾ ಕಮೆಂಟ್‌ ಮಾಡುತ್ತಿರುವ ಜನರು ರಿಷಬ್‌ ಶೆಟ್ಟಿ ಅವರೇ ಈಗಲೇ ಈ ಸಿನಿಮಾವನ್ನು ಕೈ ಬಿಟ್ಟು, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಅವರ ಸಿನಿಮಾ ಮಾಡಿ' ಎಂದು ಒಂದೇ ಸಮನೇ ಒತ್ತಾಯಿಸುತ್ತಿದ್ದಾರೆ.

Will Kannada Actor Rishabh Shetty Have 8 Heroines In His Next One Film

ಈ ಎಲ್ಲಾ ವಿರೋಧಗಳ ನಡುವೆ ಇದೀಗ ಮತ್ತೊಂದು ವಿಚಾರ ಹರಿದಾಡುತ್ತಿದೆ ಒಂದು ವೇಳೆ ರಿಷಬ್‌ ಶೆಟ್ಟಿ, ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಬಯೋಪಿಕ್‌ನಲ್ಲಿ ನಟಿಸಿದರೆ ಈ ಒಂದೇ ಸಿನಿಮಾದಲ್ಲಿ ಎಂಟು ಜನ ನಾಯಕ ನಟಿಯರು ಇರುತ್ತಾರಾ ಎನ್ನುವ ಪ್ರಶ್ನೆ ಕೂಡ ಎಲ್ಲೆಡೆ ಹರಿದಾಡುತ್ತಿದೆ. ಸಾಯಿ ಬಾಯಿ, ಸೋಯರಾಬಾಯಿ, ಪುತಳಬಾಯಿ, ಸಕವಾರಬಾಯಿ, ಕಾಶಿಬಾಯಿ , ಲಕ್ಷ್ಮಿಬಾಯಿ, ಗುಣವಂತಾಬಾಯಿ, ಸಗುಣ ಬಾಯಿ, ಇವರು ಶಿವಾಜಿ ಪತ್ನಿಯರು ಎನ್ನುವ ಉಲ್ಲೇಖವಿದೆ. ಹೀಗಾಗಿ ರಿಷಬ್‌ ಶೆಟ್ಟಿ ಈ ಒಂದು ಚಿತ್ರಕ್ಕೆ ಎಂಟು ಜನ ಹಿರೋಯಿನ್ಸ್‌ ಇರುತ್ತಾರಾ ಎನ್ನುವ ಪ್ರಶ್ನೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಇನ್ನು ಈ ಚಿತ್ರದ ಬಗ್ಗೆ ರಿಷಬ್‌ ಶೆಟ್ಟಿ ಮುಂದಿನ ನಿರ್ಧಾರ ಹಾಗೂ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+