Darshan Thoogudeepa: ವಿಜಯ್ ದಾರಿಯಲ್ಲಿ ದರ್ಶನ್‌ ತೂಗುದೀಪ! ಪ್ರಾದೇಶಿಕ ಪಕ್ಷ ಕಟ್ಟಿ ರಾಜಕೀಯಕ್ಕೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದು ತಮ್ಮ ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಅವರು ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾದ ಬಳಿಕ ಸಿನಿಮಾ ಚಿತ್ರಿಕರಣದಲ್ಲಿ ಭಾಗವಹಿಸು ಸಾಧ್ಯತೆ ಇದೆ.

ದರ್ಶನ್‌ ಅವರ ಮುಂದಿನ ಸಿನಿಮಾ ಬಗ್ಗೆ ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರೆ. ಅವರ ರಾಜಕೀಯ ಪ್ರವೇಶದ ಬಗ್ಗೆ ಕೂಡ ಚರ್ಚೆ ಜೋರಾಗುತ್ತಿದೆ. ನಟ ದರ್ಶನ್ ರಾಜಕೀಯಕ್ಕೆ ಬಂದೇ ಬರ್ತಾರೆ ಅವರು ತಮ್ಮದೇ ಆದ ಪಕ್ಷ ಕಟ್ಟಿ ಚುನಾವಣೆಗೆ ನಿಲ್ತಾರೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

Will darshan thoogudeepa enter karnataka politics with his own regional party

ದರ್ಶನ್‌ ರಾಜಕೀಯಕ್ಕೆ ಬರ್ತಾರ

ನಟ ದರ್ಶನ್ ರಾಜಕೀಯ ಜೀವನದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲವಾದರೂ ಅವರು ಮುಂದೊಂದು ದಿನ ರಾಜಕೀಯಕ್ಕೆ ಬರುವುದು ಖಚಿತ ಎಂದು ಹೇಳಲಾಗಿದೆ. ಖ್ಯಾತಿ ಜ್ಯೋತಿಷಿಯೊಬ್ಬರಾದ ಪ್ರಶಾಂತ್ ಕಿಣಿ ಎನ್ನುವವರು ಕೂಡ ದರ್ಶನ್ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಜೈಲಿನಿಂದ ಬಂದ ಬಳಿಕ ದರ್ಶನ್‌ ತೂಗುದೀಪ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲಿದೆ. ಅವರ ಸಿನಿಮಾಗಳು ಮತ್ತಷ್ಟು ಯಶಸ್ಸು ಗಳಿಸುತ್ತವೆ. ಆತನ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಲಿದೆ. ದರ್ಶನ್ ಮತ್ತಷ್ಟು ಬಲಶಾಲಿಯಾಗುತ್ತಾರೆ, 2027ರಲ್ಲಿ ದರ್ಶನ್‌ ರಾಜಕೀಯಕ್ಕೆ ಕೂಡ ಬರುತ್ತಾರೆ, ಅಲ್ಲಿಯೂ ದರ್ಶನ್‌ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ.

ವಿಜಯ್ ದಾರಿಯಲ್ಲಿ ದರ್ಶನ್ ತೂಗುದೀಪ

ತಮಿಳು ನಟ ದಳಪತಿ ವಿಜಯ್ ಕೂಡ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ನಟನೆಗೆ ವಿದಾಯ ಹೇಳಿದ್ದು ತಮಿಳುನಾಡು ರಾಜಕೀಯ ಪ್ರವೇಶಿಸಿದ್ದಾರೆ. 69ನೇ ಸಿನಿಮಾ 'ಜನ ನಾಯಗನ್' ಅವರ ಕೊನೆಯ ಸಿನಿಮಾವಾಗಲಿದೆ. ಅದಾದ ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 'ತಮಿಳಿಗ ವೆಟ್ರಿ ಕಳಗಂ' ಎನ್ನುವ ಪಕ್ಷ ಸ್ಥಾಪನೆ ಮಾಡಿರುವ ಅವರು ತಮಿಳುನಾಡು ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. 2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು ವಿಜಯ್ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.

ನಟ ದರ್ಶನ್ ಕೂಡ ಇದೇ ರೀತಿ ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಚುನಾವಣೆಗೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಅಪಾರ ಅಭಿಮಾನಿಗಳನ್ನು ಕೂಡ ಹೊಂದಿದ್ದು ರಾಜಕೀಯದಲ್ಲೂ ಯಶಸ್ವಿಯಾಗುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+