Bigg Boss Kannada: ಇವರಿಲ್ಲದಿದ್ರೆ ಬಿಗ್ ಬಾಸ್ ಸೀಸನ್ 11 ಅಟ್ಟರ್ ಫ್ಲಾಪ್ ಗ್ಯಾರಂಟಿ-ಆಯೋಜಕರಿಗೆ ವಾರ್ನ್
Bigg Boss Season 11: ಬಿಗ್ ಬಾಸ್ ಸೀಸನ್‌ಗೆ ಸಂಬಂಧಿಸಿದಂತೆ ಇದೀಗ ಸುದ್ದಿಯೊಂದು ಹರಿದಾಡುತ್ತಿದೆ. ಲಾಯರ್ ಜದೀಶ್ ಅವರು ಹೊರಬಂದಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ಬಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ. ಅದು ಯಾವ ಮಟ್ಟಕ್ಕೆ ಅಂದರೆ, ಈ ಸೀಸನ್ ಸಂಪೂಣವಾಗಿ ಮುಕ್ತಾಯವಾಗುವುದಿಲ್ಲ ಎನ್ನುವ ಲೆಕ್ಕದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಒಂದೆಡೆ ಲಾಯರ್ ಜಗದೀಶ್ ಅವರನ್ನು ಹೊರಹಾಕಿದ ವಿಚಾರ ಮತ್ತೊಂದೆಡೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಕನ್ನಡದ ಬದಲು ಇಂಗ್ಲೀಷ್ ಪದಗಳನ್ನೇ ಹೆಚ್ಚಾಗಿ ಬಳಸುತ್ತಿರುವುದನ್ನು ಇಟ್ಟುಕೊಂಡು ಆಯೋಜಕರಿಗೆ ಕನ್ನಡ ಹೋರಾಟಗಾರೊಬ್ಬರು ನೇರ ವಾರ್ನ್ ಮಾಡಿದ್ದಾರೆ.

ಜಗದೀಶ್ ಅವರನ್ನು ಹೊರಗಡೆ ಕಳುಹಿಸುತ್ತಿದ್ದಾರೆ ಎನ್ನುವ ಸುದ್ದಿ ಹರಡುತ್ತಿಂದ್ದಂತೆ ಬಿಗ್ ಬಾಸ್ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಹಾಗೆಯೇ ಇದೀಗ ಬಣ್ಣದ ಜಗತ್ತು ಎನ್ನುವ ಯ್ಯೂಟೂಬ್ ಚಾನೆಲ್‌ವೊಂದಲ್ಲಿ ಕನ್ನಡ ಪರ ಹೋರಾಟಗಾರರ ಸದಸ್ಯರೊಬ್ಬರು ಮಾತನಾಡಿ, ಬಿಗ್ ಬಾಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
"ಬಿಗ್ ಬಾಸ್ ಸೀಸನ್ 11 ಅಟ್ಟರ್ ಫ್ಲಾಪ್ ಆಗುವುದಂತೂ ಗ್ಯಾರಂಟಿ. ಯಾಕೆಂದರೆ ಈ ಬಾರಿ ಬಿಗ್ ಬಾಸ್ ಶೋ ಮನೆ ಮನೆಗೂ ತಲುಪಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಲಾಯರ್ ಜಗದೀಶ್ ಅವರು. ಬಿಗ್ ಬಾಸ್ ಮನೆಯಲ್ಲಿನ 17 ಜನ ಸ್ಪರ್ಧಿಗಳಲ್ಲಿ ಎಲ್ಲರ ಮನ ಗೆದ್ದಿರೋದು ಜಗದೀಶ್ ಮಾತ್ರ. ಒಂದು ವೇಳೆ ಜಗದೀಶ್ ಅವರು ಹೊರಹಡೆ ಹಾಕಿದ್ದೀರಾ ಎಂದು ಸ್ಪಷ್ಟತೆ ಸಿಕ್ಕರೆ, ಈ ಸೀಸನ್ ಅಟ್ಟರ್ ಫ್ಲಾಪ್ ಆಗುವುದಂತೂ ಗ್ಯಾರಂಟಿ," ಎಂದು ಹೇಳುವ ಮೂಲಕ ಆಕ್ರೊಶ ಹೊರಹಾಕಿದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ರಂಜಿತ್, ಮಾನಸ ಮೊಲದು ಆಟ ಆಡಿ.. ಸುಮ್ಮನೆ ತಿಂದ್ಕೊಂಡ್ ತಿಂಡ್ಕೊಂಡ್ ಕುಳಿತುಕೊಳ್ಳೋದಲ್ಲ. ಮನರಂಜನೆ ನೀಡುವಂತಹ ಕೆಲಸವನ್ನು ಮಾಡಿ. ಬಿಗ್ ಬಾಸ್ ಒಂದು ವೇಳೆ ಹೊರಗಡೆ ಕಳಿಸುವಂತಿದ್ದರೆ, ಉಗ್ರಂ ಮಂಜು, ರಂಜಿತ್ ಹಾಗೂ ಜಗದೀಶ್ ಅವರನ್ನು ಮೂವರನ್ನು ಕಳುಹಿಸಿ, ಇದರಿಂದ ಜಗದೀಶ್ ಅವರೇನೂ ಬೇಜಾರ್ ಆಗೋದಿಲ್ಲ. ಈಗಾಗಲೇ ಅವರು ಭಾರೀ ಜನಮನ್ನಣೆ ಪಡೆದಿದ್ದಾರೆ, ಅಷ್ಟೇ ಸಾಕು ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಗೆ ಹೋದ ಮೇಲೆ ಜಗದೀಶ್ ಅವರಿಗೆ ಜನಮನ್ನಣೆ ಜಾಸ್ತಿ ಆಗಿದೆಯೇ ಹೊರತು ಕಡಿಮೆಯಾಗಿಲ್ಲ. ಆದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡುತ್ತಿರುವವರನ್ನು ಕೆಣಕಿ ಅವರ ಮನಸ್ಸನ್ನು ಹಾಳು ಮಾಡುವ ಉಗ್ರಂ ಮಂಜುನನ್ನು ಹೊರಗಡೆ ಹಾಕಿ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದರು.
ಮತ್ತೊಂದೆಡೆ "ಈ ಸೀಸನ್‌ನಲ್ಲಿರುವ ಬಹುತೇಕ ಸ್ಪರ್ಧಿಗಳು ಕನ್ನಡ ಬಿಟ್ಟು ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದಾರೆ. ಈ ಮೂಲಕ ಕನ್ನಡದ ಸ್ವಾಭಿಮಾನವನ್ನು ಕೆಣಕುವಂತಹ ಕೆಲಸ ಮುಂದುವರೆಸಿದ್ದಾರೆ. ಇದು ಹೀಗೆ ಮುಂದುವರೆದರೆ, ಕನ್ನಡ ಪರ ಹೋರಾಟಗಾರರು, ಆಟೋ ಚಾಲಕರು ಸೇರಿ ಹೋರಾಟ ಮಾಡಿ ಈ ಬಿಗ್ ಬಾಸ್ ಸೀಸನ್ ಅನ್ನು ನಿಲ್ಲಿಸಬೇಕಾಗುತ್ತದೆ ಎಂದು ಆಯೋಜಕರಿಗೆ ನೇರಾವಾಗಿ ವಾರ್ನ್ ಮಾಡಿದ್ದಾರೆ.












Click it and Unblock the Notifications